ಉಪಯುಕ್ತ ಮಾಹಿತಿ

ಬಟ್ಟೆ ಶಾಪಿಂಗ್ ಮಾಡೋವಾಗ ಈ ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ..!ತಿಳಿಯಲು ಈ ಲೇಖನ ಓದಿ ..

353

ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.

1.ಗಡಿಬಿಡಿಯಲ್ಲಿ ಶಾಪಿಂಗ್ ಖಂಡಿತ ಮಾಡ್ಬೇಡಿ:-
ಅಯ್ಯೋ ಟೈಂ ಇಲ್ಲ.. ಬೇಗ ಹೋಗ್ಬೇಕು ಅಂದುಕೊಂಡು ಎಂದೂ ಶಾಪಿಂಗ್ ಮಾಡ್ಬೇಡಿ. ಇಂತ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಡಿಸೈನ್‍ಗಳನ್ನ ನೋಡದೆ ಮೊದಲು ಅಂಗಡಿಗೆ ಹೋದಾಗ ಯಾವುದು ಕಣ್ಣಿಗೆ ಚೆನ್ನಾಗಿ ಕಾಣುತ್ತೋ ಅದನ್ನೇ ಕೊಂಡುಕೊಳ್ತೀವಿ.

ಆದ್ರೆ ಇನ್ನೂ ಸ್ವಲ್ಪ ಸಮಯ ಹುಡುಕಿದ್ರೆ ಅದಕ್ಕಿಂತ ಚೆಂದದ ಡಿಸೈನ್‍ವುಳ್ಳ ಬಟ್ಟೆ ಸಿಗಬಹುದು.

2.ಟ್ರಯಲ್ ಮಾಡದೆ ಪರ್ಚೇಸ್ ಮಾಡ್ಬೇಡಿ:-
ಕಣ್ಣಿಗೆ ಚೆಂದವಾಗಿ ಕಂಡ ಬಟ್ಟೆಯನ್ನ ಧರಿಸಿ ನೋಡಿದಾಗ ಅದು ನಿಮಗೆ ಸೂಟ್ ಆಗದಿರಬಹುದು. ಅಥವಾ ಫಿಟಿಂಗ್‍ನಲ್ಲಿ ವ್ಯತ್ಯಾಸವಿರುವ ಸಾಧ್ಯತೆಯೂ ಇರುತ್ತದೆ.

ಹೀಗಾಗಿ ಯಾವಾಗ್ಲೂ ಟ್ರಯಲ್ ನೋಡಿಯೇ ಬಟ್ಟೆ ಖರೀದಿ ಮಾಡಿ. ಅದರಲ್ಲೂ ವಿವಿಧ ಬ್ರ್ಯಾಂಡ್‍ಗಳ ಜೀನ್ಸ್ ಮತ್ತು ಟಾಪ್‍ಗಳ ಸೈಜ್‍ನಲ್ಲಿ ವ್ಯತ್ಯಾಸವಿರುತ್ತದೆ.

3.ಒಂದೇ ಡಿಸೈನ್‍ನಲ್ಲಿ ಬೇರೆ ಬೇರೆ ಬಣ್ಣದ ಬಟ್ಟೆ ತಗೋಬೇಡಿ:-
ಒಂದು ಟೀ ಶರ್ಟ್/ಟಾಪ್/ಪ್ಯಾಂಟ್ ಇಷ್ಟವಾದ್ರೆ ಅದೇ ಡಿಸೈನ್‍ನಲ್ಲಿ ಮೂರ್ನಾಲ್ಕು ವಿವಿಧ ಬಣ್ಣದ ಟೀ-ಶರ್ಟ್/ಟಾಪ್ ತೆಗೆದುಕೊಳ್ಳೋದನ್ನ ಮಾಡ್ಬೇಡಿ. ಸಾಕಷ್ಟು ವೆರೈಟಿಯ ಡಿಸೈನ್‍ಗಳು ಇರುವಾಗ ಒಂದೇ ಡಿಸೈನ್‍ಗೆ ಅಂಟಿಕೊಳ್ಳೋದು ಯಾಕೆ?

4.ನಿಮಗೆ ಫಿಟ್ ಆಗದ ಬಟ್ಟೆಯನ್ನ ಅಲ್ಲೇ ಬಿಡಿ:-
ಅಯ್ಯೋ ಈ ಟಾಪ್ ಎಷ್ಟೊಂದು ಚೆನ್ನಾಗಿದೆ… ಆದ್ರೆ ನನಗೆ ಸ್ವಲ್ಪ ಟೈಟ್ ಆಗ್ತಿದೆ… ಪರ್ವಾಗಿಲ್ಲ, ಮುಂದೆ ಸಣ್ಣ ಆಗ್ತೀನಿ…. ಎಂತೆಲ್ಲಾ ಅಂದುಕೊಂಡು ನಿಮಗೆ ಫಿಟ್ ಆಗದಿರುವ ಬಟ್ಟೆಯನ್ನ ಖರೀದಿಸಬೇಡಿ. ತುಂಬಾ ಇಷ್ಟವಾದ ಬಟ್ಟೆ ಸ್ವಲ್ಪ ಇದ್ದು, ನಿಮ್ಮ ಸೈಜ್ ನಲ್ಲಿ ಲಭ್ಯವಿಲ್ಲದಿದ್ರೆ ಅದನ್ನ ಟೈಲರ್ ಬಳಿ ಕೊಟ್ಟು ಫಿಟ್ ಮಾಡಿಸಿಕೊಳ್ಳಬಹುದು.

5.ಸೇಲ್ ಇದ್ದಾಗ ಶಾಪಿಂಗ್ ಹೋಗಿ:-
ಹೊಸ ಡಿಸೈನ್‍ನ ಬಟ್ಟೆಗಳ ಬೆಲೆ ತುಂಬಾ ದುಬಾರಿ ಎನಿಸಿದ್ರೆ ಸ್ವಲ್ಪ ಕಾಯಿರಿ. ಸ್ವಲ್ಪ ಸಮಯದ ನಂತರ ಡಿಸ್ಕೌಂಟ್ ಸೇಲ್ ಹಾಕಿದಾಗ ಅದೇ ಬಟ್ಟೆ ಕಡಿಮೆ ಬೆಲೆ/ ಅರ್ಧ ಬೆಲೆಗೂ ಸಿಗಬಹುದು. ಹಾಗಂತ ಎಲ್ಲಾ ಬಟ್ಟೆಗಳು ಸೇಲ್‍ನಲ್ಲಿ ಬರುತ್ತವೆ ಅಂದ್ಕೋಬೇಡಿ. ಇಂತದ್ದೊಂದು ಜಾಕೇಟ್ ಖರೀದಿಸಬೇಕು ಅಂದ್ಕೊಂಡು ಅದು ತುಂಬಾ ದಿನಗಳ ನಂತರ ಸಿಕ್ಕರೆ ಅದನ್ನ ಆಗಲೇ ಖರೀದಿಸಿದ್ರೆ ಉತ್ತಮ. ಸಾಮಾನ್ಯವಾಗಿ ಸಿಗೋ ಉಡುಪುಗಳಾದ್ರೆ ಸೇಲ್ ಹಾಕಿದಾಗಲೇ ಖರೀದಿ ಮಾಡಿ.

6.ಫ್ರೆಂಡ್‍ಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೇ ಇರಬೇಡಿ:-
ನಿಮ್ಮ ಸ್ಟೈಲ್ ಅಥವಾ ಟೇಸ್ಟ್ ನಿಮ್ಮ ಸ್ನೇಹಿತರಿಗೆ ಇಷ್ಟವಾಗದಿರಬಹುದು. ಅಥವಾ ನೀವು ಆರಿಸಿದ ಬಟ್ಟೆ ಚೆನ್ನಾಗಿಲ್ಲ ಅಂತಲೂ ಅವರು ಹೇಳಿಬಿಡಬಹುದು. ಆದ್ರೆ ಆ ಬಟ್ಟೆಯನ್ನ ಯಾವ ರೀತಿ ಸ್ಟೈಲ್ ಮಾಡಬೇಕು , ಯಾವುದರೊಂದಿಗೆ ಮ್ಯಾಚ್ ಮಾಡಿ ಹಾಕೋಬೇಕು ಅನ್ನೋದು ಅವರಿಗಿಂತ ಚೆನ್ನಾಗಿ ನಿಮಗೆ ಗೊತ್ತಿರುತ್ತದೆ. ಹೀಗಾಗಿ ಗೆಳೆಯ/ ಗೆಳತಿಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೆ ಇದ್ರೆ ನಿಮಗೇ ಲಾಸ್. ಸ್ನೇಹಿತರಿಗಿಂತ ನಿಮ್ಮ ಟೇಸ್ಟ್ ಭಿನ್ನವಾಗಿದ್ರೆ ಒಬ್ಬರೇ ಶಾಪಿಂಗ್ ಮಾಡಲು ಹೋಗಿ.

 

 

About the author / 

Nimma Sulochana

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ