ಮಲಯಾಳಂ ಸಿನಿ ಲೋಕವು ಈಗಂತೂ ಹೆಚ್ಚು ಸದ್ದು ಮಾಡುತ್ತಿದ್ದು, ಎಲ್ಲಾ ಭಾಷಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಹೊಸ ಮಾದರಿಯ ಸಿನಿಮಾಗಳು ಮತ್ತು ಸಂಗತಿಗಳು ಮಲಯಾಳಂ ಸಿನಿ ಲೋಕವನ್ನು ಶ್ರೀಮಂತಗೊಳಿಸುತ್ತಿವೆ.ಇದಕ್ಕೆ ಕಾರಣಗಳು ಇವೆ…
ಹೌದು, ಒಂದೇ ಒಂದು ವಿಡಿಯೋ ಕ್ಲಿಪ್ ನಿಂದ ಇಡೀ ದೇಶದಲ್ಲಿ ಸುದ್ದಿಯಾದ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ನೋಟ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದು ಯಾವ ಮಟ್ಟಿಗೆ ಎಂದರೆ, ಕಣ್ ಸನ್ನೆ ಹುಡುಗಿ ಪ್ರಿಯಾ,ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ.ಈಗಂತೂ ಎಲ್ಲಿ ನೋಡಿದರೂ ಅದೊಂದೆ ವಿಡಿಯೋ. ಸಾಮಾಜಿಕ ಜಾಲತಾಣಗಳಲ್ಲಿ ಇದು ಪಡ್ಡೆ ಹುಡುಗರ ಫೇವರಿಟ್. ವಿಡಿಯೋದಲ್ಲಿ ಹಾಡಿಗಿಂತಲೂ ಹೆಚ್ಚು ಗಮನ ಸೆಳೆಯುತ್ತಿರೋದು ಅಭಿನಯಿಸಿರೋ ನಟರು ಹಾಗೂ ಈ ಹುಡುಗಿಯ ಕಣ್ ಸನ್ನೆಯ ನೋಟ.
ಈ ವಿಡಿಯೋ ಮಲಯಾಳಂನ ‘ಒರು ಆಡಾರ್ ಲವ್’ ಸಿನಿಮಾದ ಹಾಡೊಂದರ ಝಲಕ್. ಈ ಹಾಡು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಫೇಮಸ್ ಆಗ್ಬಿಡ್ತು.ಇದಕ್ಕೆ ಕಾರಣ ಈ ಹಾಡಿನಲ್ಲಿ ನಟಿಸಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣುಗಳು ನೋಟ ಎಂಥವರನ್ನು ಮಗ್ನಗೊಳಿಸುವಂತೆ ಮಾಡುತ್ತಿದೆ. ಕಣ್ಣು ಹೊಡೆದು ಹುಡುಗರ ಹೃದಯಕ್ಕೆ ಲಗ್ಗೆ ಇಡುವ ಅವಳ ಮಾದಕತೆ ಪಡ್ಡೆಗಳ ನಿದ್ದೆ ಕೆಡಿಸಿದೆ.
ಪ್ರಿಯಾ ಪ್ರಕಾಶ್ ವಾರಿಯರ್’ನ ಕಣ್ ಸನ್ನೆಯ ನೋಟ ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದು ಯ್ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ನಲ್ಲಿದ್ದು ಕೇವಲ 20 ಗಂಟೆಗಳಲ್ಲಿ 1 ಮಿಲಿಯನ್ ಗೂ ಅಧಿಕ ಜನರು ವೀಕ್ಷಿಸಿದ್ದು 50,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ಸೆನ್ಸೇಷನ್ ಕ್ರಿಯೇಟ್ ಮಾಡಿ ಒಂದೇ ರಾತ್ರಿಲಿ ಇಷ್ಟೆಲ್ಲ ಫೇಮಸ್ ಆಗಿರೋ ಈ ಹುಡುಗಿ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. ಇನ್ನೂ ಹದಿನೆಂಟು ವರ್ಷ ಹರೆಯದ ಸುರಸುಂದರಿ. ‘ಒರು ಆಡಾರ್ ಲವ್’ ಸಿನಿಮಾ ಮೂಲಕ ಮಲೆಯಾಳಂ ಚಿತ್ರ ರಂಗಕ್ಕೆ ಪರಿಚಯವಾಗುತ್ತಿರೋ ಉದಯೋನ್ಮುಖ ನಟಿ.
ಅಂತೂ ಇನ್ನೂ ಚಿತ್ರರಂಗದಲ್ಲಿ ತನ್ನ ಮೊದಲ ಹೆಜ್ಜೆ ಇಡುತ್ತಿರುವ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹದಿನೆಂಟು ವರ್ಷ ಹರೆಯದ ಸುರಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಕೇರಳದ ತ್ರಿಸೂರ್ ನಲ್ಲಿ ವಾಸವಾಗಿದ್ದು ಮೊದಲ ವರ್ಷದ ಬಿ.ಕಾಮ್ ವಿದ್ಯಾರ್ಥಿಯಾಗಿ ಓದುತ್ತಿದ್ದಾರೆ.
ನ್ಯಾಷನಲ್ ಕ್ರಶ್ ಆಗಿರೋ, ಕಣ್ ಸನ್ನೆ ಹುಡುಗಿಯ ಕಣ್ ನೋಟದ ವಿಡಿಯೋ ನಿಮಗಾಗಿ…
‘ಒರು ಆಡಾರ್ ಲವ್’ ಸಿನಿಮಾವನ್ನು ಮಲಯಾಳಂನ ನಿರ್ದೇಶಕ ಒಮರ್ ಲಾಲು ನಿರ್ದೇಶನ ಮಾಡುತ್ತಿದ್ದು ಮಾರ್ಚ್ 20ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ ಬಲಿಷ್ಠ ದೇಶಗಳೇ ಗಪ್ ಚುಪ್ ಎನ್ನುತ ಅವರ ಅಧಿಕಾರದವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು ದೇಶಗಳನ್ನು ಒರತುಪಡಿಸಿದರೆ ಉಳಿದೆಲ್ಲ ದೇಶಗಳು ಒಂದಿಲ್ಲೊಂದು ಇತಿಹಾಸದ ಕಾಲಘಟ್ಟದಲ್ಲಿ ಈವೊಂದು ಪುಟ್ಟ ದೇಶದಿಂದ ಆಳ್ವಿಕೆಗೊಳಲ್ಪಟ್ಟಿವೆ! ಹೆಚ್ಚೆಂದರೆ ನಮ್ಮ ಉತ್ತರಪ್ರದೇಶ ರಾಜ್ಯದಷ್ಟಿರುವ ಈ ದೇಶ ಅದೇಗೆ ವಿಶ್ವದ ನಾಲ್ಕನೇ ಒಂದರಷ್ಟು…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ…
ಇತಿಹಾಸ ಸೃಷ್ಟಿಸಿದ RRR ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್ ಮಿ ಅಪ್’, ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ರೇಸ್ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…
ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ.
ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ, ಖಳನಟ ಪ್ರಕಾಶ್ ರೈ ಅವರ ಪತ್ನಿ ದಯಮಾಡಿ ಬಿಟ್ಟುಬಿಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ-ನಟಿಯರನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಕಾಶ್ ರೈ ಪತ್ನಿ ಪೋನಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯೊಂದಿಗೆ ಮಾಡಿದ ರಾಜಕಿಯೇತ್ತರ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೋನಿ ಪ್ರಧಾನಿಗೆ ಟ್ವೀಟ್…