ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀರಜ್ ಜಾರ್ಜ್ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ.
ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಹಕ್ಕಿಯಂತೆ ಗರಿ ಬಿಚ್ಚಿ ಹಾರಿದಂತೆ ಕೈಗಳನ್ನು ಮೇಲೆ ಮಾಡಿ ಖುಷಿಯಿಂದ ಶಿಖರದ ತುದಿಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ, ಕೃತಕ ಕಾಲುಗಳಿಗೆ ಸರ್ಕಾರ ವಿಧಿಸಲು ಉದ್ದೇಶಿಸಿರುವ ತೆರಿಗೆಯನ್ನೂ ವಿರೋಧಿಸಿದ್ದಾರೆ. ನಾವು ವಿಶೇಷ ಚೇತನರು ಪ್ಲಾಸ್ಟಿಕ್ ಕಾಲುಗಳು ಇಲ್ಲದಿದ್ದರೂ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳುತ್ತೇವೆ ಎಂಬುದನ್ನು ಸಾಬೀತು ಮಾಡಿ ಸರ್ಕಾರದ ಕಣ್ಣು ತೆರೆಸಲು ನೀರಜ್ ಈ ಎಲ್ಲಾ ನೋವುಗಳನ್ನು ನುಂಗಿರುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು, ನೀರಜ್ ಸಾಧನೆಗೆ ಕುಟುಂಬಸ್ಥರೂ ಬೆಂಬಲವಾಗಿ ನಿಂತಿದ್ದಾರೆ. ನೀರಜ್ ಈ ಪರ್ವತದ ಮೇಲೆ ಹೋಗಿ ವಿಡಿಯೋ ಕರೆ ಮಾಡಿದ ನಂತರ ಇವರ ಖುಷಿಗೆ ಪಾರವೇ ಇಲ್ಲ. ಏಳನೇ ದಿನ ನೀರಜ್ ಮನೆಯವರಿಗೆ ಕರೆ ಮಾಡಿ ತಮ್ಮ ಸಾಧನೆಯ ವಿಷಯ ತಿಳಿಸಿದ್ದರು. ಅಲ್ಲಿ ತನಕ ಮನೆಯವರೂ ಆತಂಕದಿಂದ ಶುಭ ಸುದ್ದಿಗಾಗಿ ಕಾಯುತ್ತಲೇ ಇದ್ದರು.
ಚಿಕ್ಕಂದಿನಲ್ಲಿ ಚೆನ್ನಾಗಿಯೇ ಇದ್ದ ನೀರಜ್ ಅವರಿಗೆ 1996ರಲ್ಲಿ ಆರೋಗ್ಯದ ಸಮಸ್ಯೆ ಎದುರಾಗಿತ್ತು. ಈ ವೇಳೆ, ಇವರ ಕಾಲನ್ನು ಶಸ್ತ್ರಚಿಕಿತ್ಸೆಮೂಲಕ ತೆಗೆಯಲಾಗಿತ್ತು.ಇದಾದ ಬಳಿಕ ಮನೆಯವರು ನೀರಜ್ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರು.ಆದರೆ, ಈ ಚಿಂತೆಯನ್ನು ಈಗ ನೀರಜ್ ದೂರ ಮಾಡಿದ್ದಾರೆ ಮತ್ತು ಅದ್ಭುತವೊಂದನ್ನು ಸಾಧಿಸಿ ತೋರಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದಿರಾ ಕ್ಯಾಂಟೀನ್ ಪಾಲಿಕೆಗೆ ಹೊರೆಯಾಗುವುದೋ ಅಥವಾ ಇಲ್ಲವೋ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತೀರ್ಮಾನದ ಮೇಲೆ ನಿಂತಿದೆ. ಏಕೆಂದರೆ, ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ.50 ರಷ್ಟಾದರೂ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಸಂಪೂರ್ಣ ಒಪ್ಪಿಗೆ ದೊರಕಿಲ್ಲ. ಇಲಾಖೆಯು ಕ್ಯಾಂಟೀನ್ ನಿರ್ವಹಣೆಗೆ ಶೇ.25ರಷ್ಟು ಹಣ ಮಾತ್ರ ನೀಡುವುದಾಗಿ ತಿಳಿಸಿದೆ. ಈ ಸಂಬಂಧ ಕಡತ ಪ್ರಸ್ತುತ ಸಿಎಂ ಅವಗಾಹನೆಗೆ ಬಂದಿದ್ದು, ಮುಖ್ಯಮಂತ್ರಿ ಯವರು ಈ ಬಗ್ಗೆ…
ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚನೆ … ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಹೇಳಿದರು. ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾ. ಕದ್ದ ಮೊಬೈಲ್‌ನಲ್ಲಿನ ದತ್ತಾಂಶ ಹಾಗೂ ಐಎಂಇಐ ಸಂಖ್ಯೆ ಅಳಿಸಿ ಹಾಕುವುದನ್ನು ಕಳ್ಳರುಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಮೊಬೈಲ್ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚಿಸಲಾಗುವುದು ಎಂದರು. ಮೊಬೈಲ್ ಬಳಕೆದಾರರು ಜಿಪಿಎಸ್ ಬಳಕೆ ಮಾಡಿಕೊಂಡರೆ ಒಳಿತು… ಇದರಿಂದ ಕಳವಾದ ಮೊಬೈಲ್ ಸುಲಭವಾಗಿ ಸಿಗುವ ಸಾಧ್ಯತೆ ಹೆಚ್ಚಿದೆ…
ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿದೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ. ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ…
ಚೆನ್ನೈ ನ 7 ವರ್ಷದ ಬಾಲಕನ ಬಾಯಲ್ಲಿ ಸುಮಾರು 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಸವಿತಾ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 7 ವರ್ಷದ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ.‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಬಾಲಕ…
ತಲೆ ಹೊಟ್ಟಿನ (Dandruff) ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ವೇಳೆ ಕಾಡಿಯೇ ಕಾಡುತ್ತೆ. ಇದಕ್ಕಿದೆ ಸರಳ ಪರಿಹಾರ. ಮೆಂತ್ಯಪುಡಿಯನ್ನು ತುಸು ಕಾಲ ನೆನೆಸಿಟ್ಟು, ನೆಲ್ಲಿಕಾಯಿ ಪುಡಿಯೊಂದಿಗೆ ಕಲೆಸಿ, ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ನಂತರ ತೊಳೆದುಕೊಳ್ಳಿ. ಲೋಳೆಸರದ ಬಿಳಿ ತಿರುಳನ್ನು ನೆನೆಸಿ, ದಾಸವಾಳದ ಎಲೆಯೊಂದಿಗೆ ರುಬ್ಬಿ ಹಚ್ಚಿಕೊಳ್ಳಿ. ಮೊಸರಿನೊಂದಿಗೆ ಹಚ್ಚಿಕೊಂಡರೆ ಮೆಹಂದಿಯೂ ಪರಿಣಾಮಕಾರಿ. ಕಡಲೆಹಿಟ್ಟು ಸೀಗೆಯೊಂದಿಗೆ ನಂತರ ತಲೆ ತೊಳೆದುಕೊಳ್ಳಬೇಕು. ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ಸುಟ್ಟು, ತಿರುಳನ್ನು ತೆಗೆದು ರುಬ್ಬಿ ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಕೊಬ್ಬರಿ ಎಣ್ಣೆ…