ಉಪಯುಕ್ತ ಮಾಹಿತಿ

ನಿಜವಾದ ಬಡವ, ಶ್ರೀಮಂತ ಎಂದ್ರೆ ಯಾರೂ ಗೊತ್ತಾ..?ತಿಳಿಯಲು ಈ ಲೇಖನ ಓದಿ…

1166

ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.

ಒಬ್ಬ ಶ್ರೀಮಂತ ಮಹಿಳೆ ಸೀರೆ ಅಂಗಡಿಗೆ ಬಂದು ಅಂಗಡಿಯವನನ್ನು ಕೇಳಿದಳು, Excuse me ಒಂದು ಕಡಿಮೆ ಬೆಲೆಯ (100 ರುಪಾಯಿ) ಸೀರೆ ತೋರಿಸಿ ನನ್ನ ಮಗಳ ಮದುವೆ ಇದೆ ಕೆಲಸದವಳಿಗೆ ಕೋಡಲು ಎಂದು ಹೇಳಿ ಕಡಿಮೆ ಬೆಲೆಯ ಸೀರೆ ಖರೀದಿಸಿದಳು.

ಸ್ವಲ್ಪ ಸಮಯದ ನಂತರ ಅದೇ ಅಂಗಡಿಗೆ ಆ ಮನೆ ಕೆಲಸದವಳು ಬಂದು ಅಂಗಡಿಯವನನ್ನು ಕೇಳಿದಳು,  ಅಣ್ಣಾ ಒಂದು ದುಬಾರಿ ಸೀರೆ ತೋರಿಸು (1000 ರುಪಾಯಿ) ನಮ್ಮ ಮಾಲೀಕರ ಮಗಳ ಮದುವೆಗೆ ಉಡುಗೊರೆ ಕೊಡಬೇಕು ಎಂದು ಸೀರೆ ಖರೀದಿಸಿ ಹೋದಳು.

ಈಗ ಹೇಳಿ ಇವರಲ್ಲಿ ಶ್ರೀಮಂತರು ಯಾರು?

ನಿಜವಾದ ಶ್ರೀಮಂತರು ಮನೆ ಯಜಮಾನಿಯಾ ಅಥವಾ ಕೆಳಸದವಳಾ ?

ಒಂದು ದಿನ ಒಬ್ಬ ಮಹಿಳೆ ತನ್ನ ಕುಟುಂಬ ಸಮೇತ 5 ಸ್ಟಾರ್ ಹೋಟೆಲ್ ಗೆ ಊಟಕ್ಕೆ ಹೋಗಿದ್ದರು. ಅವಳು ಆರು ತಿಂಗಳ ಮಗುವಿನ ತಾಯಿ,ಮಗು ಹಸಿವಿನಿಂದ ಅಳತೊಡಗಿತು, ಅವಳು ಹೋಟೆಲ್ ಮ್ಯಾನೇಜರ್ ಗೆ ಒಂದು ಲೋಟ ಹಾಲು ಸಿಗುತ್ತಾ..? ಎಂದು ಕೇಳಿದಳು. ಮ್ಯಾನೇಜರ್ ಎಸ್ ಮೇಡಮ್ ಆದರೆ ಅದಕ್ಕೆ ಮತ್ತೆ ದುಡ್ಡಾಗುತ್ತೆ.  ಮಹಿಳೆ ಹೇಳಿದಳು ನೋ ಪ್ರಾಬ್ಲಮ್ ಎಂದು ಹಣ ನೀಡಿ ಒಂದು ಲೋಟ ಹಾಲು ಪಡೆದು ಮಗುವಿಗೆ ನೀಡಿದಳು.

 

ಹೋಟೆಲ್ ನಿಂದ ವಾಪಸ್ ಬರುವಾಗ ಮಗು ಹಸಿವಿನಿಂದ ಮತ್ತೆ ಅಳತೊಡಗಿತು, ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಚಹಾ ಮಾರುವ ಮುದುಕನ ಹತ್ತೀರ ಒಂದು ಒಂದು ಲೋಟ ಹಾಲು ಸಿಗುತ್ತಾ..? ದುಡ್ಡು ಎಷ್ಟು ? ಎಂದು ಕೇಳಿದಳು. ಆ ಮುದುಕ ನಗುತ್ತಾ ಹೇಳಿದ  ಮೇಡಮ್ ಮಕ್ಕಳ ಹಾಲಿಗೆ ನಾವು ದುಡ್ಡು ತೆಗೆದುಕೊಳ್ಳಲ್ಲ, ನೀವು ಇನ್ನೂ ಬಹಳಷ್ಟು ಪ್ರಯಾಣ ಮಾಡುವದಿದ್ದರೆ ಇನ್ನೊಂದು ಲೋಟ ಹಾಲು ತಗೊಳ್ಳಿ  ಎಂದು ಎರಡು ಲೋಟ ಹಾಲು ನೀಡಿದ. ಆ ಮಹಿಳೆ ಎರಡು ಲೋಟ ಹಾಲು ತೆಗೆದುಕೊಂಡು ಹೊರಟಳು.

 

ಈಗ ಹೇಳಿ ಇವರಲ್ಲಿ ಶ್ರೀಮಂತರು ಯಾರು?

ನಿಜವಾದ ಶ್ರೀಮಂತರು ಹೋಟೆಲ್ ಮ್ಯಾನೇಜರ್ ಅಥವಾ ಚಹಾ ಮಾರುವವ ?

ಬನ್ನಿ ಸಹಾಯದ ಅವಶ್ಯಕತೆಯಿರುವವರಿಗೆ ಪ್ರತಿಫಲ ನಿರಿಕ್ಷಿಸದೆ ಸಹಾಯ ಮಾಡೋಣ ಅದು ನಮ್ಮ ಮನಸಿಗೆ ಸುಖ ನೀಡುತ್ತದೆ ಆ ಸುಖ ದುಡ್ಡಿನಿಂದ ಸಿಗುವದಿಲ್ಲ

ಜಗತ್ತು ಒಳ್ಳೆಯವರಿಂದ ತುಂಬಿದೆ ನಾವು ಹುಡುಕಬೇಕಷ್ಟೆ ಒಂದಾಗೋಣ ಜಗತ್ತನ್ನೆ ಬದಲಾಯಿಸೋಣ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಮಗನಂತಿರುವ ದರ್ಶನ್ ಚುನಾವಣೆಯಲ್ಲಿ ನಿಂತಿರುವ ಸುಮಲಾತರವರ ಪರ ನಿಲ್ತಾರ? ದರ್ಶನ್ ಹೇಳಿದ್ದೇನು ಗೊತ್ತಾ?

    ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸುವುದು ಖಚಿತವಾಗಿದ್ದು, ಕಾಂಗ್ರೆಸ್ ನಿಂದ ಟಿಕೆಟ್ ಸಿಗಲಿ ಬಿಡಲಿ. ತಾವು ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರಣಕ್ಕೆ ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗಿದ್ದು, ಈ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರ್ ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ….

  • ಸುದ್ದಿ

    ವರುಣನ ಆರ್ಭಟ- ‘ಮಹಾ’ ಮಳೆಗೆ ಸೇತುವೆಗಳು ಮುಳುಗಡೆ

    ಇಷ್ಟು ದಿನ ಮಳೆಯ ಅಭಾವದಿಂದ ಸೋರಗಿ ಹೋಗಿದ್ದ ಮಲೆನಾಡಿನ ನದಿಗಳಿಗೆ ಜೀವಕಳೆ ಬಂದಿದೆ. ಪಶ್ಚಿಮಘಟ್ಟ ಸಾಲಿನ ಆರಿದ್ರಾ ಮಳೆಯ ಆರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 4-5 ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.. ಶೃಂಗೇರಿಯ ಕಪ್ಪೆ ಶಂಕರ ದೇಗುಲ…

  • ಸಿನಿಮಾ

    ನಟ ಯಶ್ ಮನೆ ಮುಂದೆ ಆತ್ಮಹತ್ಯಗೆ ಯತ್ನಿಸಿದ ಅಭಿಮಾನಿ..!

    ಕನ್ನಡ ಚಿತ್ರಗಳನ್ನು ಕೀಳುಮಟ್ಟದಲ್ಲಿ ನೋಡುತ್ತಿದ್ದ ಪರಭಾಷಿಕರನ್ನು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.ಇದನು ಯಶ್ ರವರ ಹುಟ್ಟು ಹಬ್ಬವಾಗಿದ್ದು ಯಶ್ ರವರನ್ನು ನೋಡಲು ಅಭಿಮಾನಿಯನ್ನು ಬಿಡದ್ದಕ್ಕೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರವಿ ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಇಂದು ತನ್ನ ನೆಚ್ಚಿನ ನಟನ ಹುಟ್ಟುಹಬ್ಬ ಇರುವ ಕಾರಣ ಯಶ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಹೊಸಕೆರೆಹಳ್ಳಿ ಮನೆಗೆ ಆಗಮಿಸಿದ್ದ. ಮನೆಗೆ ಆಗಮಿಸಿದರೂ ಭೇಟಿಗೆ…

  • ಸುದ್ದಿ

    ದೇಶದ 2 ನೇ ಅತಿ ದೊಡ್ಡ ರೈಲ್ವೆ ಬ್ರಿಡ್ಜ್ ಉದ್ಘಾಟನೆಗೆ ಸಿದ್ಧ….!

    ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ…

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು..ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…