ಉಪಯುಕ್ತ ಮಾಹಿತಿ

ನಿಮ್ಮ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು..?ಯಾರೆಲ್ಲ ರಕ್ತದಾನ ಮಾಡಬಹುದು..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

1455

ಮಾನವ ರಕ್ತಕ್ಕೆ ಪರ್ಯಾಯವಾಗಿ ಬೇರೊಂದಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮಾನವ ದೇಹದ ತೂಕದಲ್ಲಿ ಪ್ರತಿಶತ 7 ರಷ್ಟು ರಕ್ತದ ಭಾಗವಾಗಿರುತ್ತದೆ. ವಯಸ್ಕರೊಬ್ಬರ ದೇಹದಲ್ಲಿ 10 ರಿಂದ 12 ಯುನಿಟ್ ರಕ್ತ ಇರುತ್ತದೆ. ರಕ್ತವು ಆಮ್ಲಜನಕ ಮತ್ತು ಪೋಷಕಾಂಶವನ್ನು ದೇಹದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತದೆ.

ರಕ್ತವು ಇಂಗಾಲದ ಡೈ ಆಕ್ಸ್ಯ್ ಡ್ ಮತ್ತು ಮಲೀನ/ತ್ಯಾಜ್ಯ ವಸ್ತುಗಳನ್ನು ದೇಹದ ಶುದ್ದೀಕರಣ ಮಾಡುವ ಅಂಗಗಳಿಗೆ ರವಾನಿಸಿ, ದೇಹವನ್ನು ಶುದ್ದವಾಗಿರಿಸಲು ಸಹಕರಿಸುತ್ತದೆ. ರಕ್ತವು ರೋಗ ತಡೆ ಹಾಗೂ ಗಾಯವು ಮಾಯುವಂತೆ ಮಾಡಲು ಸಹಕರಿಸುತ್ತದೆ. ರಕ್ತದಾನ ಮಾಡುವಾಗ, ಒಂದು ಚುಚ್ಚುಮದ್ದು ತೆಗೆದುಕೊಳ್ಳುವಾಗ ಆಗುವುದಕ್ಕಿಂತ ಹೆಚ್ಚು ನೋವು ಆಗುವುದಿಲ್ಲ. ರಕ್ತದಾನ ಮಾಡಿ ಸುಧಾರಿಸಿಕೊಳ್ಳಲು 20 ನಿಮಿಷ ಸಾಕು.

ಯಾರೆಲ್ಲಾ ರಕ್ತದಾನ ಮಾಡಬಹುದು..?

ರಕ್ತದಾನ ಮಹಾದಾನ ಎಂದು ಹೇಳುತ್ತಾರೆ.ಆದರೆ ಯಾರೆಂದರೆ ಅವರು ರಕ್ತದಾನ ಮಾಡುವ ಹಾಗಿಲ್ಲ.ಒಬ್ಬ ವ್ಯಕ್ತಿ ರಕ್ತದಾನ ಮಾಡಬೇಕಾದರೆ ಕೆಲವೊಂದು ನಿಯಮಗಳಿವೆ.ಆ ನಿಯಮಗಳು ಏನು ಗೊತ್ತಾ?ಮುಂದೆ ಓದಿ…

18 ರಿಂದ 65 ವರ್ಷದ ಒಳಗಿರುವ ಎಲ್ಲಾ ಮಹಿಳೆಯರು ಮತ್ತು ಪುರುಷರು ರಕ್ತದಾನ ಮಾಡಬಹುದು. ಪುರುಷರು 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ನಮ್ಮೇಲರ ದೇಹದಲ್ಲಿ 5000ಮಿ.ಲಿ. ರಕ್ತವಿದೆ ಮತ್ತು 350 ಮಿ.ಲಿ. ರಕ್ತವನ್ನು ಮಾತ್ರ ರಕ್ತದಾನದ ಸಮಯದಲ್ಲಿ ತೆಗೆದುಕೊಳ್ಳಲಾಗುತ್ತದೆ. ಹೀಗೆ ದಾನ ಮಾಡಿದ ರಕ್ತವನ್ನು ಸರಿಯಾದ ಆಹಾರವನ್ನು ಸೇವಿಸುವುದರಿಂದ ಶರೀರವು ಮತ್ತೆ ಕೆಲವೇ ವಾರಗಳಲ್ಲಿ ಉತ್ಪಾದಿಸಿಕೊಳ್ಳುತ್ತದೆ.

ರಕ್ತದಾನಿಯ ದೇಹದ ತೂಕ ಕನಿಷ್ಠ ಪಕ್ಷ 45 ಕೆ.ಜಿ ಗಿಂತ ಹೆಚ್ಚಿರಬೇಕು.ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5  ಗ್ರಾಮ್ಗಿಂತ ಹೆಚ್ಚು ಇರಲೇಬೇಕು. ಹೊಸ ರಕ್ತ ದೇಹದಲ್ಲಿನ ರಕ್ತ ಸಂಚಾರ ದಾನಿಯಲ್ಲಿ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ರಕ್ತದಲ್ಲಿ ಕೊಬ್ಬಿನಾಂಶ ಕರಗಿಸಿ ರಕ್ತ ಸುಲಲಿತ ಸಂಚಾರಕ್ಕೆ ಸಹಾಯವಾಗುತ್ತದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ