ಇಲ್ಲ, ನಾನು ವಾಟ್ಸ್ಯಾಪ್ ಯೂಸ್‌ಮಾಡ್ತಿಲ್ಲ… ಹಾಗಂತ ಯಾರಾದರು ಹೇಳಿದರೆ , ಇವನ್ಯಾರೋ ಗುಗ್ಗು ಅಂತ ನೋಡೋ ಕಾಲ ಇದು.ಯಾಕಂದ್ರೆ, ಹಳ್ಳಿ ಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್‌ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್‌ಅನ್ನೋದು ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.
ಒಂದೆರಡು ಗಂಟೆ ಇಂಟರ್ನೆಟ್‌ಆಫ್ ಮಾಡಿ ಸುಮ್ಮನೆ ಕುಳಿತುಕೊಳ್ಳಿ. ವಾಟ್ಸ್ಯಾಪ್ ಕಡೆಗೆ ನಿಮ್ಮ ಗಮನ ಎಳೆಯದಿದ್ದರೆ, ನೀವು ಈ ಗೀಳಿನಿಂದ ಸೇಫ್ ಅಂತ ಅರ್ಥ. ಹಾಗಾದ್ರೆ, ಅತಿಯಾದ ವಾಟ್ಸ್ಯಾಪ್‌ಬಳಕೆಯಿಂದ ನಿಮಗೆ ಏನೇನು ನಷ್ಟ ಆಗ್ತಿದೆ ಗೊತ್ತಾ? ನಿಮ್ಮನ್ನು ವೇಸ್ಟ್‌ಆಗಿಸ್ತಿದೆ ವಾಟ್ಸ್ ಆಪ್!
1. ಸಮಯ ಹಾಳು:-
ನೋಡೋಣ, ಯಾರಾದ್ರೂ ಆನ್‌ಲೈನ್‌ಇದ್ದಾರ ಅಂತ ಚೆಕ್ ಮಾಡುವುದರಲ್ಲೆ 30 ನಿಮಿಷ ವ್ಯರ್ಥವಾಗುತ್ತದೆ. ದಿನಕ್ಕೆ ಅರ್ಧ ಗಂಟೆ ಅಂತಾದ್ರೆ ತಿಂಗಳಿಗೆ ಎಷ್ಟಾಗುತ್ತೆ ಲೆಕ್ಕ ಹಾಕಿ? ಪ್ರತಿ ಸಲ ಆನ್ ಲೈನ್‌ಗೆ ಬಂದಾಗ , ಯಾರಾದ್ರೂ ಚಾಟ್‌ಗೆ ಸಿಗ್ತಾರಾ ಅಂತ ಹುಡುಕೋದು ಕೂಡ ಕೆಲವರಿಗೆ ಚಟವಾಗಿಬಿಟ್ಟಿದೆ. ಹೀಗೆ ಮಾಡೂ ದಿಂದ ಆಗೂ ಪ್ರಯೋಜನವಾದ್ರೂ ಏನು? ಅಂತಿಮವಾಗಿ ನಿಮಗೆ ಸಿಕ್ಕಿದ್ದಾದರೂ ಏನು? ಸೊನ್ನೆ! 00000000000000000000000000000000000000000
2. ಡಿಪಿ: ಪೋಟೂ ಅಷ್ಟೇ ಅಲ್ಲ!
ವಾಟ್ಸ್ವಾಪ್ ಡಿಪಿ ಅಥವಾ ಡಿಸ್‌ಪ್ಲೇ ಪಿಕ್ಚರ್‌ಈಗ ಕೇವಲ ಪೋಟೂ ಮಾತ್ರ ಆಗಿ ಉಳಿದಿಲ್ಲ. ನಿಮ್ಮ ಬದುಕನ್ನು ಎಲ್ಲರೆದುರು ಬಿಂಬಿಸುವ ಸಾಧನವಾಗಿ ಬದಲಾಗಿದೆ. ಎಲ್ಲರೂ ಮೆಚ್ಚುವಂಥ ಫೋಟೊವನ್ನು ಸೆಲೆಕ್ಟ್ ಮಾಡುವುದೇ ದೊಡ್ಡ ಸವಾಲು. ಈಗಂತೂ ನಿಮ್ಮ ಡಿಪಿಯನ್ನು ಯಾರ್ಯಾರು ನೋಡಿದ್ದಾರೆ, ನೋಡಿಲ್ಲ ಅಂತಲೂ ಗೊತ್ತಾಗುತ್ತೆ. ಅಯ್ಯೋ ಅವನು/ ಅವಳು ನನ್ನ ಡಿಪಿ ಚೆಕ್‌ಮಾಡಿಲ್ಲ. ಇನ್ನೂ ಚೆಂದದ ಪೋಟೂ ಹಾಕ್ತೀನಿ ಅಂತ ಅರ್ಧ ಗಂಟೆಗೊಮ್ಮೆ ಡಿಪಿ ಬದಲಿಸುತ್ತಾರೆ. ಜಗ ಮೆಚ್ಚುವ ಡಿಪಿಗಾಗಿ ಹಂಬಲಿಸುತ್ತಾ, ಅದಕ್ಕಾಗಿಯೇ ಫೋಟೊ ಕ್ಲಿಕ್ಕಿಸಿಕೊಳ್ಳುವವರೂ ಇದ್ದಾರೆ. ಇದರಿಂದ ನಿಮ್ಮೊಳಗೆ ಆತ್ಮರತಿ ಬೆಳೆಯುತ್ತಿದೆ. ಹೊರಜಗತ್ತಿಗೆ ನಿಮ್ಮ ಮೇಲಿನ ಗಂಭೀರತೆ ಹೊರಟುಹೋಗುತ್ತಿದೆ.
3. ಪೋನೆ ಇಲ್ಲ, ಮೆಸೇಜೆ ಎಲ್ಲಾ…
ವಾಟ್ಸ್ಯಾಪ್‌ಬರುವುದಕ್ಕಿಂತಲೂವು ಮುಂಚೆ, ಪ್ರೀತಿ ಪಾತ್ರರಿಗೆ ಆಗೂಮ್ಮೆ , ಈಗೊಮ್ಮೆಯಾದರೂ ಫೋನ್ ಮಾಡುತ್ತಿದ್ದೆವು. ಆದರೆ, ಈಗ ವಾಟ್ಸ್ಯಾಪ್‌ನಲ್ಲಿ ಮೆಸೇಜ್‌ಕಳಿಸಿದರೆ ಮುಗಿಯಿತು. ಇನ್ನೂ ದುರಂತವೆಂದರೆ, ಮದುವೆ ಕರೆಯೋಲೆಗಳೂ ವಾಟ್ಸ್ಯಾಪ್‌ನಲ್ಲೇ ತಲುಪುತ್ತಿವೆ, ಸಂಭಂದಗಳು ಗಟ್ಟಿಯಾಗಿಸಬೇಕಿದ್ದ ವಾಟ್ಸ್ಯಾಪ್‌ನಿಂದಲೇ ಮನುಷ್ಯ- ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ವ್ಯಕ್ತಿ ತನಗೆ ಗೊತ್ತಿಲ್ಲದಂತೆ, ಆತ್ಮೀಯನೊಂದಿಗೆ ದೂರವಾಗುತ್ತಿದ್ದಾನೆ.
4. ಟಿಕ್‌ಟಿಕ್‌ಬ್ಲೂ ಟಿಕ್….
ನಾನು ಮೆಸೇಜ್‌ಕಳಿಸಿ ಆಗಲೇ ಅರ್ಧ ಗಂಟೆಯಾಯ್ತು. ಇನ್ನೂ ಸಿಂಗಲ್‌ಟಿಕ್‌ಇದೆ, ಬ್ಲೂ ಟಿಕ್ ಬಂದಿದೆ, ಆದ್ರೂ ರಿಪ್ಲೆ ಮಾಡಿಲ್ಲ, ಆನ್‌ಲೈನ್‌ಇದ್ದಾನೆ, ಆದ್ರೂ ನನ್ನ ಮೆಸೇಜ್‌ನೋಡದೆ ನಿರ್ಲಕ್ಷಿಸುತ್ತಿದ್ದಾನೆ, ಸಿಂಗಲ್‌ಟಿಕ್‌ಅಷ್ಟೇ ಇದೆ ಅವಳೇನಾದ್ರೂ ನನ್ನನ್ನ ಬ್ಲಾಕ್ ಮಾಡಿದ್ಲಾ..? ಮೆಸೇಜ್‌ಮಾಡಿದಾಗ ಮೂಡುವ ಟಿಕ್‌ಗಳು ಇಂಥವೆಲ್ಲಾ ಟೆನನ್‌ಗಳನ್ನು ಸೃಷ್ಟಿಸುತ್ತಿವೆ. ನಿಮ್ಮನ್ನು ಅನುಮಾನದ ಗೂಡಾಗಿಸುತ್ತಿದೆ.
5. ನಿಮ್ಮ ಫೋನು, ಕಸದ ಬುಟ್ಟಿ..!
ಪ್ರೈಮರಿ ದೂಸ್ತಾಗಳು , ಕ್ರೇಝಿ ಕ್ಲಾಸ್‌ಮೇಟ್ಸ್, ಓಲ್ಡ್‌ಫ್ರೆಂಡ್ಸ್ ಅಸೋಸಿಯೇ?ನ್… ಎಂಬ ಇತ್ಯಾದಿ ವಾಟ್ಸ್ಯಾಪ್‌ಗ್ರೂಪಿಗೆ ನೀವು ಸದಸ್ಯರಾಗಿರುತ್ತೀರಿ. ಅಲ್ಲಿ ಬೆಳಗ್ಗೆ, ರಾತ್ರಿ ಬರುವ ಗುಡ್‌ಮಾರ್ನಿಂಗ್, ಗುಡ್ನೈಟ್‌ಮೆಸೇಜ್‌ಗಳು, ಮೀಮ್ಸ್, ಹಳಸಲು ಜೋಕ್‌ಗಳಿಂದಲೇ ಪೋನ್ ಮೆಮೋರಿ ತುಂಬಿ ಮೋಬೈಲ್ ದಿನಕ್ಕೊಮ್ಮೆ ಹ್ಯಾಂಗ್‌ಆಗುತ್ತದೆ. ಎಷ್ಟೇ ಬೇಡ ಬೇಡ ಅಂದರೂ, ಇಂಥ ಗ್ರೂಪ್‌ಗ್ಳಿಂದ ದೂರ ಉಳಿಯುವುದು ಕಷ್ಟದ ವಿಷಯ. ವಾಟ್ಸ್ಯಾಪ್‌ಕಾರಣದಿಂದಲೇ ನಿಮ್ಮ ಪೋನು ಕಸದ ಬುಟ್ಟಿ ಆಗಿರುತ್ತೆ.
ನಿಮ್ಮ ಫೋನ್ ಚಾರ್ಜ್ ಮಾಡಬೇಕಾದ್ರೆ, ಈ 5 ತಪ್ಪುಗಳನ್ನು ಮಾಡಲೇಬೇಡಿ..!
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಬೆಲೆ ಬಾಳುವ ಆಭರಣಗಳು ತಮ್ಮದಾಗಬೇಕು ಎಂಬ ಆಸೆ ಇರುತ್ತದೆ. ಆರ್ಥಿಕವಾಗಿ ಚಿನ್ನದ ಆಭರಣ ಖರೀದಿಸಲು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರ ಇಂದು ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ. ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ ಡೆಬ್ರಾ ಗಾಂಡರ್ಡ್(55), ರಸ್ತೆ ಬದಿಯ ಅಂಗಡಿಯಲ್ಲಿ 850…
ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ…
ಕಂಪ್ಯೂಟರ್ಗಳು, ಕಂಪನಿಯ ಸರ್ವರ್ಗಳನ್ನು ಹ್ಯಾಕ್ ಮಾಡುವುದನ್ನು ಕೇಳಿದ್ದೇವೆ. ಆದರೆ ಸೂರತ್ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್ ಟೀವಿಯನ್ನು ಹ್ಯಾಕ್ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್ಲೈನ್ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ. ಪೊಲೀಸರಿಗೆ ದೂರು ನೀಡಿದರೆ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಈ…
ನಾವು ಮಧ್ಯಾಹ್ನ ಅಥವಾ ರಾತ್ರಿ ಮಲಗುವಾಗ ನಮ್ಮ ಕೈ ಮೇಲೆ ತಲೆನ ಹಾಕಿಕೊಂಡು ಮಲಗುತ್ತೇವೆ ಅದು ನಿಮಗೂ ಗೊತ್ತು, ನಿದ್ದೆ ಮನುಷ್ಯನಿಗೆ ವರದಾನವಾಗಿದೆ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೆಲಸ ಮಾಡುವವರು ನಿದ್ರೆ ಕಡೆ ಗಮನ ಕೊಡುತ್ತಿಲ್ಲ ತುಂಬಾ ಕೆಲಸದ ಕಡೆ ಗಮನ ಕೊಡುತ್ತಿದ್ದಾರೆ ಇದರಿಂದ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಇದರಿಂದ ರಾತ್ರಿ ಮಲಗುವ ನಿದ್ದೆ ಸಾಕಾಗುವುದಿಲ್ಲ ಹಾಗಾಗಿ ಮಧ್ಯಾಹ್ನವೂ ಕೂಡ ಮಲಗುತ್ತಾರೆ, ಮತ್ತು ಹೆಚ್ಚಾಗಿ ನಿದ್ರೆ ಮಾಡುವವರನ್ನು ಸೋಂಬೇರಿಗಳು ಅಂತಾನೂ ಕರೆಯುತ್ತಾರೆ….
ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಾಸಿತವಾಗುತ್ತದೆ. ಅಜೀರ್ಣ, ಹೊಟ್ಟೆನೋವು ಕಂಡುಬಂದಲ್ಲಿ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.