*”ಕರುನಾಡ ಪರ್ವ” ಇದು ನಮ್ಮ ನಾಡಿನ ಹೆಮ್ಮೆಯ ಕಾರ್ಯಕ್ರಮಬನ್ನಿ ಎಲ್ಲರೂ ಭಾಗವಹಿಸಿ..*

60 ವಸಂತಗಳನ್ನು ಕಂಡ ಕರ್ನಾಟಕಕ್ಕೆ ನಮ್ಮ ರಾಜ್ಯದ ಹೆಮ್ಮೆಯ ಮೀಸಲು ಪೋಲೀಸ್ ತನ್ನದೇ ಆದ ಶೈಲಿಯಲ್ಲಿ ನಮನವನ್ನು ಸಲ್ಲಿಸುತ್ತಿದೆ..
ಹೌದು ನಮ್ಮ ನಾಡಿಗೆ ಅಪಾರ ಕೊಡುಗೆಯನ್ನು ನೀಡಿದ ಕವಿಗಳಿಗೆ ಗೌರವವನ್ನು ಸಲ್ಲಿಸಬೇಕೆಂಬ ಉದ್ದೇಶದಿಂದ ಶ್ರೀಯುತ ADGP ಭಾಸ್ಕರ್ ರಾವ್ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಈ ಕಾರ್ಯಕ್ರಮವನ್ನು ಮಾಡುತ್ತಿದೆ…

ಈಗಾಗಲೇ ರಾಜ್ಯಾದ್ಯಂತ 13 ಪಡೆಗಳಲ್ಲಿ ಪ್ರಮುಖ ಕವಿಗಳಿಗೆ ನಮನವನ್ನು ಸಲ್ಲಿಸಿ, ಅಂತಿಮ ಕಾರ್ಯಕ್ರಮವನ್ನು ಇದೇ ಡಿಸೆಂಬರ್ 30 2017 ರಂದು ಸಂಜೆ 6 ಘಂಟೆಗೆ ಕೆ ಎಸ್ ಆರ್ ಪಿ ಮೂರನೇ ಪಡೆ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದೆ..

ಸರ್ವರಿಗೂ ಸ್ವಾಗತವನ್ನು ಕೋರಿರುವ ರಾಜ್ಯದ ಮೀಸಲು ಪೋಲೀಸ್, ಕವಿಗಳಿಗೆ ನಮನ ಸಲ್ಲಿಸುತ್ತಾ ಮಾದರಿ ಕಾರ್ಯಕ್ರಮ ಒಂದನ್ನು ಮಾಡುತ್ತಿದ್ದಾರೆ..
ಏನೇ ಆಗಲಿ ನಮ್ಮ ನಾಡಿನ ಹೆಮ್ಮೆಯ ಕವಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಮಾಡುತ್ತಿರುವ ಕಾರ್ಯಕ್ರಮ ಎಲ್ಲರೂ ಒಗ್ಗೂಡಿ ಇದನ್ನು ಯಶಸ್ವಿ ಮಾಡೋಣ ಬನ್ನಿ ನಮ್ಮ ಹೆಮ್ಮೆಯ ಮೀಸಲು ಪೋಲೀಸರೊಂದಿಗೆ ನಾವು ಕೈ ಜೋಡಿಸೋಣ, ಕಾರ್ಯಕ್ರಮದಲ್ಲಿ ಭಾಗವಹಿಸೋಣ..

ದಿನಾಂಕ :- 30-12-2017
ಸ್ಥಳ:- 3ನೇ ಪಡೆ, ಕೆ ಎಸ್ ಆರ್ ಪಿ ಕ್ರೀಡಾಂಗಣ, ಕೋರಮಂಗಲ, ಬೆಂಗಳೂರು..
ಸಮಯ:- ಸಂಜೆ 6 ಘಂಟೆಗೆ
