Cinema

ಪ್ರಥಮ್ ಈಗ ಬಿಲ್ಡಪ್ ರಾಜ!ಈ ನನ್ಮಗಂದ್ ಇದೇ ಆಯ್ತು ಗುರೂ!ಶಾಕ್ ಆಗ್ಬೇಡಿ…ಈ ಲೇಖನಿ ಓದಿ…

474

ನಮ್ಮ ಹಳ್ಳಿ ಹೈದ,ಬಿಗ್‌ಬಾಸ್ ಶೋ ವಿನ್ನರ್ ಪ್ರಥಮ್ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗ್ತಾನೆ ಇರ್ತಾರೆ.  ಇತ್ತೀಚೆಗಷ್ಟೇ ತಮ್ಮ ಬಿಗ್‌ಬಾಸ್ ಸ್ನೇಹಿತ ಹಾಗೂ ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಸಿರಿಯಲ್’ನಲ್ಲಿ ನಟಿಸುತ್ತಿರುವ ಭುವನ್’ರವರನ್ನು ಕಚ್ಚಿ ಸುದ್ದಿಯಾಗಿದ್ದರು.

ಈಗೆನಪ್ಪಾ ಇವನದ್ದು ಮತ್ತೊಂದು ಸುದ್ದಿ ಅಂತೀರಾ!ಹೌದು,ಈಗ ಪ್ರಥಮ್ ರವರು ನಿಮ್ಗೆ ಗೊತ್ತಿರುವ ಹಾಗೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಹೀಗೆ ಬ್ಯುಸಿಯಾಗಿರೋವಾಗಲೇ ತೆಲುಗು ಹಾಗೂ ಕನ್ನಡದಲ್ಲಿ ಏಕ ಕಾಲದಲ್ಲಿ ನಿರ್ಮಾಣವಾಗಲಿರೋ ಅದ್ದೂರಿ ಚಿತ್ರದ ಆಫರ್ ಒಂದು ಪ್ರಥಮ್‌ಗೆ ಬಂದಿದೆ.

 

ಅದಕ್ಕೆ ಬ್ಯುಸಿಯಾಗಿರೋವಾಗಲೇ ತೆಲುಗು ಹಾಗೂ ಕನ್ನಡದಲ್ಲಿ ಏಕ ಕಾಲದಲ್ಲಿ ನಿರ್ಮಾಣವಾಗಲಿರೋ ಅದ್ದೂರಿ ಚಿತ್ರದ ಆಫರ್ ಒಂದು ಪ್ರಥಮ್‌ಗೆ ಬಂದಿದೆ. ಅದಕ್ಕೆ ಪ್ರಥಮ್‌ ಕೂಡ  ಒಪ್ಪಿದ್ದಾರೆ.

ಪ್ರಥಮ್ ಕೂಡ ಈಗ ಡೈರೆಕ್ಟರ್!

ಪ್ರಥಮ್ ನಟಿಸುತ್ತಿರೋ ಈ ಚಿತ್ರದ ವಿಶೇಷ ಏನಂದ್ರೆ,ಇವರು ಹೀರೋ ಕಮ್ ನಿರ್ದೇಶಕನಾಗಿಯೂ  ಕಾರ್ಯ ನಿರ್ವಹಿಸಲಿದ್ದಾರೆ.

ಆಂಧ್ರಪ್ರದೇಶ ಮೂಲದ ನಿರ್ಮಾಪಕರು ಹಣ ಹೂಡಲಿರೋ ಈ ಚಿತ್ರಕ್ಕೆ ‘ಬಿಲ್ಡಪ್’ ಎಂಬ ಹೆಸರಿಡಲಾಗಿದೆ. ‘ಈ ನನ್ಮಗಂದ್ ಇದೇ ಆಯ್ತು ಗುರೂ’… ಅನ್ನೋ ಅಡಿಬರಹವನ್ನೂ ಸೇರಿಸಿದ್ದಾರೆ.

ಬಿಲ್ಡಪ್ ಚಿತ್ರದಲ್ಲಿ ಯಾರೆಲ್ಲಾ ಬಿಲ್ಡಪ್ ಕೊಡ್ತಾರೆ

ಭಾರೀ ಅದ್ದೂರಿ ತಾರಾಗಣದ ಈ ಚಿತ್ರದಲ್ಲಿ ಕುರಿ ಪ್ರತಾಪ್ ಕೂಡಾ ಮುಖ್ಯವಾದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದರ ಹೊರತಾಗಿ ಮಿಕ್ಕ ಅದ್ದೂರಿ ತಾರಾಗಣವನ್ನು ಫೋಟೋ ಶೂಟ್ ಮೂಲಕವೇ ಜಾಹೀರು ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಬರುವ ಭಾನುವಾರದಂದೇ ಈ ಚಿತ್ರಕ್ಕಾಗಿ ಫೋಟೋ ಶೂಟ್ ಕೂಡಾ ನಡೆಯಲಿದೆಯಂತೆ. ಇನ್ನೂ ವಿಶೇಷವೆಂದರೆ ಈ ಚಿತ್ರದ ನಾಯಕಿಯಾಗಿ ದಕ್ಷಿಣ ಭಾರತದ ಪ್ರಸಿದ್ಧ ನಟಿಯೊಬ್ಬರು ಬರಲಿದ್ದಾರಂತೆ. ಅವರ‍್ಯಾರೆಂಬುದು ಕೂಡಾ ಸದ್ಯಕ್ಕೆ ಸಸ್ಪೆನ್ಸ್!

ಬಿಲ್ಡಪ್ ಚಿತ್ರದ ಬಿಲ್ಡಪ್ ನಿರ್ಮಾಪಕರು…

ನಿರ್ಮಾಪಕ ಉದಯ್ ಮೆಹ್ತಾ ಈ ಚಿತ್ರಕ್ಕೆ ಅದ್ದೂರಿಯಾದಂಥಾದ್ದೇ ಕತೆ ಹೆಣೆದಿದ್ದಾರೆ. ಈಗ ಪ್ರಥಮ್ ದೇವ್ರಂಥಾ ಮನುಷ್ಯ ಮತ್ತು ಎಮ್‌ಎಲ್‌ಎ ಚಿತ್ರದಲ್ಲಿ ಬ್ಯುಸಿಯಾಗಿರೋದರಿಂದ ಆ ಎರಡು ಚಿತ್ರಗಳು ಮುಗಿದ ಮೇಲೆ ಬಿಲ್ಡಪ್ ಶುರುವಾಗಲಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಪ್ರಥಮ್’ನ  ಬಿಲ್ದುಪ್ ಶುರುವಾಗಲಿದೆ.

ಆದರೆ ಪ್ರಥಮ್‌ಗೆ ಕನ್ನಡ, ಇಂಗ್ಲಿಷು ಮತ್ತು ಒಂದಿಷ್ಟು ಸಂಸ್ಕೃತ ಬಿಟ್ಟರೆ ತಮಿಳು ತೆಲುಗಿನ ಗಂಧ ಗಾಳಿನೆ ಗೊತ್ತಿಲ್ಲ.

ಆದಾಗ್ಯೂ ತೆಲುಗಿನ ಬಹುದೊಡ್ಡ ಉದ್ಯಮಿಯೊಬ್ಬರು ಈ ಸಿನಿಮಾ ಎರಡೂ ಭಾಷೆಯಲ್ಲಿ ನಿರ್ಮಾಣವಾಗಬೇಕು ಎಂದು ಆಸೆ ಪಟ್ಟು ನಿರ್ಮಾಣಕ್ಕಿಳಿದಿದ್ದಾರೆ. ಇದರ ಜೊತೆಗೆ ಪ್ರಥಮ್ಗೆ ಬಹುಕಾಲದ ಗೆಳೆಯರಾಗಿರುವ ಮಧು ಕಲ್ಯಾಣ್ ಮತ್ತು ಲಕ್ಷ್ಮಣ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ…

 

About the author / 

Nimma Sulochana

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ