ಜ್ಯೋತಿಷ್ಯ

ದಿನ ಭವಿಷ್ಯ ಶನಿವಾರ…ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

557

ಶನಿವಾರ, 21/4/2018,  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಮೇಷ:

ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು ಸಾಧ್ಯತೆ. ಅಂಜಿಕೆ, ಅಧೈರ್ಯ ಬದಿಗಿಟ್ಟು?   ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ.

ವೃಷಭ:-

ನಂಬಿದ ಜನರು ಕೈಕೊಡುತ್ತಿದ್ದಾರೆ ಎಂದು ಬೇಸರಿಸುವುದರಲ್ಲಿ ಅರ್ಥವಿಲ್ಲ. ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವಿಲ್ಲ. ಅಂತೆಯೇ ನಿಮ್ಮ ನಡೆನುಡಿಗಳಲ್ಲಿ ಬದಲಾವಣೆ ತಂದುಕೊಂಡಲ್ಲಿ ಒಳ್ಳೆಯದನ್ನು ಕಾಣುವಿರಿ.

ಮಿಥುನ:

ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಕಹಿ ಸತ್ಯ ನಿಮಗೆ ಗೊತ್ತಾಗುವ ಹೊತ್ತಿಗೆ ಅಧಿಕ ಹಣವನ್ನು ಕಳೆದುಕೊಳ್ಳುವಿರಿ. ಹಾಗಾಗಿ ವ್ಯವಹಾರ ಮಾಡುವಾಗ ಎದುರಾಳಿಯ ಪೂರ್ವಾಪರ ವಿಚಾರಗಳನ್ನು ತಿಳಿದುಕೊಳ್ಳುವುದು ಬಹು ಮುಖ್ಯ.

ಕಟಕ :-

ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಬೇರೆಯವರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು.

 ಸಿಂಹ:

ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಪಾತ್ರವಾಗುವುದು.

ಕನ್ಯಾ :-

ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಡುವುದರಿಂದ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ತುಲಾ:

ಕೆಲಸ ಸಾಧನೆಗಾಗಿ ಹಲವು ಪ್ರಮುಖರನ್ನು ಭೇಟಿ ಮಾಡಬೇಕಾಗುವುದು. ಮನೆಯಿಂದ ಹೊರಗಡೆ ಹೊರಡುವ ಮುನ್ನ ಮನೆಯಲ್ಲಿನ ಹಿರಿಯರ ಆಶೀರ್ವಾದ ಪಡೆದು ಹೋದಲ್ಲಿ ಕೆಲಸ ಸಿದ್ಧಿಸುವುದು.

ವೃಶ್ಚಿಕ :-

ಜೀವನದಲ್ಲಿ ಕಷ್ಟ ಸುಖಗಳು ಬೆಳಕು ಕತ್ತಲೆಯಂತೆ. ಕತ್ತಲು ಕಳೆದು ಬೆಳಕು ಹರಿವಂತೆ ಸದ್ಯದ ಕಷ್ಟಗಳು ಕರಗಿ ಬೆಳಕೆಂಬ ಸುಖದ ಜೀವನವು ನಿಮ್ಮ ಪಾಲಿಗಿದೆ. ಚಿಂತಿಸದಿರಿ ತಾಳ್ಮೆಯಿಂದಿರಿ.

ಧನಸ್ಸು:

ಅತ್ಯಂತ ಚುರುಕುತನದಿಂದ ಇದ್ದರೆ ನೀವು ಆಲಸ್ಯತನ ತೋರುವುದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಮನೋವೇಗವುಳ್ಳ ಆಂಜನೇಯನನ್ನು ಸ್ಮರಿಸಿ ಆಲಸ್ಯತನದಿಂದ ಹೊರಬನ್ನಿ.

ಮಕರ :-

ಟೀಕಿಸುವಂತಹ ಜನರ ಕುರಿತು ಆತಂಕ ಪಡಬೇಕಾಗಿಲ್ಲ. ನಿಮ್ಮ ಸುತ್ತಮುತ್ತಲ ಜನರೇ ನಿಮ್ಮನ್ನು ಅಡ್ಡಹಾದಿಗೆ ಎಳೆಯುತ್ತಿರುವರು. ಹಾಗಾಗಿ ನಿಮ್ಮ ಬಳಿ ಬರುವ ಜನರ ಬಗ್ಗೆ ಎಚ್ಚರದಿಂದಿರುವುದು ಸರಿ.

ಕುಂಭ:-

ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷ್ಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವಿರಿ.

ಮೀನ:-

ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಪಡೆಯಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಪಂಡಿತ್ ಸುದರ್ಶನ್ ಭಟ್

ಆಧ್ಯಾತ್ಮಿಕ ಚಿಂತಕರು ದೈವಜ್ಞ ಜ್ಯೋತಿಷ್ಯರು  ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸುವರು : 9663542672

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ವಿದ್ಯಾರ್ಥಿಗಳನ್ನೇ ಕಾರ್ಮಿಕರನ್ನಾಗಿ ಬಳಸಿದ ಶಾಲೆ..!

    ಚೆನ್ನಾಗಿಓದಲಿ ಎಂದು ಪೋಷಕರು ಆಸೆಯಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಅಲ್ಲಿ ನಡೆಯುವುದೇ ಬೇರೆ.ಓದಿ, ಆಡಬೇಕಾದ ಮಕ್ಕಳು ದೊಡ್ಡವರು ಮಾಡುವ ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಮಕ್ಕಳಿಂದಲೇ ಟ್ರಾಕ್ಟರ್‌ಗೆ ಜಲ್ಲಿ ತುಂಬಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸ ಬೇಕಾ ದ ಶಿಕ್ಷಕರು, ಸಾವಿರಾರು ರುಪಾಯಿ ಶುಲ್ಕ ಪಡೆಯುವ ಜೊತೆಗೆ ವಿದ್ಯಾರ್ಥಿಗಳನ್ನು ಕೂಲಿ ಕಾರ್ಮಿಕರನ್ನಾಗಿ ದುಡಿಸಿ ಕೊಂಡಿರುವ ಘಟನೆ ತಾಲೂಕಿನ ಚೇಳೂರು ಅರವಿಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಸಾವಿರಾರು ರುಪಾಯಿ ಶುಲ್ಕ ಪಾವತಿಸಿ ಖಾಸಗಿ…

  • ಆಧ್ಯಾತ್ಮ, ಜ್ಯೋತಿಷ್ಯ

    ದೀಪಾವಳಿ ಹಬ್ಬದ ಆರಂಭದೊಂದಿಗೆ 28-10-19 ರಿಂದ 4-11-19 ಈ ರಾಶಿಯವರಿಗೆ ರಾಜಯೋಗ ಶುರುವಾಗಲಿದೆ

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ  ಇಂದು ಆರೋಗ್ಯ…

  • ಸ್ಪೂರ್ತಿ

    ಉಚಿತ ಚಿಕಿತ್ಸೆ ಕೊಟ್ಟು ಬಡವರ ಪಾಲಿಗೆ ದೇವರಂತಾಗಿರುವ ಡಾ.ರಮಣರಾವ್..!ತಿಳಿಯಲು ಈ ಲೇಖನ ಓದಿ..

    ಸುತ್ತಮುತ್ತಲ ಪ್ರದೇಶದಲ್ಲಿ 7000 ಶೌಚಾಲಯ ನಿರ್ಮಿಸಿದ್ದಾರೆ. 60 ಹಳ್ಳಿಗಳಿಗೆ ಸಹಾಯವಾಗುವಂತೆ ನಾಲ್ಕು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ. ನಗರದಲ್ಲಿ 50 ಶಾಲೆಗಳನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಅನ್ನು ನೀಡುತ್ತಿದ್ದಾರೆ. ಡಾ.ರಮಣರಾವ್ ಅವರ ವೈದ್ಯಕೀಯ ಸೇವೆಗೆ ಮೆಚ್ಚಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

  • ಸುದ್ದಿ

    ಮರದಲ್ಲೇ ಕುರ್ಚಿ ಬೆಳೆಯುವ ಪದ್ಧತಿ ಬಗ್ಗೆ ನಿಮಗೆಷ್ಟು ಗೊತ್ತು.?? ಇದರಿಂದಾಗುವ ಲಾಭಗಳೇನು ಗೊತ್ತೇ….

    ಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್‍ನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಗಮನ ಸೆಳೆದಿದೆ. ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ…

  • ಆಧ್ಯಾತ್ಮ

    ಶ್ರೀ ಶಿರಡಿ ಸಾಯಿಬಾಬಾ ಅವರ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯಗಳು..!

    ಭಾರತವು ವಿಭಿನ್ನ ಧರ್ಮಗಳ, ನಂಬಿಕೆಗಳು, ಆಚರಣೆಗಳ ನೆಲೆಬೀಡಾಗಿದ್ದು, ಇಲ್ಲಿ ಎಷ್ಟೋ ಸಾಧು,ಸಂತರು,ಮಹಾನ್ ದಾರ್ಶನಿಕರು ಜನಿಸಿದ್ದಾರೆ. ತಮ್ಮ ಸಾಮಾನ್ಯ ಜೀವನ ಕ್ರಮದಿಂದ ಧರ್ಮವನ್ನು ಭೋದಿಸಿ,ಪವಾಡಗಳನ್ನು ಮಾಡಿ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ.

  • ಸುದ್ದಿ

    ಶಾಲೆಯ ಬಾಗಿಲಿನ ಬಳಿ ನಿಂತ ಬಾಲಕಿ. ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ಅಡ್ಮಿಶನ್.

    ಈಚೆ ಶಾಲೆಯ ಬಾಗಿಲಿನ ಬಳಿ ಬಾಲಕಿಯೊಬ್ಬಳು ತನ್ನ ಕೈಯಲ್ಲಿ ಖಾಲಿ ಬಟ್ಟಲು ಹಿಡಿದುಕೊಂಡು ತರಗತಿ ಹೊರಗೆ ನಿಂತು ಇಣುಕಿ ನೋಡುತ್ತಿರುವ ಫೋಟೋವೊಂದು ತುಂಬಾ ವೈರಲ್ ಆಗಿತ್ತು. ಫೋಟೋ ವೈರಲ್ ಆದ ಬಳಿಕ ಬಾಲಕಿಗೆ ಅದೇ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. ದಿವ್ಯಾ ಗುಡಿಸುವವನ ಮಗಳಾಗಿದ್ದು, ಶಾಲೆಯ ಹತ್ತಿರದಲ್ಲಿಯೇ ಇರುವ ಸ್ಲಂನಲ್ಲಿ ವಾಸಿಸುತ್ತಿದ್ದಳು. ಪೋಷಕರು ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋದಾಗ ದಿವ್ಯಾ ಊಟ ಸಿಗಬಹುದೆಂಬ ಭರವಸೆಯಿಂದ ಪ್ರತಿದಿನ ಶಾಲೆಯ ಬಳಿ ಹೋಗುತ್ತಿದ್ದಳು. ಈ ಸಮಯದಲ್ಲಿ  ಅವುಲಾ ಶ್ರೀನಿವಾಸ್  ಎಂಬುವವರು…