ಆರೋಗ್ಯ

ಧೂಮಪಾನದಿಂದ ದೂರ ಸರಿಯಲು ಮನೆ ಮದ್ದು ತಯಾರಿಸುವುದು ಹೇಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

409

ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ಸಿಗರೇಟ್ ಪ್ಯಾಕ್‍ಗಳ ಮೇಲೆ ಬರೆದುಕೊಂಡು ಇದ್ದರೂ ಜನರು ಲೆಕ್ಕಿಸುವುದಿಲ್ಲ. ಅದನ್ನು ನೋಡಿಯೇ ಸಿಗರೇಟನ್ನು ಸೇದುತ್ತಾರೆ. ನಿಧಾನವಾಗಿಯೇ ಶ್ವಾಸಕೋಶಗಳನ್ನು ದುರ್ಬಲಗೊಳಿಸುವ ಧೂಮ ಪಾನ ವ್ಯಸನಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆಂತರಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುವುದು. ಅವು ನಿಧಾನವಾಗಿ ಗಂಭೀರ ಸಮಸ್ಯೆಗಳಾಗಿ ಪರಿವರ್ತನೆ ಹೊಂದುವವು.

ಇತ್ತೀಚೆಗೆ ನಡೆಸಿದ ಕೆಲವು ಸಂಶೋಧನೆ ಹಾಗೂ ಅಧ್ಯಯನದ ಪ್ರಕಾರ ಧೂಮಪಾನದಿಂದ ಕರುಳಿಗೆ ಹಾನಿ ಉಂಟಾಗುವುದು. ಕೊಲೈಟಿಸ್ ಅಪಾಯವನ್ನು ಹೆಚ್ಚಿಸುವುದು. ಸಿಗರೇಟ್ ಹೊಗೆಯಿಂದ ದೇಹದಲ್ಲಿರುವ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು. ಪ್ರೋಟೀನ್‍ಗಳು ಇಳಿಮುಖ ಹೊಂದುವವು. ಸ್ನಾಯುಗಳಲ್ಲಿ ಹಾಗೂ ಆಂತರಿಕ ವ್ಯವಸ್ಥೆಯಲ್ಲಿ ಉರಿಯೂತ ಉಂಟಾಗುವುದು. ಧೂಮಪಾನವು ಕ್ರೋನ್ಸ್ ಕಾಯಿಲೆ, ಕರುಳಿನ ಉರಿಯೂತ ಮತ್ತು ಕೊಲೈಟಿಸ್‍ನಂತಹ ಅಪಾಯವನ್ನುಂಟು ಮಾಡುವುದು.

ಧೂಮಪಾನ ಎನ್ನುವ ಭಯಾನಕ ಚಟದಿಂದ ದೂರವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆದರೆ ಒಮ್ಮೆ ಚಟ ಆರಂಭವಾದಮೇಲೆ ಅದರಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಆದರೆ ಕೆಲವು ಮನೆ ಮದ್ದು ಮಾಡುವುದರ ಮೂಲಕ ಧೂಮಪಾನದಿಂದ ದೂರ ಸರಿಯಬಹುದು ಎನ್ನುವುದನ್ನು ಕೆಲವು ಸಂಶೋಧನೆಯು ದೃಢಪಡಿಸಿದೆ. ಹಾಗಾದರೆ ಆ ಮನೆಮದ್ದು ಯಾವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವುದಾದರೆ ಲೇಖನದ ಮುಂದಿನ ಭಾಗವನ್ನು ಓದಿ..

ನೀರು:-

ನೀರು ನೈಸರ್ಗಿಕ ಡಿಟೊಕ್ಸಿಫೈಯರ್‍ಗಳಲ್ಲಿ ಒಂದಾಗಿದೆ. ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೊಡೆದುಹಾಕಲು ಮತ್ತು ಧೂಮಪಾನದ ಚಟದಿಂದ ದೂರವಾಗಲು ಸಾಕಷ್ಟು ನೀರನ್ನು ಕುಡಿಯಬೇಕು.

ನೀರು ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಜೇನುತುಪ್ಪ:-

ಧೂಮಪಾನದಿಂದ ದೂರ ಸರಿಯಲು ಸಹಾಯ ಮಾಡುವ ಇನ್ನೊಂದು ನೈಸರ್ಗಿಕ ಉತ್ಪನ್ನವೆಂದರೆ ಜೇನುತುಪ್ಪ. ಜೇನುತುಪ್ಪವು ಜೀವಸತ್ವ, ಕಿಣ್ವಗಳು ಮತ್ತು ಪ್ರೋಟೀನ್‍ಗಳನ್ನು ಒಳಗೊಂಡಿರುತ್ತದೆ.

ಇದರ ಸೇವನೆಯಿಂದ ಧೂಮಪಾನದ ಅಭ್ಯಾಸವನ್ನು ಬಿಡಬಹುದು. ಧೂಮಪಾನದ ಪ್ರಚೋದನೆ ಉಂಟಾದಾಗ ಇದನ್ನು ಸೇವಿಸಿ ನೀರು ಕುಡಿಯಬೇಕು. ಆಗ ಧೂಮಪಾನದ ಬಯಕೆಯು ಕಡಿಮೆಯಾಗುವುದು.

 

ಶುಂಠಿ:-

ಧೂಮಪಾನ ತೊರೆದಾಗ ಕೆಲವರಿಗೆ ವಾಕರಿಕೆ ಸಂವೇಧನೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಚಿಕ್ಕ ಶುಂಠಿ ಚೂರನ್ನು ಜಗೆಯುವುದು ಅಥವಾ ಶುಂಠಿ ಚಹಾ ಸೇವಿಸುವುದರಿಂದ ವಾಕರಿಕೆ ಉಂಟಾಗುವುದನ್ನು ತಡೆಯಬಹುದು.

ಅಲ್ಲದೆ ಧೂಮಪಾನ ಮಾಡಲು ಮನಸ್ಸಾಗದಂತೆ ಪ್ರೇರೇಪಿಸುತ್ತದೆ.

ಕ್ಯಾಮೋಮೈಲ್ ಟೀ:-

ನಿಕೋಟಿನ್ ಅಗತ್ಯತೆಯ ಬೇಡಿಕೆಯನ್ನು ಕಡಿಮೆಗೊಳಿಸುವ ಮತ್ತು ನರಗಳಿಗೆ ಪ್ರಶಾಂತತೆ ನೀಡುವ ಏಕಮಾತ್ರ ಪದಾರ್ಥವೆಂದರೆ ಕ್ಯಾಮೋಮೈಲ್ ಟೀ, ಹೀಗೆಂದು Molecular Medicine Reports ಎಂದ ವೈದ್ಯಕೀಯ ಪತ್ರಿಕೆ ತಿಳಿಸಿದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಧೂಮಪಾನದ ಮೂಲಕ ದೇಹದಲ್ಲಿ ಉತ್ಪತ್ತಿಯಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವದಿಂದ ದೇಹಕ್ಕೆ ಹಾನಿಯಾಗದಂತೆ ತಡೆಯುತ್ತದೆ.

ಜಿನ್ಸೆಂಗ್:-

ಒಂದು ವರದಿಯ ಪ್ರಕಾರ ಜಿನ್ಸೆಂಗ್ ಎಂಬ ಶುಂಠಿಯಂತಹ ಗಡ್ಡೆಯ ರಸದ ಸೇವನೆಯಿಂದ ಡೋಪಮೈನ್ ಎಂಬ ನರಪ್ರಚೋದಕ ಹಾರ್ಮೋನೊಂದು ಬಿಡುಗಡೆಯಾಗುತ್ತದೆ.

ಇದು ಸಿಗರೇಟು ಸೇದಿದಾಗ ಸಿಗುವಂತಹ ಪರಿಣಾಮವನ್ನೇ ನೀಡುವ ಕಾರಣ ಸಿಗರೇಟು ಸೇದುವ ಬಯಕೆಯುಂಟಾಗುವುದಿಲ್ಲ. ಇದು ಧೂಮಪಾನ ತ್ಯಜಿಸುವವರಿಗೆ ವರದಾನವಾಗಿದೆ.

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು:-

ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಧಾವಿಸಿದ ನಿಕೋಟಿನ್ ಅನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಗತ್ಯವಿದೆ. ಇದು ಲಭ್ಯವಿರುವ ವಿಟಮಿನ್ ಸಿ ಪ್ರಮಾಣವನ್ನೆಲ್ಲಾ ಕಬಳಿಸಿ ಬಿಡುತ್ತದೆ.

ಇದೇ ಕಾರಣದ ವ್ಯತಿರಿಕ್ತ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಸಿ ಕೊರತೆಯಾದಾಗಲೆಲ್ಲಾ ಸಿಗರೇಟು ಸೇದುವಂತೆ ಮೆದುಳಿಗೆ

 

ಸೂಚನೆ ಹೋಗುತ್ತದೆ ಎಂಬ ವಿಷಯವನ್ನು American Journal of Public Health ಎಂಬ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ವಿಚ್ಛೇದನ ನೀಡಿ ಎರಡನೇ ಮದುವೆ ಆದ್ರೂ, ಈ ಮಹಿಳೆ ತನ್ನ ಎರಡನೇ ಗಂಡನ ಜೊತೆಗೇ, ಮೊದಲ ಪತಿಯ ಸೇವೆ ಮಾಡುತ್ತಿದ್ದಾಳೆ..!ಏಕೆ?ತಿಳಿಯಲು ಈ ಲೇಖನ ಓದಿ…

    ಚೀನಾದಲ್ಲಿ ಮಹಿಳೆಯೊಬ್ಬಳು ತನ್ನ ಪಾರ್ಶ್ವವಾಯು ಪತಿಗೆ ವಿಚ್ಛೇದನ ನೀಡಿದ್ದಾಳೆ. ನಂತ್ರ ತನ್ನ ಸ್ನೇಹಿತನೊಬ್ಬನ ಜೊತೆ ಮದುವೆಯಾಗಿದ್ದಾಳೆ. ಇಷ್ಟಕ್ಕೆ ಕಥೆ ಮುಗಿಯಲಿಲ್ಲ.

  • ಮನರಂಜನೆ

    ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ವಾಸುಕಿ, ಶೈನ್

    ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಸುಟ್ಟ ಗಾಯಕ್ಕೆ ನಿಮ್ಮ ಮನೆಯಲ್ಲೇ ಇವೆ ಸುಲಭ ಸರಳ ಮನೆ ಮದ್ದುಗಳು..!

    ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು ಇಲ್ಲಿವೆ.. ಸುಟ್ಟ ಗಾಯಕ್ಕೆ ತಕ್ಷಣವೇ ಟೂತ್ ಪೇಸ್ಟ್ ಹಚ್ಚಿಕೊಂಡಲ್ಲಿ ಸುಟ್ಟ ಗಾಯದಿಂದಾಗುವ ಉರಿ ಶಮನವಾಗುತ್ತದೆ.ಶರೀರದ ಭಾಗ ಸುಟ್ಟ ತಕ್ಷಣವೇ ಹಸಿ ಮಣ್ಣನ್ನು ಆ ಭಾಗಕ್ಕೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ ಮತ್ತು ಗುಳ್ಳೆಗಳು ಏಳುವುದಿಲ್ಲ. ಸುಟ್ಟ ಭಾಗಕ್ಕೆ ಸತತವಾಗಿ ನೀರು ಬಿಡುತ್ತಿದ್ದಲ್ಲಿ ಗಾಯದ ಉರಿ ಕಡಿಮೆಯಾಗುತ್ತದೆ.ಚರ್ಮ ಸುಟ್ಟಿದ್ದ ಭಾಗಕ್ಕೆ…

  • ಸುದ್ದಿ

    ಹೇರ್ ಫಾಲ್ ಟೆನ್ಶನ್ ಇಲ್ಲಿಗೆ ಬಿಡಿ, ಇನ್ಮುಂದೆ ನ್ಯಾಚುರಲ್ ಪರಿಹಾರ ಟ್ರೈ ಮಾಡಿ,..!

    ತುಂಬಾ ಕೂದಲು ಉದುರುತ್ತಿದೆ ಅಂತ ಚಿಂತೆ ಶುರುವಾಗಿದ್ಯಾ? ಕೂದಲು ಯಾಕೆ ಉದುರುತ್ತೆ? ಈ ಸಮಸ್ಯೆಗೆ ನೈಸರ್ಗಿಕ ಮದ್ದು ಏನು? ಯಾವೆಲ್ಲಾ ಆಹಾರವನ್ನೂ ಸೇವಿಸಬೇಕು? ಹೇಗೆ ಕೂದಲಿನ ರಕ್ಷಣೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದೀರಾ? ಏನಪ್ಪಾ ಮಾಡೋದು ಈ ಸಮಸ್ಯೆಗೆ ಅಂತ ಯೋಚನೆ ಮಾಡೋದನ್ನ ಬಿಡಿ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಅಂದ್ರೆ ಅದು ಹೇರ್ ಫಾಲ್. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ ಹಾಗೂ ಟೆನ್ಶನ್‍ನಿಂದ…

  • ವೀಡಿಯೊ ಗ್ಯಾಲರಿ

    ನಮ್ಮ ಹಳ್ಳಿ ಹುಡುಗರ wwe ಫೈಟ್ ನೋಡಿದ್ರೆ ನೀವ್ ಶಾಕ್ ಆಗ್ತೀರಾ..!ನೋಡಲು ಇಲ್ಲಿ ಕ್ಲಿಕ್ ಮಾಡಿ…

    wwe ಫೈಟ್ ನೀವೂ ಎಲ್ಲರೂ ನೋಡೇ ಇರ್ತೀರಿ…ಆದರೆ ನಮ್ಮ ಹಳ್ಳಿ ಹುಡುಗರ wwe ಫೈಟ್ ನೋಡಿದ್ದೀರಾ… ನೋಡಿಲ್ಲಾ ಅಂದ್ರೆ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…

  • ರಾಜಕೀಯ

    ರಾಜ್ಯದಲ್ಲಿ ಯಾವ ಯಾವ ಪಕ್ಷ ಮುನ್ನಡೆ…?

    ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…