ಜ್ಯೋತಿಷ್ಯ

ದಿನ ಭವಿಷ್ಯ ಗುರುವಾರ..ಹೇಗಿದೆ ನೋಡಿ ಈ ದಿನದ ನಿಮ್ಮ ನಕ್ಷತ್ರ ಭವಿಷ್ಯ…ಶೇರ್ ಮಾಡಿ…

500

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಗುರುವಾರ, 19 ಏಪ್ರಿಲ್ 2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ 06:04:22
ಸೂರ್ಯಾಸ್ತ 18:48:04
ಹಗಲಿನ ಅವಧಿ12:43:42
ರಾತ್ರಿಯ ಅವಧಿ11:15:27

ಋತು:ವಸಂತ
ಆಯನ:ಉತ್ತರಾಯಣ
ಸಂವತ್ಸರ:ವಿಲಂಬಿ
ಸಂವತ್ಸರ (ಉತ್ತರ):ವಿರೋಧಿಕೃತ್
ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ
ತಿಂಗಳು (ಹುಣ್ಣಿಮಾಂತ್ಯ):ವೈಶಾಖ
ಪಕ್ಷ : ಶುಕ್ಲ ಪಕ್ಷ
ತಿಥಿ : ಚತುರ್ಥಿ
ನಕ್ಷತ್ರ : ರೋಹಿಣಿ
ಯೋಗ : ಸೌಭಾಗ್ಯ
ಪ್ರಥಮ ಕರಣ : ವಾಣಿಜ ವಿಷ್ಠಿ(ಭದ್ರ)
ಸೂರ್ಯ ರಾಶಿ : ಮೇಷ
ಚಂದ್ರ ರಾಶಿ : ಮೇಷ

ಮುಹೂರ್ತ

ರಾಹು ಕಾಲ14:02 – 15:37ಅಶುಭ
ಯಮಘಂಡ ಕಾಲ06:04 – 07:40ಅಶುಭ
ಗುಳಿಕ ಕಾಲ09:15 – 10:51
ಅಭಿಜಿತ್12:01 -12:52ಶುಭ
ದುರ್ಮುಹೂರ್ತ10:19 – 11:10ಅಶುಭ
ದುರ್ಮುಹೂರ್ತ15:24 – 16:15ಅಶುಭ

ಮೇಷ:-

ಸದಾ ಕಾಲವು ನಿಮ್ಮನ್ನು ಜನರು ಮಾತನಾಡಿಸಬೇಕು. ನಿಮ್ಮ ಪ್ರತಿಯೊಂದು ಕಾರ್ಯಕ್ಕೂ ಶಹಾಬಾಸ್‌ಗಿರಿ ಕೊಡಬೇಕೆಂಬ ಮನೋಭೂಮಿಕೆಯಿಂದ ಹೊರಬನ್ನಿ. ಏಕೆಂದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ . ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನು ಗೌರವಿಸಿ.

ವೃಷಭ:-

ಸಾಮಾಜಿಕವಾಗಿ ನೀವು ಮನ್ನಣೆಗಳಿಸುವಿರಿ. ನೀವು ಅದ್ಭುತವೂ ವಿಶೇಷವೂ ಆದಂತಹ ಕಾಂತಿಯ ಶಕ್ತಿಯಾಗಿ ಆದರಿಸಲ್ಪಡುವಿರಿ. ಇದು ದೈವವು ನಿಮ್ಮ ಮೇಲೆ ತೋರಿದ ಔದಾರ್ಯವೆಂದು ಭಾವಿಸಿ. ಅಹಂಕಾರ ಪಡದಿರಿ.

ಮಿಥುನ:

ನಿಜವಾದ ಅಂತಃಕರಣಿಯಾದ ನೀವು ಇತರರ ಕಷ್ಟಕ್ಕೆ ಮರುಗಿ ಸಹಾಯ ನೀಡುವಿರಿ. ಇದರಿಂದ ಜನರು ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನು ತಾಳುವರು. ನಿಮ್ಮನ್ನು ಗೌರವಿಸಲು ಬಂದ ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿ.

ಕಟಕ :-

ನಿಮ್ಮಲ್ಲಿರುವ ಅಪರೂಪವಾದ ಶಕ್ತಿ, ಚೈತನ್ಯಗಳು ಅನ್ಯರನ್ನು ನಿಮ್ಮತ್ತ ಸೆಳೆಯಲು ಸಹಕಾರಿಯಾಗುವುದು. ಅಂತರಂಗದಲ್ಲಿನ ದುಗುಡ, ದುಮ್ಮಾನಗಳನ್ನು ಅದುಮಿಟ್ಟುಕೊಂಡು ಹೊರಜಗತ್ತಿನಲ್ಲಿ ನಗುವಿನ ಮುಖವಾಡವನ್ನು ಧರಿಸುವಿರಿ.

 ಸಿಂಹ:

ಇತರರ ಕಷ್ಟಕಾರ್ಪಣ್ಯಕ್ಕೆ ಅಯ್ಯೋ ಎಂದರೆ ಆಯುಷ್ಯ ಕಡಿಮೆ ಆಗುವಂತಹ ಸಂದರ್ಭವಿದೆ. ಪರರ ಕಷ್ಟಕ್ಕೆ ಮರುಗಿ ದಾನಶೂರ ಕರ್ಣನಂತೆ ಇದ್ದುದೆಲ್ಲವನ್ನು ಪರರಿಗೆ ಹಂಚುವ ಔದಾರ್ಯದಿಂದ ಕೆಲಕಾಲ ಹಿಂದೆ ಸರಿಯುವುದು ಒಳ್ಳೆಯದು.

ಕನ್ಯಾ :-

ನಿಮ್ಮೊಳಗಿನ ಸೂಕ್ಶ್ಮ ಅಹಂಕಾರದ ಕುರಿತಾಗಿ ಆತ್ಮವಲೋಕನೆಯನ್ನು ಮಾಡಿಕೊಳ್ಳಿ. ಎಲ್ಲಾ ಖಾರಕ್ಕಿಂತ ಅಹಂಕಾರ ಹೆಚ್ಚು ಖಾರ ಎಂಬ ಅನುಭವದ ಮಾತು ನಿಮಗೆ ಬಿಸಿ ಮುಟ್ಟಿಸುವುದು. ಉತ್ತಮರಾದ ಸ್ನೇಹಿತರ ಸಲಹೆಯನ್ನು ಪಡೆಯಿರಿ.

ತುಲಾ:

ನಂಬಿಕೆಯೆ ದೇವರು. ನಂಬಿ ಕೆಟ್ಟವರಿಲ್ಲವೋ ಗುರುರಾಯರ ಎಂಬ ವಾಣಿಯನ್ನು ನಿಮ್ಮ ವ್ಯಾಪಾರ, ವ್ಯವಹಾರದ ಬಂಡವಾಳ ಮಾಡಿಕೊಳ್ಳಿ. ಹಾಗಾಗಿ ಕೆಲಸಗಾರರನ್ನು ನಂಬಿ. ಮತ್ತು ಅವರೂ ಕೂಡಾ ನಿಮ್ಮನ್ನು ನಂಬುವಂತೆ ಮಾಡಿ.

ವೃಶ್ಚಿಕ :-

ನಿಮ್ಮ ವ್ಯವಹಾರದಲ್ಲಿ ಅತಿ ಹೆಚ್ಚಿನ ಲಾಭ ಗಳಿಕೆಯನ್ನು ನಿರೀಕ್ಷಿಸಬಹುದು. ಪಾಲುದಾರರು ನಿಷ್ಠೆಯಿಂದ ಬಂದ ಲಾಭಾಂಶದಲ್ಲಿ ನಿಮ್ಮ ಪಾಲನ್ನು ನೀಡುವರು. ಇದರಿಂದ ಮುಂದಿನ ವ್ಯವಹಾರಗಳು ಸುಗಮವಾಗುವುದು.

ಧನಸ್ಸು:

ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎನ್ನುವಂತೆ ನಿಮ್ಮ ಮನೆಗೆ ಲಕ್ಷ್ಮೀಯ ಆಗಮನವಾದಗ. ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಧರ್ಮ ಮಾಡಿದಲ್ಲಿ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ.

ಮಕರ :-

ನಿಮ್ಮ ಕಚೇರಿ ಕೆಲಸ ಕಾರ್ಯಗಳಲ್ಲಿ ನೀವು ತೋರುವ ಶ್ರದ್ಧೆ ಮತ್ತು ಪ್ರಾಮಾಣಿಕತೆ ನಿಮ್ಮ ಮೇಲೆ ಮೇಲಧಿಕಾರಿಗಳ ಕೃಪಾಕಟಾಕ್ಷ ಕಂಡು ಇತರೆಯವರು ಅಸೂಯೆ ಪಡುವರು. ನಿಮ್ಮನ್ನು ಮಣಿಸಲೆಂದೆ ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುವರು. ಈ ಬಗ್ಗೆ ತಲೆಕೆಡಿಸಿಕೊಳ್ಳದಿರಿ.

ಕುಂಭ:-

ನಿಮ್ಮ ಮೇಲೆ ನಿಜವಾದ ಅಂತಃಕರಣದಿಂದ ಮಿಡಿಯುವ ಜನರ ಭೇಟಿ ಆಗುವುದು. ಇದರಿಂದ ನಿಮಗೆ ಮಾನಸಿಕ ಧೈರ್ಯ-ಸ್ಥೈರ್ಯ ಬರುವುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ.

ಮೀನ:-

ಮುನ್ನೆಚ್ಚರಿಕೆಯಿಂದ ಸಂಘಟನೆಯನ್ನು ನಡೆಸಿ. ಇದರ ಮುಂದಾಳತ್ವವನ್ನು ನೀವೇ ವಹಿಸುವುದು ಒಳ್ಳೆಯದು. ಇದರಿಂದ ಜನರು ಸಂತಸಗೊಂಡು ನಿಮ್ಮನ್ನು ಆದರಿಸಿ ಗೌರವ ತೋರುವರು. ಆಹಾರ-ವಿಹಾರದಲ್ಲಿ ನಿಯಮತೆಯನ್ನು ಕಾಪಾಡಿಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕಬಡ್ಡಿ

    ಈ ಸಲ ಕಪ್ಪು ನಮ್ದೇ

    ಕೋನೆಗೂ ಕಪ್ಪು ಗೆದ್ದ ಬೆಂಗಳೂರು ಹೌದು VIVO Pro Kabaddi Season 6 ರಲ್ಲಿ ಕೋನೆಗೂ ಕಪ್ಪು ನಮ್ದೇ, ಇಂದು ನಡೆದ prokabaddi ಗುಜರಾತ್ ವಿರುದ್ಧ 5 ಅಂಕ 38-33 ರಲ್ಲಿ ಗೆದ್ದಿದೆ.  ಪವನ್ ಕುಮಾರ್ ರವರಿಂದ ವಿರೋಚಿತ ಆಟ Man of the match ಅವರಿಗೆ ಸಿಕ್ಕಿದೆ. ಮ್ಯಾನ್ of the series 24match 282pts, 11.8 avarege ನಲ್ಲಿ 15 ಲಕ್ಷ ರೂ ಗೆದ್ದರು.  ಕಪ್ಪು ಗೆದ್ದ ಬೆಂಗಳೂರು bulls ಇಂದ ಎಲ್ಲ ಜನ…

  • ಆಧ್ಯಾತ್ಮ

    ಮಾರ್ಚ್ 4 ಮಹಾಶಿವರಾತ್ರಿ..ಇಂದು ತಪ್ಪದೆ ಈ ಕೆಲಸ ಮಾಡಿ…

    ಈ ಬಾರಿ ಮಾರ್ಚ್ 4 ರಂದು ಮಹಾಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಶಿವ ಭಕ್ತರಿಗೆ ವಿಶೇಷವಾದ ದಿನವಿದು. ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತರಾಗ್ತಾರೆ. ಶಿವ ಪೂಜೆ, ಆರಾಧನೆ ಜೊತೆ ಈ ಮೂರು ಕೆಲಸಗಳನ್ನು ಶಿವರಾತ್ರಿ ದಿನ ಮಾಡಿದ್ರೆ ಈಶ್ವರ ಬಹುಬೇಗ ಭಕ್ತರಿಗೆ ಒಲಿಯುತ್ತಾನೆ. ಶೀಘ್ರವೇ ನಿಮ್ಮ ಆಸೆ ಈಡೇರಲಿದೆ. ನಿಮ್ಮೆಲ್ಲ ಆಸೆ ಈಡೇರಬೇಕೆಂದ್ರೆ ಮಹಾಶಿವರಾತ್ರಿ ದಿನ ಶಿವನ ಪೂಜೆ ಜೊತೆ ಓಂ ಮಹಾಶಿವಾಯ ಸೋಮಾಯ ನಮಃ ಮಂತ್ರವನ್ನು ಜಪಿಸಿ. ನೀವು ಶಿವನ ಪೂಜೆ ವೇಳೆ…

  • ಉಪಯುಕ್ತ ಮಾಹಿತಿ, ಸೌಂದರ್ಯ

    17 ವರ್ಷಗಳ ನಂತರ ಭಾರತಕ್ಕೆ ಒಲಿದ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ..!ತಿಲಿಲಿಯಲು ಈ ಲೇಖನ ಓದಿ ..

    17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

  • ದೇಗುಲ ದರ್ಶನ, ದೇವರು

    ಮಕ್ಕಳಾಗದ ದಂಪತಿ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ. ನಿಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಿ.!

    ಬೆಳ್ತಂಗಡಿಯಿಂದ ಆರು ಕಿ.ಮೀ. ಅಂತರದ ಕಾರ್ಕಳ ರಸ್ತೆಯಲ್ಲಿ ಬಂದರೆ ಬದ್ಯಾರ್ ಎಂಬಲ್ಲಿ ಇಳಿದು ಮತ್ತೆ ಒಂದು ಕಿ.ಮೀ. ಸಾಗಿದರೆ ಪುರಾತನವಾದ ಸಂತಾನ ಗೋಪಾಲಕೃಷ್ಣ ದೇವಸ್ಥಾನ ತಲುಪಬಹುದು. ಕರಾವಳಿಯಲ್ಲಿ ಇಂತಹ ದೇವಾಲಯವಿರುವುದು ಒಂದೆರಡು ಮಾತ್ರ. ಈ ಬಾರಿಯ ಜಾತ್ರೆ 2020ರ ಜನವರಿ ಇಂದ ನಡೆಯಲಿದೆ. ಮಕ್ಕಳಿಲ್ಲದ ದಂಪತಿ ಇಷ್ಟಾರ್ಥ ಪ್ರಾಪ್ತಿಯಾದಾಗ ನಿರ್ಮಾಣ ಮಾಡಿದ್ದ ಈ ದೇವಾಲಯಕ್ಕೆ ಆರುನೂರು ವರ್ಷಗಳ ಇತಿಹಾಸವಿದೆ. ಚಾಲುಕ್ಯ ಶಿಲ್ಪ ಶೈಲಿಯ ವೇಣುಗೋಪಾಲನ ವಿಗ್ರಹ ಇಲ್ಲಿದೆ. ಪ್ರತ್ಯೇಕವಾಗಿ ದುರ್ಗೆ ಮತ್ತು ದೈವಗಳಿಗೂ ಆರಾಧನೆ ನಡೆಯುತ್ತದೆ. 2012ರಲ್ಲಿ ದೇವಾಲಯ…

  • ಆರೋಗ್ಯ

    ಕೂದಲು ಉದುರುತ್ತಿದ್ದರೆ. ಅದನ್ನು ತಡೆಗಟ್ಟಲು ಸುಲಭ ಉಪಾಯ ಇಲ್ಲಿದೆ ನೋಡಿ.!

    ಇಂದಿನ ದಿನದಲ್ಲಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಮಾಲಿನ್ಯ, ನೀರಿನಲ್ಲಿ ಬೆರೆಸುವ ರಾಸಾಯನಿಕ ಸೇರಿ, ನಗರಗಳಲ್ಲಿಪುರುಷರು ಹಾಗೂ ಮಹಿಳೆಯರಿಬ್ಬರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲು ಉದುರುವಿಕೆ ತಡೆಗಟ್ಟಲು ಮನೆಯಲ್ಲೇ ಏನು ಮಾಡಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ ಕೂದಲನ್ನು ಉದ್ದ ಬಿಡದಿರಿ ಪ್ರತಿ 8 ಅಥವಾ 10 ವಾರಗಳಿಗೊಮ್ಮೆ ಕೂದಲನ್ನು ಸಣ್ಣದಾಗಿ ಕಟ್ಟಿಂಗ್‌ ಮಾಡಿಸಿರುವುದರಿಂದ ಕೂದಲು ಉದುರುವಿಕೆ ತಡೆಯಲು ಸಾಧ್ಯ. ಇದರಿಂದ ಕೂದಲಿನ ಬೆಳವಣಿಗೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಉದ್ದ ಕೂದಲಿಗೆ ಬೇಗನೆ ನಾಶವಾಗುತ್ತದೆ, ತುಂಡಾಗುತ್ತದೆ. ಇದಕ್ಕಾಗಿ…