ದೇಹದಲ್ಲಿ ಪ್ರೊಟೀನ್ ಮತ್ತು ಪೋಷಕಾಂಶದ ಕೊರತೆಯಿದ್ದರೆ ಎತ್ತರ ಬೆಳೆಯುವುದು ಕಷ್ಟ. ಎತ್ತರವಾಗಬೇಕೆಂದು ಎಷ್ಟೋ ಪ್ರಯತ್ನ ಮಾಡಿದ್ದರೂ ಅದು ಫಲ ಕೊಟ್ಟಿರುವುದಿಲ್ಲ.
ಯಾರದ್ದೋ ಎದುರಿಗೆ ನಿಂತು ಅವರಷ್ಟು ಉದ್ದ ಇರಬೇಕಿತ್ತು ಅಂದು ಕೊಳ್ಳುತ್ತೀರ. ಅದು ಅಸಾಧ್ಯ ಅನ್ನುವ ಸಂಗತಿ ಕೂಡ ಗೊತ್ತೇ ಇದೆ. ಆದರೂ ಮನಸ್ಸು ಸಮಾಧಾನಗೊಳ್ಳುವುದಿಲ್ಲ.

ಕೊನೆಗೆ ಹೈಹೀಲ್ಡ್ ಚಪ್ಪಲಿಯಲ್ಲೇ ಎತ್ತರವಾಗಿ ಸಮಾಧಾನ ಪಟ್ಟುಕೊಂಡು ಬಿಡುತ್ತೀರ. ಆದರೆ ಎಲ್ಲರೂ ನಿಮ್ಮಂತೆ ಅಲ್ಲ. ಎತ್ತರಾಗಲಿಕ್ಕಾಗಿಯೇ ಒಂದಿಷ್ಟು ಹಾರ್ಮೋನ್ ಔಷಧಿಗಳ ಮೊರೆ ಹೋಗುತ್ತಾರೆ. ಎತ್ತರ ಹೆಚ್ಚಿಸುವ ಸಿದ್ಧ ಆಹಾರ ಪದಾರ್ಥಗಳನ್ನು ಸೇವಿಸತಕ್ಕದು.
ಆದರೆ ನಿಮಗೆ ಗೊತ್ತಾ? ಕೆಲವು ರೀತಿಯ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹದ ಎತ್ತರವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು. ಆ ಆಹಾರಗಳು ಯಾವುವೆಂದು ಇಲ್ಲಿ ತಿಳಿದುಕೊಳ್ಳಿ. ಎತ್ತರ ಹೆಚ್ಚಿಸುವ ಆಹಾರಗಳು:
ಎತ್ತರ ಹೆಚ್ಚಿಸುವ ಆಹಾರಗಳು:
*ವಿಟಮಿನ್ ಡಿ:-

ಎತ್ತರ ಹೆಚ್ಚಿಸುವಲ್ಲಿ ಅತಿ ಅಗತ್ಯವಿರುವುದು ವಿಟಮಿನ್ ಡಿ. ಕ್ಯಾಲ್ಸಿಯಂ ದೇಹಕ್ಕೆ ಹೆಚ್ಚು ಸೇರಿದಷ್ಟು ಮೂಳೆಗಳ ಬೆಳವಣಿಗೆಗೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದ್ದರಿಂದ ವಿಟಮಿನ್ ಡಿ ಅಂಶವನ್ನು ಹೊಂದಿರುವ ಮೀನು, ಧಾನ್ಯಗಳು, ಮೊಟ್ಟೆ, ಟೋಫು, ಸೋಯಾ ಹಾಲು, ಸೋಯಾ ಬೀನ್, ಅಣಬೆ, ಬಾದಾಮಿ ಸೇವನೆ ಒಳ್ಳೆಯದು.
* ಹಾಲು, ಓಟ್ ಮೀಲ್:-

ಎತ್ತರ ಏರಬೇಕೆಂದರೆ ದೇಹಕ್ಕೆ ಪ್ರೊಟೀನ್ ಅಂಶ ಅತ್ಯವಶ್ಯಕ. ಪ್ರೊಟೀನ್ ಹೆಚ್ಚಿದ್ದಷ್ಟು ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತದೆ. ಆದ್ದರಿಂದ ಪ್ರೊಟೀನ್ ಹೆಚ್ಚಿರುವ ಹಾಲು, ಚೀಸ್, ಬೀನ್ಸ್, ಕುಂಬಳಕಾಯಿ, ಕಲ್ಲಂಗಡಿಯ ಬೀಜ ಇವುಗಳನ್ನು ತಿನ್ನಬಹುದು. ಚಿಕನ್, ಓಟ್ ಮೀಲ್, ಸೊಯಾ ಬೀನ್ ಮತ್ತು ಇನ್ನಿತರ ದವಸಗಳು ಎತ್ತರವನ್ನು ಹೆಚ್ಚಿಸುತ್ತದೆ.
* ಪಾಲಾಕ್, ಕ್ಯಾರೆಟ್:-

ದೇಹದ ಅಂಗಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಬೇಕೆಂದರೆ ವಿಟಮಿನ್ ಎ ಸಹಾಯ ಬೇಕೇ ಬೇಕು. ವಿಟಮಿನ್ ಎ ಪೂರಿತ ಆಹಾರ ಸೇವನೆಯಿಂದ ಹೊಳೆಯುವ ತ್ವಚೆಯನ್ನೂ ಪಡೆಯಬಹುದು. ಪಾಲಾಕ್, ಬೀಟ್ ರೂಟ್, ಕ್ಯಾರೆಟ್, ಚಿಕನ್, ಪಪ್ಪಾಯ, ಪೀಚ್, ಹಾಲು, ಟೊಮೆಟೊ, ಬಟಾಣಿ, ಅಪ್ರಿಕಾಟ್ ಮುಂತಾದವುಗಳಲ್ಲಿ ವಿಟಮಿನ್ ಎ ಹೆಚ್ಚಿದೆ. ಟೊಮೆಟೊ, ಕ್ಯಾರೆಟ್, ಬೀಟ್ ರೂಟ್ ಇವುಗಳ ಜ್ಯೂಸ್ ಗಳನ್ನೂ ಸೇವಿಸಬಹುದು.
* ಮೊಟ್ಟೆ, ಹಾಲು: –

ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಹಾಲು, ಚೀಸ್, ಮೊಟ್ಟೆಯನ್ನು ಪ್ರತಿ ದಿನ ಸೇವಿಸುತ್ತಿದ್ದರೆ ಎತ್ತರ ಹೆಚ್ಚುತ್ತದೆ. ಈ ಆಹಾರಗಳು ರುಚಿಕರ ಮತ್ತು ಹೊಟ್ಟೆ ತುಂಬುವುದಷ್ಟೇ ಅಲ್ಲ, ಆರೋಗ್ಯವನ್ನು ಹೆಚ್ಚಿಸುತ್ತದೆ.
* ಬಾಳೆಹಣ್ಣು: –

ದೈಹಿಕ ಬೆಳವಣಿಗೆಗೆ ಖನಿಜಾಂಶದ ಅಗತ್ಯ ಹೆಚ್ಚಿದೆ. ಇದು ದೇಹದಲ್ಲಿ ರಕ್ತ ಸಂಚಲನವನ್ನೂ ಅಭಿವೃದ್ಧಿ ಪಡಿಸುತ್ತದೆ. ಆದ್ದರಿಂದ ಖನಿಜಾಂಶ ಹೆಚ್ಚಿರುವ ಬೀನ್ಸ್, ಬ್ರೊಕೊಲಿ, ಪಾಲಾಕ್, ಹೂಕೋಸು, ಕುಂಬಳಕಾಯಿ, ಕ್ಯಾರೆಟ್, ಬಾಳೆಹಣ್ಣು, ದ್ರಾಕ್ಷಿ ಇಂತಹ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು.