ನಮ್ಮ ಮೊಬೈಲ್’ಗಳಲ್ಲಿ ಹಾಕಿಕೊಳ್ಳುವ ಎಷ್ಟೋ appಗಳು, ನಮ್ಮ ನಿತ್ಯ ಜೀವನದಲ್ಲಿ ತುಂಬಾ ಪ್ರಭಾವ ಬೀರುತ್ತವೆ.ಅದರಲ್ಲಿ ಕೆಲವು appಗಳು, ಅವುಗಳ ಉಪಯೋಗಗಳು ನಿಮಗಾಗಿ…
1 . ಸ್ವಾರ್ಕಿಟ್ (Sworkit):-
ಇದು ಫಿಟ್ನೆಸ್ ಗೆ ಸಂಬಂಧಿಸಿದ app. ತೂಕ ಇಳಿಸಿಕೊಳ್ಳೋದು,ಹೆಚ್ಚು ಸ್ಟ್ರಾಂಗ್ ಹಾಗೋದು,ದೇಹಕ್ಕೆ ಫ್ಲೆಕ್ಸಿಬಿಲಿಟಿ ತಂದುಕೊಳ್ಳೋದು ಸೇರಿದಂತೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೆಚ್ಚು ವ್ಯಾಯಾಮಗಳು ಇದರಲ್ಲಿವೆ.ನಿಮ್ಮ ಸಮಸ್ಯೆಯನ್ನು ತಿಳಿಸಿದರೆ ಅದಕ್ಕೆ ತಕ್ಕಂತೆ ವ್ಯಾಯಾಮಗಳ ಪ್ಲಾನ್ ನ್ನು ಈ app ತೋರಿಸುತ್ತದೆ.ಪ್ರತಿಯೊಂದು ವ್ಯಾಯಾಮವನ್ನು ಮಾಡುವುದನ್ನು ಕೂಡ ಇದೇ ತೋರಿಸಿಕೊಡುತ್ತದೆ.

2 .ಯಮ್ಮ್ಲಿ (Yummly) :-
ಡಯಟ್ ಗೆ ಸಂಬಂಧಿಸಿದ app.ಆರೋಗ್ಯಕರ ರೆಸಿಪಿಗಳು ಇದರಲ್ಲಿದೆ.ಪೌಷ್ಟಿಕಾಂಶ ಆಹಾರ ನಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಬೇಕು,ಅದು ಯಾವ ಆಹಾರ ಪದಾರ್ಥಗಳಲ್ಲಿರುತ್ತೆ,ಆ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಏನೆಲ್ಲಾ ರೆಸಿಪಿ ಮಾಡಬಹುದು ಎಂಬ ವಿವರಗಳನ್ನು ಇದು ತಿಳಿಸಿಕೊಡುತ್ತದೆ.

3 .ಗುಡ್ ಮಾರ್ನಿಂಗ್ ಅಲರಾಂ ಕ್ಲಾಕ್:-
ಇದು ನಿದ್ದೆಗೆ ಸಂಬಂಧಿಸಿದ app .ಇದರಲ್ಲಿ ನಿಮ್ಮ ನಿದ್ದೆಯ ಅವಧಿಯನ್ನು ಪತ್ತೆ ಮಾಡಬಹುದು.ದೇಹಕ್ಕೆ ಚೆನ್ನಾಗಿ ನಿದ್ದೆ ಸಿಕ್ಕಿದೆಯೇ ಇಲ್ವಾ ಅನ್ನೋದು ಕೂಡ ತಿಳಿಯುತ್ತದೆ.

4 .ಕ್ಲೂ ಪಿರಿಯಡ್ಸ್ ಟ್ರಾಕರ್:-
ಋತುಚಕ್ರಕ್ಕೆ ಸಮಂದಿಸಿದ app .ಪಿರಿಯಡ್ಸ್ ಸಮಯದಲ್ಲಿ ದೇಹದಲ್ಲಿ ಉಂಟಾಗುವ ಮಾನಸಿಕ ಏರುಪೇರುಗಳ ಬಗ್ಗೆ ತಿಳಿಯಬಹುದು.ಹಾಗೂ ಈ ಸಮಸ್ಯೆಗಳಿಂದ ಹೊರಬರುವ ಪ್ಲಾನ್ಗಳನ್ನು ಕೂಡ ತಿಳಿಯಬಹುದು.ಋತುಚಕ್ರಕ್ಕೆ ಸಂಬಂಧಿಸಿದಂತೆ ನಮ್ಮ ಆಹಾರಕ್ರಮ ಮತ್ತು ಚಟುವಟಿಕೆಗಳು ಹೇಗಿರಬೇಕೆಂಬುದನ್ನು ನಿರ್ದೇಶಿಸುತ್ತದೆ.ಇದಲ್ಲದೆ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳಿಗೂ ಕೂಡ ಟಿಪ್ಸ್ ಇಲ್ಲಿ ಸಿಗುತ್ತೆ.
