ಆರೋಗ್ಯ

ದಾಳಿಂಬೆ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

1360

ದಿನಕ್ಕೆ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರ ಬಹುದು ಎಂಬ ಮಾತು ಅನಾದಿ ಕಾಲದಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ಆ್ಯನ್ ಆ್ಯಪಲ್ ಎ ಡೇ ಕೀಪ್ಸ್ ಯು ಫ್ರಂ ದಿ ಡಾಕ್ಟ್ರರ್ ಎ ಡೇ ಅನ್ನುತ್ತಾರೆ..

ಮುಖ್ಯವಾಗಿ ಇಂದಿನ ಯಾಂತ್ರಿಕ ಲೋಕದಲ್ಲಿ ಬಲು ಸಹಜವಾಗಿ ಬರುವ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಜೀವಶಕ್ತಿಯನ್ನು ಈ ದಾಳಿಂಬೆ ಹಣ್ಣು ಹೊಂದಿದೆ. ದಾಳಿಂಬೆಯು ನಿಮ್ಮ ಚರ್ಮ, ದೇಹ ಹಾಗೂ ಕೂದಲಿನ ರಕ್ಷಣೆಯಲ್ಲೂ ಮಹತ್ತರ ಪಾತ್ರ ವಹಿಸುತ್ತದೆ. ದಾಳಿಂಬೆಯಲ್ಲಿ ವಿಟಮಿನ್ ಎ, ಸಿ ಹಾಗೂ ಇ ಅಂಶಗಳು ಹೇರಳವಾಗಿದ್ದು ಇವು ರೋಗಗಳ ವಿರುದ್ಧದ ಹೋರಾಡುವ ಶಕ್ತಿಯನ್ನು ಮನುಷ್ಯನ ದೇಹಕ್ಕೆ ನೀಡುತ್ತದೆ. ಅಲ್ಲದೆ ಗ್ರೀನ್ ಟೀಯಲ್ಲಿ ಇರುವ ಆರೋಗ್ಯವರ್ಧನೆ ಲಕ್ಷಣಗಳು ಕೂಡ ದಾಳಿಂಬೆಯಲ್ಲಿ ಕಂಡು ಬರುತ್ತದೆ. ದಾಳಿಂಬೆಯಿಂದ ಆಗುವ ಕೆಲವು ಪ್ರಯೋಜನಗಳು ಈ ಕೆಳಕಂಡಂತಿದೆ.

ಹೊಟ್ಟೆ ನೋವು ಉಪಶಮನ:-

ಮನುಷ್ಯನಲ್ಲಿ ಉಂಟಾಗುವ ಯಾವುದೇ ತೆರವಾದ ಹೊಟ್ಟೆನೋವಿಗೆ ದಾಳಿಂಬೆ ಹಣ್ಣು ರಾಮಬಾಣವಾಗಿದೆ. ಇದರ ಎಲೆಗಳಿಂದ ತಯಾರಿಸುವ ಜ್ಯೂಸ್ ಕುಡಿದರೆ ಹೊಟ್ಟೆ ನೋವು ಉಪಶಮನವಾಗುತ್ತದೆ . ಅಲ್ಲದೆ ಕಾಲರಾದಂತಹ ಮಾರಕ ರೋಗವನ್ನು ಕೂಡ ನಿಯಂತ್ರಿಸಬಹುದು.

ಕ್ಯಾನ್ಸರ್ ರೋಗ ನಿಯಂತ್ರಣ:

ವಿಟಮ್ ಎ, ಸಿ ಮತ್ತು ಕಬ್ಬಿಣ ಅಂಶಗಳು ಸಮೃದ್ಧವಾಗಿರುವ ದಾಳಿಂಬೆಯು ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಲ್ಲದು.

ಮುಖ್ಯವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ವಿವಿಧ ಬಗೆಯ ಕ್ಯಾನ್ಸರ್ ವಿರುದ್ಧ ಹೋರಾಡಿ ರೋಗವನ್ನು ಶೀಘ್ರ ಗುಣಮುಖಗೊಳಿಸುತ್ತದೆ. ದಾಳಿಂಬೆಯಲ್ಲಿರುವ ವಿಟಮನ್ ಅಂಶಗಳು ಕ್ಯಾನ್ಸರ್ ಉಂಟು ಮಾಡುವ ರೋಗಾಣುಗಳ ವಿರುದ್ಧ ಹೋರಾಡುವ ಚೈತನ್ಯವನ್ನು ಹೆಚ್ಚಿಸುತ್ತದೆ.

ಹೃದಯ ರೋಗಗಳು ಶಮನ:-

ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯುಟ್ರಿಶನ್ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ ದಾಳಿಂಬೆಯಲ್ಲಿ ಹೇರಳವಾಗಿ ಆ್ಯಂಟಿಆ್ಯಕ್ಸಿಡೆಂಟ್ಸ್ (ಉತ್ಕರ್ಷಣಗಳ) ಅಂಶದ ಪ್ರಮಾಣ ಕಂಡು ಬಂದಿದ್ದು ಇದು ಮನುಷ್ಯನಲ್ಲಿ ಉತ್ಪತ್ತಿಯಾಗುವ ಕೊಬ್ಬಿನ ಅಂಶವನ್ನು ನಿಯಂತ್ರಿಸುವ ಮೂಲಕ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಲು ಸಹಕರಿಸುತ್ತದೆ.

ನಿಯಮಿತವಾಗಿ ದಾಳಿಂಬೆ ಜ್ಯೂಸ್ ಅನ್ನು ಕುಡಿಯುತ್ತಿದ್ದರೆ ರಕ್ತವು ತೆಳುವಾಗುವ ಮೂಲಕ ಆಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ನಿಯಂತ್ರಿಸಿ ಹೃದಯಾಘಾತ ಹಾಗೂ ಸ್ಟ್ರೋಕ್ (ಪಾಶ್ರ್ವವಾಯು ಅಥವಾ ಲಕ್ವ) ಬರದಂತೆ ನಿಯಂತ್ರಿಸುತ್ತದೆ.

ದಂತ ರಕ್ಷಣೆಗೆ ಸಹಕಾರಿ:-

ಇಂದಿನ ವೈಜ್ಞಾನಿಕ ಯುಗದಲ್ಲಿ ಹಲ್ಲುಗಳ ರಕ್ಷಣೆಗಾಗಿ ನಾನಾ ನಮೂನೆಯ ಟೂತ್‍ಪೇಸ್ಟ್ ಗಳನ್ನು ಬಳಸುತ್ತೇವೆ, ಅದರೂ ಕೆಲವೊಮ್ಮೆ ಹಲ್ಲುಗಳು ಹುಳುಕಾಗುತ್ತದೆ.

ಆದರೆ ದಿನನಿತ್ಯ ದಾಳಿಂಬೆ ಸೇವನೆಯಿಂದ ಆ ತೊಂದರೆಯನ್ನು ಸರಿಪಡಿಸಿಕೊಳ್ಳಬಹುದು.

ನವಚೈತನ್ಯ:-

ಕ್ವೀನ್ ಮಾರ್ಗೆಟ್ ಯುನಿವರ್ಸಿಟಿಯು ನಡೆಸಿದ ಅಧ್ಯಯನದ ಪ್ರಕಾರ ದಾಳಿಂಬೆಯು ಮನುಷ್ಯನಿಗೆ ನವಚೈತನ್ಯವನ್ನು ಹೆಚ್ಚಿಸುವ ಅಂಶಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ ನಾವು ಖಾಯಿಲೆ ಬಿದ್ದರೆ ವೈದ್ಯರು ಸೇಬಿನ ಜತೆಗೆ ದಾಳಿಂಬೆ ರಸವನ್ನು ಸೇವಿಸಲು ಸೂಚಿಸುತ್ತಾರೆ.

ಈ ಮೇಲ್ಕಂಡ ಎಲ್ಲ ಕಾಯಿಲೆಗಳಿಗೆ ರಾಮಬಾಣದಂತಿರುವ ದಾಳಿಂಬೆ ಹಾಗೂ ದಾಳಿಂಬೆ ಉತ್ಪನ್ನಗಳಿಂದ ತಯಾರಿಸುವ ಜ್ಯೂಸ್ ಕುಡಿಯುವುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಮುಖ್ಯವಾಗಿ ಖಿನ್ನತೆ ತಡೆಯುವ ಶಕ್ತಿಯೂ ದಾಳಿಂಬೆಗಿದೆ ಇದೆ. ಇನ್ನೇಕೆ ತಡ ದಿನಕ್ಕೊಂದು ದಾಳಿಂಬೆಯನ್ನು ತಿನ್ನುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ನಿಮಗೆ ಕೂದಲು ಉದುರುವ ಸಮಸ್ಯಯೇ?ಹಾಗಾದ್ರೆ ಇಲ್ಲಿದೆ ನೋಡಿ ಮನೆಮದ್ದು ಪರಿಹಾರ……

    ಹಿಂದಿನ ಕಾಲದ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಈಗಿನ ಕಾಲದ ಜೀವನ ಪದ್ಧತಿ, ಆಹಾರ ಪದ್ಧತಿ ಇಂದಾಗಿ, ಹದಿಹರೆಯದವರಲ್ಲಿ ಕೂಡ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚಾಗಿ ಕಾಡುತ್ತಿದೆ.

  • ಆರೋಗ್ಯ

    ಸಂಧಿವಾತ ಹಾಗೂ ಮಂಡಿಯ ನೋವಿಗೆ ಇಲ್ಲಿದೆ ಶಾಶ್ವತ ಪರಿಹಾರ! ತಿಳಿಯಲು ಈ ಲೇಖನ ಓದಿ…

    ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ.

  • ಜ್ಯೋತಿಷ್ಯ

    ತಾಯಿ ಚಾಮುಂಡಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ

    ಮೇಷ ರಾಶಿ ಭವಿಷ್ಯ (Friday, December 31, 2021) ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತು ನಿಮ್ಮ ಸಂಗಾತಿಯ ಕಣ್ಣುಗಳು ಇಂದು ನಿಮಗೆ ಏನೋ…

  • ಸುದ್ದಿ

    ಜೈ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಬರಲು ಕಾರಣವೇನು ಗೊತ್ತಾ?

    ‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ. 5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್‌ಗಳಲ್ಲಿ ಪಾಲ್ಗೊಂಡು…

  • ವಿಚಿತ್ರ ಆದರೂ ಸತ್ಯ

    ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

    ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

  • ಸುದ್ದಿ

    ಸೋಲಿನಿಂದ ಬೇಸರಗೊಂಡಿರುವ ಮೊಮ್ಮಗನಿಗೆ ರಾಜಕೀಯ ಪಾಠ ಹೇಳಿಕೊಟ್ಟ ತಾತ:ದೇವೇಗೌಡರು…..!

    ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ…