ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಹಳಷ್ಟು ನೋವನ್ನ ಅನುಭವಿಸುತ್ತಾರೆ, ಈ ನೋವನ್ನ ಹೇಗೆ ಕಾಪಾಡಿ ಕೊಳ್ಳ ಬಹುದು ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರದಲ್ಲಿಯೂ ನಾವು ಬದಲಾವಣೆಯನ್ನ ಮಾಡಿಕೊಳ್ಳ ಬೇಕು, ಹಾಗೂ ದಿನದ ಆಗು ಹೋಗುಗಳನ್ನ ಬದಲಾವಣೆ ಮಾಡಿಕೊಳ್ಳ ಬೇಕು. ಇದರಿಂದ ಋತುಸ್ರಾವದ ಸಂದರ್ಭದಲ್ಲಿ ಆಗುವ ನೋವನ್ನ ಕಡಿಮೆ ಮಾಡಬಹುದು.

ಪಿರಿಯಡ್ಸ್ ಸಮಯದಲ್ಲಿ ಆಗುವ ಪ್ರಮುಖ ನೋವುಗಳು…
ಪಿರಿಯಡ್ಸ್ ಸಮಯದಲ್ಲಿ ಸಾಮಾನ್ಯವಾಗಿ ಹೊಟ್ಟೆನೋವು ಮತ್ತು ಸೊಂಟದ ನೋವು ಬರುತ್ತದೆ.
ಏನು ಮಾಡಬೇಕು..?
*ಪಿರಿಯಡ್ಸ್ ಸಮಯದಲ್ಲಿ ವ್ಯಾಯಾಮಗಳನ್ನು ಮಾಡುವುದು ಅಷ್ಟೊಂದು ಸುಲಭ ಅಲ್ಲ. ಆದರೆ ಕೆಲವು ಸಮಸ್ಯೆಗಳಿಂದ ಮುಕ್ತಿ ಪಡೆಯಲು ದೈಹಿಕ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು. ಇದರಿಂದ ಎಂಡೋರ್ಫಿನ್ ಪ್ರಮಾಣ ಏರಿಕೆಯಾಗುತ್ತದೆ. ಇದು ನಮ್ಮ ಮೆದುಳಿನಲ್ಲಿ ಸಂತೋಷಕ್ಕೆ ಕಾರಣವಾಗುವ ರಾಸಾಯನಿಕ ವಸ್ತುಗಳನ್ನು ಪ್ರಚೋದನೆಗೊಳಿಸುತ್ತದೆ. ಈ ಸಮಯದಲ್ಲಿ ಕಾರ್ಡಿಯೊ ಮಸ್ಕ್ಯುಲರ್ ಕಸರತ್ತು ನಿಮಗೆ ಕಷ್ಟ ಅನಿಸಿದರೆ ಯೋಗ ಮಾಡಿ.

*ಪಿರಿಯಡ್ಸ್ ಸಮಯದಲ್ಲಿ ಏನನ್ನೂ ತಿನ್ನಲು ಕುಡಿಯಲು ಮನಸಾಗುವುದಿಲ್ಲ.ಆದರೆ ಪಿರಿಯಡ್ಸ್ ಸಮಯದಲ್ಲಿ ಬರುವ ಸೊಂತದನೋವು ನಿವಾರಣೆಗೆ ನೀವು ಆದಷ್ಟೂ ನೀರು ಕುಡಿಯುವುದು ಒಳ್ಳೆಯದು.ಇದರಿಂದ ನಿಮ್ಮ ಸೊಂಟದ ನೋವು ಕಡಿಮೆ ಆಗುತ್ತದೆ.

*ನಿಮ್ಮ ಸೊಂಟದ ನೋವು ಕಡಿಮೆ ಆಗಲು ಹೀಟಿಂಗ್ ಪ್ಯಾಡ್ ಬಳಸಿ.ಇಲ್ಲದಿದ್ದರೆ ಒಂದು ಬಟ್ಟೆಯನ್ನು ಬಿಸಿ ನೀರಿನಲ್ಲಿ ನೆನೆಸಿ ಅದನ್ನು ನಿಮ್ಮ ನೋವಿನ ಜಗದಲ್ಲಿ ಇಟ್ಟು ಮಸಾಜ್ ಮಾಡಿಕೊಳ್ಳಿ ಇದರಿಂದ ನಿಮ್ಮ ಸೊಂಟ ಹಾಗೂ ಬೆನ್ನು ನೋವುಗಳು ಕಡಿಮೆಯಾಗುತ್ತವೆ.

*ಪಿರಿಯಡ್ಸ್ ಸಮಯದಲ್ಲಿ ತಪ್ಪದೆ ಬಿಸಿ ನೀರಿನ ಸ್ನಾನ ಮಾಡಿ ಇದರಿಂದ ನಿಮ್ಮ ಹೊಟ್ಟೆ ಮತ್ತು ಸೊಂಟದ ನೋವು ಕಡಿಮೆ ಆಗುವುದಲ್ಲದೆ ನಿಮ್ಮ ಮನಸ್ಸು ರಿಲಾಕ್ಸ್ ಆಗುತ್ತದೆ.

ಎನನ್ನು ಮಾಡಲೇಬಾರದು..?
*ಋತುಸ್ರಾವದ ಸಂದರ್ಭದಲ್ಲಿ ಬಹುತೇಕ ಮಹಿಳೆಯರು ಜಂಕ್ ಫುಡ್ ಸೇವಿಸುತ್ತಾರೆ. ಇದು ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು, ಸಿಹಿ ತಿಂಡಿ, ಐಸ್‌ಕ್ರೀಮ್‌ಗಳನ್ನು ಸೇವಿಸಬೇಡಿ.
*ಇದರ ಬದಲು ಹಣ್ಣುಗಳನ್ನು ಸೇವಿಸಿ. ಚಿಪ್ಸ್ ಬದಲಿಗೆ ಇಡೀ ಧಾನ್ಯಗಳ ಬ್ರೆಡ್ ಅನ್ನು ಸ್ವಲ್ಪ ಚೀಸ್‌ನೊಂದಿಗೆ ತಿನ್ನಿ.