ಇನ್ನೇನು ಚುನಾವಣಾ ಹತ್ತಿರ ಸಮೀಪಿಸುತ್ತಿದೆ.ಈಗಂತೂ ಎಲ್ಲಿ ನೋಡಿದರೂ ಚುನಾವಣಾ ಬಗ್ಗೆಯೇ ಮಾತುಗಳು.ಯಾರು ಗೆಲ್ತಾರೆ,ಯಾರು ಸೋಲ್ತಾರೆ ಎಂಬುದೇ ಚರ್ಚೆ ಒಂದು ಕಡೆ ಆಗಿದ್ದರೆ, ಮತ್ತೊಂದು ಕಡೆ ವೋಟರ್ IDಗೆ ಸಂಬಂದಪಟ್ಟ ಕೆಲಸಗಳು ಭರದಿಂದಲೇ ನಡೆಯುತ್ತಿದೆ.
ಇದೆರೆಲ್ಲದರ ನಾವು ನಮ್ಮಲ್ಲಿರುವ ವೋಟರ್ ID ಬಗ್ಗೆ ತುಂಬಾ ತಲೆಕೆಡಿಸಿಕೊಂಡಿರುತ್ತೇವೆ.ಯಾಕಂದ್ರೆ ಅದರಲ್ಲಿ ಹಲವಾರು ತಪ್ಪುಗಳು ಆಗಿರ್ತವೆ. ಈ ತಪ್ಪುಗಳನ್ನು ಹೇಗೆ ಸರಿಪಡಿಸೋದು ಅನ್ನೋದೇ ಒಂದು ದೊಡ್ಡ ಚಿಂತೆಯಾಗಿರ್ತದೆ.ಆದ್ರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋ ಅವಶ್ಯಕತೆಯಿಲ್ಲ. ನೀವು ಏನೇ ತಪ್ಪಾಗಿದ್ರು, ನೀವು ನಿಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮುಖಾಂತರವೇ ಸರಿಮಾಡ್ಕೊಬಹುದು.
ಈ ಕೆಳಗಿನ ಕ್ರಮಗಳನ್ನು ಅನುಸರಿಸಿ, ತಪ್ಪುಗಳನ್ನು ಸರಿಮಾಡಿಕೊಳ್ಳಿ…
ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್’ನಲ್ಲಿ National voters service portal ವೆಬ್ಸೈಟ್’ಅನ್ನು ಓಪನ್ ಮಾಡಿ..
ಚಿತ್ರದಲ್ಲಿ ತೋರಿಸಿರುವ Correction of entries in electrol roll ಆಪ್ಷನ್ ಕ್ಲಿಕ್ ಮಾಡಿ.
ಹಂತ 3
ಪೇಜ್ ಓಪನ್ ಆದ ನಂತರ ಭಾಷೆಯನ್ನು ಕೇಳುತ್ತೆ, ಭಾಷೆ ಸೆಲೆಕ್ಟ್ ಮಾಡಿ,ಅಲ್ಲಿ Form 8 ಅಂತ ಒಂದು ಅಪ್ಲಿಕೇಷನ್ ಕಾಣಿಸುತ್ತೆ.
ಹಂತ 4
ಚಿತ್ರದಲ್ಲಿರುವಂತೆ ನಿಮ್ಮ ರಾಜ್ಯ ಮತ್ತು ವಿಧಾನ ಸಭಾ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಳ್ಳಿ..
ಹಂತ 5
ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಎಲ್ಲಾ ವಿವರಗಳನ್ನು ತುಂಬಿ, ನಿಮ್ಮ ಹೆಸರು, ವೋಟರ್ ID ನಂಬರ್….
ಹಂತ 6
ನಂತರ ನೀವು ಮೇಲೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಏನನ್ನು ಬದಲಾವಣೆ ಮಾಡಬೇಕು ಎಂದು ನಮೂದಿಸಿ..ಉದಾಹರಣೆಗೆ ನಿಮ್ಮ ಹೆಸರು ಬದಲಾಯಿಸಬೇಕಿದ್ದರೆ ಈ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿರುವಂತೆ ಮಾಡಿ..
ಹಂತ 7
ಮತ್ತೊಮ್ಮೆ ಅಲ್ಲಿ ನಿಮ್ಮ ಸರಿಯಾದ ಹೆಸರನ್ನು ನಮೂದಿಸಿ..
ಹಂತ 8
ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ..(ನಿಮ್ಮ TC, DL, Adhar card etc)
ಹಂತ 9
ನಿಮ್ಮ ಮೊಬೈಲ್ ನಂಬರ್ ಕೊಡಿ, ಮತ್ತು ಈ ಮೇಲ್ ವಿಳಾಸ ತುಂಬಿ. ಆನಂತರ Submit button ಅನ್ನು ಕ್ಲಿಕ್ ಮಾಡಿ..
ಹಂತ 10
ನಂತರ ನಿಮ್ಮ ಮೇಲ್ ಐ ಡಿ ಗೆ ನಿಮ್ಮ ವೋಟರ್ ಐ ಡಿ ಇನ್ಫಾರ್ಮೇಶನ್ ಬದಾಲಾಗಿರುವುದು ಕನ್ಫರ್ಮೇಷನ್ ಮೇಲ್ ಬರುತ್ತದೆ..
ಇಂತಹ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ “ಹಳ್ಳಿ ಹುಡುಗರು” ಪೇಜ್ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ… ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ..
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಪ್ರತಿಯೊಬ್ಬ ಸ್ಟಾರ್ ನಟರಂತೆ ಕಾಣುವ ಒಬ್ಬೊಬ್ಬ ಜೂನಿಯರ್ ನಟ ಇರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹಾವ-ಭಾವ ನೋಡಿ ಅವರಂತಯೇ ಮಾತನಾಡುವುದು, ಲುಕ್ ಹಾಗೂ ವಾಕಿಂಗ್ ಸ್ಟೈಲ್ ಅನ್ನು ಅನುಸರಿಸುತ್ತಾರೆ. ಈಗ ಅದೇ ರೀತಿ ಜೂನಿಯರ್ ದರ್ಶನ್ ನೋಡಿ ನಟಿ ರಚಿತಾ ರಾಮ್ ಶಾಕ್ ಆಗಿದ್ದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ನಂತರ ಇದೀಗ ಮಜಾಭಾರತ ಸೀಸನ್ ಮೂರು ಶುರುವಾಗಿದೆ.. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಂತೆಯೇ ಕಾಣುವ ಜೂನಿಯರ್ ದರ್ಶನ್ ಬಂದಿದ್ದರು. ಅಲ್ಲಿ…
ಸುಂದರ್ ಪಿಚೈ ಅವರು ಮೊದಲು ಕಂಪನಿಯ ಇಂಟರ್ ನೆಟ್ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್ ಮತ್ತು ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.
ಗೌತಮ ಬುದ್ಧನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ.ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ. ಈತ ಜನಿಸುವ ಮೊದಲೇ ಜ್ಯೋತಿಷ್ಯರುಶುದ್ಧೋದನನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ, ಮಹಾಪುರುಷನಾಗಿ ಅಜರಾಮರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ. ಇದನ್ನು ತಿಳಿದುಕೊಂಡ ಶುದ್ದೋಧನನು ತನ್ನ ಮಗನು ಚಕ್ರವರ್ತಿ ಆಗಬೇಕೆಂದು ಬಯಸುತ್ತಾನೆ. ಯಾವ ದುಃಖ ನೋವುಗಳು ಈತನನ್ನು ಭಾಧಿಸದಿರಲಿ ಹಾಗೂ ಜಗತ್ತಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಂದ ಈತ ದೂರ ಇರಲಿ ಎಂದು ಪ್ರಯತ್ನಿಸುತ್ತಾನೆ ಹಾಗೂ ತನ್ನ ಮಗ ಇದಾವುದರ ವಿಚಾರಕ್ಕೆ ಸಿಲುಕಬಾರದೆಂದು ಯಾವುದೇ ಧಾರ್ಮಿಕ ಭೋಧನೆಯನ್ನು ಆತನಿಗೆ…
ನಾವು ದಿನನಿತ್ಯ ಹಾಲನ್ನು ಕುಡಿಯುತ್ತೇವೆ. ಹಾಗೆಯೇ ಬೆಳ್ಳುಳ್ಳಿಯನ್ನು ಸಹ ಊಟದ ಮುಖಾಂತರ ಸೇವಿಸುತ್ತೇವೆ. ಆದ್ರೆ ಅದೇ ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿನ ಮುಖಾಂತರ ಸೇವಿಸಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್ಗಳನ್ನು ಕೋಲಾರ ಜಿಲ್ಲೆÀಯ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೇರವಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸೆಂಟ್ರ್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರಾದ ನವೀನ್ ಕುಮಾರ್…
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಕ್ಯಾರವ್ಯಾನ್ ಖರೀದಿಸಿದ್ದು, ಅದರ ಬೆಲೆ 7 ಕೋಟಿ ರೂ. ಎಂದು ತಿಳಿದು ಬಂದಿದೆ. ಇದು ನೋಡಲು ಬಹಳ ಆಕರ್ಷಣಿಯವಾಗಿದೆ ಎಂದು ತಿಳಿದುಬಂದಿದೆ. ಮತ್ತು ತಾವೂ ಖರೀದಿಸಿರುವ ಹೊಸ ಕ್ಯಾರವ್ಯಾನ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ತಮಗೆ ಬೇಕಾದಂತೆ ಡಿಸೈನ್ ಮಾಡಿಸಿಕೊಂಡಿದ್ದಾರೆ. ಇದು ಕಪ್ಪು ಬಣ್ಣದ ಬಸ್ ಆಗಿದ್ದು, ಒಳಗೆ ಅತ್ಯಂತ ಸ್ಟೈಲಿಶ್ ಆಗಿ ವಿನ್ಯಾಸ ಮಾಡಲಾಗಿದೆ. ವಿಶೇಷವೆಂದರೆ ಈ ಕ್ಯಾರವ್ಯಾನ್ ಮೇಲೆ ಮತ್ತು ಒಳಗೆ ಅಲ್ಲು ಅರ್ಜುನ್ ತಮ್ಮ ಹೆಸರನ್ನ…