ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ಕಡುವೈರಿಗಳ ವಿರುದ್ಧ ಫೈನಲ್ನಲ್ಲಿ ಗೆದ್ದೆ’ ಎನ್ನುವ ಪ್ರತಿಷ್ಠೆಯೇ ಎರಡೂ ತಂಡಕ್ಕೆ ಮುಖ್ಯವಾಗಿದೆ.
ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ. ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಭಾನುವಾರ ಎದುರಾಗುತ್ತಿವೆ. ಆ ಕಾರಣಕ್ಕಾಗಿ ಅತೀವ ಕುತೂಹಲಕ್ಕೆ ಕಾರಣವಾಗಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಚಾಂಪಿಯನ್ ತಂಡಕ್ಕೆ ಸಿಗುವ 14.11 ಕೋಟಿ ರೂ. ಹಾಗೂ ಮಿರುಗುವ ಟ್ರೋಫಿಗಿಂತ ಮುಖ್ಯವಾಗಿ ‘ಕಡುವೈರಿಗಳ ವಿರುದ್ಧ ಫೈನಲ್ನಲ್ಲಿ ಗೆದ್ದೆ’ ಎನ್ನುವ ಪ್ರತಿಷ್ಠೆಯೇ ಎರಡೂ ತಂಡಕ್ಕೆ ಮುಖ್ಯವಾಗಿದೆ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಟೂರ್ನಿಯ 5 ಪಂದ್ಯಗಳಿಗೆ ಆತಿಥ್ಯ ವಹಿಸಿಕೊಂಡಿರುವ ‘ದಿ ಓವಲ್’ ಮೈದಾನದಲ್ಲಿ ಭಾರತಕ್ಕೆ ಟೂರ್ನಿಯ 3ನೇ ಪಂದ್ಯವಾಗಿದೆ. ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತ್ತು.
ಇನ್ನೊಂದೆಡೆ ಪಾಕಿಸ್ತಾನ ಟೂರ್ನಿಯಲ್ಲಿ ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಪಂದ್ಯ ಆಡಲಿದೆ. ಐಸಿಸಿ ಟೂರ್ನಿಗಳಲ್ಲಿ ಅಭೂತಪೂರ್ವ ಸ್ಥಿರ ನಿರ್ವಹಣೆ ತೋರುವ ಭಾರತ ತಂಡ, ಪಾಕಿಸ್ತಾನದ ವಿರುದ್ಧವೂ ಇಂಥದ್ದೊಂದು ದಾಖಲೆ ಕಾಯ್ದುಕೊಂಡಿದೆ. ಅಲ್ಲದೆ, ಹಾಲಿ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು 124 ರನ್ಗಳಿಂದ ಬಗ್ಗುಬಡಿದ ಆತ್ಮವಿಶ್ವಾಸ ಕೊಹ್ಲಿ ಟೀಮ್ಲ್ಲಿದೆ. ಆ ಬಳಿಕ ಪಾಕಿಸ್ತಾನ ತಂಡ ಅದ್ಭುತ ನಿರ್ವಹಣೆ ತೋರಿದ್ದರೂ, ಫೈನಲ್ನಲ್ಲಿ ನಮ್ಮ ತಂಡ ಭಿನ್ನ ನಿರ್ವಹಣೆ ತೋರುವ ಅಗತ್ಯವಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದು 22 ಆಟಗಾರರ ನಡುವೆ ಕ್ರಿಕೆಟ್ನ ಕೇವಲ ಒಂದು ಪಂದ್ಯವಾಗಿರದೆ ಉಭಯ ದೇಶಗಳ ನಡುವಿನ ಪ್ರತಿಷ್ಠೆಯೇ ಪಣಕ್ಕಿಟ್ಟಂತೆ ಅಭಿಮಾನಿಗಳು ವರ್ತಿಸುವುದು ಪಂದ್ಯದ ಮೇಲಿನ ಕ್ರೇಜ್ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಕ್ರಿಕೆಟ್ಅನ್ನು ಮಾತ್ರವೇ ಗಮನಿಸುವುದಾದರೆ, ಪಾಕಿಸ್ತಾನ ತಂಡ ವಿರಾಟ್ ಕೊಹ್ಲಿ ಟೀಮ್ ಯಾವುದೇ ವಿಭಾಗಕ್ಕೂ ಸಮವಲ್ಲ. ಆದರೆ, ಅನ್ಪ್ರಿಡಿಕ್ಟಬಲ್ ಟೀಮ್ ಖ್ಯಾತಿಯ ಪಾಕ್ ತನ್ನ ದಿನದಂದು ಸಾಂಘಿಕ ನಿರ್ವಹಣೆ ನೀಡುತ್ತದೆ.
ಪಾಕ್ನ ಅಗ್ರ ಮೂವರು ಬ್ಯಾಟ್ಸ್ಮನ್ಗಳಾದ ಅಜರ್ ಅಲಿ, ಫಖರ್ ಜಮಾನ್ ಹಾಗೂ ಬಾಬರ್ ಅಜಮ್ ಟೀಮ್ ಇಂಡಿಯಾದ ಅಗ್ರ ಮೂವರು ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮ, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿಗೆ ಯಾವ ಹಂತದಲ್ಲೂ ತಾಳೆಯಾಗುವುದಿಲ್ಲ. ಆದರೆ, ಮೊಹಮದ್ ಆಮಿರ್, ಹಸನ್ ಅಲಿ, ಜುನೇದ್ ಖಾನ್ ಹಾಗೂ ರುಮ್ಮಾನ್ ರಯೀಸ್ ಇರುವ ಪಾಕ್ ತಂಡದ ವೇಗದ ಬೌಲಿಂಗ್ ವಿಭಾಗ ನಿಜಕ್ಕೂ ಬಲಿಷ್ಠ. ವಿಶ್ವ ನಂ.1 ದಕ್ಷಿಣ ಆಫ್ರಿಕಾ ಎದುರು ಇದೇ ಶಕ್ತಿ ಪಾಕ್ಗೆ ಜಯ ತಂದಿತ್ತು. ಈಗ ಇವರ ಮೇಲೆ ನಂಬಿಕೆ ಇರಿಸಿಯೇ ಪಾಕಿಸ್ತಾನ ಗೆಲುವಿನ ನಿರೀಕ್ಷೆ ಇಟ್ಟಿದೆ.
ಇನ್ನು ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಮೂವರೊಂದಿಗೆ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯರ ನೈಜ ಆಟ ಇನ್ನೂ ಸಾಬೀತಾಗಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳೇ ಮಿಂಚಿರುವ ಕಾರಣ ಮಧ್ಯಮ ಕ್ರಮಾಂಕದ ಶಕ್ತಿ ತೋರ್ಪಡಿಸಲು ಸಾಧ್ಯವಾಗಿಲ್ಲ. ಹಾಗಿದ್ದರೂ, ಅಪರೂಪದ ವೈಫಲ್ಯ ಅಗ್ರ ಕ್ರಮಾಂಕದಿಂದ ದಾಖಲಾದಲ್ಲಿ, ಮಧ್ಯಮ ಕ್ರಮಾಂಕ ಮಿಂಚುವ ವಿಶ್ವಾಸವನ್ನು ನಾಯಕ ಕೊಹ್ಲಿ ವ್ಯಕ್ತಪಡಿಸಿದ್ದಾರೆ.
ಭಾರತ ನಂ. 1
ಭಾರತ ತಂಡ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದರೆ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ನಂ. 1 ಸ್ಥಾನಕ್ಕೇರಲಿದೆ. ಸೆಮೀಸ್ ಗೆಲುವಿನ ಬಳಿಕ 2ನೇ ಸ್ಥಾನಕ್ಕೇರಿರುವ ಭಾರತ ತಂಡ (118), ಫೈನಲ್ ಸೋತರೆ ಮತ್ತೆ 3ನೇ ಸ್ಥಾನಕ್ಕೆ ಕುಸಿಯಲಿದೆ. ಆದರೆ ಕೊಹ್ಲಿ ಪಡೆ ಗೆದ್ದರೆ ಅಂಕ ಗಳಿಕೆಯಲ್ಲಿ ದಕ್ಷಿಣ ಆಫ್ರಿಕಾ (119) ಜತೆ ಸಮಬಲ ಸಾಧಿಸಲಿದೆಯಲ್ಲದೆ, ದಶಾಂಶ ಲೆಕ್ಕಾಚಾರದಲ್ಲಿ ಅಗ್ರಸ್ಥಾನಕ್ಕೇರಲಿದೆ. ಭಾರತ ಈಗಾಗಲೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ. 1 ಸ್ಥಾನದಲ್ಲಿದ್ದರೆ, ಟಿ20 ರ್ಯಾಂಕಿಂಗ್ನಲ್ಲಿ 4ನೇ ಸ್ಥಾನದಲ್ಲಿದೆ. ಸದ್ಯ 7ನೇ ಸ್ಥಾನದಲ್ಲಿರುವ ಪಾಕ್ ಗೆದ್ದರೆ 6ನೇ ಸ್ಥಾನಕ್ಕೇರಲಿದ್ದು, ಸೋತರೆ 8ನೇ ಸ್ಥಾನಕ್ಕೆ ಕುಸಿಯಲಿದೆ.
ಭಾರತ ಗೆದ್ದರೆ….
ಪಾಕಿಸ್ತಾನ ಗೆದ್ದರೆ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನನ್ನ ಹೆಸರು ಮಂಜುನಾಥ್ ನನ್ನ ಮೊಬೈಲ್ ನಂಬರ್ 9740093720,ನಮ್ಮದು ಶಿಡ್ಲಘಟ್ಟ ಬಳಿ ಯಣ್ಣಂಗುರೂ,ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುವುದು,ನಮ್ಮ ತಾಯಿಯವರಿಗೆ ಸುಮಾರು ವರ್ಷಗಳಿಂದ ಮಂಡಿ ನೋವು ಇತ್ತು,ಆರು ತಿಂಗಳ ಹಿಂದೆ ನೋವು ಹೆಚ್ಚಾಗಿ
ಸಿಕ್ಕಿಂ ಸಮೀಪದ ಡೋಕ್ಲಾಮ್ ನಲ್ಲಿ ಭಾರತ ಮಾಡಿರುವುದು ಅತಿಕ್ರಮಣವಾಗಿದ್ದು, ಹೀಗಾಗಿ ಡೋಕ್ಲಾಮ್ ಪ್ರದೇಶದಿಂದ ನಿಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಿ ಇಲ್ಲದಿದ್ದರೆ ನಿಮ್ಮ ಸೈನಿಕರು ಸೆರೆಯಾಗುತ್ತೀರಿ ಅಥವಾ ಸಾಯುತ್ತೀರಿ’ ಎಂದು ಚೀನಾ ಬೆದರಿಕೆ ಹಾಕಿದೆ.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ 22, 1947 ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ 15, 1947 ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ.
ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಸ್ಲಿಮ್ ಆಗಬೇಕೆನ್ನುವವರು ಡಯಟಿಂಗ್ ಲಿಸ್ಟ್ನಲ್ಲಿ ಸೀಬೆಹಣ್ಣನ್ನು ಸೇರಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯ ಈ ಹಣ್ಣು , ದೇಹಕ್ಕೆ ವಿಟಮಿನ್ಗಳ ಮಹಾಪೂರವನ್ನೇ ಪೂರೈಸುವುದರೊಂದಿಗೆ ಕೊಬ್ಬಿನಾಂಶದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎನ್ನುತ್ತಾರೆ ಎಕ್ಸ್ಪರ್ಟ್ಸ್. ಇದು…
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡು ಓಡಾಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಕೆಲವರು ವಿಡಿಯೋ ಮಾಡಿ ಲೇವಡಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೆಂಕಟ್ ಸ್ಥಿತಿಗೆ ಮರುಗುತ್ತಿದ್ದಾರೆ. ಸದ್ಯ ಊಟ ಇಲ್ಲದೆ ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್ಗೆ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ. ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಮನವಿ ಮಾಡಿದ್ದಾರೆ. ಆತ್ಮೀಯರೆ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜಿರಿತರಾಗಿ…
ಮಕ್ಕಳು ಹುಟ್ಟುವಾಗ ಅವರ ತಲೆಯಲ್ಲಿ ತುಂಬಾನೆ ಕೂದಲು ಇರುತ್ತದೆ, ಇಲ್ಲವಾದರೆ ಸ್ವಲ್ಪವೇ ಸ್ವಲ್ಪ ಕೂದಲು ಇರುತ್ತದೆ. ಆದರೆ ಯಾವುದೆ ಮಕ್ಕಳು ಹುಟ್ಟುವಾಗ ಬಕ್ಕ ತಲೆಯೊಂದಿಗೆ ಹುಟ್ಟಿರುವುದನ್ನು ನೋಡಿರೋದು ಕಡಿಮೆ.