ಸುದ್ದಿ

ಫ್ಲೈಯಿಂಗ್ ಕಿಸ್ ಕೊಟ್ಟ ವ್ಯಕ್ತಿಗೆ 3 ವರ್ಷ ಜೈಲು, 3 ಸಾವಿರ ದಂಡ ವಿಧಿಸಿದ ಕೋರ್ಟ್ ….!

50

ಪಕ್ಕದ ಮನೆ ಮಹಿಳೆಗೆ ಫ್ಲೈಯಿಂಗ್ ಕಿಸ್ ನೀಡಿದ ವ್ಯಕ್ತಿಗೆ  ಮೂರು ವರ್ಷ ಜೈಲು ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.ವಿನೋದ್ ಜೈಲು ಸೇರಿದ ವ್ಯಕ್ತಿ. ವಿನೋದ್ ತನ್ನ ಪಕ್ಕದ ಮನೆ ಮಹಿಳೆಯನ್ನು ನೋಡಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದನು. ಅಲ್ಲದೆ ಸನ್ನೆ ಮಾಡುವ ಮೂಲಕ ಅನುಚಿತವಾಗಿ ವರ್ತಿಸುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮಹಿಳೆ ತನ್ನ ಪತಿಯ ಜೊತೆ ವಾಸಿಸುತ್ತಿದ್ದರು. ಅಲ್ಲದೆ ಈ ವಿಷಯವನ್ನು ಪತಿಗೆ ಹೇಳಿದ್ದಾರೆ. ಬಳಿಕ ಇಬ್ಬರು ದೂರು ನೀಡಿದ್ದಾರೆ. ಮಹಿಳೆ ತನ್ನ ದೂರಿನಲ್ಲಿ, “ವಿನೋದ್ ಹಲವು ಬಾರಿ ಫ್ಲೈಯಿಂಗ್ ಕಿಸ್ ಮಾಡಿ ಅಶ್ಲೀಲ ಸನ್ನೆ ಮಾಡುವ ಮೂಲಕ ನನಗೆ ಕಿರುಕುಳ ನೀಡುತ್ತಿದ್ದಾನೆ” ಎಂದು ಉಲ್ಲೇಖಿಸಿದ್ದರು.

ಆರೋಪಿ ವಿನೋದ್ ಟಾಪ್ ಫ್ಲೋರ್ ಫ್ಲಾಟ್‍ನಲ್ಲಿ ವಾಸಿಸುತ್ತಾನೆ. ಅಲ್ಲದೆ ಆತ ನನ್ನನ್ನು ನೋಡಿ ಅಶ್ಲೀಲವಾಗಿ ಸನ್ನೆ ಮಾಡುತ್ತಾನೆ. ಕೆಲವು ಬಾರಿ ಅಶ್ಲೀಲವಾಗಿ ಕಮೆಂಟ್ ಕೂಡ ಮಾಡುತ್ತಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.ಮಹಿಳೆ ವಿರುದ್ಧ ದೂರು ದಾಖಲಿಸುತ್ತಿದ್ದಂತೆ, ಆರೋಪಿ ವಿನೋದ್ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಪತಿ – ಪತ್ನಿ ಇಬ್ಬರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿನೋದ್ ಆರೋಪಿಸಿದ್ದಾನೆ. ಆದರೆ ಪೊಲೀಸರಿಗೆ ದಂಪತಿ, ವಿನೋದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಸಿಗಲಿಲ್ಲ.ಸದ್ಯ ಮೋಹಾಲಿ ನ್ಯಾಯಾಲಯ ಆರೋಪಿ ವಿನೋದ್‍ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • modi, ಉಪಯುಕ್ತ ಮಾಹಿತಿ

    ದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಿಗೊಳಿಸಲು ಪ್ರಧಾನಿ ಮೋದಿಯ ಹೊಸ ಯೋಜನೆ..ಇದನ್ನೊಮ್ಮೆ ಓದಿ..!

    ಹೊಸದಿಲ್ಲಿ, ಮಹಾತ್ಮಾ ಗಾಂಧಿ ಅವರ 150ನೇ ಹುಟ್ಟುಹಬ್ಬದಂದು ಪ್ಲಾಸ್ಟಿಕ್‌ ತ್ಯಾಜ್ಯದ ವಿರುದ್ಧ ಮಹಾ ಆಂದೋಲನ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.  ದೇಶವನ್ನು ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಂದಿನಿಂದ ಸ್ವಚ್ಛ ಭಾರತ ಮಾದರಿಯ ಆಂದೋಲನ ನಡೆಸುವಂತೆ ಕೇಳಿಕೊಂಡಿರುವ ಪ್ರಧಾನಿ, ಪ್ಲಾಸ್ಟಿಕ್‌ನ ಸುರಕ್ಷಿತ ವಿಲೇವಾರಿಗೆ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಆವಿಷ್ಕರಿಸುವಂತೆ ನಗರಸಭೆಗಳು, ಸರಕಾರೇತರ ಸಂಘಟನೆಗಳು ಮತ್ತು ಕಾರ್ಪೊರೇಟ್‌ ವಲಯಕ್ಕೆ ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್‌ನ್ನು ಒಂದೇ ಬಾರಿ ಬಳಸಿ ಎಸೆಯುವ ಆಭ್ಯಾಸವನ್ನು ಬಿಡುವ ಮೂಲಕ…

  • India, tourism

    ಇದು ಭಗವಾನ ಶ್ರೀಕೃಷ್ಣನ ನಗರಿ

    ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಜನಪ್ರೀಯಗೊಳ್ಳುತ್ತಿರುವ ಪ್ರವಾಸಿ ತಾಣ. ವಿಶೇಷವೆಂದರೆ ದ್ವಾರಕೆಯಿಂದ ಕೇವಲ ಮೂವತ್ತೇ ಕಿ.ಮೀ ಗಳಷ್ಟು ದೂರದಲ್ಲಿದೆ. ಇದನ್ನು ದ್ವಾರಕಾ ಎಂತಲೂ ಕರೆಯುತ್ತಾರೆ ಹಾಗೂ ಇದು ಗುಜರಾತ್ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಗುಜರಾತ್ ರಾಜ್ಯದ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಎಂಬ ಕರಾವಳಿ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಬೇಟ್ ದ್ವಾರಕಾ…

  • ಸುದ್ದಿ

    ಯಾವ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಅರೆಸ್ಟ್ ಮಾಡಿ ಬಂಧಿಸಿದ ಪೊಲೀಸರು…ಕಾರಣ?

    ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ. ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ…

  • ವ್ಯಕ್ತಿ ವಿಶೇಷಣ

    ಹುಟ್ಟಿದು ಹಿಟ್ಲರ್ ನೆಲದಲ್ಲಿ,ಕೊಟ್ಟಿದ್ದು ಕನ್ನಡ ಕೊಡುಗೆ..! ತಿಳಿಯಲು ಲೇಖನ ಓದಿ…

    ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.

  • ಆರೋಗ್ಯ

    ಕಿಡ್ನಿಯಲ್ಲಿರುವ ಕಲ್ಲು ಹೊರಗೆ ಬರಲು. ಈ ಒಂದು ಪಲ್ಯ ತಿಂದರೆ ಸಾಕು. ಈ ಅರೋಗ್ಯ ಮಾಹಿತಿ ನೋಡಿ.

    ಈ ಒಂದು ಪಲ್ಯ ತಿಂದರೆ ಸಾಕು ಕಿಡ್ನಿಯಲ್ಲಿರುವ ಕಲ್ಲು ಹೊರಗೆ ಬರುತ್ತದೆ.ಅದ್ಬುತವಾದ ಪಲ್ಯ ಮಾಡೊದು ಹೇಗೆ. ಬಾಳೆದಿಂಡಿನ ಪಲ್ಯವನ್ನು ಮಾಡುವುದು ಹೇಗೆ ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ ಮೊದಲಿಗೆ ಬಾಳೆದಿಂಡನ್ನು ತೆಗೆದುಕೊಂಡು ಅದರಲ್ಲಿರುವ ನಾರಿನ ಅಂಶಗಳನ್ನು ತೆಗೆದು ಸಣ್ಣದಾಗಿ ಕಟ್ಟು ಮಾಡಿಕೊಳ್ಳಬೇಕು ಅದನ್ನು ಮಜ್ಜಿಗೆ ಒಳಗೆ ಹಾಕಬೇಕು ಏಕೆಂದರೆ ಬಾಳೆದಿಂಡು ಬೇಗನೆ ಕಪ್ಪಿಗೆ ಆಗುತ್ತದೆ ನಂತರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಾಳೆದಿಂಡನ್ನು ಚೆನ್ನಾಗಿ ಬೇಯಿಸಬೇಕು ಸಣ್ಣದಾಗಿ ಮಾಡಬೇಕು ಇದು ನೆನಪಿರಲಿ.  ನಂತರ ಒಂದು ಪಾತ್ರೆಗೆ ಎಣ್ಣೆ…

  • ಸುದ್ದಿ

    ಭೂಕುಸಿತ ನೋಡಲು ಬಂದವರು ಸಮಾಧಿ..!50 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

    ದೇಶದ 7 ರಾಜ್ಯಗಳಲ್ಲಿ ಈಗ ಜಲಕಂಟಕ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಗುಜರಾತ್‌ನಲ್ಲಿ ಪ್ರವಾಹ ತಲೆದೋರಿದೆ. ಪ್ರವಾಹ ಹಾಗೂ ಭೂ ಕುಸಿತಕ್ಕೆ ಊರಿಗೆ ಊರುಗಳೇ ನಾಶವಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತ ಶಿಬಿರ ಸೇರಿರುವ ಸಂತ್ರಸ್ತರ ಗೋಳು ಹೇಳತೀರದು. ಕೇರಳದಲ್ಲಿ ಭಾರೀ ಭೂಕುಸಿತ : ಈ ಬಾರಿಯೂ ಭಾರೀ ಮಳೆ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೇರಳದಲ್ಲಿ ಇಲ್ಲಿವರೆಗೆ 30 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ…