ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ.
![]()
ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳೋದು ಕಷ್ಟ.

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ವಿಪರೀತ ನೋವಿನಿಂದ ಒದ್ದಾಡಬೇಕಾಗುತ್ತದೆ. ಪೈಲ್ಸ್ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುವುದು, ಕೆಲವರಿಗೆ ಗುದದ್ವಾರ ಹೊರಗೆ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುವುದು. ಈ ಕಾಯಿಲೆ ಹೆಚ್ಚಾದರೆ ರಕ್ತಸ್ರಾವ ಕಂಡು ಬರುವುದು ಹಾಗೂ ಮಲವಿಸರ್ಜನೆಗೆ ಹೋಗುವಾಗ ವಿಪರೀತ ನೋವು ಕಂಡು ಬರುವುದು, ಕೂರುವುದು, ನಡೆಯುವುದು ಕೂಡ ಕಷ್ಟವಾಗುವುದು.

ಮನೆಯಲ್ಲಿ ಸಿಗುವ ಸರಳ ಔಷಧಿಗಳಿಂದ ಈ ರೋಗವನ್ನು ಸಾಕಷ್ಟು ನಿಯಂತ್ರಣಕ್ಕೆ ತರಬಹುದು. ಈ ರೋಗಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಇಲ್ಲಿವೆ…
*ಒಂದು ದೊಡ್ಡ ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ ಅದರಲ್ಲಿ ರೋಗಿಯು ಕುಳಿತುಕೊಳ್ಳಬೇಕು. ಮಲವಿಸರ್ಜನೆಯ ನಂತರ ದಿನಕ್ಕೆ 2-3 ಬಾರಿ ಕುಳಿತುಕೊಂಡರೆ ಒಳಿತು.
*ಮೂಲಂಗಿಯನ್ನು ಜಜ್ಜಿ ರಸ ತೆಗೆದು ಬೆಳಗ್ಗೆ ಹಾಗೂ ರಾತ್ರಿ ಖಾಲಿ ಹೊಟ್ಟೆಯಲ್ಲಿ 5-6 ಚಮಚ ಸೇವಿಸಬೇಕು.
*ಮೂಲಂಗಿ ರಸದೊಂದಿಗೆ ಗೋಪಿಚಂದನವನ್ನು ಅರೆದು ಮೊಳಕೆಗೆ ಲೇಪ ಮಾಡಬೇಕು.
*ಮೂಲಂಗಿಯನ್ನು ಹೆಚ್ಚಿ, ಅದರ ಸೊಪ್ಪಿನೊಂದಿಗೆ ತಿನ್ನಲು ದಿನಕ್ಕೆರಡು ಸಾರಿಯಂತೆ ಕೊಡಬೇಕು.
*ಮುಟ್ಟಿದರೆ ಮುನಿ ಸೊಪ್ಪನ್ನು ಅರೆದು ಕಲ್ಕವನ್ನು ಬಟ್ಟೆಯ ಮೇಲೆ ಲೇಪಿಸಿ ಗುದದ್ವಾರದಲ್ಲಿ ಕಟ್ಟಬೇಕು.
*ಶತಾವರಿ ಬೇರು ಒಂದು ತೊಲದಷ್ಟು (12 ಗ್ರಾಂ) ಜಜ್ಜಿ ಒಂದು ಲೋಟದಷ್ಟು ಮಜ್ಜಿಗೆ ಬೆರೆಸಿ ದಿನಕ್ಕೊಂದು ಬಾರಿಯಂತೆ 3 ದಿವಸ ನೀಡಬೇಕು.
*ಲೋಳೆಸರದ ಎಲೆಯ ತಿರುಳನ್ನು 1 ಚಮಚದಷ್ಟು ದಿನಕ್ಕೆ 3 ಬಾರಿಯಂತೆ 15 ದಿವಸದವರೆಗೆ ಕೊಡಬೇಕು.
*ಊಟದಲ್ಲಿ ಸುವರ್ಣಗೆಡ್ಡೆ, ವಿವಿಧ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನ್ನು ಯಥೇಚ್ಛವಾಗ ಬಳಸಿ.
*ಯಥೇಚ್ಛವಾಗಿ ನೀರು, ಎಳನೀರು, ಮಜ್ಜಿಗೆ, ಬಾಳೆಹಣ್ಣುಗಳನ್ನು ಸೇವಿಸಿ.
*ನಿಯಮಿತ ವ್ಯಾಯಾಮ, ನಡಿಗೆ ಮತ್ತು ಮಲವಿಸರ್ಜನೆ.
*ನಾರಿನಾಂಶವುಳ್ಳ ತರಕಾರಿಗಳನ್ನು ಸೇವಿಸಿ

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪೇಂದ್ರ ಅವರ ಮಾತು ನಿಜಕ್ಕೂ ಸತ್ಯ? ಲೇಖನ ಓದಿ
ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು…
ಬಿಗ್ ಬಾಸ್ ರಿಯಾಲಿಟಿ ಶೋ ಫಿನಾಲೆಗೆ ಒಂದೇ ವಾರ ಉಳಿದಿದೆ. ಈ ವಾರ ಪ್ರಿಯಾಂಕಾ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಪ್ರಿಯಾಂಕಾ ಬಿಗ್ಬಾಸ್ ಮನೆಗೆ ಎಂಟ್ರಿ ಪಡೆದ ದಿನ ಮತ್ತು ಹೊರ ಬಂದ ದಿನಕ್ಕಿರುವ ಸಾಮ್ಯತೆಯನ್ನು ಹೇಳಿ ಅವರ ತಾಯಿ ಕಣ್ಣೀರು ಹಾಕಿದ್ದಾರೆ. ಪ್ರಿಯಾಂಕಾ ಮನೆಯಿಂದ ಹೊರ ಬಂದು ನಟ ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಂಡರು. ಮಗಳು ವೇದಿಕೆಯತ್ತ ಬರುತ್ತಿದ್ದಂತೆ ಪ್ರಿಯಾಂಕಾರ ತಾಯಿ ಕಣ್ಣೀರು ಹಾಕಲಾರಂಭಿಸಿದರು. ಈ ವೇಳೆ ಸುದೀಪ್, ಮಗಳು ಮನೆಯಿಂದ ಹೊರ ಬಂದಿದ್ದಕ್ಕೆ…
ವೈಕುಂಠ ಏಕಾದಶಿ ಪ್ರಯುಕ್ತ 1.70 ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈದರ್ಶನಕ್ಕೆ 1 ಲಕ್ಷದ 80 ಸಾವಿರ ಭಕ್ತರಿಗೆ ಮಾತ್ರ ವೈಕುಂಠ ದರ್ಶನ ಕಲ್ಪಿಸಲಾಗಿದೆ. ತಿರುಪತಿ -ತಿರುಮಲದ ದೇಗುಲದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮಪ್ಪನ ಸಾನಿಧ್ಯದಲ್ಲಿ ಜನವರಿ 6 ಮತ್ತು 7ರಂದು 2 ದಿನಗಳ ಕಾಲ ವೈಕುಂಠ ಏಕಾದಶಿ – ದ್ವಾದಶಿ ಪ್ರಯುಕ್ತ ಭಕ್ತಾಧಿಗಳಿಗೆ ವೈಕುಂಠ ದ್ವಾರ ದರ್ಶನ ಕಲ್ಪಿಸಲಾಗಿದೆ. ಜನವರಿಯಂದು 21,28 ರಂದು ದಿವ್ಯಾಂಗರಿಗೆ, ಮಾರ್ಚ್ 22 ಮತ್ತು 29 ರಂದು ಹಸುಗೂಸು ಹೊಂದಿರುವ ತಂದೆ…
ಮೈಸೂರು ಸ್ಯಾಂಡಲ್ ಸೋಪ್ ಎಂಬುದು ಕರ್ನಾಟಕದ ಸರ್ಕಾರಿ ಒಡೆತನದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಕಂಪನಿಯಿಂದ ಉತ್ಪಾದಿಸಲ್ಪಟ್ಟ ಸಾಬೂರಿನ ಬ್ರಾಂಡ್ ಆಗಿದೆ. 100% ಶುದ್ಧ ಶ್ರೀಗಂಧದ ಎಣ್ಣೆಯಿಂದ ತಯಾರಿಸಿದ ವಿಶ್ವದ ಏಕೈಕ ಸೋಪ್ .
ಆಧುನಿಕ ಯುಗದಲ್ಲಿ ಮಹಿಳೆಯರು ಐದು ಮಂದಿಯನ್ನು ಮದುವೆಯಾಗುವುದು ಅಸಾಧ್ಯವೆನಿಸಿದರೂ ನಡೆದಿದೆ. ಆದರೆ ಇಲ್ಲೊಬ್ಬಳು ಮಹಿಳೆ ಈ ಅಸಂಭವವನ್ನು ಸಂಭವವಾಗಿಸಿದ್ದಾಳೆ.