ದೇವರು-ಧರ್ಮ

ದೇವಸ್ಥಾನಗಳಲ್ಲಿ ಹೊಡೆಯುವ ಘಂಟೆಯ ಹಿಂದಿದೆ ನಿಮ್ಗೆ ತಿಳಿಯದ ಈ ರಹಸ್ಯ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

765

ಬಹಳಷ್ಟು ಮಂದಿ ನಿತ್ಯ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.ದೇವಸ್ಥಾನಕ್ಕೆ ಹೋದಾಗ ದೇವರಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಘಂಟೆ ಬಾರಿಸುತ್ತಾರೆ.ಅದರಲ್ಲೂ ಚಿಕ್ಕಮಕ್ಕಳಿಗಂತೂ ಘಂಟೆ ಬಾರಿಸುವುದರಲ್ಲಿ ಎತ್ತಿದ ಕೈ.ಅದರಲ್ಲಿ ಅವರು ಒಂದು ಕೈ ಮುಂದೆನೇ ಇರ್ತಾರೆ.

ಆದರೆ ಗುಡಿಯಲ್ಲಿ ಘಂಟೆ ಯಾಕೆ ಹೊಡೀತಾರೆ ಗೊತ್ತಾ..?

ಗುಡಿಗೆ ಹೋದವರು ಕಡ್ಡಾಯವಾಗಿ ಘಂಟೆ  ಭಾರಿಸುತ್ತಾರೆ. ಮನೆಯಲ್ಲೂ ಅಷ್ಟೇ ಪೂಜೆ ಮಾಡುತ್ತಿದ್ದಾಗ, ಆರತಿ ಬೆಳಗುತ್ತಿದ್ದಾಗ ಘಂಟೆ  ಹೊಡೆಯುತ್ತಾರೆ… ದೇವಾಲಯಕ್ಕೆ ಹೋದಾಗ ಗಂಟೆ ಹೊಡೆದರೆ ಮನಸ್ಸಿಗೆ ಆಧ್ಯಾತ್ಮಿಕ ಆನಂದ ಸಿಗುವುದಷ್ಟೇ ಅಲ್ಲದೆ ಸಕಲ ಶುಭಗಳು ಸಿದ್ಧಿಸುತ್ತವೆ.

ಘಂಟೆಯಲ್ಲಿ ಇದೆ ವಿಶೇಷತೆ…

ಘಂಟೆಯಲ್ಲಿನ ಪ್ರತಿ ಭಾಗಕ್ಕೂ ಒಂದು ವಿಶೇಷತೆ ಇದೆ. ಅದೇನೆಂದರೆ…ಘಂಟೆ ನಾಲಿಗೆಯಲ್ಲಿ ಸರಸ್ವತಿ ಮಾತೆ ನೆಲೆಸಿರುತ್ತಾರಂತೆ. ಮಹಾರುದ್ರನು ಘಂಟೆಯ ಉದರ ಭಾಗದಲ್ಲಿ, ಮುಖ ಭಾಗದಲ್ಲಿ ಬ್ರಹ್ಮದೇವ, ಕೊನೆಯ ಭಾಗದಲ್ಲಿ ವಾಸುಕಿ ಹಾಗೆಯೇ ಮೇಲಿರುವ ಹಿಡಿ ಭಾಗದಲ್ಲಿ ಪ್ರಾಣಶಕ್ತಿ ಇರುತ್ತದೆ ಎಂದು ಪುರಾಣಗಳು ನಮಗೆ ಹೇಳುತ್ತವೆ.

ಯಾವ ಘಂಟೆ ಹೊಡೆಯುವುದರಿಂದ ಏನು ಲಾಭ…

ನಮಗೆ ಕಷ್ಟಗಳು ಬಂದಾಗ, ಮನಶ್ಯಾಂತಿ ಬೇಕೆಂದುಕೊಂಡಾಗ ನಮ್ಮ ಮನಸ್ಸನ್ನು ಆಧ್ಯಾತ್ಮಿಕ ಭಾವನೆಯಿಂದ ತುಂಬಬೇಕು ಎಂದರೆ ಭಗವಂತನ ಮುಂದೆ ಕಂಚಿನಿಂದ ಮಾಡಿದ ಘಂಟೆಯನ್ನು ಭಾರಿಸಿದರೆ, ಆ ಗಂಟೆಯಿಂದ ಬರುವ “ಓಂಕಾರ” ಶಬ್ದದಿಂದ ದುಷ್ಟ ಶಕ್ತಿಗಳು ದೂರವಾಗಿ, ನಮ್ಮ ಕಷ್ಟಗಳು ದೂರವಾಗುತ್ತವೆ ಎಂದು ಕರ್ಮ ಸಿದ್ಧಾಂತ ನಮಗೆ ತಿಳಿಸುತ್ತದೆ.

ಆರತಿ ಸಮಯದಲ್ಲಿ ಘಂಟೆ ಹೊಡೆದರೆ, ನಮ್ಮ ಮನೆಯಲ್ಲಿ ಅಥವಾ ದೇವಾಲಯದಲ್ಲಿನ ದೇವಮೂರ್ತಿಗಳ ವಿಗ್ರಹಗಳೊಳಗೆ ದೇವತೆಗಳನ್ನು ಆಹ್ವಾನಿಸುತ್ತಿದ್ದೇವೆಂದು ಅರ್ಥ.ಆರತಿ ಸಮಯದಲ್ಲಿ ಘಂಟೆ ಹೊಡೆಯುವ ಸಂದರ್ಭದಲ್ಲಿ ಕಣ್ಣು ಮುಚ್ಚಿಕೊಳ್ಳಬಾರದು. ಆ ಸಮಯದಲ್ಲಿ ಆರತಿ ಕೊಡುತ್ತಾ, ಘಂಟೆ ಭಾರಿಸುತ್ತಾ ದೈವವನ್ನು ಆಹ್ವಾನಿಸುತ್ತಾ ಪೂಜಾರಿ ನಮಗೆ ತೋರಿಸುತ್ತಿದ್ದಾರೆ ಎಂದರ್ಥ.

ಕೆಲವು ಆಲಯಗಳಲ್ಲಿ ಘಂಟೆಗಳ ಗೊಂಚಲನ್ನು ನಾವು ನೋಡುತ್ತಿರುತ್ತೇವೆ. ಆ ರೀತಿಯ ಘಂಟೆಗಳನ್ನು ಹೊಡೆಯುವುದರಿಂದ ಯಾವುದೇ ಪ್ರಯೋಜನವಾಗಲ್ಲ. ಅವು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತ.

 

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ