ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀರಜ್ ಜಾರ್ಜ್ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ.

ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಹಕ್ಕಿಯಂತೆ ಗರಿ ಬಿಚ್ಚಿ ಹಾರಿದಂತೆ ಕೈಗಳನ್ನು ಮೇಲೆ ಮಾಡಿ ಖುಷಿಯಿಂದ ಶಿಖರದ ತುದಿಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ, ಕೃತಕ ಕಾಲುಗಳಿಗೆ ಸರ್ಕಾರ ವಿಧಿಸಲು ಉದ್ದೇಶಿಸಿರುವ ತೆರಿಗೆಯನ್ನೂ ವಿರೋಧಿಸಿದ್ದಾರೆ. ನಾವು ವಿಶೇಷ ಚೇತನರು ಪ್ಲಾಸ್ಟಿಕ್ ಕಾಲುಗಳು ಇಲ್ಲದಿದ್ದರೂ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳುತ್ತೇವೆ ಎಂಬುದನ್ನು ಸಾಬೀತು ಮಾಡಿ ಸರ್ಕಾರದ ಕಣ್ಣು ತೆರೆಸಲು ನೀರಜ್ ಈ ಎಲ್ಲಾ ನೋವುಗಳನ್ನು ನುಂಗಿರುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು, ನೀರಜ್ ಸಾಧನೆಗೆ ಕುಟುಂಬಸ್ಥರೂ ಬೆಂಬಲವಾಗಿ ನಿಂತಿದ್ದಾರೆ. ನೀರಜ್ ಈ ಪರ್ವತದ ಮೇಲೆ ಹೋಗಿ ವಿಡಿಯೋ ಕರೆ ಮಾಡಿದ ನಂತರ ಇವರ ಖುಷಿಗೆ ಪಾರವೇ ಇಲ್ಲ. ಏಳನೇ ದಿನ ನೀರಜ್ ಮನೆಯವರಿಗೆ ಕರೆ ಮಾಡಿ ತಮ್ಮ ಸಾಧನೆಯ ವಿಷಯ ತಿಳಿಸಿದ್ದರು. ಅಲ್ಲಿ ತನಕ ಮನೆಯವರೂ ಆತಂಕದಿಂದ ಶುಭ ಸುದ್ದಿಗಾಗಿ ಕಾಯುತ್ತಲೇ ಇದ್ದರು.

ಚಿಕ್ಕಂದಿನಲ್ಲಿ ಚೆನ್ನಾಗಿಯೇ ಇದ್ದ ನೀರಜ್ ಅವರಿಗೆ 1996ರಲ್ಲಿ ಆರೋಗ್ಯದ ಸಮಸ್ಯೆ ಎದುರಾಗಿತ್ತು. ಈ ವೇಳೆ, ಇವರ ಕಾಲನ್ನು ಶಸ್ತ್ರಚಿಕಿತ್ಸೆಮೂಲಕ ತೆಗೆಯಲಾಗಿತ್ತು.ಇದಾದ ಬಳಿಕ ಮನೆಯವರು ನೀರಜ್ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರು.ಆದರೆ, ಈ ಚಿಂತೆಯನ್ನು ಈಗ ನೀರಜ್ ದೂರ ಮಾಡಿದ್ದಾರೆ ಮತ್ತು ಅದ್ಭುತವೊಂದನ್ನು ಸಾಧಿಸಿ ತೋರಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಖಾಸಗಿ ಕಂಪನಿಯಲ್ಲಿ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹವ್ಯಾಸಿ ಪತ್ರಕರ್ತರಾದಜನಾರ್ಧನ್ ರಾವ್ ಸಾಳಂಕೆ ಯವರು ಕನ್ನಡ ಚಿತ್ರರಂಗದ ಪವರ್ ಹೌಸ್ ಎಂದೇ ಖ್ಯಾತರಾದ ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ ಅವರ ಬಗ್ಗೆ ವಿಶೇಷ ಪುಸ್ತಕ ಬರೆಯುತ್ತಿದ್ದಾರೆ. ಮಾರ್ಚ್ 17 ರಂದು ಪುನೀತ್ ಅವರ ಹುಟ್ಟುಹಬ್ಬವಿದ್ದು,ಆ ದಿನಕ್ಕೆ ವಿಶೇಷ ಕೊಡುಗೆ ನೀಡಲಿದ್ದಾರೆ. ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ಪುಸ್ತಕಬರೆಯುತ್ತಿರುವುದು ಗಮನಾರ್ಹ. ಅಪ್ಪು ಅವರ ಬಗ್ಗೆ ಕೇಳಿರದ ವಿಶೇಷ ವಿಷಯಗಳು ಮತ್ತು ಅತಿ ವಿರಳವಾದಫೋಟೋಗಳನ್ನು ಈ ಪುಸ್ತಕದಲ್ಲಿ…
ಅರವತ್ತರ ವಯಸ್ಸಿನಲ್ಲೂ ಕಟ್ಟುಮಸ್ತಾಗಿದ್ದು ಸೂಪರ್ ಮಾಡೆಲ್‌ನಂತಿರುವ ದಿನೇಶ್ ಮೋಹನ್ ಈಗ ಹಲವರ ಗಮನ ಸೆಳೆಯುತ್ತಿದ್ದಾರೆ. ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಮೋಹನ್ ಅತಿಯಾದ ತೂಕದಿಂದ ಬಳಲಿ ಹಾಸಿಗೆ ಹಿಡಿದಿದ್ದರು. ಅಲ್ಲಿಂದ ಚೇತರಿಸಿಕೊಂಡರೂ ದಢೂತಿ ದೇಹ ಇಳಿಸಿಕೊಳ್ಳಲು 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡ ಅವರು 2016ರಲ್ಲಿ ಫೋಟೋಶೂಟ್ ಮಾಡಿದ ಬಳಿಕ ಅಂಗಸೌಷ್ಠವ ರಕ್ಷಣೆ ನಿರಂತರವಾಗಿಸಿಕೊಂಡರು. ಈಗ ಅವರಿಂದ ಯುವಕರು ಮಾತ್ರವಲ್ಲ ವಯಸ್ಸಾದವರೂ ಸೆಳೆಯಲ್ಪಡುತ್ತಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಅವರು…
ಮೇ 23ರ ಗುರುವಾರದಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಸಮೀಕ್ಷೆಗಳು ಎನ್ಡಿಎ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗಗಳಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಮತಗಟ್ಟೆ ಸಮೀಕ್ಷೆ ಫಲಿತಾಂಶ ಷೇರುಪೇಟೆಯ ಮೇಲೆ ಪ್ರಭಾವ ಬೀರಿದ್ದು, ಹೂಡಿಕೆದಾರರು ಬೃಹತ್ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಆಹಾರ ವಿತರಣಾ ಸಂಸ್ಥೆ ಜೋಮ್ಯಾಟೊ (Zomato) ಸಾರ್ವಜನಿಕರಿಗೆ ಭರ್ಜರಿ ಉಡುಗೊರೆ ನೀಡುವ ಘೋಷಣೆ ಮಾಡಿದೆ. ದೇಶದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂದು…
ದೆಹಲಿ ಮಾದರಿಯಲ್ಲಿ ಸರಕಾರಿ ಶಾಲೆಗಳ ಪರಿವರ್ತನೆ-ಸಂಕಲ್ಪ :ವರ್ತೂರು ಪ್ರಕಾಶ್ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ ಬಿಡುಗಡೆಗೊಳಿಸಿ, 12೦ ದಿನಗಳ ಕಾಲ 1೦೦೦ ಪ್ರತಿಗಳನ್ನು ವಿತರಿಸುವ ಕಾರ್ಯಕ್ಕೆ ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಶನಿವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ವರ್ತೂರು ಪ್ರಕಾಶ್, ದೆಹಲಿಯಲ್ಲೂ ಸಹ ಆಮ್ ಆದ್ಮಿ ಮುಖ್ಯಮಂತ್ರಿ ಶಾಲೆಗಳನ್ನು ಅಭಿವೃದ್ಧಿಪಡಿಸಿರುವುದಕ್ಕಿಂತಲೂ ಮಾದರಿಯಾಗಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಸ್ವಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಸುಮಾರು…
ಭಾರತ ಜನಪ್ರಿಯ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ತುಂಬಾನೇ ಮುಖ್ಯವಾದುದು. ಹಾಲಿವುಡ್ ನಿಂದ ಭಾರತಕ್ಕೆ ಬಂದಿರುವ ಈ ಶೋ 2006ರಲ್ಲಿ ಮೊದಲ ಸಲ ಹಿಂದಿಯಲ್ಲಿ ಆರಂಭವಾಯಿತು. ಅದಾದ ಬಳಿಕ ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗಿದೆ. ಹಿಂದಿಯಲ್ಲಿ 13ನೇ ಆವೃತ್ತಿ, ಕನ್ನಡದಲ್ಲಿ 7ನೇ ಆವೃತ್ತಿ, ತೆಲುಗು, ತಮಿಳು, ಮರಾಠಿ, ಬೆಂಗಾಳಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಬಂದಿದೆ. ಇಷ್ಟು ವರ್ಷಗಳ ಇತಿಹಾಸದಲ್ಲಿ ಯಾವ ಶೋಗೂ ಸಿಗದ ಟಿ.ಆರ್.ಪಿ ತೆಲುಗಿಗೆ ಸಿಕ್ಕಿದೆ. ಈ…
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸಾರ್ವಭೌಮ ಚಿತ್ರದ ಟಿ ಶರ್ಟ್