News

ವಿಧಿವಶರಾದ ಬಿಜೆಪಿ ಹಿರಿಯ ಮುಖಂಡ ಅನಂತ್ ಕುಮಾರ್ ಬಗ್ಗೆ ಕಣ್ಣೀರಟ್ಟ ಮೋದಿ ಬಾವುಕರಾಗಿ ಹೀಗೆ ಹೇಳಿದ್ರು…
ಕೇಂದ್ರ ಸಚಿವ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅಸ್ತಂಗತ…
ದಿನ ಭವಿಷ್ಯ ಸೋಮವಾರ ಇಂದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟ ಸಂಖ್ಯೆಯನ್ನು ತಿಳಿಯಿರಿ…
ಭಾನುವಾರದ ದಿನ ಭವಿಷ್ಯ..ಈ ದಿನದ ನಿಮ್ಮ ನಕ್ಷತ್ರ ಭವಿಷ್ಯ ಶುಭವೋ, ಅಶುಭವೋ ನೋಡಿ ತಿಳಿಯಿರಿ…
ದಿನ ಭವಿಷ್ಯ ಶನಿವಾರ. ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ..!
ಕೆಲವೇ ದಿನಗಳಲ್ಲಿ ಕಡಿಮೆ ಮಾಡಿಕೊಳ್ಳಿ 5 ಕೆಜಿ ತೂಕ..!ಹೇಗೆ ಗೊತ್ತಾ..?
ಸಿಕ್ಕಿಬಿದ್ದ ವಿನೋದ್ ರಾಜ್ ರವರ ಹಣವನ್ನು ಲಪಟಾಯಿಸಿದ್ದ ಕಳ್ಳ..!
ದಿನ ಭವಿಷ್ಯ ಶುಕ್ರವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…
ಸುಟ್ಟ ಗಾಯಕ್ಕೆ ನಿಮ್ಮ ಮನೆಯಲ್ಲೇ ಇವೆ ಸುಲಭ ಸರಳ ಮನೆ ಮದ್ದುಗಳು..!
ಡೇಟ್ ಫಿಕ್ಸ್ ಆಯ್ತು ಜೂನಿಯರ್ ರಾಕಿಂಗ್ ಸ್ಟಾರ್ ಆಗಮನಕ್ಕೆ..!
ಕರ್ನಾಟಕ

ನಿಮ್ಮ ಬೆರಳ ತುದಿಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳು ಲಭ್ಯ!ಹೇಗೆ ಅಂತೀರಾ?ಈ ಲೇಖನಿ ಓದಿ….

574

ನಿಮ್ಗೆ ಗೊತ್ತಾ, ನಮ್ಮಗಳ ಮನೆ ಪಕ್ಕದಲ್ಲಿರುವ ಗ್ರಾಮ ಪಂಚಾಯತಿ ಕೇಂದ್ರದಲ್ಲಿ, ನಮ್ಮ  ಗ್ರಾಮೀಣ ಭಾಗದ ಜನರಿಗೆ ಏನೆಲ್ಲಾ ಸವಲತ್ತುಗಳು ಸಿಗುತ್ತವೆ ಅಂತಾ?

ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.

ನಮ್ಮ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಏನೆಲ್ಲಾ ಸೌಲಭ್ಯ ಸಿಗುತ್ತೆ ಅನ್ನೋದರ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ. ಮುಂದೆ ಓದಿ…..

  • 100 ಬಾಪೂಜಿ ಕೇಂದ್ರ ಬಗ್ಗೆ  ತಿಳಿದುಕೊಳ್ಳೋಣ  :-

ಜನರು ತಮಗೆ ಬೇಕಿರುವ ಅಗತ್ಯ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿ, ನಾಡಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವುಗಳು ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲೇ ದೊರೆಯುವಂತೆ ಮಾಡಿರುವ ಸೇವೆಗೆ ‘ಪಂಚಾಯಿ- 100 ಬಾಪೂಜಿ ಸೇವಾ ಕೇಂದ್ರ’ ಎಂದು ಹೆಸರಿಡಲಾಗಿದೆ. ಈ ಸೇವೆ ಈಗಾಗಲೇ ಜುಲೈ 1 ರಿಂದ 2 ಸಾವಿರ ಗ್ರಾ.ಪಂ.ಗಳಲ್ಲಿ ಸೇವೆಗೆ ಚಾಲನೆ ನೀಡಲಾಗಿದೆ. ಒಟ್ಟು 100 ಸೇವೆಗಳು ಲಭ್ಯವಾಗಲಿವೆ.

  • ಕಂದಾಯ ಸೇವೆ  :-

ಸಾರ್ವಜನಿಕ ಕೋರಿಕೆ ಸ್ವೀಕರಿಸುವ ಸೇವಾ ಕೇಂದ್ರಗಳು ಆ ಕೋರಿಕೆಯನ್ನು ನಾಡಕಚೇರಿಯು ದೃಢೀಕರಿಸಿದ ದಾಖಲೆಯನ್ನು ಪಮಚತಂತ್ರ ತಂತ್ರಾಂಶಕ್ಕೆ ವರ್ಗಾವಣೆ ಮಾಡಲಿದ್ದು ಬಳಿಕ ಆ ದಾಖಲೆಗಲನ್ನು ಅಪೇಕ್ಷಿತರಿಗೆ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಕೊಡ ಮಾಡಲಾಗುವುದು.

  • ಇನ್ನಿತರ ಸೇವೆಗಳು ಯಾವುವು ನೋಡೋಣ:-

ಜಾತಿ. ಆದಾಯ, ವಾಸಸ್ಥಳ, ಗೇಣಿ ರಹಿತ, ಜೀವಂತ, ಬೇಸಾಯ ಕುಟುಂಬ ಸದಸ್ಯರ ದೃಢೀಕರಣ, ಜಮೀನು ಇಲ್ಲದಿರುವಿಕೆ, ನಿರುದ್ಯೋಗಿ, ಕೃಷಿ ಕಾರ್ಮಿಕ, ಭೂಹಿಡುವಳಿ ಪ್ರಮಾಣಪತ್ರ, ವಸತಿ, ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ, ವಂಶವೃಕ್ಷ, ಬೆಳೆ, ಅಂಗವೈಕಲ್ಯ, ವಿಧವಾ ವೇತನ, ಸಧ್ಯಾ ಸುರಕ್ಷಾ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ವೃದ್ಧಪ್ಯ ವೇತನ, ಮೈತ್ರಿ, ಮನಸ್ವಿನಿ ಸೇರಿ ಒಟ್ಟು 40 ಸೇವೆ ಮತ್ತು ಸೌಲಭ್ಯಗಳಿಗೆ ಪ್ರಮಾಣಪತ್ರಗಳು ಈ ಕೇಂದ್ರದಲ್ಲಿ ಸಿಗಲಿವೆ.

  • ಗ್ರಾಮೀಣಭಿವೃದ್ಧಿ ಸೇವೆ ಹೇಗೆ?

ಕಟ್ಟಡ ನಿರ್ಮಾಣ ಪರವಾನಗಿ, ನೀರಿನ ಸಂಪರ್ಕಕ್ಕೆ ಅರ್ಜಿ, ಎಸ್ಕಾಂಗೆ ನಿರಾಕ್ಷೇಪಣೆ ಪತ್ರ, ವಸತಿ ಯೋಜನೆಗೆ ಅರ್ಜಿ, ಉಚಿತ ನಿವೇಶನ ಪಡೆಯಲು ಅರ್ಜಿ, ಆಸ್ತಿ ತೆರಿಗೆ ಪಾವತಿ, ಭೂಪರಿವರ್ತನೆ ಕೋರಿಕೆ ಅರ್ಜಿ, ನೀರಿನ ಶುಲ್ಕ ಪಾವತಿ, ಟ್ರೇಡ್ ಲೈಸನ್ಸ್ ನವೀಕರಣ, ಜಾಹಿರಾತು ಪರವನಾಗಿ, ವಿದ್ಯಾರ್ಥಿಗಳಿಗೆ ದೂರ ಪ್ರಮಾಣಪತ್ರ, ಬೀದಿದೀಪ ನಿರ್ವಹಣೆ ಸೇರಿ ಒಟ್ಟು 40 ಗ್ರಾಮೀಣವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇವೆಗಳು ಈ ಕೇಂದ್ರಗಳಲ್ಲಿ ಸಿಗಲಿವೆ.

  • ಬಿಲ್ ಪಾವತಿ ಕೂಡ ಮಾಡಬಹದು…

ಜೀವ ವಿಮೆ, ವಾಹನ ವಿಮೆ, ವಿದ್ಯುತ್ ಬಿಲ್, ಮೊಬೈಲ್ ಮತ್ತು ಡಿಟಿಎಚ್ ರಿಚಾರ್ಜ್, ಬಸ್ – ರೈಲು- ವಿಮಾನ ಬುಕ್ಕಿಂಗ್, ಪಡಿತರ ಕಾರ್ಡ್ ಅರ್ಜಿ, ಆಧಾರ್ ಕಾರ್ಡ್ ತಿದ್ದುಪಡಿ, ಹಣ ವರ್ಗಾವನಣೆ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸೇರಿ 17 ಸೇವೆಗಳೂ ಇಲ್ಲಿ ಸಿಗಲಿವೆ.

 

About the author / 

Basavaraj Gowda

Follow Us on Facebook

Categories

ಇಂದಿನ ಅವಮಾನ
0C
humidity: 0%
wind: 0km/h
H 0 • L 0

Date wise

  • 6ನೇ ವೇತನ ಆಯೋಗದ ಗಾಳಿಸುದ್ದಿಗೆ ಕಿವಿ ಕೊಡಬೇಡಿ – ಇಲ್ಲಿದೆ ನಿಜವಾದ ಭಜೆಟ್ನ ಸುದ್ದಿ

    ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.

ಏನ್ ಸಮಾಚಾರ