ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಮ್ಮೆ ಸಿಗರೆಟ್ ಸೇದೋ ರುಚಿ ಕಂಡವರು ಇದನ್ನು ಬಿಡುವುದು ಕಷ್ಟ. ಒಂದು ವೇಳೆ ಇಂತಹ ಯಾವುದೋ ಕಾರಣಕ್ಕೆ ನೀವೂ ಧೂಮಪಾನಿಯಾಗಿದ್ದು ಇಂದು ಇದರಿಂದ ಹೊರಬರಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಆಹಾರ ಪಥ್ಯಗಳನ್ನು ಪಾಲಿಸಿ ನೋಡಿ…..
ವಾಸ್ತವವಾಗಿ ಧೂಮಪಾನದಿಂದ ಶ್ವಾಸಕೋಶ, ಗಂಟಲು, ಬಾಯಿ ಮೊದಲಾದ ಅಂಗಗಳಿಗೆ ಕ್ಯಾನ್ಸರ್ ಆವರಿಸುವುದು ಪ್ರಮುಖವಾದರೆ ಉಳಿದಂತೆ ಸೈನಸ್, ಅಸ್ತಮಾ, ಸುಸ್ತು, ಕೆಳಹೊಟ್ಟೆಯಲ್ಲಿ ಭಾರೀ ತುರಿಕೆ ಮೊದಲಾದ ಸಮಸ್ಯೆಗಳೂ ಎದುರಾಗುತ್ತವೆ.
ಒಂದು ವೇಳೆ ನೀವು ಈ ದುರಭ್ಯಾಸದಿಂದ ಹೊರಬರಲು ಯತ್ನಿಸುತ್ತಿದ್ದರೆ ಕೆಲವು ಆಹಾರಗಳು ನಿಮ್ಮ ದೇಹದಲ್ಲಿ ಈಗಾಗಲೇ ಸಂಗ್ರಹವಾಗಿದ್ದ ನಿಕೋಟಿನ್ ಅಂಶವನ್ನು ನಿವಾರಿಸಲು ಸಮರ್ಥವಾಗಿದ್ದು ನಿಮ್ಮ ಪ್ರಯತ್ನಕ್ಕೆ ಹೆಚ್ಚಿನ ಬೆಂಬಲ ನೀಡುತ್ತವೆ.
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟುಗಳಿವೆ. ಇವು ರಕ್ತ ಮತ್ತು ಶ್ವಾಸಕೋಶಗಳಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಿ ಹೊರದೂಡಲು ನೆರವಾಗುತ್ತವೆ. ಅಲ್ಲದೇ ರಕ್ತದಲ್ಲಿದ್ದ ನಿಕೋಟಿನ್ ಅಂಶವನ್ನು ನಿವಾರಿಸಲು ಹೆಚ್ಚು ಸಕ್ಷಮವಾಗಿದೆ.
ಕ್ಯಾರೆಟ್
ಕ್ಯಾರೆಟ್ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ, ಕೆ ಮತ್ತು ಸಿ ಇವೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೇ ರಕ್ತ ಮತ್ತು ಶ್ವಾಸಕೋಶಗಳಲ್ಲಿ ಸಂಗ್ರಹವಾಗಿರುವ ಧೂಮಪಾನದ ಟಾರಿನ ಸಹಿತ ಹಲವು ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.
ಪಾಲಕ್ ಸೊಪ್ಪು
ಈ ಸೊಪ್ಪಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಇತರ ವಿಟಮಿನ್ನುಗಳು ಶ್ವಾಸಕೋಶದಲ್ಲಿ ಸೇರಿರುವ ಟಾರು ಮತ್ತು ನಿಕೋಟಿನ್ ಅಂಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿರುವ ನಿಕೋಟಿನ್ ಅಂಶವನ್ನು ನಿವಾರಿಸಲು ಮತ್ತು ಇದಕ್ಕೆ ವ್ಯಸನರಾಗಿದ್ದ ನಿಮ್ಮನ್ನು ನಿಧಾನವಾಗಿ ಹೊರತರಲು ನೆರವಾಗುತ್ತದೆ.
ದಾಳಿಂಬೆ ಹಣ್ಣು
ರಕ್ತವನ್ನು ಶುದ್ಧೀರಿಸಲು ಅತ್ಯಂತ ಸಮರ್ಥವಾದ ಹಣ್ಣು ಎಂದರೆ ದಾಳಿಂಬೆ. ಧೂಮಪಾನಿಗಳಿಗೂ ಅಲ್ಲದವರಿಗೂ ಈ ಹಣ್ಣು ಅತ್ಯಂತ ಸೂಕ್ತವಾಗಿದ್ದು ರಕ್ತದಲ್ಲಿ ಸೇರಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.
ಬ್ರೋಕೋಲಿ
ನೋಡಲು ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಬಿ5 ಇರುವ ಕಾರಣ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.
ಬೆರ್ರಿ ಹಣ್ಣುಗಳು
ವಿವಿಧ ಬೆರ್ರಿ ಹಣ್ಣುಗಳಾದ ಸ್ಟ್ರಾಬೆರಿ, ರಾಸ್ಪ್ ಬೆರಿ, ಬ್ಲೂಬೆರಿ ಮೊದಲಾದವುಗಳು ಹುಳಿಮಿಶ್ರಿತ ಸಿಹಿ ರುಚಿ ಹೊಂದಿದ್ದು ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಳ್ಳಿ ಯುವಕ ರವಿ ಗೌಡರವರು ಸಣ್ಣ ರೈತ ಕುಟುಂಬದಲ್ಲಿ ಜನಿಸಿದ್ದರೂ, ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಹಂಬಲದಿಂದ, ಏನು ಮಾಡಬೇಕೆಂದು ಯೋಚಿಸುತ್ತಿದ್ದರು. ಇಂತಹ ಸಮಯದಲ್ಲಿ, ರವಿ ಗೌಡರ ಮಾವನವರಾದ ಚನ್ನನ ಗೌಡರವರು ಸಾಂಪ್ರದಾಯಿಕ ಪದ್ದತಿಯಲ್ಲಿ ಸಂಗ್ರಾಣಿ ಕಲ್ಲು ಎತ್ತುವುದನ್ನು ಅದೇ ಊರಿನ ಗರಡಿ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದರು.
ಬೆಂಗಳೂರು: ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬದ ಸದಸ್ಯರಿಗೆ ಐದು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದೀಗ ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ವಿತರಿಸಲಿದೆ. 5+1= 6 KG ಈ ಸಂಬಂಧ ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಆ ಆದೇಶದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಡಿಸೆಂಬರ್ 2022ಕ್ಕೆ ಅಂತ್ಯಗೊಂಡ…
ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ. ಇಸ್ರೇಲ್ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ…
ಕೇರಳದ ಅಲತ್ತೂರಿನ ವಿಶೇಷ ಚೇತನ ಪ್ರಣವ್ ಬಾಲಸುಬ್ರಹ್ಮಣ್ಯನ್ ಅವರು ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಪ್ರಣವ್ ಅವರು ಕಾಲಿನಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಹೆಸರುಗಳಿಸಿದ್ದಾರೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯ್ನ್ ಅವರನ್ನು ಪ್ರಣವ್ ಭೇಟಿಯಾಗಿ ಕೇರಳ ನೆರೆಸಂತ್ರಸ್ತರ ನೆರವಿಗಾಗಿ ದೇಣಿಗೆ ಚೆಕ್ ನೀಡಿದ್ದಾರೆ. ಭೀಕರ ನೆರೆಯಿಂದ ಕೇರಳ ಅಕ್ಷರಶಃ ನಲುಗಿಹೋಗಿದೆ. ನೆರೆ ಪೀಡಿತ ಪ್ರದೇಶಗಳ ಜನರ ಪಾಡು ಮೂರಾಬಟ್ಟೆಯಾಗಿದೆ. ಹೀಗಾಗಿ…
karnataka ಎಲ್ಲಾ ಜಿಲ್ಲೆಯ ಎಲ್ಲಾ ತಾಲೂಕಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ಲಿಸ್ಟ್ ಅನ್ನು ನೋಡಬಹುದು ಇದು ಎಲ್ಲರಿಗೂ ತುಂಬಾ ಅನುಕೂಲವಾಗುತ್ತದೆ. ನಿಮ್ಮ ನಿಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. 2023 ರ ಅಂತಿಮ ಮತದಾರರ ಪಟ್ಟಿ – ವಿಧಾನಸಭೆ ಕ್ಷೇತ್ರಗಳ ಹೆಸರುಗಳ ಪಟ್ಟಿಯನ್ನು ವೀಕ್ಷಿಸಲು ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ https://ceo.karnataka.gov.in/FinalRoll_2023/
ಮಂಡಿ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬನನ್ನು ಪರೀಕ್ಷಿಸಿದ ವೈದ್ಯರು ಆತನ ಹೊಟ್ಟೆಯಲ್ಲಿರುವ ವಸ್ತುಗಳನ್ನು ಕಂಡು ಬೆಚ್ಚಿ ಬಿದ್ದ ಪ್ರಸಂಗ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. 35 ವರ್ಷದ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಸಹಿಸಲಾಗದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಮಂಡಿಯಲ್ಲಿರುವ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ. ಎಕ್ಸ್ರೇ ಮಾಡಿ ನೋಡಿದಾಗ ಆತನ ಹೊಟ್ಟೆಯಲ್ಲಿ ಚಮಚ, ಚಾಕು ಸೇರಿದಂತೆ ಏನೇನೋ ಕಂಡಿವೆ. ಗಾಬರಿ ಬಿದ್ದ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಪರೇಶನ್ ನಡೆಸಿದಾಗ…