ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನಾಣ್ಯವನ್ನು ಪರ್ಸಿನಲ್ಲಿಟ್ಟರೆ ಶುಭಕರ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ.
ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.
ವೃಷಭ : ಈ ರಾಶಿಯವರು ಸದಾ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಟ್ಟಿರಬೇಕು.
ಮಿಥುನ : ಮಿಥುನ ರಾಶಿಯವರು ಪರ್ಸ್ ನಲ್ಲಿ ಯಾವಾಗ್ಲೂ ಕಂಚಿನ ನಾಣ್ಯವನ್ನು ಇಟ್ಟುಕೊಳ್ಳುವುದು ಶುಭ.
ಕರ್ಕ : ಈ ರಾಶಿಯವರು ಬೆಳ್ಳಿ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಮಂಗಳಕರ.
ಸಿಂಹ : ಈ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ಅಥವಾ ಕಂಚಿನ ನಾಣ್ಯಗಳಲ್ಲಿ ಒಂದನ್ನು ಇಟ್ಟುಕೊಳ್ಳಬಹುದು.
ಕನ್ಯಾ : ಕನ್ಯಾ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಡಬೇಕು.
ತುಲಾ : ಈ ರಾಶಿಯವರು ಕೂಡ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನಿಟ್ಟುಕೊಂಡರೆ ಶುಭಕರ.
ವೃಶ್ಚಿಕ : ಇವ್ರು ಸದಾ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.
ಧನು : ಈ ರಾಶಿಯವರು ಪರ್ಸ್ ನಲ್ಲಿ ಕಂಚಿನ ನಾಣ್ಯವನ್ನು ಇಡಬೇಕು.
ಮಕರ : ಕಬ್ಬಿಣದ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಶುಭಕರ.
ಕುಂಭ : ಕಂಚಿನ ನಾಣ್ಯ ಪರ್ಸ್ ನಲ್ಲಿದ್ದರೆ ಮಂಗಳಕರ.
ಮೀನ : ಮೀನ ರಾಶಿಯವರ ಪರ್ಸ್ ನಲ್ಲಿ ಸದಾ ಚಿನ್ನದ ಅಥವಾ ಹಿತ್ತಾಳೆಯ ನಾಣ್ಯವಿರಬೇಕು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಮಧುಮೇಹ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಹೆಚ್ಚು ಹಸಿವು ಕಾಡುತ್ತದೆ. ಹಾಗಾಗಿ ಬೇಗ ಹಸಿವಾಗದ ಹೊಟ್ಟೆ ತುಂಬಿರುವ ಅನುಭವ ನೀಡುವ ಆಹಾರವನ್ನು ಸೇವಿಸಬೇಕು. ಇದಕ್ಕೆ ಕಡಲೆ ಹಿಟ್ಟಿನ ರೊಟ್ಟಿ ಬೆಸ್ಟ್. ಮಧುಮೇಹಿಗಳಿಗೆ ಮಾತ್ರವಲ್ಲ ರಕ್ತದೊತ್ತಡ, ದೈಹಿಕ ದೌರ್ಬಲ್ಯ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್. ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ.ಕಡಿಮೆ ಗ್ಲೈಸೆಮಿಕ್ ಹೊಂದಿರುತ್ತದೆ.ಇದಕ್ಕಾಗಿಯೇ ಇದು ತೂಕ ನಷ್ಟ ಮಾಡುವ ಜೊತೆಗೆ ಮಧುಮೇಹ ನಿಯಂತ್ರಿಸುತ್ತದೆ. ಮಸಲ್ಸ್ ಬೆಳೆಸಲು ಆಸಕ್ತಿ ಹೊಂದಿರುವವರು ಕೂಡ ಕಡಲೆ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(2 ಏಪ್ರಿಲ್, 2019) ಒಂದು ಲಾಭಕರ ದಿನ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು….
ಬೆಂಗಳೂರು: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು. ಅತ್ಯಂತ ಕಡಿಮೆ. ಹಣದಲ್ಲಿ ಭಾರಿ ಮೊತ್ತದ. ಅಪಘಾತ ವಿಮೆಯನ್ನು ಪರಿಚಯಿಸಿದೆ. ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠೆ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ 1 ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು. ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ. ಅಂಚೆ ಕಚೇರಿಗೆ ತೆರಳಿ…
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಂಡಿರುವ ಸರ್ಕಾರ ಮತ್ತೊಂದು ಅನುಕೂಲತೆ ಕಲ್ಪಿಸಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾದ ಸಂದರ್ಭದಲ್ಲಿ ಬೆಂಬಲ ಬೆಲೆಗೆ ಸರ್ಕಾರದಿಂದ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಬೆಲೆ ನಿಗದಿಪಡಿಸಲು ಐವರು ಸಚಿವರ ಕ್ಯಾಬಿನೇಟ್ ಉಪ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಉಪಮುಖ್ಯಮಂತ್ರಿಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಐವರು ಸಚಿವರ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದ್ದು, ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನುಸಂಸದೀಯ ವ್ಯವಹಾರಗಳು ಹಾಗೂ ಸಣ್ಣ…
57 ವರ್ಷದ ಪುರುಷೋತ್ತಮ್ ಎಂಬಾತ 8 ಮದುವೆಯಾಗಿ ಮೋಸ ಮಾಡಿ ಕೋಟಿ ಕೋಟಿ ಹಣ ಪಂಗನಾಮ ಹಾಕಿದ್ದಾನೆ. ಈತನ ನಾಲ್ಕನೆ ಪತ್ನಿ ಉಪನ್ಯಾಸಕಿಯಾಗಿದ್ದು, ಚೆನ್ನೈನ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿರುವ ಇಂದಿರಾ ಗಾಂಧಿ ಎಂಬವರು ಈ ಕುರಿತು ದೂರು ನೀಡಿದ ಬಳಿಕ ಉದ್ಯಮಿಯ ನಿಜ ಬಣ್ಣ ಈಗ ಬೆಳಕಿಗೆ ಬಂದಿದೆ ಚೆನ್ನೈನಲ್ಲಿ ಪೊಲೀಸ್ ಕಂಪ್ಲೆಂಟ್ ನೀಡಿದ ಮೇಲೆ ಪುರುಷೋತ್ತಮ ಬಂಡವಾಳ ಬಯಲಾಗಿದೆ.