ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ವಾರ ಬಿಗ್ ಬಾಸ್ ಮನೆಯಲ್ಲಿ ನೀಡಿದ್ದ ಲಕ್ಸುರಿ ಬಜೆಟ್ ಟಾಸ್ಕ್ ‘ಕಾಲಾಯ ತಸ್ಮೈ ನಮಃ’ ಮುಕ್ತಾಯವಾಯ್ತು.
ಮನೆಯಲ್ಲಿರುವ ಸ್ಪರ್ದಿಗಳೆಲ್ಲ ಉತ್ಸಾಹದಿಂದ ಆಟದಲ್ಲಿ ಭಾಗವಹಿಸಿದ್ದರೆಂದು ‘ಬಿಗ್ ಬಾಸ್’ ಮನೆಯ ಸ್ಪರ್ದಿಗಳನ್ನೆಲ್ಲ ಶ್ಲಾಘಿಸಿದ್ದಾರೆ.

ಈ ವಾರ ಕ್ಯಾಪ್ಟನ್ ಆಗಿದ್ದ ಸಮೀರಾಚಾರ್ಯ ಅವರು ಪ್ರತಿ ಸಲ ಮನೆ ಒಳಗೆ ನಿದ್ದೆ ಮಾಡುವಂತೆಯೇ ಕನ್ ಫೆಷನ್ ರೂಂ ನಲ್ಲಿಯೂ 3 ಸಲ ನಿದ್ದೆ ಮಾಡಿದ್ದಕ್ಕೆ ಹಾಗೂ ಮನೆಯ ಸದಸ್ಯರು ಸರಿಯಾಗಿ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ , ನೀಡಲಾಗಿದ್ದ 5000 ಲಕ್ಸುರಿ ಬಜೆಟ್ ಅಂಕ ಗಳಲ್ಲಿ 2500 ಅಂಕಗಳನ್ನು ಕಡಿತಗೊಳಿಸಲಾಗಿದೆ.

ಆಟದ ಅಂತಿಮ ಹಂತದ ಸವಾಲಿನಲ್ಲಿ ಗುಂಪಿನ ನಾಯಕರಾಗಿದ್ದ ಅನುಪಮಾ ಹಾಗು ಸಮೀರ್ ಅವರು ಕುರ್ಚಿಯ ಮೇಲೆ ಕುಳಿತುಕೊಂಡಿದ್ದು, ಅವರನ್ನು ಎದುರಾಳಿ ತಂಡದ ಸದಸ್ಯರು ಕುರ್ಚಿಯಿಂದ ಎಬ್ಬಿಸಬೇಕಿತ್ತು. ಅನುಪಮಾ ಮತ್ತು ಸಮೀರ್ ಅವರಿಗೆ ಅನೇಕ ವಿಧದಲ್ಲಿ ಎದುರಾಳಿ ತಂಡದ ಸದಸ್ಯರು ಎಬ್ಬಿಸಲು ಪ್ರಯತ್ನಿಸಿದರು, ಅವರು ಎಷ್ಟೇ ಹಿಂಸೆ ಕೊಟ್ಟರು, ಇಬ್ಬರೂ ಏಳದೇ ಕುರ್ಚಿಯ ಮೇಲೆ ಕುಳಿತಿದ್ದರು. ಸದಸ್ಯರು ನಿಗದಿಪಡಿಸಿದ್ದ ಸಮಯದಲ್ಲಿ ಅವರನ್ನು ಎಬ್ಬಿಸಲು ಆಗದ ಕಾರಣ ಸಮೀರಾಚಾರ್ಯ ಅವರು ಜಯಶಾಲಿಗಳಾಗಿದ್ದರೆ. ಇದಕ್ಕೆ ಸಿಟ್ಟಿನಿಂದ ರಿಯಾಜ್ ಅವರು ಸಮೀರಾಚಾರ್ಯ ಕುಳಿತಿದ್ದ ಕುರ್ಚಿಗೆ ಅವರ ಕಾಲಿನಿಂದ ಒದ್ದು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಸಮೀರ್ ಅವರು ಏಳದೇ ಕುಳಿತಿದ್ದರು.

ಈ ವಾರ ಮನೆಯ ನಾಯಕನಾಗಿ ಸಮೀರ್ ಅವರು ನಿವೇದಿತಾ ಅವರಿಗೆ ಉತ್ತಮ ಆಟಗಾರ್ತಿ ಎಂದು ಹಾಗು ಅನುಪಮಾ ಅವರು ಕಳಪೆ ಆಟಗಾರ್ತಿ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಅನುಪಮಾ ಅವರು ತುಂಬ ಅಳುತ್ತಿದ್ದರು. ಇವರನ್ನು ಜೆ ಕೆ ಸಮಾಧಾನ ಪಡಿಸಿದ್ದಾರೆ. ಹಾಗು ಚಂದನ್ ಅವರು ಸಮೀರ್ ಅವರನ್ನು ನಿಮ್ಮ ಅಭಿಪ್ರಾಯ ಸರಿ ಇದ್ದೀಯ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸೀಕ್ರೆಟ್ ರೂಂನಲ್ಲಿದ್ದ ದಿವಾಕರ್ ಮಧ್ಯರಾತ್ರಿ ಮನೆಯೊಳಗೆ ಸದ್ದಿಲ್ಲದೇ ಮನೆ ಒಳಗೆ ಎಂಟ್ರಿ ಆಗಿದ್ದಾರೆ. ಈ ವಾರ ನಿವೇದಿತಾ, ಅನುಪಮಾ,ರಿಯಾಜ್, ಕಾರ್ತಿಕ್, ಕೃಷಿ, ಶ್ರುತಿ, ಹಾಗೂ ಶ್ರುತಿ ಅವರು ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.
ವ್ಯಕ್ತಿಯೋರ್ವನ ತಪಾಸಣೆಯ ಸಮಯದಲ್ಲಿ, ಒಂದು ವೇಳೆ ಆತನಿಗೆ ಅಥವಾ ಆಕೆಗೆ ಕ್ಯಾನ್ಸರ್ ಇದೆ ಎಂದು ದೃಢಪಟ್ಟರೆ, ಅವರು ತಮ್ಮ ಭವಿಷ್ಯ ಜೀವನದ ಕುರಿತು ವೈರಾಗ್ಯ ಭಾವವನ್ನು ಹೊಂದುವಂತಾಗುತ್ತದೆ. ಅಂತಹ ಭೀಷಣ ರೋಗ ಈ ಕ್ಯಾನ್ಸರ್.
ಮದುವೆಯಾಗದ ಜೋಡಿಗೂ ಕೆಲವೊಂದು ಅಧಿಕಾರವಿದೆ. ಆದ್ರೆ ಅನೇಕರಿಗೆ ಈ ಅಧಿಕಾರದ ಬಗ್ಗೆ ಗೊತ್ತಿಲ್ಲ. ಹೊಟೇಲ್ ನಲ್ಲಿ ಒಂದೇ ರೂಮಿನಲ್ಲಿ ಮದುವೆಯಾಗದ ಜೋಡಿ ಇರುವುದು ತಪ್ಪಲ್ಲ. ಪೊಲೀಸ್ ಈ ವಿಷ್ಯದ ಬಗ್ಗೆ ನಿಮ್ಮನ್ನು ಪ್ರಶ್ನೆ ಮಾಡಿದ್ರೆ ಭಯ ಪಡಬೇಕಾಗಿಲ್ಲ. ನಿಮಗೆ ಸಿಕ್ಕ ಅಧಿಕಾರದ ಬಗ್ಗೆ ನೀವು ತಿಳಿದಿದ್ದರೆ ಭಯವಿಲ್ಲದೆ ವಾದ ಮಾಡಬಹುದು.
ಹಿಂದೆ ಕೇವಲ ವಯಸ್ಸಾದರವರಲ್ಲಿ ಬಿಳಿಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಜೀವನ ಕ್ರಮ, ಆಹಾರ ಪದ್ಧತಿ ಮತ್ತು ಒತ್ತಡದ ಬದುಕಿನಿಂದಾಗಿ ಬಿಳಿಕೂದಲು ಸಣ್ಣ ವಯಸ್ಸಿನ ಮಕ್ಕಳಲ್ಲಿ ಕೂಡ ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ.
ನಿತ್ಯ ವಾಹನಗಳನ್ನು ಬಳಸುವವರು ಯಾರಾದರೂ ಅದರ ಕೀಗಳನ್ನು ಭದ್ರವಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ಅವನ್ನು ಕಳೆದುಕೊಂಡರೆ ಕಷ್ಟಗಳು ತಪ್ಪಿದ್ದಲ್ಲ.. ಆಗ ಅನುಭವಿಸುವ ಕಿರಿಕಿರಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇನ್ನು ಮುಖ್ಯವಾಗಿ ಕಾರಿನ ಮಾಲೀಕರು ಒಮ್ಮೊಮ್ಮೆ ಕಾರಿನಲ್ಲೇ ಕೀ ಮರೆತುಬಿಡುತ್ತಾರೆ.
19 ವರ್ಷದ ಚಿಕ್ಕ ವಯಸ್ಸಿನ ಮಗಳೊಬ್ಬಳು ತಂದೆಯ ಜೀವ ಉಳಿಸಲು ತನ್ನ ಲಿವರ್ ದಾನ ಮಾಡಿ ಆದರ್ಶ ಮಗಳೆನಿಸಿಕೊಂಡಿದ್ದಾಳೆ. ರಾಖಿ ದತ್ತ ತಂದೆಗಾಗಿ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಹಾಗೆ ಉಳಿದುಕೊಳ್ಳುತ್ತದೆ, ತನ್ನ ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾತ್ತದೆ ಎನ್ನುವುದನ್ನೂ ಲೆಕ್ಕಿಸದೇ ಈ ಯುವತಿ ತನ್ನ ತಂದೆಯ ಜೀವ ಉಳಿಸಲು ತನ್ನ 65% ಲಿವರ್ನನ್ನು ದಾನ ಮಾಡಿ, ತಂದೆಗೆ ಪುನರ್ಜನ್ಮ ನೀಡಿದ್ದಾಳೆ. ಈ ಬಗ್ಗೆ ವಾಣಿಜ್ಯೋದ್ಯಮಿ ಹರ್ಷ ಗೋಯೆಂಕಾ ಅವರು…