ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಗಳಿದ್ದಾರೆ.
ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈ ಶಾಸಕಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತ ಬಹಳ ಜನ ರಾಜಕಾರಣಿಗಳನ್ನ ಕಳ್ಳರು, ಸುಳ್ಳರು, ಮೋಸಗಾರರು ಎಂದು ಕರೆಯುತ್ತಾರೆ. ಆದ್ರೆ ಎಲ್ಲಾ ರಾಜಕಾರಣಿಗಳು ಆ ಪಟ್ಟಿಗೆ ಸೇರುವುದಿಲ್ಲ. ಕೆಲವು ರಾಜಕಾರಣಿಗಳ ನಡೆಯನ್ನು, ಕೆಲಸವನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನ ಯಾರಿಂದಲೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅದೇ ರೀತಿಯಾಗಿ ಸಮಾಜಮುಖಿಯಾಗಿ, ಸಮಾಜದ ಪರವಾಗಿ ಹಾಗೂ ಸಮಾಜಕೋಸ್ಕರ ಹೋರಾಟ ಮಾಡುವ ಬಹಳಷ್ಟು ತ್ಯಾಗಮಯಿ ರಾಜಕಾರಣಿಗಳಿದ್ದಾರೆ. ಅವರಿಂದಲೇ ಅಲ್ಪ ಸ್ವಲ್ಪ ನ್ಯಾಯ ನಮ್ಮ ಬಡವರಿಗೆ ಹಾಗೂ ರೈತರಿಗೆ ಸಿಗುತ್ತಿದೆ. ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದು ಸುಳ್ಳಲ್ಲ. ಅವರು ಯಾರಿಗೂ ಮೋಸ ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗಳನ್ನ ಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಹೇಳಿಕೆ ನೀಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಶಾಸಕಿ ಹೆಬ್ಬಾಳ್ಕರ್ ಮೋದಿಯನ್ನ ಹೊಗಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ ಸರ್ಕಾರಿ ಕಚೇರಿಗಳು ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಂತದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾಳಾಗಿದೆ. ರಾಯಚೂರಿನ ಗೋನಾಳ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ನೀರನ್ನು ಹರಿಸಿರುವುದರಿಂದ ಹತ್ತಿ, ತೊಗರಿ ಸೇರಿ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ 126 ಕಿ.ಮೀ ನಿಂದ 186 ಕಿ.ಮೀ ವರೆಗಿನ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಇನ್ನೂ ನಡೆದಿದೆ. ಅಧಿಕಾರಿಗಳು ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ…
ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ದುಬೈ ಸ್ಟಾಪ್ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ…
ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ 6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಖಂಡಿಸುವ ಬರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೋದಿಯವರೇ ನಿಮಗೆ ಸೌಟ್ನಿಂದ ಹೊಡಿಬೇಕಾ? ಅಥವಾ ಗ್ಯಾಸ್ನಿಂದ ಹೊಡಿಬೇಕಾ? ಐದು ವರ್ಷಗಳಲ್ಲಿ ಏನು ಮಾಡಿದ್ದೀರಿ? ಗ್ಯಾಸ್ ಬೆಲೆ ಏರಿಕೆಯಾಯಿತು. ಕೇಂದ್ರ ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರ…
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯ ಚಿತ್ರಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮತ್ತು ತಂಡ ಸುಮಾರು ಮೂರು ವರ್ಷಗಳಿಂದ ಪಟ್ಟ ಶ್ರಮ ಈ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಒಂದು ವಿಭಿನ್ನ ರೀತಿಯ ಸಿನಿಮಾ ಇದಾಗಿದ್ದು ಚಿತ್ರಾಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ….
ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.