ಗ್ಯಾಜೆಟ್

ನಿಮ್ಮ ಮೊಬೈಲ್’ನಲ್ಲೇ ಆಧಾರ್ ಲಿಂಕ್ ಮಾಡಿ..!ಈ ಲೇಖನ ಓದಿ…

579

ನಕಲಿ ಸಿಮ್ ಕಾರ್ಡ್ ಬಳಸಿ ಕೆಲವರು ಪಾತಕ ಕೃತ್ಯಗಳನ್ನು ನಡೆಸುತ್ತಿರುವುದು ಅಗಾಗ ವರದಿಯಾಗುತ್ತಲೇ ಇದೆ. ಮೊಬೈಲ್ ಸಿಮ್ ಕಾರ್ಡ್ ಗಳ ದುರ್ಬಳಕೆ ತಪ್ಪಿಸಲು ಆಧಾರ್ ಲಿಂಕ್ ಮಾಡುವುದನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ.

ಹಾಗಾಗಿ ಆಧಾರ್ ಲಿಂಕ್ ಮಾಡುವ ಮೂಲಕ ಸಿಮ್ ಬಳಕೆದಾರರನ್ನು ಪರಾಮರ್ಶಿಸಬೇಕೆಂದು ಇತ್ತೀಚೆಗಷ್ಟೇ ದೂರ ಸಂಪರ್ಕ ಇಲಾಖೆಯು ಎಲ್ಲ ಟೆಲಿಕಾಂ ಕಂಪನಿಗಳಿಗೂ ನಿರ್ದೇಶನ ನೀಡಿದೆ.

ಹೌದು. ಆಧಾರ್ ಜತೆ ಸಿಮ್ ಕಾರ್ಡ್‍ಗಳನ್ನು ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಲಿಂಕ್ ಆಗದೇ ಇದ್ದಲ್ಲಿ ಆ ಸಿಮ್ ಕಾರ್ಡ್ ಗಳನ್ನು 2018ರ ಫೆಬ್ರವರಿ 2 ರ ನಂತರ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಗ್ರಾಹಕರು ತಮ್ಮ ಸಿಮ್ ಕಾರ್ಡ್ ಜೊತೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯ. ಒಂದು ವೇಳೆ ತಪ್ಪಿಸಿದರೆ ಸಂಪರ್ಕ ಕಡಿತಗೊಳ್ಳುತ್ತದೆ. ಆಧಾರ್ ಅನ್ನು ಮೊಬೈಲ್ ನಂಬರ್ ಗೆ ಸಂಪರ್ಕಿಸಲು ಮೊಬೈಲ್ ಸಿಮ್ ಕಾರ್ಡ್ ಬಳಕೆದಾರರ ಆಧಾರ್ ಕಾರ್ಡ್ ನ ಪ್ರತಿ, ಜೋಡಣೆ ಮಾಡುವ ಸಂದರ್ಭದಲ್ಲಿ ಬರುವ ಒಟಿಪಿ ಮತ್ತು ಬಯೋಮೆಟ್ರಿಕ್ ಪರಾಮರ್ಶೆಗೆ ಬೆರಳಚ್ಚು ದಾಖಲೆಗಳು ಬೇಕು.

ಲಿಂಕ್ ಮಾಡಲು 4 ಹಂತಗಳು ನಿಮ್ಮ ಮೊಬೈಲ್ ಸೇವೆ ನೀಡುವ ಕಂಪನಿಯಿಂದ ಆಧಾರ್ ಲಿಂಕ್ ಮಾಡುವಂತೆ ಎಸ್‌ಎಂಎಸ್ ಬಂದಿದೆ ಎನ್ನುವುದಾದರೆ, ಸಮೀಪದ ಏರ್ ಟೆಲ್, ವೋಡಾಫೋನ್, ಐಡಿಯಾ ಅಥವಾ ನಿಮ್ಮ ಮೊಬೈಲ್ ಸೇವಾದಾತರ ರೀಟೇಲ್ ಸ್ಟೋರ್ ಗೆ ಭೇಟಿ ನೀಡಿ.

ಲೋಕನೀತಿ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆದ ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಅಪರಾಧಿಗಳು, ಭಯೋತ್ಪಾದಕರು ಸಿಮ್ ಕಾರ್ಡ್‍ಗಳನ್ನು ಬಳಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಎಲ್ಲ ಟೆಲಿಕಾಂ ಆಪರೇಟರ್ ಗಳು ಗ್ರಾಹಕರಿಗೆ ಮೊಬೈಲ್, ಇಮೇಲ್ ಅಥವಾ ಜಾಹೀರಾತುಗಳ ಮೂಲಕ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದೆ.

ಹಾಗಾಗಿ ಈಗ ಟೆಲಿಕಾಂ ಕಂಪನಿಗಳು ಆಧಾರ್ ಲಿಂಕ್ ಮಾಡಿಸಿಕೊಳ್ಳುವಂತೆ ಎಲ್ಲಾ ಗ್ರಾಹಕರಿಗೆ ಮೆಸೇಜ್, ಮೇಲ್, ಜಾಹಿರಾತಿನ ಮೂಲಕ ಸೂಚನೆ ನೀಡುತ್ತಿವೆ‌.ತನ್ನ ಅಧಿಕೃತ ಸ್ಟೋರುಗಳಲ್ಲಿ, ನಿರ್ದಿಷ್ಟ ಅಂಗಡಿಗಳಲ್ಲಿ ಗ್ರಾಹಕರಿಗೆ ಲಿಂಕ್ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.

ಆದ್ರೂ ಕೆಲವರಿಗೆ ಕೆಲಸದ ಒತ್ತಡದಲ್ಲಿ ಅಂಗಡಿಗೆ ಹೋಗಿ ಲಿಂಕ್ ಮಾಡಿಕೊಳ್ಳಲು ಕಷ್ಟವಾಗುತ್ತೆ ಆಗಿದ್ರೆ ಇಲ್ಲಿದೆ ನೋಡಿ ನೀವೇ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಲಿಂಕ್ ಮಾಡಿಕೊಳ್ಳಬಹುದು.

ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವ ವಿಧಾನ:-

ಮೊದಲಿಗೆ ಆಧಾರ್ ವೆಬ್‌ಸೈಟ್‌ ಓಪನ್ ಮಾಡಿಕೊಳ್ಳಿ…

ನಂತರ ಆಧಾರ್ ಅಪ್ಡೇಟ್‌ ಆಯ್ಕೆಯನ್ನು ಮಾಡಿಕೊಳ್ಳಿ.

ವೆಬ್‌ಸೈಟ್‌ ಓಪನ್ ಆಗುತ್ತೆ ಅಲ್ಲಿ ಕ್ಲಿಕ್ ಇಯರ್ ಬಟನ್ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ್ ನಂಬರ್ ಹಾಕಿ ಎಂಟರ್ ಮಾಡಿ.

ನಂತರ ಒಟಿಪಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ಗೆ ಒಟಿಪಿ ನಂಬರ್ ಬರುತ್ತೆ.ನಂತರ ಒಟಿಪಿ ಯನ್ನು ಎಂಟ್ರಿ ಮಾಡಿ.
ಆಮೇಲೆ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ನಿಮ್ಮ ಮಾಹಿತಿ ಹಾಕಿ ಮತ್ತು ಮೊಬೈಲ್ ನಂಬರ್ ಬದಲಿಸಿಕೊಳ್ಳಬಹುದು.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ