ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.
ಶಾಕ್ ಆಯ್ತಾ ಯಾವ ಭಾಗ್ಯ ಅಂತ.ಅದೇ ಬೆಳ್ಳಂದೂರು ಕೆರೆಯ ನೊರೆ ಭಾಗ್ಯ.ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಂದೂರು, ವರ್ತೂರು ಕೆರೆ ಕೋಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡು ಗಾಳಿಯಲ್ಲಿ ತೇಲಾಡುತ್ತಿರುವುದರಿಂದ ವಾಹನ ಬಳಕೆದಾರರು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.
ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಬಿಡಿಎ ಒಂದಿಷ್ಟು ಕ್ರಮ ಕೈಗೊಂಡಿದ್ದರೂ ನೊರೆ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯರು ಅನಾರೋಗ್ಯಕರ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ.
ಕೆಲವು ದಿನಗಳಿಂದ ಬಿದ್ದ ಬಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಕೋಡಿಯಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಸಂಗ್ರಹವಾಗಿತ್ತು. ಮಳೆ ಜಾಸ್ತಿ ಬಿದ್ದಂತೆ ಕೆರೆಯಲ್ಲಿ ನೀರು ಹೆಚ್ಚಾಗಿ ನೊರೆ ಹೆಚ್ಚಾಗಿದೆ.
ಕೋಡಿ ಭಾಗದಲ್ಲಿ ಐದಾರು ಅಡಿ ಎತ್ತರದಷ್ಟು ದಟ್ಟ ನೊರೆ ಕಾಣಿಸಿಕೊಂಡು, ಗಾಳಿ ಬೀಸಿದ್ದರಿಂದ ರಸ್ತೆಯಲ್ಲಿ ಬಿದ್ದ ಅಗಾಧ ನೊರೆಯಿಂದ ವಾಹನಗಳಿಗೆ ತೊಂದರೆಯಾಗಿ ಸಾರ್ವಜನಿಕರಿಗೂ ತೊಂದರೆಯಾಗಿದೆ.
ರಸ್ತೆಯಲ್ಲಿ ಸಂಚರಿಸಲು ಸಹ ಜನರಿಗೆ ಭಯವಾಗುತ್ತಿದೆ…
ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾ, ತ್ರಿಚಕ್ರ ವಾಹನ ಚಾಲಕರು, ಪ್ರಯಾಣಿಕರು ನೊರೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.
ಏಕೆಂದರೆ ವಿಷಯುಕ್ತ ರಾಸಾಯನಿಕ ಸೇರ್ಪಡೆಯಿಂದಾಗಿ ನೊರೆ ಚರ್ಮಕ್ಕೆ ಸೋಕಿದ ಭಾಗದಲ್ಲಿ ಕೆಂಪು ಕಲೆಗಳಾಗಿ ತುರಿಕೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ಈ ಭಾಗದಲ್ಲಿ ಓಡಾಡಲು ಆತಂಕಪಡುವಂತಾಗಿದೆ.
ಬಿಡಿಎ ಅಲ್ಪಾವಧಿ ಕ್ರಮವೆಂಬಂತೆ ಕೆರೆಯಲ್ಲಿ ಸಂಗ್ರಹವಾಗಿರುವ ಜೊಂಡು, ಕಳೆ ಸಸಿ ತೆರವು ಕಾರ್ಯ ಮುಂದುವರಿಸಿದೆ.
ದೀರ್ಘಾವಧಿ ಕ್ರಮವಾಗಿ ಯಾವ ವಿಧಾನದಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ಬಿಡಿಎ ಆಯುಕ್ತರ ಅಧ್ಯಕ್ಷತೆಯ ತಜ್ಞರ ಸಮಿತಿಯು ಚರ್ಚೆ ನಡೆಸುತ್ತಿದ್ದು, ಸರ್ಕಾರ ಕೈಗೊಳ್ಳುವ ನಿರ್ಧಾರದಂತೆ ಮುಂದುವರಿಯಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ ಪರಿಮಳಕ್ಕಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳೂ ಇವೆ. ಕರಿಬೇವು ಕಬ್ಬಿಣದಂಶ ಹಾಗೂ ಪೋಲಿಕ್ ಆಸಿಡ್ ಗಳ ಗುಚ್ಛವೆಂದೇ ಹೇಳಬಹುದು. ರಕ್ತಹೀನತೆಗೂ ಇದು ರಾಮಬಾಣ. ಕರಿಬೇವು ಲಿವರ್ ಗೂ ಒಳ್ಳೆಯದು. ಲಿವರ್ ಹಾಳಾಗದಂತೆ ತಡೆಯುತ್ತದೆ. ಕರಿಬೇವು ಆಂಟಿಬಯಾಟಿಕ್ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ. ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ….
ಹಳ್ಳಿ ಪ್ರದೇಶಗಳಲ್ಲಿ ಜನರು ತಮ್ಮ ಹೊಲದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಅದನ್ನು ಒಂದು ವರ್ಷದವರೆಗೂ ಉಪಯೋಗಿಸುತ್ತಾರೆ. ಹೀಗೆ ವರ್ಷಗಟ್ಟಲೆ ಅಕ್ಕಿಯನ್ನು ಶೇಖರಿಸಿ ಇಡುವುದರಿಂದ ಅದರಲ್ಲಿ ಹುಳಗಳು ಹುಟ್ಟುತ್ತವೆ.
ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ. * ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. *ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ. *ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ…
ಇಂದು ಶನಿವಾರ, 17/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಭಾರತೀಯ ಸೇನೆ ಮತ್ತೊಮ್ಮೆ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ.ಕದನ ವಿರಾಮ ಉಲ್ಲಂಘಿಸಿ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮತ್ತೊಮ್ಮೆ ತಕ್ಕ ತಿರುಗೇಟು ನೀಡಿದೆ.
ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. ಕನಸು ಅನೇಕ ಮುನ್ಸೂಚನೆಗಳನ್ನು ನೀಡುತ್ತದೆ. ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಪ್ರತಿಯೊಬ್ಬರಿಗೂ ಪ್ರತಿ ದಿನ ಬೇರೆ ಬೇರೆ ಕನಸುಗಳು ಕಾಣ್ತವೆ. ಕೆಲವರಿಗೆ ಕನಸಿನಲ್ಲಿ ಪದೇ ಪದೇ ದೇವರು ಕಾಣಿಸಿಕೊಳ್ತಾನೆ. ಕನಸಿನಲ್ಲಿ ದೇವರು ಕಂಡ್ರೆ ಖುಷಿಪಡಬೇಕು. ಇದು ಶುಭ ಸಂಕೇತ. ಯಾರಿಗೆ ದೇವರ ಕೃಪೆ ಇರುತ್ತದೆಯೋ ಅವ್ರಿಗೆ…