ಸರ್ಕಾರದ ಯೋಜನೆಗಳು

ಪ್ರಧಾನ ಮಂತ್ರಿ ಈ ಯೋಜನೆ ಮಾಡಿಸಿದವರಿಗೆ ನೂರೆಂಟು ಲಾಭ! ತಿಳಿಯಲು ಈ ಲೇಖನ ಓದಿ..

808

ಭಾರತ ಸರ್ಕಾರದ ಮೂರು ಮುಖ್ಯ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಕೂಡ ಒಂದು. ವಾರ್ಷಿಕ ನವೀಕರಣವಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY) ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್ ನೀಡುತ್ತದೆ.

ಕೇವಲ ವಾರ್ಷಿಕ 12 ರೂಪಾಯಿಗಳ ಪ್ರೀಮಿಯಂ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಬಹಳ ಉಪಯೋಗಕಾರಿಯಾಗಿದೆ.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಆಕಸ್ಮಿಕ ಮರಣ ಮತ್ತು ಶಾಶ್ವತ ಪೂರ್ಣ ಅಂಗವೈಕಲ್ಯಕ್ಕೆ 2 ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿಗಳ ಲೈಫ್ ಕವರೇಜ್ ಲಭಿಸುವುದು.

PMSBY ಪಾಲಿಸಿ ಅಡಿಯಲ್ಲಿ ಯಾವ ಅಂಶಗಳಿಗೆ ಎಷ್ಟು ಕವರೇಜ್ ಸಿಗುತ್ತದೆ?

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ವಿಮೆದಾರನ ಆಕಸ್ಮಿಕ ಮರಣದ ಸಂದರ್ಭದಲ್ಲಿ ರೂ. 2 ಲಕ್ಷ ಲಭ್ಯವಾಗುತ್ತದೆ.

ಇದಲ್ಲದೆ, ರೂ. 2 ಲಕ್ಷ ಪೂರ್ಣ ಅಂಗವೈಕಲ್ಯತೆ ಅಥವಾ ಎರಡೂ ಕಣ್ಣುಗಳಿಗೆ ಶಾಶ್ವತ ಹಾನಿ ಅಥವಾ ಕೈಗಳು ಮತ್ತು ಪಾದಗಳು, ಪಾರ್ಶ್ವವಾಯು ಇತ್ಯಾದಿಗಳ ಪೂರ್ಣ ಅಸಾಮರ್ಥ್ಯದ ಸಂದರ್ಭದಲ್ಲಿ ಒದಗಿಸಲಾಗುತ್ತದೆ. ಭಾಗಶಃ ಅಂಗವೈಕಲ್ಯತೆಯ ಸಂದರ್ಭದಲ್ಲಿ, ವಿಮೆದಾರರಿಗೆ ರೂ. 1 ಲಕ್ಷಗಳ ಜೀವ ರಕ್ಷಣಾ ಧನವನ್ನು ನೀಡಲಾಗುತ್ತದೆ.

ಸೇರ್ಪಡೆ ಮತ್ತು ಪ್ರತ್ಯೇಕಿಸುವಿಕೆ:-

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಯಾವುದೇ ಸಾವು, ಅಪಘಾತಗಳು ಮತ್ತು ಅಂಗವೈಕಲ್ಯಗಳು ಸೇರ್ಪಡೆಯಾಗಿವೆ.

ಈ ಯೋಜನೆಯು ಆತ್ಮಹತ್ಯೆಗೆ ವಿರುದ್ಧವಾಗಿ ಯಾವುದೇ ರಕ್ಷಣೆಯನ್ನು ಕೊಡುವುದಿಲ್ಲ. ಆದರೆ ಕೊಲೆಯ ಕಾರಣದಿಂದಾಗಿರುವ ಮರಣವು ಪಾಲಿಸಿಯ ಅಡಿಯಲ್ಲಿರುತ್ತದೆ. ಒಂದು ಕೈ ಅಥವಾ ಕಾಲು, ಕಣ್ಣಿನ ದೃಷ್ಟಿ ಕಳೆದುಕೊಂಡಲ್ಲಿ ಕೂಡ ಈ ಯೋಜನೆಯ ಯಾವುದೇ ವ್ಯಾಪ್ತಿಯಲ್ಲಿ ಬರುವುದಿಲ್ಲ.

ನೆಟ್ ಬ್ಯಾಂಕಿಂಗ್ ಮೂಲಕ ಸುರಕ್ಷಾ ವಿಮಾ ಯೋಜನೆಗೆ ಸೇರ್ಪಡೆ ಹೇಗೆ..?

ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಮಾಡಿ ಮತ್ತು ವಿಮೆ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ಪುಟದಲ್ಲಿ ಲಭ್ಯವಿರುವ ಎರಡೂ ಯೋಜನೆಗಳಲ್ಲಿ ಬೇಕಾದದನ್ನು ಆರಿಸಿಕೊಳ್ಳಿ. ನೀವು ಪ್ರೀಮಿಯಂ ಪಾವತಿಸಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ.

ಆಯ್ಕೆ ಮಾಡಿದ ಖಾತೆಯ ಪ್ರಕಾರ ಪಾಲಿಸಿ ಕವರ್ ವಿವರ, ನಾಮಿನಿ ವಿವರ ಮತ್ತು ಪ್ರೀಮಿಯಂ ಮೊತ್ತವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ನೀವು ಉಳಿತಾಯ ಖಾತೆಯ ನಾನಿಮಿಯನ್ನು ಕೂಡ ಆಯ್ಕೆ ಮಾಡಬಹುದು ಅಥವಾ ಹೊಸ ನಾಮಿನಿಯನ್ನು ಸೇರಿಸಬಹುದು .

PMSBYಗೆ ಸೇರ್ಪಡೆಗೆ ಬೇಕಾದ ಅರ್ಹತೆ:-

ಕನಿಷ್ಟ 18 ವರುಷ ಪೂರೈಸಿರಬೇಕಾಗಿದ್ದು, 18-70 ವರ್ಷ ವಯಸ್ಸಿನ ವ್ಯಕ್ತಿಗಳು PMSBY ಅನ್ನು ಖರೀದಿಸಲು ಅರ್ಹರಾಗಿದ್ದಾರೆ.

ಇದಲ್ಲದೆ, NRIಗಳೂ ಕೂಡ ಪಾಲಿಸಿಗೆ ಸೇರಿಕೊಳ್ಳಬಹುದು ಮತ್ತು ಪಾಲಿಸಿಯ ಕ್ಲೇಮ್ ಗಳನ್ನೂ ಫಲಾನುಭವಿಗಳಿಗೆ ಭಾರತೀಯ ಕರೆನ್ಸಿಯಲ್ಲಿ ಕೊಡಲಾಗುವುದು. ಉಳಿತಾಯ ಖಾತೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.

ಎಸ್ಎಂಎಸ್ ಮೂಲಕ ಸುರಕ್ಷಾ ವಿಮಾ ಯೋಜನೆಗೆ ಸೇರ್ಪಡೆ ಹೇಗೆ?

PMSBYY ಎಂದು ಸಂದೇಶ ಕಳುಹಿಸುವಂತೆ ಅರ್ಹ ಅಭ್ಯರ್ಥಿಗಳಿಗೆ SMS ಕಳುಹಿಸಲಾಗುವುದು. ಈ ಯೋಜನೆಗೆ ಸೇರ್ಪಡೆಯಾಗಲು ‘PMSBYY’ ಎಂದು ಸಂದೇಶವನ್ನು ಕಳುಹಿಸಬೇಕು.

ಈ ಸಂದೇಶಕ್ಕೆ ಬದಲಾಗಿ ಗ್ರಾಹಕರಿಗೆ ಸ್ವೀಕೃತಿಯ ಸಂದೇಶವನ್ನು ಕಳುಹಿಸಲಾಗುತ್ತದೆ.ಅರ್ಜಿಯ ಪ್ರಕ್ರಿಯೆಯಲ್ಲಿ ಮುಂದುವರೆಯಲು ಚಂದಾದಾರರ ಹೆಸರು, ವೈವಾಹಿಕ ಸ್ಥಿತಿ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳ ಅವಶ್ಯಕತೆಯಿದೆ.

ಈ ವಿವರಗಳು ಬ್ಯಾಂಕಿನ ದಾಖಲೆಯಲ್ಲಿ ದೊರಕದಿದ್ದರೆ, ಅರ್ಜಿಯ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದಿಲ್ಲ ಮತ್ತು ಅರ್ಜಿದಾರರು ಹತ್ತಿರದ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ಖಾತೆಯಲ್ಲಿ ಪ್ರೀಮಿಯಂ ಕಟ್ಟುವಷ್ಟು ಮೊತ್ತವಿಲ್ಲದಿದ್ದಲ್ಲಿ ಪಾಲಿಸಿಯಿಂದೊದಗುವ ಕವರೇಜ್ ರದ್ದಾಗುತ್ತದೆ. ಆದರೆ ಪಾಲಿಸಿ ಇನ್ನೂ ಜಾರಿಯಲ್ಲಿರುತ್ತದೆ.

ಶ್ರೀ ಶಕ್ತಿ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಶಾಸ್ತ್ರಂ 

ಜ್ಯೋತಿಷ್ಯ ವಿದ್ವಾನ್ :: ಆದಿತ್ಯನಾಥ್ ಭಟ್ 

ಪರಿಹಾರದಲ್ಲಿ ಓಪನ್ ಚಾಲೆಂಜ್ 

ಇಷ್ಟಪಟ್ಟರು ನಿಮ್ಮಂತ ಯಾವಾಗಲೂ

ಪ್ರೀತಿಯಲ್ಲಿ ನಂಬಿ ಮೋಸ 

ಅತ್ತೆಸೊಸೆ ಕಲಹ ಲೈಂಗಿಕ ಸಮಸ್ಯೆ

ಮದುವೆಯಲ್ಲಿ ಅಡಚಣೆ

ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ

ಸಂಪರ್ಕಿಸಿ 9036367905

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪತಿಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಂತಹ ಮಹಿಳೆ.. ಕಾರಣ?

    ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಸೋನಿಟ್‍ಪುರ್ ಜಿಲ್ಲೆಯ ಮಜ್ಗಾಂವ್‍ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ…

  • ಕರ್ನಾಟಕ

    ಪ್ರತ್ತ್ಯೇಕ ನಾಡ ಧ್ವಜ ಕುರಿತು ಸಂವಿಧಾನದಲ್ಲಿ ಏನು ಹೇಳಲಾಗಿದೆ ಗೊತ್ತಾ ???

    ಈಗ ಎಲ್ಲಾ ಕಡೆ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದ್ರೆ ನಮ್ಮ ಸಂವಿಧಾನದಲ್ಲಿ ಪ್ರತ್ಯೇಕ ನಾಡ ಧ್ವಜ ಕುರಿತು ಏನು ಹೇಳಲಾಗಿದೆ? ಭಾರತದ ಯಾವ ರಾಜ್ಯವು ಪ್ರತ್ಯೇಕ ಧ್ವಜವನ್ನು ಹೊಂದಿಲ್ಲವೇ?

  • ಉಪಯುಕ್ತ ಮಾಹಿತಿ, ದೇವರು

    ಸಂಕ್ರಾಂತಿ ಯಾಕೆ ಮಾಡ್ತಾರೆ ಗೊತ್ತಾ? ಈ ದಿನ ಎಳ್ಳಿಗೆ ಯಾಕೆ ಇಷ್ಟು ಮಹತ್ವ.

    ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು…

  • ಆರೋಗ್ಯ

    ಬೆಳ್ಳುಳ್ಳಿಯನ್ನು ತಿಂದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಈ ಮಾಹಿತಿ ನೋಡಿ.

    ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ. 1….

  • ಸುದ್ದಿ

    ಇಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡಲ್ಲಿ ಕಠಿಣ ಶಿಕ್ಷೆ ಪಕ್ಕಾ..!ಎಲ್ಲಿ ಗೊತ್ತ?

    ಈ ದೇಶದಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡರೆ ಕಠಿಣ ಶಿಕ್ಷೆಗೆ ವಿಧಿಸಲಾಗುತ್ತದೆ. ಸಂಪ್ರದಾಯ ದೇಶ ಸೌದಿ ಅರೇಬಿಯಾದಲ್ಲಿ ಪುರುಷರಂತೆ ಮಹಿಳೆಯರಿಗೆ ಸಮಾನ ಹಕ್ಕುಗಳು ಇಲ್ಲ. ಈ ದೇಶದಲ್ಲಿ ಶರ್ಯ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ.ಷ್ಟರ ಮಟ್ಟಿಗೆ ಎಂದರೆ ಮಹಿಳೆಯರು ತಾವು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ತಮ್ಮ ಗಂಡನ ಆಯ್ಕೆಯನ್ನು ಕೂಡ ಮಾಡಿಕೊಳ್ಳಲು ಇಲ್ಲಿ ಸ್ವತಂತ್ರ ಇಲ್ಲ. ಅಂತ ಕಟ್ಟು ಪಾಡುಗಳನ್ನು ಮೀರಿದರೆ ಕಠಿಣವಾಗಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ ಸೌದಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ಪ್ರದರ್ಶಿಸುವ ಹಾಗೆ ಇಲ್ಲ.ಹೌದು…