ಆರೋಗ್ಯ

ನಿಮಗೆ ಕೂದಲು ಉದುರುವ ಸಮಸ್ಯಯೇ?ಹಾಗಾದ್ರೆ ಇಲ್ಲಿದೆ ನೋಡಿ ಮನೆಮದ್ದು ಪರಿಹಾರ……

697

ಹಿಂದಿನ ಕಾಲದ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಈಗಿನ ಕಾಲದ ಜೀವನ ಪದ್ಧತಿ, ಆಹಾರ ಪದ್ಧತಿ ಇಂದಾಗಿ, ಹದಿಹರೆಯದವರಲ್ಲಿ ಕೂಡ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚಾಗಿ ಕಾಡುತ್ತಿದೆ.

ಕೂದಲು ಉದುರುವ ಸಮಸ್ಯಗೆ ಕಾರಣ ?

ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ಕಾರಣ ಎನ್ನಬಹುದು. ಜೊತೆಗೆ ಆಹಾರ ಕ್ರಮ, ಕೆಲವು ಔಷಧಿಗಳ ಅಡ್ಡ ಪರಿಣಾಮ ಕೂಡ ಕೂದಲು ಉದುರಲು ಕಾರಣವಾಗಿವೆ. ಈ ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮನೆಮದ್ದಿನ ಪರಿಹಾರ :-

ಮೆಂತ್ಯಕಾಳುಗಳನ್ನ ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ  ಅದನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ, ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಮಿಕ್ಸಿ ಮಾಡಿ ತಲೆಗೆ ಹಚ್ಚಿಕೊಳ್ಳಿ. ಸುಮಾರು 30 ನಿಮಿಷಗಳ ನಂತರ ಬಿಸಿನೀರಿನಲ್ಲಿ ತೊಳೆಯಿರಿ, ಸತತ ಒಂದು ವಾರದ ಕಾಲ ಹೀಗೆ ಮಾಡಿದರೇ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ