ಮನರಂಜನೆ

ಬಿಗ್ ಬಾಸ್ ಮನೆಯಲ್ಲಿ, ಇವರನ್ನು ಒದೆಯುವ ಹಂತಕ್ಕೆ ಹೋದ್ರಾ..!ಹಾಗಾದ್ರೆ ನಿಜವಾಗ್ಲು ಒದ್ರ ಇಲ್ವಾ…ತಿಳಿಯಲು ಮುಂದೆ ಓದಿ…

310

ಈ ವಾರ ಬಿಗ್ ಬಾಸ್ ಮನೆಯಲ್ಲಿ ನೀಡಿದ್ದ ಲಕ್ಸುರಿ ಬಜೆಟ್ ಟಾಸ್ಕ್ ‘ಕಾಲಾಯ ತಸ್ಮೈ ನಮಃ’ ಮುಕ್ತಾಯವಾಯ್ತು.
ಮನೆಯಲ್ಲಿರುವ ಸ್ಪರ್ದಿಗಳೆಲ್ಲ ಉತ್ಸಾಹದಿಂದ ಆಟದಲ್ಲಿ ಭಾಗವಹಿಸಿದ್ದರೆಂದು ‘ಬಿಗ್ ಬಾಸ್’ ಮನೆಯ ಸ್ಪರ್ದಿಗಳನ್ನೆಲ್ಲ ಶ್ಲಾಘಿಸಿದ್ದಾರೆ.

ನಿದ್ದೆ ರಾಮ…

ಈ ವಾರ ಕ್ಯಾಪ್ಟನ್ ಆಗಿದ್ದ ಸಮೀರಾಚಾರ್ಯ ಅವರು ಪ್ರತಿ ಸಲ ಮನೆ ಒಳಗೆ ನಿದ್ದೆ ಮಾಡುವಂತೆಯೇ ಕನ್ ಫೆಷನ್ ರೂಂ ನಲ್ಲಿಯೂ 3 ಸಲ ನಿದ್ದೆ ಮಾಡಿದ್ದಕ್ಕೆ ಹಾಗೂ ಮನೆಯ ಸದಸ್ಯರು ಸರಿಯಾಗಿ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ , ನೀಡಲಾಗಿದ್ದ 5000 ಲಕ್ಸುರಿ ಬಜೆಟ್ ಅಂಕ ಗಳಲ್ಲಿ 2500 ಅಂಕಗಳನ್ನು ಕಡಿತಗೊಳಿಸಲಾಗಿದೆ.

ಕಾಲಿನಿಂದ ಒದ್ದು ಎಬ್ಬಿಸುವ ಪ್ರಯತ್ನ…

ಆಟದ ಅಂತಿಮ ಹಂತದ ಸವಾಲಿನಲ್ಲಿ ಗುಂಪಿನ ನಾಯಕರಾಗಿದ್ದ ಅನುಪಮಾ ಹಾಗು ಸಮೀರ್ ಅವರು ಕುರ್ಚಿಯ ಮೇಲೆ ಕುಳಿತುಕೊಂಡಿದ್ದು, ಅವರನ್ನು ಎದುರಾಳಿ ತಂಡದ ಸದಸ್ಯರು ಕುರ್ಚಿಯಿಂದ ಎಬ್ಬಿಸಬೇಕಿತ್ತು. ಅನುಪಮಾ ಮತ್ತು ಸಮೀರ್ ಅವರಿಗೆ ಅನೇಕ ವಿಧದಲ್ಲಿ ಎದುರಾಳಿ ತಂಡದ ಸದಸ್ಯರು ಎಬ್ಬಿಸಲು ಪ್ರಯತ್ನಿಸಿದರು, ಅವರು ಎಷ್ಟೇ ಹಿಂಸೆ ಕೊಟ್ಟರು, ಇಬ್ಬರೂ ಏಳದೇ ಕುರ್ಚಿಯ ಮೇಲೆ ಕುಳಿತಿದ್ದರು. ಸದಸ್ಯರು ನಿಗದಿಪಡಿಸಿದ್ದ ಸಮಯದಲ್ಲಿ ಅವರನ್ನು ಎಬ್ಬಿಸಲು ಆಗದ ಕಾರಣ ಸಮೀರಾಚಾರ್ಯ ಅವರು ಜಯಶಾಲಿಗಳಾಗಿದ್ದರೆ. ಇದಕ್ಕೆ ಸಿಟ್ಟಿನಿಂದ ರಿಯಾಜ್ ಅವರು ಸಮೀರಾಚಾರ್ಯ ಕುಳಿತಿದ್ದ ಕುರ್ಚಿಗೆ ಅವರ ಕಾಲಿನಿಂದ ಒದ್ದು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಸಮೀರ್ ಅವರು ಏಳದೇ ಕುಳಿತಿದ್ದರು.

ಕಳಪೆ ಆಟಗಾರ್ತಿ…

ಈ ವಾರ ಮನೆಯ ನಾಯಕನಾಗಿ ಸಮೀರ್ ಅವರು ನಿವೇದಿತಾ ಅವರಿಗೆ ಉತ್ತಮ ಆಟಗಾರ್ತಿ ಎಂದು ಹಾಗು ಅನುಪಮಾ ಅವರು ಕಳಪೆ ಆಟಗಾರ್ತಿ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಅನುಪಮಾ ಅವರು ತುಂಬ ಅಳುತ್ತಿದ್ದರು. ಇವರನ್ನು ಜೆ ಕೆ ಸಮಾಧಾನ ಪಡಿಸಿದ್ದಾರೆ. ಹಾಗು ಚಂದನ್ ಅವರು ಸಮೀರ್ ಅವರನ್ನು ನಿಮ್ಮ ಅಭಿಪ್ರಾಯ ಸರಿ ಇದ್ದೀಯ ಎಂದು ಪ್ರಶ್ನಿಸಿದ್ದಾರೆ.

ಸೀಕ್ರೆಟ್ ರೂಂ…

ಇನ್ನು ಸೀಕ್ರೆಟ್ ರೂಂನಲ್ಲಿದ್ದ ದಿವಾಕರ್ ಮಧ್ಯರಾತ್ರಿ ಮನೆಯೊಳಗೆ ಸದ್ದಿಲ್ಲದೇ ಮನೆ ಒಳಗೆ ಎಂಟ್ರಿ ಆಗಿದ್ದಾರೆ. ಈ ವಾರ ನಿವೇದಿತಾ, ಅನುಪಮಾ,ರಿಯಾಜ್, ಕಾರ್ತಿಕ್, ಕೃಷಿ, ಶ್ರುತಿ, ಹಾಗೂ ಶ್ರುತಿ ಅವರು ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ