ಗ್ಯಾಜೆಟ್

ನಿಮ್ಮ ಮೊಬೈಲ್ ನೀರಿಗೆ ಬಿದ್ರೆ,ಏನ್ ಮಾಡಬೇಕು..?ಏನ್ ಮಾಡಬಾರದು..?ತಿಳಿಯಲು ಈ ಲೇಖನ ನೋಡಿ…

746

ತುಂಬಾ ದುಡ್ಡು ಕೊಟ್ಟು ಸ್ಮಾರ್ಟ್’ಫೋನ್ ಕೊಂಡುಕೊಂಡಿದ್ದೇವೆಂದು ಬಹಳ ಜೋಪಾನ ಮಾಡುತ್ತಿರುತ್ತೇವೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ.  ಆದರೆ, ಎಂದಾದರೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಕೆಳಗೆ ಬೀಳುವುದೋ, ನೀರಿಗೆ ತಾಕುವುದೋ ಅಥವಾ ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ. ಆಗುವ ಸಾಧ್ಯತೆ ಇರುತ್ತದೆ. ನೀರಿನಲ್ಲಿ ಬಿದ್ದರೆ ಬಹುತೇಕ ಮೊಬೈಲ್’ಗಳು ಹಾಳಾಗಿಬಿಡುತ್ತವೆ.

ಅನೇಕ ಪ್ರಕರಣಗಳಲ್ಲಿ ನೀರಿನಿಂದಲೇ ಮೊಬೈಲ್ ಹಾಳಾದರೆ, ಕೆಲ ಕೇಸ್’ಗಳಲ್ಲಿ ನಮ್ಮ ಅಜ್ಞಾನದಿಂದಲೇ ಫೋನ್ ಹಾಳು ಮಾಡಿಕೊಳ್ಳುತ್ತೇವೆ. ಅನೇಕರು ತಮ್ಮ ಕೆಲವು ಐಡಿಯಾಗಳಿಂದ ಮನೆಯಲ್ಲಿಯೇ ರಿಪೇರಿ ಮಾಡುವುದಕ್ಕೆ ಪ್ರಯತ್ನ ಪಡುತ್ತಾರೆ. ಫೋನ್ ನ್ನು ಬಿಸಿಲಿನಲ್ಲಿ ಇಡುವದು ಮೈಕ್ರೋವೇವ್ ಆವನ್ ನಲ್ಲಿ ಇಡುವದು ಹೀಗೆ ಬೇರೆ ಬೇರೆ ಯತ್ನ ಮಾಡುವರು. ಇಂತಹ ತಪ್ಪು ಮಾರ್ಗಗಳಿಂದ ಫೋನ್ ಮತ್ತಷ್ಟು ಹಾಳಾಗುವ ಸಾಧ್ಯತೆಗಳೇ ಹೆಚ್ಚಾಗಿ ಇರುತ್ತವೆ.

ಇದನ್ನ ಸರಿ ಮಾಡುವುದಕ್ಕೆ ಸಾವಿರಾರು ರೂಪಾಯಿಗಳು ಖರ್ಚು ಮಾಡುತ್ತಾರೆ. ಆದರೆ ಇನ್ಮುಂದೆ ಹಾಗೇ ಮಾಡಬೇಡಿ. ಅದನ್ನ ಸರಿಪಡಿಸುವ ಟ್ರಿಕ್ಸ್ ನಾವು ಹೇಳಿ ಕೊಡುತ್ತೇವೆ…

1. ಮೊಬೈಲ್ ಸ್ವಿಚ್ ಆಫ್ ಮಾಡಿ…

ನಿಮ್ಮ ಮೊಬೈಲ್ ನೀರಿನಲ್ಲಿ ಬಿದ್ದುಬಿಟ್ಟರೆ ನೀವು ಮಾಡಬೇಕಾದ ಮೊದಲ ಕೆಲಸ ಎಂದರೆ, ಅದನ್ನ ಸ್ವಿಚ್ ಆಫ್ ಮಾಡುವುದು. ಹಾಗೆಯೇ ಅದರೊಳಗಿನ ಸಿಮ್ ಕಾರ್ಡ್, ಮೆಮರಿ ಕಾರ್ಡುಗಳನ್ನು ತೆಗೆಯಿರಿ. ಮೊಬೈಲ್ ಸ್ವಿಚ್ ಆಫ್ ಆಗಿರಲಿ, ಬಿಡಲಿ. ನಾವು ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿ ಬ್ಯಾಟರಿಯನ್ನು ತೆಗೆಯಬೇಕು. ಆಕಸ್ಮಾತ್ ರಿಮೊವೆಬಲ್ ಬ್ಯಾಟರಿ ಆಗಿರದಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಇದರಿಂದ ಫೋನ್’ನೊಳಗೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಯನ್ನ ತಡೆಯಬಹುದು.

2. ನಿಮ್ಮ ಫೋನ್’ನ ಭಾಗಗಳನ್ನುಬಿಚ್ಚಿಡಿ…

ಮೊಬೈಲ್ ಸ್ವಿಚ್ ಆಫ್ ಮಾಡಿದ ಬಳಿಕ ನಿಮ್ಮ ಫೋನ್’ನ ಭಾಗಗಳನ್ನು ಸಾಧ್ಯವಾದಷ್ಟೂ ತೆಗೆದುಹಾಕಿರಿ. ಕವರ್, ಬ್ಯಾಟರಿ, ಸಿಮ್ ಕಾರ್ಡ್ಸ್, ಮೆಮೋರಿ ಕಾರ್ಡ್ ಇತ್ಯಾದಿ ಬಿಡಿಭಾಗಗಳನ್ನ ಫೋನ್’ನಿಂದ ಹೊರತೆಗೆಯಿರಿ.

ಫೋನಿನಲ್ಲಿಯ ಬಿಡಿಭಾಗಗಳನ್ನು ಬೆರ್ಪಡಿಸಿದ ನಂತರ ಅದನ್ನು ಒಣಗಿಸಲು ಟಿಶ್ಯೂ ಪೇಪರ್ ಅಥವಾ ಕಾಟನ್ ಬಟ್ಟೆಯನ್ನು ಉಪಯೋಗಿಸಿರಿ. ಯಾಕೆಂದರೆ ಇದರಿಂದ ಫೋನಿನ ಮೂಲೆ ಮೂಲೆಗಳನ್ನು ಒರೆಸಲು ಸಾಧ್ಯವಾಗುತ್ತದೆ.

3.  ಬಿಸಿಲಿನಲ್ಲಿ ಇಡಿ…

ಮೊಬೈಲ್ ನಿಂದ ಮೆಮೊರಿ ಕಾರ್ಡ್ ಹಾಗೂ ಸಿಮ್ ರಿಮೋವ್ ಮಾಡಿ ಬಿಸಿಲಿನಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆನ್ ಮಾಡಬೇಡಿ.

ಇಲ್ಲಿ ಓದಿ :-ನಿಮ್ಮ ಮೊಬೈಲ್’ನಲ್ಲಿ ಈ 4 ಆಪ್’ಗಳಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ..?

4.   ಅಕ್ಕಿಯೊಳಗೆ ಇಡಿ…

ಮೊಬೈಲನ್ನ ಒಂದು ಅಕ್ಕಿಯ ಬ್ಯಾಗ್ ಒಳಗೆ ಹಾಕಿ. ಮೊಬೈಲ್ ಸಂಪೂರ್ಣ ಮುಚ್ಚುವಷ್ಟು ಬ್ಯಾಗ್ ನಲ್ಲಿ ಅಕ್ಕಿ ಇರಲಿ. ಎರಡು ಮೂರು ದಿನ ಮೊಬೈಲನ್ನ ಅಲ್ಲೇ ಇಡಿ. ಯಾಕೆಂದರೆ ಅಕ್ಕಿ ಒಂದು ನೀರನ್ನು ಹೀರಿಕೊಳ್ಳುವ ಅದ್ಭುತ ವಸ್ತು. 2 ಅಥವಾ 3 ದಿನಗಳ ಬಳಿಕ ಫೋನ್ ನನ್ನು ತೆಗೆದು ಬ್ಯಾಟರಿ ಹಾಕಿ ಸ್ವಿಚ್ ಆನ್ ಮಾಡಿ.ಇದಕ್ಕೂ ಮುಂಚೆ ಮೊಬೈಲ್’ನ್ನು ಅಪ್ಪಿ ತಪ್ಪಿ ಸ್ವಿಚ್ ಆನ್ ಮಾಡಬೇಡಿ. ನಿಮ್ಮ ಫೋನ್ ಎಂದಿನಂತೆ ವರ್ಕ್ ಆಗುತ್ತದೆ. ಅಲ್ಲಿಯವರೆಗೂ ಕುತೂಹಲಕ್ಕಾಗಿಯಾದರೂ ಮೊಬೈಲ್ ಮುಟ್ಟಲು ಹೋಗಬೇಡಿ.

5.  ಇದನ್ನು ಮಾಡಲೇಬೇಡಿ..!

ಅಪ್ಪಿ ತಪ್ಪಿ ಒದ್ದೆಯಾದ ಮೊಬೈಲ್ ನ್ನು ಹೆಯರ್ ಡ್ರಾಯರ್ ನಿಂದ ಒಣಗಿಸಬೇಡಿ. ಡ್ರಾಯರ್ ನಿಂದ ಹೊರ ಹೊಮ್ಮುವ ಗಾಳಿ ಅತಿಯಾದ ಉಷ್ಣತೆ ಹೊಂದಿರುವದರಿಂದ ಫೋನ್ ನಲ್ಲಿಯ ಸರ್ಕಿಟ್ ಹಾಳಾಗುವ ಸಾಧ್ಯತೆಗಳಿರುತ್ತವೆ. ಇದರಿಂದ  ಮೊಬೈಲ್ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

6.  ಅತೀ ಹೆಚ್ಚು ಬಿಸಿಲಿನಲ್ಲಿ ಇಡಬೇಡಿ…

ಸ್ವಲ್ಪ ಹೊತ್ತು ಮಾತ್ರ ಬಿಸಿಲಿನಲ್ಲಿ ಇಡಿ.ಆದ್ರೆ ಅತಿಯಾದ ಬಿಸಿಲಿನಲ್ಲಿ ಫೋನ್ ಇಡುವದರಿಂದ ಕೆಟ್ಟು ಹೋಗುವ ಸಾಧ್ಯತೆಗಳು ಜಾಸ್ತಿ.

 

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ಸುದ್ದಿ

    ಖತರ್ನಾಕ್ ಕಳ್ಳರನ್ನು ಬಂಧಿಸಿ 5 ಲಕ್ಷ ಮೌಲ್ಯದ 14 ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡ ಕ್ಯಾತಸಂದ್ರ ಪೊಲೀಸರು

      ತುಮಕೂರು, ಆ.23-ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅನಂತಪುರ ಜಿಲ್ಲೆ ಅರೆಸಮುದ್ರಂ ನಿವಾಸಿ ನರಸಿಂಹ ಮೂರ್ತಿ (30) ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ಪಟ್ಟಣದ ಹಳೇ ದೇವರಾಯಪಟ್ಟಣದಲ್ಲಿ ಪ್ರಸ್ತುತ ವಾಸವಾಗಿದ್ದನು. ಕಳೆದ 2013ರಲ್ಲಿ ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಲ್ಲಿ ಮೋಟಾರ್‍ಬೈಕ್‍ಗಳನ್ನು ಕಳ್ಳತನ ಮಾಡಿದ್ದು, ಈತನ ಬಂಧನದಿಂದ ಹಲವು ಪ್ರಕರಣಗಳು ಪತ್ತೆಯಾದಂತಾಗಿದೆ….

  • ಸುದ್ದಿ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ವೆಬ್ಸೈಟ್ ಆರಂಭ….!

    ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ. ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್…

  • ಸುದ್ದಿ

    ‘ಕಾರ್ಗಿಲ್‌’ ಮೀನುಗಳ ಕಾಟ ; ಗಗನಕ್ಕೇರಿದ ಮೀನಿನ ಬೆಲೆ,.!!

    ಈಗಾಗಲೇ ನಮಗೆಲ್ಲರಿಗೂ ತಿಳಿದಿರುವ ವಿಷಯವೂ  ಕರಾವಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರ್ಗಿಲ್‌ ಮೀನಿನ ಕಾಟವು  ಮುಂದುವರೆದಿದೆ ಇದರಿಂದ  ಮಂಗಳೂರಿನ ಕಡಲ ತೀರದಲ್ಲಿ ಕಂಡಿದ್ದ ಕಾರ್ಗಿಲ್ ಮೀನುಗಳು, ಕಳೆದೊಂದು ವಾರದಿಂದ ಗಂಗೊಳ್ಳಿ ಮೀನುಗಾರರಿಗೂ ಬಾಧಿಸಿದ್ದು, ಈ ಭಾಗದ ಮೀನುಗಾರರಲ್ಲಿ ಆತಂಕ ಉಂಟು  ಮಾಡಿದೆ. ಗಂಗೊಳ್ಳಿ ಬಂದರಿಗೂ ಕಾರ್ಗಿಲ್ ಮೀನುಗಳು ವ್ಯಾಪಿಸುತ್ತಿವೆ. ಹೀಗಾಗಿ, ಮೀನುಗಾರರು ಕಾರ್ಗಿಲ್‌ ಮೀನುಗಳನ್ನು ಬೇರ್ಪಡಿಸುವಲ್ಲಿ ತೊಡಗಿಕೊಂಡಿದ್ದು, ಬಂಗುಡೆ, ಬೂತಾಯಿ ಹಾಗೂ ಇತರೆ ಮೀನುಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಲಕ್ಷದ್ವೀಪ, ಹವಳದ ದಿಬ್ಬಗಳಲ್ಲಿ ಹೆಚ್ಚು ವಾಸಿಸುವ…

  • ಕಾನೂನು

    ಶೇ.20 ಪಾರ್ಕಿಂಗ್ ಜಾಗ ಮಹಿಳೆಯರಿಗೆ ಮೀಸಲು..!ತಿಳಿಯಲು ಇದನ್ನು ಓದಿ..

    ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.

  • ಸುದ್ದಿ, ಸ್ಪೂರ್ತಿ

    ಪ್ರಧಾನಮಂತ್ರಿ ಯೋಜನೆಯ ಲಾಭ ಪಡೆದು ಈ ಮಹಿಳೆ ಆಗಿದ್ದೇನು ಗೊತ್ತಾ?ಮರೆಯದೇ ಈ ಸುದ್ದಿ ನೋಡಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಯೊಂದರ ಲಾಭ ಪಡೆದು ಮಧುರೈ ಮಹಿಳೆಯೊಬ್ಬಳು ಕೋಟ್ಯಾಧಿಪತಿಯಾಗಿದ್ದಾರೆ. ಅರುಲ್ಮೋಜಿ ಸರ್ವ್ನಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದ್ರಾ ಯೋಜನೆ ಲಾಭ ಪಡೆದು ತನ್ನದೇ ಸ್ವಂತ ವ್ಯಾಪಾರ ಶುರು ಮಾಡಿದ್ದಾರೆ. ಅರುಲ್ಮೋಜಿ ಕೇವಲ 234 ರೂಪಾಯಿಗೆ ವ್ಯಾಪಾರ ಶುರು ಮಾಡಿದ್ದರು. ಈಗ ಕಂಪನಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಪ್ರಧಾನ ಮಂತ್ರಿ ಕಚೇರಿಗೆ ಥರ್ಮೋಪ್ಲೆಕ್ಸ್  ಅವಶ್ಯಕತೆಯಿದೆ ಎಂಬುದು ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ ನಿಂದ ಅರುಲ್ಮೋಜಿಗೆ ಗೊತ್ತಾಗಿದೆ. ತಕ್ಷಣ ಅರುಲ್ಮೋಜಿ ಈ ಬಗ್ಗೆ…