News

ಮ್ಯೂಸಿಕ್ ಮಾಂತ್ರಿಕ ಎರ್.ಆರ್ ರೆಹಮಾನ್ ರವರನ್ನು ಭೇಟಿ ಮಾಡಿದ ಹಳ್ಳಿ ಪ್ರತಿಭೆ ಗಂಗಮ್ಮ..!
ಇಲ್ಲಿ ಬುಲೆಟ್ ಗೆ ದೇವಸ್ಥಾನ ಕಟ್ಟಿ ಪೂಜೆ ದಿನನಿತ್ಯ ಪೂಜೆ ಮಾಡ್ತಾರೆ..!ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…
ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…
ನಿತ್ಯ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…
ನಿತ್ಯ ಭವಿಷ್ಯ ಭಾನುವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗೆ ಧನ ಯೋಗದ ಲಾಭವಿದೆ!ನಿಮ್ಮ ಅದೃಷ್ಟದ ಸಂಖ್ಯೆಯನ್ನು ತಿಳಿಯಿರಿ…
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಕಾಲಿಗೆ ಬಿದ್ದು ಕೈ ಮುಗಿದು ತಪ್ಪಾಯಿತೆಂದು ಕೇಳಿಕೊಂಡ ಅಕ್ಷತಾ..!
ತನ್ನ ವಿಶೇಷ ಅಭಿಮಾನಿಯೋಬ್ಬರನ್ನ ಭೇಟಿ ಮಾಡಲು ಮುಂದಾಗಿರುವ ಕಿಚ್ಚಾ ಸುದೀಪ್!ಏಕೆ ಗೊತ್ತಾ..?
ರಾಮ ಭಂಟ ಆಂಜನೇಯನ ‘ಜಾತಿ’ ಪ್ರಮಾಣ ಪತ್ರಕ್ಕಾಗಿ ಅರ್ಜಿ!
ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…
ಯಶ್ ರಾಧಿಕಾ ಸು ಪುತ್ರಿಗೆ ಅಂಬಿ ತಾತನಿಂದ ಸ್ವರ್ಗದಿಂದ ಬಂತು ಗಿಫ್ಟ್… ಸುಮಲತಾ ಬಿಚ್ಚಿಟ್ಟ ಸತ್ಯ..
ದೇವರು-ಧರ್ಮ, ರಾಜಕೀಯ

‘ಪ್ರಧಾನಿ ಮೋದಿ’ಆಜಾನ್(ನಮಾಜ್) ಧ್ವನಿ ಕೇಳಿಸಿ ಭಾಷಣ ನಿಲ್ಲಿಸಿದರು..!ಏಕೆ ಗೊತ್ತಾ?ಶಾಕ್ ಆಗ್ತೀರಾ!ಮುಂದೆ ಓದಿ…

203

ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ. ಮೋದಿ ಭಾಷಣ ನಿಲ್ಲಿಸಲು ಕಾರಣವಾಗಿದ್ದು ಆಜಾನ್(ನಮಾಜ್). ಬುಧವಾರ ನವ್ಸಾರಿಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಮೀಪದ ಮಸೀದಿಯಿಂದ ಆಜಾನ್(ನಮಾಜ್) ಧ್ವನಿ ಕೇಳಿತು. ತಕ್ಷಣವೇ ಪ್ರಧಾನಿ ಮೋದಿ ಕೆಲ ಕ್ಷಣಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರು. ನಂತರ ಆಜಾನ್ ಮುಗಿದ ಬಳಿಕ ಮತ್ತೆ ಭಾಷಣ ಮುಂದುವರೆಸಿದರು.

ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ನಿಲ್ಲಿಸುತ್ತಿದ್ದಂತೆ ಸಭಿಕರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಆದರೆ ಮೋದಿ ಅವರು ಆಜಾನ್ ಮುಗಿದ ಬಳಿಕ ಭಾಷಣ ಆರಂಭಿಸುತ್ತಿದಂತೆ ಎಲ್ಲ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಮೋದಿಯವರ ನಡೆಯನ್ನು ಸ್ವಾಗತಿಸಿದರು.

ಇದೇ ಮೊದಲಲ್ಲ:-

ಆಜಾನ್ ವೇಳೆ ಮೋದಿ ಅವರು ಭಾಷಣ ನಿಲ್ಲಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಪಶ್ಚಿಮ ಬಂಗಾಳದ ಖರಗ್‍ಪುರದಲ್ಲಿ ಭಾಷಣ ಮಾಡುವ ವೇಳೆ ಆಜಾನ್ ಧ್ವನಿ ಕೇಳಿಸಿದಾಗಲೂ ಪ್ರಧಾನಿ ತಮ್ಮ ಭಾಷಣವನ್ನು ನಿಲ್ಲಿಸಿ ಮೌನ ವಹಿಸಿದ್ದರು.

ನಂತರ ಭಾಷಣ ಆರಂಭಿಸಿದ ಅವರು ಯಾರ ಪ್ರಾರ್ಥನೆಯನ್ನು ನಡುವೆ ಅಡ್ಡಿಪಡುಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ಭಾಷಣವನ್ನು ನಡುವೆ ನಿಲ್ಲಿಸಬೇಕಾಯಿತು ಎಂದು ಹೇಳಿದ್ದರು.

ಭಾಷಣ ವೇಳೆ ಮತ್ತೊಂದು ಅಚ್ಚರಿ:-

ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ಮತ್ತೊಂದು ಅಚ್ಚರಿ ಘಟನೆ ನಡೆಯಿತು. ಪ್ರಧಾನಿ ಮೋದಿಯಂತೆ ಬಟ್ಟೆತೊಟ್ಟಿದ್ದ ಪುಟ್ಟ ಪೋರನೊಬ್ಬ ವೇದಿಕೆ ಮೇಲೆ ಬಂದು ಪ್ರಧಾನಿಗಳಿಗೆ ಶುಭಾಶಯ ತಿಳಿಸಿದ. ಬಾಲಕನನ್ನು ಮಾತನಾಡಿಸಿದ ಪ್ರಧಾನಿ ಮೋದಿ ಬಾಲಕನ ಬಳಿ ಬಂದು ಶುಭ ಕೋರಿದರು.

ಕಳೆದ ಎರಡು ದಿನಗಳಿಂದ ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.

 

About the author / 

Nimma Sulochana

Follow Us on Facebook

Categories

ಇಂದಿನ ಅವಮಾನ
0C
humidity: 0%
wind: 0km/h
H 0 • L 0

Date wise

  • 6ನೇ ವೇತನ ಆಯೋಗದ ಗಾಳಿಸುದ್ದಿಗೆ ಕಿವಿ ಕೊಡಬೇಡಿ – ಇಲ್ಲಿದೆ ನಿಜವಾದ ಭಜೆಟ್ನ ಸುದ್ದಿ

    ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.

ಏನ್ ಸಮಾಚಾರ