ವಿಸ್ಮಯ ಜಗತ್ತು

ದಿನಕ್ಕೆ ಎರಡು ಮೂರು ಬಾರಿ ಹಾವುಗಳು ಕಚ್ಚಿದ್ರೂ ಸಹ, ಈ ಯುವತಿಗೆ ಏನೂ ಹಾಗಿಲ್ಲ..!ಇಲ್ಲಿವರೆಗೂ ಈಕೆ ಎಷ್ಟು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾಳೆ ಗೊತ್ತಾ..?

159

ಒಂದು ಬಾರಿ ಹಾವು ಕಚ್ಚಿದರೂ ಪರಂಧಾಮ ಸೇರುವವರ ಮಧ್ಯೆ ಇಲ್ಲೊಬ್ಬಾಕೆ ಯುವತಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಈಕೆಯನ್ನು ಕೊಲ್ಲಬೇಕು ಎಂದು ಅದೆಷ್ಟೋ ವಿಷಜಂತುಗಳು ಪ್ರಯತ್ನ ಪಟ್ಟರೂ ವಿಷಕಂಠನಂತೆ ಈಕೆ ವಿಷವೇರಿಸಿಕೊಂಡಳೇ ಹೊರತು ಸಾವನ್ನಪ್ಪಿಲ್ಲ.

ಹಿಮಾಚಲ ಪ್ರದೇಶದ 18ರ ತರುಣಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಏನೂ ಆಗದೆ ಆರಾಮವಾಗಿದ್ದಾಳೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಅಂತ ಹೇಳುತ್ತಾರೆ.

ಕಳೆದ ಮೂರು ವರ್ಷಗಳ ಅಂತರದಲ್ಲಿ30ಕ್ಕೂ ಹೆಚ್ಚು ಬಾರಿ ನನಗೆ ಹಾವು ಕಚ್ಚಿದೆ.ನಾನು ಹಾವು ಕಂಡ ತಕ್ಷಣ ಅದರ ಜತೆ ಆಟವಾಡಲು ಆರಂಭಿಸುತ್ತೇನೆ. ತಕ್ಷಣ ಹಾವು ನನಗೆ ಕಚ್ಚುತ್ತದೆ. ನಾನು ಶಾಲಾ ದಿನಗಳಲ್ಲಿ ಓದುತ್ತಿದ್ದಾಗ ಹಲವು ಹಾವುಗಳು ನನಗೆ ಕಚ್ಚಿವೆ.

ಒಮ್ಮೊಮ್ಮೆ ದಿನಕ್ಕೆ ಎರಡು ಮೂರು ಬಾರಿ ಹಾವುಗಳೂ ಕಚ್ಚಿದ್ದಿದೆ. ಜ್ಯೋತಿಷಿಗಳು ನನಗೆ ದೇವರ ಜತೆ ಸಂಬಂಧ ಇದೆ ಎನ್ನುತ್ತಾರೆ,” ಎಂದು ಹೇಳುತ್ತಾಳೆ ಯುವತಿ.

ವಿವಿಧ ಆಸ್ಪತ್ರೆಗಳಲ್ಲಿರುವ ದಾಖಲೆಗಳ ಪ್ರಕಾರ ಇದೇ ಫೆಬ್ರವರಿ 18ಕ್ಕೆ ಆಕೆ 34ನೇ ಬಾರಿ ಹಾವಿನಿಂದ ಕಚ್ಚಿಸಕೊಂಡಿದ್ದಾಳೆ ಎಂಬ ಮಾಹಿತಿ ಸಿಗುತ್ತದೆ. ಆದರೆ ಇದಕ್ಕೆ ವೈದ್ಯರು ಹೇಳುವುದೇ ಬೇರೆ. ಹಲವು ಬಾರಿ ವಿಷವಿಲ್ಲದ ಹಾವುಗಳು ಆಕೆಗೆ ಕಚ್ಚಿವೆ.

ಕೆಲವೊಮ್ಮೆ ವಿಷ ಕಡಿಮೆ ಇರುವ ಹಾವುಗಳು ಕಚ್ಚಿದ್ದರಿಂದ ಯುವತಿಗೆ ಏನೂ ಆಗಿಲ್ಲ ಎಂದು ವೈದ್ಯರು ಮಾಹಿತಿ ನೀಡುತ್ತಾರೆ.ಇನ್ನು ಕೆಲವರು ನಿರಂತರವಾಗಿ ಹಾವು ಕಚ್ಚುತ್ತಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಉತ್ಪತ್ತಿಯಾಗಿ.ಮುಂದಿನ ಬಾರಿ ಕಚ್ಚಿದಾಗ ಏನೂ ಆಗದಂತೆ ತಡೆಯುತ್ತದೆ. ಇದರಿಂದ ಆಕೆಗೆ ಏನೂ ಆಗುತ್ತಿಲ್ಲ ಎನ್ನುತ್ತಿದ್ದಾರೆ.

ಅದರೆ ಮಾತ್ರ ಇನ್ನೂ ಬದುಕಿದ್ದಾಳೆ. ವೈದ್ಯಕೀಯ ದಾಖಲೆಗಳ ಪ್ರಕಾರ ಆಕೆಗೆ 34 ಬಾರಿ ಹಾವು ಕಚ್ಚಿದ್ದಂತೂ ನೂರಕ್ಕೆ ನೂರು ಸತ್ಯ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ