ಉಪಯುಕ್ತ ಮಾಹಿತಿ

ನಿಮ್ಮ ಮುಖದ ಮೇಲಿನ ಅನಾವಶ್ಯಕ ಕೂದಲನ್ನು ತೆಗೆಯಲು ಹೀಗೆ ಮಾಡಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

1105

ಪ್ರತಿಯೊಬ್ಬ ಮಹಿಳೆಯು ತಾನು ಸುಂದರವಾಗಿ ಕಾಣಲು ಬಯಸುವುದು ಸಹಜ. ತತ್ವಚೆಗೆ ಹೆಚ್ಚಿನ ಅರಿಕೆಯನ್ನ ಮಾಡುತ್ತಾರೆ. ಆದರೆ ಮುಖದ ಅಂದವನ್ನ ಮುಖದ ಮೇಲಿನ ಬೇಡವಾದ ಕೂದಲುಗಳು ಹಾಳುಮಾಡುತ್ತವೆ. ಇಂತಹ ಬೇಡವಾದ ಕೂದಲುಗಳನ್ನ ತೆಗೆಯಲು ಹಲವು ಬಗೆಯ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಇದಕ್ಕೆ ಮನೆಯಲ್ಲೇ ಪರಿಹಾರವಿದೆ ಎಂಬುದನ್ನ ಮರೆತಿರುತ್ತಾರೆ.

ನಿಮ್ಮ ಮುಖದಲ್ಲಿನ ಬೇಡವಾದ ಕೂದಲನ್ನ ನಿವಾರಿಸಲು ಇಲ್ಲಿದೆ ನೋಡಿ ಸುಲಭ ಉಪಾಯ…

* ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಲಿಂಬೆರಸ. ಸಕ್ಕರೆಯನ್ನು ಸಂಪೂರ್ಣವಾಗಿ ಲೀನವಾಗದಂತೆ ಕದಡಿ. ದೊರಗಾದ ಸಕ್ಕರೆಯ ತುಣುಕುಗಳು ಸ್ಕ್ರಬ್ನಂತೆ ಸಹಾಯ ಮಾಡುವುದು.ಈ ಮಿಶ್ರಣಕ್ಕೆ ಜೇನು ತುಪ್ಪವನ್ನು ಸೇರಿಸಿ, ಅಗತ್ಯ ಭಾಗಗಳಲ್ಲಿ ಮಾತ್ರ ಹಚ್ಚಿರಿ. 10 ನಿಮಿಷಗಳ ಬಳಿಕ ನೇರವಾಗಿ ಸ್ಕ್ರಬ್ ಮಾಡಿಕೊಳ್ಳಿ ವಾರದಲ್ಲಿ ಮೂರು ಬಾರಿಯಾದರೂ ಇ ರೀತಿ ಸ್ಕ್ರಬ್ ಮಾಡಿಕೊಳ್ಳುವುದರಿಂದ ನಿರೀಕ್ಷಿತ.

*  ಎರಡು ಚಮಚ ಅರಿಶಿನ ಪುಡಿ ಮತ್ತು ಸ್ವಲ್ಪ ಕಡಲೆಹಿಟ್ಟನ್ನು ಸೇರಿಸಿ ಬಿಸಿ ನೀರಿನಲ್ಲಿ ಕಲೆಸಿ ಮಿಶ್ರ ಮಾಡಿ. ಮುಖದ ಮೇಲೆ ಲೇಪಿಸಿದ ಈ ಮಿಶ್ರಣವು 70 % ಒಣಗುತ್ತಿದ್ದಂತೆಯೇ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ಈ ಮಿಶ್ರಣದ ಬಳಕೆಯು ನಿಮ್ಮ ಅನಗತ್ಯವಾದ ರೋಮದ ಬೆಳವಣಿಗೆಯನ್ನು ತಡೆಯುತ್ತದೆ.

*  ಮುನ್ನಾ ದಿನ ನೆನೆಸಿಟ್ಟ ಕಡಲೆ ಬೇಳೆಯನ್ನು ಅರೆದಿಟ್ಟುಕೊಳ್ಳಿ. ಆಲೂಗಡ್ಡೆ ರಸವನ್ನು ಹಿಂಡಿ ತೆಗೆದು ಆ ರಸವನ್ನು ಕೂಡ ಈ ಹಿಟ್ಟಿಗೆ ಬೆರೆಸಿಕೊಳ್ಳಿ. ಇದಕ್ಕೆ ನಾಲ್ಕು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮುಖ ಹಾಗೂ ಶರೀರದ ಇತರ ಅಗತ್ಯ ಭಾಗಗಳಿಗೆ ಲೇಪಿಸಿ. ಒಣಗಿದ ಬಳಿಕ ಮುಖದ ಪೂರಾ ತಿಕ್ಕಿ ಮಿಶ್ರಣವನ್ನು ಕೆರೆದು ತೆಗೆಯಿರಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಹೊಸ ಜಿಯೋ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದು?ಈ ಫೋನ್’ನಲ್ಲಿ ಬೇರೆ ಕಂಪನಿ ಸಿಮ್ ಹಾಕ್ಬಹುದಾ???

    ಜಿಯೋ ಕಂಪನಿ ಫ್ರೀ ಫೋನ್ ಕೊಡುವುದಾಗಿ ಹೇಳಿದ ದಿನವೇ, ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನಂದರೆ ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದೆಂದು? ಅಂದರೆ ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.

  • ಸುದ್ದಿ

    ಪ್ರಪಂಚದಲ್ಲೇ ಅತಿ ದುಬಾರಿ ಚಾಕೊಲೇಟ್ ಇದರ ಬೆಲೆ ಕೇಳಿದರೆ ಶಾಕ್ ಆಗ್ತೀರಾ..!

    ದೀಪಾವಳಿಯ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ವ್ಯವಹರಿಸುವ ಐಟಿಸಿ ಕಂಪನಿಯು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಅನ್ನು ಬಿಡುಗಡೆ ಮಾಡಿದೆ. ಚಾಕೊಲೇಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು 4.3 ಲಕ್ಷ ರೂ. ಕಂಪನಿಯು ಫೇಬಲ್ ಬ್ರಾಂಡ್ನೊಂದಿಗೆ ಚಾಕೊಲೇಟ್ ಅನ್ನು ಪರಿಚಯಿಸಿದೆ. ದುಬಾರಿ ಚಾಕೊಲೇಟ್ ವಿಷಯದಲ್ಲಿ, ಐಟಿಸಿಯ ಈ ಉತ್ಪನ್ನವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರಿಕೊಂಡಿದೆ.  ಇಂತಹ ದುಬಾರಿ ಚಾಕೊಲೇಟ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವುದು ಇದೇ ಮೊದಲೇನಲ್ಲ. ಈ ಮೊದಲು 2012 ರಲ್ಲಿ, ಡೆನ್ಮಾರ್ಕ್‌ನ ಕುಶಲಕರ್ಮಿ ಚಾಕೊಲೇಟಿಯರ್ ಫ್ರಿಟ್ಜ್ ನಿಪ್ಸ್‌ಚೈಲ್ಡ್…

  • ಸುದ್ದಿ

    ಬೈಕ್ ಚಾಲನೆ ಮಾಡಿಕೊಂಡು ‘ಸೆಲ್ಯೂಟ್’ ಮಾಡಿದ್ರೆ ಭಾರಿ ದಂಡ ಗ್ಯಾರಂಟಿ…!

    ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…

  • ಉಪಯುಕ್ತ ಮಾಹಿತಿ

    ನಿಮ್ಮ ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ಅನ್ನು ಸುಲಭವಾಗಿ ಹೋಗಲಾಡಿಸಬಹುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ನಿಮ್ಮ ಮುಖ ಸುಂದರವಾಗಿದ್ದರೂ ಈ ಬ್ಲಾಕ್ ಹೆಡ್ಸ್ ನಿಂದಾಗಿ ಕಿರಿಕಿರಿಯಾಗುತ್ತದೆ.. ಇದರಿಂದ ಕೆಲವು ಬಾರಿ ಮುಜುಗರಕ್ಕೂ ಒಳಗಾಗುತ್ತೇವೆ.. ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ತೆಗಿಸಲು ಸಾಧ್ಯವಿಲ್ಲ.. ಅದರಲ್ಲೂ ಹುಡುಗರು ಪಾರ್ಲರ್ ಗಳಲ್ಲಿ ತೆಗೆಸಲು ಮುಜುಗರವೂ ಆಗುತ್ತದೆ.. ಇದಕ್ಕಾಗಿಯೇ ಮನೆ ಮದ್ದುಗಳ ಮೊರೆ ಹೋಗುವುದೇ ಒಳ್ಳೆಯದು.. ನಿಮಗಾಗಿಯೇ ಇಲ್ಲಿ ಕೆಲವು ಮನೆಮದ್ದುಗಳ ಮಾಹಿತಿ ನೀಡಿದ್ದೇವೆ ನೋಡಿ..

  • ಸುದ್ದಿ

    ದೇಶದ 2 ನೇ ಅತಿ ದೊಡ್ಡ ರೈಲ್ವೆ ಬ್ರಿಡ್ಜ್ ಉದ್ಘಾಟನೆಗೆ ಸಿದ್ಧ….!

    ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ…

  • ಜ್ಯೋತಿಷ್ಯ

    ತಾಯಿ ಚಾಮುಂಡಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ

    ಮೇಷ ರಾಶಿ ಭವಿಷ್ಯ (Friday, December 31, 2021) ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತು ನಿಮ್ಮ ಸಂಗಾತಿಯ ಕಣ್ಣುಗಳು ಇಂದು ನಿಮಗೆ ಏನೋ…