ಉಪಯುಕ್ತ ಮಾಹಿತಿ, ದೇಶ-ವಿದೇಶ

ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಬಗ್ಗೆ ನಿಮಗೆ ಗೊತ್ತಾ..? ತಿಳಿಯಲು ಈ ಲೇಕನ ಓದಿ…

220

ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಅಡಿಗಲ್ಲು ಹಾಕುವ ಮೂಲಕ ಯೋಜನೆಗೆ ಚಾಲನೆ ಸಿಗಲಿದೆ.ಇದರ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

 

 

1) ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಸುಮಾರು 1.10 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಯ ಒಟ್ಟು ವೆಚ್ಚದಲ್ಲಿ 88 ಸಾವಿರ ಕೋಟಿ(ಶೇ.81)ಹಣವನ್ನು ಜಪಾನ್ ಸಾಲ ರೂಪದಲ್ಲಿ ಭಾರತಕ್ಕೆ ಒದಗಿಸುತ್ತಿದೆ. ಜಪಾನ್ ಸಾಲವನ್ನು 50 ವರ್ಷದ ಒಳಗಡೆ ಮರು ಪಾವತಿ ಮಾಡಬೇಕಾಗಿದ್ದು, ಈ ಸಾಲಕ್ಕೆ ಶೇ.0.1 ರಷ್ಟು ಬಡ್ಡಿಯನ್ನು ವಿಧಿಸಿದೆ.

2) ಹೊಸ ಬುಲೆಟ್ ಟ್ರೈನ್ ಗುಜರಾತ್‍ನಿಂದ ಮುಂಬೈಗೆ ಸಂಚಾರವನ್ನು ನಡೆಸಲಿದ್ದು, ಒಮ್ಮೆ 750 ಪ್ರಯಾಣಿಕರನ್ನು ಹೊತ್ತು ಸಾಗಲಿದೆ. ಪ್ರತಿ ದಿನ 70 ಬಾರಿ ಅಹಮದಾಬಾದ್ – ಮುಂಬೈ ನಡುವೆ ಈ ರೈಲು ಸಂಚರಿಸಲಿದೆ.

3) ಬುಲೆಟ್ ಟ್ರೈನ್ ಸರಾಸರಿ ಘಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಗರಿಷ್ಟ 350 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

 

4) ಬುಲೆಟ್ ಟ್ರೈನ್ 508 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದ್ದು, ಶೇ.92 ರಷ್ಟು ಮೇಲ್ಸೇತುವೆ, ಶೇ.6 ರಷ್ಟು ಸುರಂಗ ಹಾಗೂ ಇನ್ನುಳಿದ ಶೇ.2 ರಷ್ಟು ನೆಲದಲ್ಲಿ ಹಾದು ಹೋಗಲಿದೆ. ಅಂದರೆ ಸುಮಾರು 460 ಕಿ.ಮೀ ಮೇಲ್ಸೇತುವೆ ಮಾರ್ಗದಲ್ಲೂ, 27 ಕಿಮೀ ಸುರಂಗ ಮಾರ್ಗದಲ್ಲೂ, ಉಳಿದ 13 ಕಿ.ಮೀ ನೆಲದಲ್ಲಿ ಸಂಚರಿಸಲಿದೆ.

5) ದೇಶದ ಅತೀ ದೊಡ್ಡ ಸುರಂಗ ಮಾರ್ಗವನ್ನು (21 ಕಿ.ಮೀ) ಹೊಂದಿರಲಿದ್ದು, 7 ಕಿ.ಮೀ ಸಮುದ್ರ ಅಡಿಯ ಸುರಂಗದಲ್ಲಿ ಸಂಚರಿಸುವುದು ವಿಶೇಷ. ಒಟ್ಟು 508 ಕಿ.ಮೀ ಮಾರ್ಗದಲ್ಲಿ 351 ಕಿ.ಮೀ ಗುಜರಾತ್ ರಾಜ್ಯದಲ್ಲಿ ಹಾಗೂ 156 ಕಿ.ಮೀ ಮಹಾರಾಷ್ಟ್ರ ರಾಜ್ಯದಲ್ಲಿ ಬುಲೆಟ್ ರೈಲು ಸಂಚರಿಸಲಿದೆ.

6) ಬುಲೆಟ್ ರೈಲು ಮೊದಲ ಸಂಚಾರವನ್ನು 2022ರ ಆಗಸ್ಟ್ 15 ರಂದು ಆರಂಭಿಸಬೇಕೆಂಬ ಗುರಿಯನ್ನು ರೈಲ್ವೇ ಸಚಿವಾಲಯ ಹಾಕಿಕೊಂಡಿದೆ. ಆರಂಭದಲ್ಲಿ 2023ಕ್ಕೆ ಈ ಯೋಜನೆ ಪೂರ್ಣಗೊಳಿಸಲು ಡೆಡ್‍ಲೈನ್ ನಿಗದಿಗೊಳಿಸಲಾಗಿತ್ತು. ಆದರೆ 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಆಚರಿಸುವ ಕಾರಣ ಜನರಿಗೆ ಉಡುಗೊರೆ ಎಂಬಂತೆ ಅವಧಿಗೂ ಮುನ್ನವೇ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.

7) ಜಪಾನ್ ಶಿಕಾನ್‍ಸೆನ್ ಬುಲೆಟ್ ರೈಲು 1964ರಲ್ಲಿ ಆರಂಭವಾಗಿದ್ದು, ಈವರೆಗೂ ಒಂದೇ ಒಂದು ಅಪಘಾತವಾಗಿಲ್ಲ. ಈ ರೈಲಿನಲ್ಲಿ ಸೆನ್ಸರ್ ಅಳವಡಿಸಲಾಗಿದ್ದು ಹಳಿಯಲ್ಲಿ ಏನಾದರೂ ಇದ್ದರೆ ಅಥವಾ ಹಳಿ ತುಂಡಾಗಿದ್ದರೆ ಅದರ ಮಾಹಿತಿ ತಿಳಿದು ಸ್ವಯಂ ಚಾಲಿತವಾಗಿ ನಿಲ್ಲುವ ವ್ಯವಸ್ಥೆಯನ್ನು ರೈಲು ಹೊಂದಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಟೀ ಮಾಡಿಕೊಂಡೇ ಲಕ್ಷಾಂತರ ಹಣ ಮಾಡುತ್ತಿದ್ದಾನೆ ಈತ..!

    ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…

  • ಸುದ್ದಿ

    15 ವರ್ಷಗಳಿಂದ ಕಾಡುತ್ತಿದ್ದ ಮೆದುಳು ತಿನ್ನುವ ಹುಳು ಹೊರತೆಗೆದ ವೈದ್ಯರು,.!

    ನೋಡುವುದಕ್ಕೆ ಸಣ್ಣ ದಾರದಂತಿದೆ… ಆದರೆ, ಇದು ಮಾಡುವ ಕೆಲಸ ಅತಿ ಭಯಾನಕ. ಮನುಷ್ಯನ ಮೆದುಳನ್ನು ಸ್ವಲ್ಪ ಸ್ವಲ್ಪವೇ ತಿನ್ನುವುದು ಈ ಹುಳುವಿನ ಕೆಲಸ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು `ಟೇಪ್ ವರ್ಮ್’ ಎಂದು ಕರೆಯುತ್ತಾರೆ. ಇಂತಹ ವಿಚಿತ್ರ ಹುಳುವನ್ನು ವ್ಯಕ್ತಿಯೊಬ್ಬರ ಮೆದುಳಿನಿಂದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ ಆಗ್ನೇಯ ಚೀನಾದ 36 ವರ್ಷದ ವಾಂಗ್ ಎಂಬವರು ಬರೋಬ್ಬರಿ 15 ವರ್ಷಗಳಿಂದ ಈ ದಾರದಂತಹ ಹುಳುವಿನ ಕಾಟದಿಂದ ನಲುಗಿದ್ದರು. ಸುಮಾರು 12 ಸೆಂಟಿ ಮೀಟರ್‌ನಷ್ಟು ಉದ್ದವಿದ್ದ ಈ ಹುಳು…

  • ಸುದ್ದಿ

    ಈ ಸಮ್ಮಿಶ್ರ ಸರ್ಕಾರಕ್ಕಿಂತ ಕುಮಾರಸ್ವಾಮಿ ಸರ್ಕಾರ ಸಾವಿರ ಪಟ್ಟು ಒಳ್ಳೆಯದು – ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಎಂ.ಬಿ ಪಾಟೀಲ್- ಇದಕ್ಕೆ ನಿಮ್ಮ ಉತ್ತರ.!

    ಸಮ್ಮಿಶ್ರ ಸರ್ಕಾರದಲ್ಲಿ ತಪ್ಪುಗಳಾಗಿವೆ ಅದು ಜೆಡಿಎಸ್ ಸರ್ಕಾರದ ಸಚಿವರು ಹಾಗೂ ಶಾಸಕರಿಂದ ಆಗಿವೆ ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಬುಧವಾರ ಹೇಳಿದರು. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ನಿನ್ನೆ ಹದ್ದು ಗಿಣಿ ಟ್ವೀಟ್​ಗೆ ಬಗ್ಗೆ ಕಾಗವಾಡ ಮತಕ್ಷೇತ್ರದ ಮಂಗಸೂಳಿ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇದ್ದಾಗೊಂದು, ಇಲ್ಲದಾಗೊಂದು ಹೇಳಿಕೆ ಸರಿಯಲ್ಲ, 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳಬೇಳಕಿತ್ತು….

  • ಸುದ್ದಿ

    ಪ್ರಸಿದ್ಧ ತಾಣದಲ್ಲಿರುವ ಈ ಹೋಟೆಲ್​ನಲ್ಲಿ ರೂಂ ಬಾಡಿಗೆ ದಿನಕ್ಕೆ ಕೇವಲ 66 ರೂಗಳು ಮಾತ್ರ.! ಆದ್ರೆ ಕಂಡೀಷನ್ಸ್ ಅಪ್ಲೈ…

    ನೀವು ಪ್ರವಾಸಕ್ಕಾಗಲಿ, ಬ್ಯುಸಿನೆಸ್ ಕಾರಣಕ್ಕಾಗಲಿ ಬೇರೆ ಊರಿಗೆ ಅಥವಾ ವಿದೇಶಕ್ಕೆ ಹೋದಾಗ, ಅಲ್ಲಿ ಉಳಿದುಕೊಳ್ಳಲು ಸಾಕಷ್ಟು ಖರ್ಚು ಮಾಡ್ಬೇಕಾಗುತ್ತೆ. ಯಾವುದೇ ಹೋಟೆಲ್​ಗಳಲ್ಲಿ ಉಳಿದುಕೊಂಡ್ರು, ಬಿಲ್ ಸಾವಿರಗಟ್ಟಲೆ ಆಗುತ್ತೆ. ಜಪಾನ್​ನ ಫುಕುಯೋಕಾದಲ್ಲಿರುವ ಅಸಾಹಿ ರ್ಯೋಕನ್ ಎಂಬ ಹೊಟೆಲ್​ನಲ್ಲಿ ಒಂದು ದಿನಕ್ಕೆ ಕೇವಲ 100 ಎನ್​ಗೆ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಜಸ್ಟ್ 66 ರೂಪಾಯಿಗೆ ರೂಂ ನೀಡಲಾಗುತ್ತೆ. ಆದ್ರೆ ಎಲ್ಲಾ ರೂಂಗಳಿಗೂ ಇದೇ ರೇಟ್ ಅಲ್ಲ. ಹೊಟೆಲ್​ನ 8ನೇ ನಂಬರಿನ ರೂಂಗೆ ಮಾತ್ರ ಈ 100 ಎನ್ ಫಿಕ್ಸ್​ ಮಾಡಲಾಗಿದೆ….

  • ಸುದ್ದಿ

    ನಾಳೆ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ…..!

    ಏಪ್ರಿಲ್‍ನಲ್ಲಿ ನಡೆದಿದ್ದ 2019 ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರಿಂದ ಸುದ್ದಿಗೋಷ್ಟಿ ನಡೆಯಲಿದ್ದು, ಈ ವೇಳೆ ಸಿಇಟಿ ಫಲಿತಾಂಶವನ್ನು ಪ್ರಕಟಗೊಳಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆಯ ನಂತರ ಕೆಇಎ ವೆಬ್ ಸೈಟ್‍ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಎ. 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮುಂದಾದ ವಿದ್ಯಾರ್ಥಿಗಳಿಗೆ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ…

  • ವಿಸ್ಮಯ ಜಗತ್ತು

    ಈ ಫೋಟೋಗಳನ್ನು ನೋಡಿದ್ರೆ, ನಮ್ಮ ಜನಕ್ಕೆ ಇಂಗ್ಲಿಷ್ ಭಾಷೆ ಮೇಲೆ ಎಷ್ಟು ಕೋಪ ಇದೆ ಅಂತ ಗೊತ್ತಾಗ್ತದೆ!!!

    ಕ್ರೂರ ಬ್ರಿಟೀಷರು ನಮ್ಮ ದೇಶವನ್ನು ವಸಾಹತುವನ್ನಾಗಿ ಮಾಡಿದರು ಮತ್ತು ನಮ್ಮ ಸರಕುಗಳನ್ನು ಕಳವು ಮಾಡಿದರು, ಆದರೆ ಅವರು ತಮ್ಮ ‘ಫನ್ನಿ’ ಭಾಷೆಯನ್ನೂ ಬಿಟ್ಟು ಅದನ್ನು ಭಾರತದ ಅಧಿಕೃತ ಭಾಷೆಯಾಗಿ ಮಾಡಿದರು.