ಜ್ಯೋತಿಷ್ಯ

ದಿನ ಭವಿಷ್ಯ ಮಂಗಳವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಶುಭವೋ ಅಶುಭವೋ ನೋಡಿ ತಿಳಿಯಿರಿ…ಶೇರ್ ಮಾಡಿ…

232

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಮಂಗಳವಾರ, 17 ಏಪ್ರಿಲ್ 2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ06:06:03
ಸೂರ್ಯಾಸ್ತ18:47:16
ಹಗಲಿನ ಅವಧಿ12:41:12
ರಾತ್ರಿಯ ಅವಧಿ11:17:56
ಚಂದ್ರೋದಯ07:04:48
ಚಂದ್ರಾಸ್ತ20:10:53

ಋತು:ವಸಂತ
ಆಯನ:ಉತ್ತರಾಯಣ
ಸಂವತ್ಸರ:ವಿಲಂಬಿ
ಸಂವತ್ಸರ (ಉತ್ತರ):ವಿರೋಧಿಕೃತ್
ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ
ತಿಂಗಳು (ಹುಣ್ಣಿಮಾಂತ್ಯ):ವೈಶಾಖ
ಪಕ್ಷ : ಶುಕ್ಲ ಪಕ್ಷ
ತಿಥಿ : ದ್ವಿತೀಯ
ನಕ್ಷತ್ರ : ಭರಣಿ
ಯೋಗ : ಪ್ರೀತಿ
ಪ್ರಥಮ ಕರಣ : ಬಾಳವ ಕೌಳವ
ಸೂರ್ಯ ರಾಶಿ : ಮೇಷ
ಚಂದ್ರ ರಾಶಿ : ಮೇಷ

ಮುಹೂರ್ತ

ರಾಹು ಕಾಲ15:37 – 17:12ಅಶುಭ
ಯಮಘಂಡ ಕಾಲ09:16 – 10:52ಅಶುಭ
ಗುಳಿಕ ಕಾಲ12:27 – 14:02
ಅಭಿಜಿತ್12:01 -12:52ಶುಭ
ದುರ್ಮುಹೂರ್ತ08:38 – 09:29ಅಶುಭ
ದುರ್ಮುಹೂರ್ತ23:19 – 24:10*ಅಶುಭ

ಮೇಷ:-

ನಿಮ್ಮ ಮಾತಿನ ಬಗ್ಗೆ ಸದಾ ಜಾಗೃತಿಯನ್ನು ಹೊಂದಬೇಕಾಗುವುದು. ನೀವು ಆಡಿದ ತಮಾಷೆ ಮಾತು ಪತಿಪತ್ನಿಯರಲ್ಲಿ ವಿರಸವುಂಟು ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಎರಡು ಬಾರಿ ಚಿಂತಿಸಿ ಮಾತನ್ನು ಆಡಿ. ಒಳಿತಾಗುವುದು.

ವೃಷಭ:-

ಉತ್ತಮ ವಾಕ್ ಚತುರ್ಯರಾದ ನೀವು ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ. ಹಾಗಾಗಿ ಪ್ರಭಾವಿ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಸಿಗುವರು ಮತ್ತು ಸಭೆ-ಸಮಾರಂಭಗಳಿಗೆ ನಿಮ್ಮನ್ನೆ ನಿರೂಪಕರನ್ನಾಗಿ ನೇಮಿಸುವ ಸಾಧ್ಯತೆ ಇರುತ್ತದೆ.

ಮಿಥುನ:

ವಿವಿಧ ರೀತಿಯ ಜನರನ್ನು ಇಂದು ಭೇಟಿಯಾಗಲಿದ್ದೀರಿ. ಮನಸ್ಸಿನ ಗೊಂದಲವನ್ನು ನಿರ್ಮಿಸುವವರ ಬಗ್ಗೆ ವಿಶೇಷವಾದ ಎಚ್ಚರಿಕೆಯಿರಲಿ. ಕೆಲ ಗ್ರಹಗಳ ಸಂಚಾರವು ಮಕ್ಕಳ ವಿದ್ಯೆಯಲ್ಲಿ ಹಿನ್ನಡೆ ಉಂಟು ಮಾಡುವುದು.

ಕಟಕ :-

ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು. ಈ ಹಿಂದೆ ನಡೆದು ಹೋದ ಘಟನೆಗಳಿಗೆ ನೀವೆಷ್ಟು ಕಾರಣೀಭೂತರು ಎಂಬುದನ್ನು ಚಿಂತಿಸ. ಆದ ಘಟನೆಯನ್ನು ಪುನಃ ಮರುಕಳಿಸದಂತೆ ನೋಡಿಕೊಳ್ಳಿ.

 ಸಿಂಹ:

ಮನಸ್ಸನ್ನು ನಿರ್ಧರಿಸುವಂತಹ ತುರ್ತು ಶಕ್ತಿಯನ್ನು ಸಂಪಾದಿಸಿಕೊಳ್ಳಿ. ಆಂಜನೇಯ ಮಂತ್ರವನ್ನು ಇಲ್ಲವೆ ಹನುಮಾನ್‌ ಚಾಲೀಸನ್ನು ತಪ್ಪದೆ ಪಠಿಸಿ. ನಿರ್ಧಾರಗಳನ್ನು ತಳೆಯುವಾಗ ಹಿರಿಯರ ಸಲಹೆಯನ್ನು ಸ್ವೀಕರಿಸಿ.

ಕನ್ಯಾ :-

ನಿಮ್ಮ ಮನಸ್ಸನ್ನು ಘಾಸಿಗೊಳಿಸಿ ದುರ್ಬಲರನ್ನಾಗಿ ಮಾಡುವ ಸ್ನೇಹಿತರನ್ನು ಅಲಕ್ಷಿಸಿಬಿಡಿ. ನಿಮಗೆ ಧೈರ್ಯವನ್ನು ತುಂಬುವ ಮತ್ತು ಸಕಾರಾತ್ಮಕವಾಗಿ ಚಿಂತಿಸುವ ಜನರ ಸಂಪರ್ಕವನ್ನು ಹೊಂದಿ. ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು.

ತುಲಾ:

ಗೂಳಿಯಂತೆ ಮುನ್ನುಗ್ಗುವ ಸ್ವಭಾವ ತಪ್ಪೇನಲ್ಲ. ಆದರೆ ಪ್ರತಿಯೊಂದಕ್ಕು ಒಂದು ಇತಿಮಿತಿ ಇರುತ್ತದೆ. ಆತುರಗಾರನಿಗೆ ಬುದ್ಧಿಮಟ್ಟ ಕಡಿಮೆ ಎನ್ನುವಂತೆ ಎರಡೆರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.

ವೃಶ್ಚಿಕ :-

ನೀವು ಹೊಸದಾದ ಕಾಯಕಲ್ಪವೊಂದನ್ನು ನಿಮ್ಮ ವ್ಯಾಪಾರದಲ್ಲಿ ಒದಗಿಸಿಕೊಡಲು ಕಾಲ ಪಕ್ವವಾಗಿದೆ. ಇಂತಹ ಒಳ್ಳೆಯ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಧನಸ್ಸು:

ನೀವು ಉತ್ತಮ ಕವಿಯಾಗಿದ್ದರೆ ಅಥವಾ ಉತ್ತಮ ನಳಪಾಕ ತಜ್ಞರಾಗಿದ್ದರೆ ನಿಮ್ಮ ಕೌಶಲ್ಯಕ್ಕೆ ಗೌರವ ತರುವಂತಹ ಕೆಲಸ ನಿಮ್ಮಿಂದಾಗುವುದು. ಎಲ್ಲರ ಬಾಯಲ್ಲಿಯೂ ನಿಮ್ಮ ಗುಣಗಾನ ನಡೆಯುವುದು.

ಮಕರ :-

ಸಂಶೋಧಕರಿಗೆ ತಾಂತ್ರಿಕ ಪರಿಣಿತರಿಗೆ ಒಳ್ಳೆಯ ದಿನ. ನಿಮ್ಮ ಸಂಶೋಧನಾ ಬರಹಗಳಿಗೆ ಮಾನ್ಯತೆ ದೊರೆತು ವೃತ್ತಪತ್ರಿಕೆಯಲ್ಲಿ ಆ ಲೇಖನವು ಪ್ರಕಟಗೊಳ್ಳುವ ಸಾಧ್ಯತೆ ಇರುತ್ತದೆ. ಗುರುವಿನ ಸ್ತೋತ್ರ ಪಠಿಸಿ.

ಕುಂಭ:-

ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಕಾಲ ತಳ್ಳುವಂತಹ ಪರಿಸ್ಥಿತಿ ಎದುರಾಗಬಹುದು. ಹೊತ್ತು ಕಳೆಯುವುದು ಕಷ್ಟವಾಗುವುದು. ಪುರಾಣ ಪುರುಷರ ಅಥವಾ ಧಾರ್ಮಿಕ ಪುಸ್ತಕಗಳನ್ನು ಓದುವತ್ತ ಗಮನ ಕೊಡಿ. ಮನಸ್ಸು ಪ್ರಶಾಂತವಾಗುವುದು.

ಮೀನ:-

ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಪ್ರತಿಯೊಬ್ಬ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Health, ಆಯುರ್ವೇದ, ಆರೋಗ್ಯ, ಉಪಯುಕ್ತ ಮಾಹಿತಿ

    ಪಾರಿಜಾತದ ಆರೋಗ್ಯಕರ ಗುಣಗಳು !!!

    ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ…

  • ಸುದ್ದಿ

    ಕಿಚ್ಚನ ನಳಪಾಕ ಸೌಟು ಹಿಡಿದು ಮೊಟ್ಟೆ ದೋಸೆ ಮಾಡಿದ ಸುದೀಪ್…!

    ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ಟಿನಲ್ಲಿ ಕಿಚ್ಚ ಸುದೀಪ್ ರುಚಿ ರುಚಿ ಮೊಟ್ಟೆ ದೋಸೆ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರೀಕರಣದ ನೆನಪನ್ನು ಮೆಲುಕು ಹಾಕಿದ್ದಾರೆ. ಹೌದು, ಸೈರಾ ನರಸಿಂಹ ರೆಡ್ಡಿ ಚಿತ್ರ ಕನ್ನಡ ಸೇರಿದಂತೆ ಹಲವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅ. 2 ಅಂದರೆ ನಾಳೆಯೇ ಚಿತ್ರ ತೆರೆಯಮೇಲೆ ಸಖತ್ ಸದ್ದು ಮಾಡಲಿದೆ. ಈ ನಡುವೆ ಸುದೀಪ್ ಚಿತ್ರೀಕರಣ ವೇಳೆ ಚಿತ್ರ ತಂಡದ ಜೊತೆ ಕಳೆದ ಸಿಹಿ ನೆನೆಪಿನ ವಿಡಿಯೋವನ್ನು…

  • ಸುದ್ದಿ

    ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು…!

    ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು? ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ…

  • ಉಪಯುಕ್ತ ಮಾಹಿತಿ, ಜೀವನಶೈಲಿ

    ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ… ಆದರೆ ಆ ನೀರಿನಿಂದ ನಮ್ಮ ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ.

  • ಸಿನಿಮಾ

    ವಿಷ್ಣು-ಸೌಂದರ್ಯ ಸಾವಿಗೆ ಇವಳೇ ಕಾರಣನಾ..!ಮತ್ತೆ ಸುದ್ದಿಯಾಗುತ್ತಿದೆ ನಾಗವಲ್ಲಿ..!ತಿಳಿಯಲು ಈ ಲೇಖನ ಓದಿ…

    ನಾಗವಲ್ಲಿ ಪಾತ್ರ ಜನಪ್ರಿಯವಾದ ಕಾರಣ ಅದೇ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ಆದರೆ, ಚಿತ್ರರಂಗದವರು ಅಷ್ಟಕ್ಕೇ ಬಿಡುವ ಹಾಗೆ ಕಾಣುತ್ತಿಲ್ಲ. ವಿಷ್ಣುವರ್ಧನ್ ಮತ್ತು ಸೌಂದರ್ಯ ಅವರ ಸಾವಿಗೆ ಅದೇ ನಾಗವಲ್ಲಿ ಕಾರಣನಾ ಎಂಬ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಆಗಿದೆ.

  • ಆರೋಗ್ಯ

    ನಿಂಬೆಹಣ್ಣಿನ ಈ ಉಪಯೋಗಗಳನ್ನು ಕೇಳಿದ್ರೆ, ನೀವ್ ಉಪಯೋಗಿಸದೆ ಸುಮ್ನೆ ಇರಲ್ಲ..!

    ದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ವಾಮಾಚಾರಕ್ಕೆ, ಶುಭ ಕಾರ್ಯಗಳಿಗೆ, ಅಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು.ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ಮಾಡಲಿಕ್ಕೆ, ಇಲ್ಲವೇ ಮಾಟ ಮಂತ್ರ ಮಾಡಲಿಕ್ಕೆ ಮಾತ್ರ ಸೀಮಿತವಲ್ಲ.