ಉಪಯುಕ್ತ ಮಾಹಿತಿ

ದಯವಿಟ್ಟು ಊಟ ತಿಂದ ತಕ್ಷಣ ಈ 5 ತಪ್ಪುಗಳನ್ನು ಮಾಡಲೇಬೇಡಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

10704

ಊಟ ಆದ ತಕ್ಷಣ ಮಲ್ಕೋಳ್ಳೋ ಅಭ್ಯಾಸ ನಮ್ಮಲ್ಲಿ ತುಂಬಾ ಜನ್ರಿಗೆ ಇದ್ದೇ ಇರತ್ತೆ. ಹಾಗಂತ ಇದು ಒಳ್ಳೆ ಅಭ್ಯಾಸ ಅನ್ಕೊಂಡ್ರಾ? ಖಂಡಿತ ಇಲ್ಲ.ಆರೋಗ್ಯದ ವಿಷ್ಯಕ್ಕೆ ಬಂದಾಗ ಈ ಅಭ್ಯಾಸದ ಜೊತೆಗೆ ಇನ್ನೂ ಹಲವು ವಿಷ್ಯಗಳು ಊಟವಾದ ತಕ್ಷಣ ಮಾಡೋದು ಒಳ್ಳೇದಲ್ಲ . ಅವ್ಗಳು ಯಾವ್ಯಾವು ಅನ್ನೋದನ್ನ ಒಂದೊಂದಾಗಿ ನೋಡುವ.

ಹಣ್ಣ್ ತಿನ್ನೋದು :-

ಊಟ ಆದ ಮೇಲೆ ಹಣ್ಣು ತಿನ್ನೋದು ಅಷ್ಟೊಂದು ಒಳ್ಳೆಯದಲ್ಲ. ಯಾಕೆ ಅಂದ್ರೆ ಅದ್ನ ಪಚನ ಮಾಡೋದಕ್ಕೆ ತುಂಬಾನೇ ಕಿಣ್ವಗಳು ಬೇಕಾಗತ್ತೆ. ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶ ಇರೋದ್ರಿಂದ ಸುಲಭವಾಗಿ ಅದ್ನ ಕರ್ಗಿಸೋಕೆ ಆಗಲ್ಲ. ತುಂಬಾನೇ ಟೈಮ್ ಬೇಕಾಗತ್ತೆ. ಹಣ್ಣುಗಳನ್ನ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಒಳ್ಳೇದು. ಪೌಷ್ಟಿಕಾಂಶ,ಸಕ್ಕರೆ,ನಾರಿನಂಶಗಳಿರುವ ಹಣ್ಣಗಳನ್ನ ಊಟಕ್ಕಿಂತ ಮುಂಚೆನೇ ತಗೊಳ್ಬೇಕು ತಗೊಂಡ್ರೆ ಪಚನಕ್ರಿಯೆಗೆ ಸಹಾಯ ಆಗತ್ತೆ. ಒಂದ್ವೇಳೆ ಊಟ ಆದ್ಮೇಲೆ ಹಣ್ಣನ್ನ ತಿಂದ್ರೆ ಎದೆ ಉರಿ, ಆಜೀರ್ಣತೆ, ಹುಳಿ ತೇಗು ಇನ್ನೂ ಹಲವು ತೊಂದ್ರೆಗಳು ಕಾಣಿಸ್ಕೊಳ್ತಾವೆ.

ಸ್ನಾನ ಮಾಡೋದು :-

ಸ್ನಾನ ಮಾಡ್ದಾಗ ರಕ್ತ ಚಲ್ನೆ ಜಾಸ್ತಿಯಾಗತ್ತೆ ಜೊತೆಗೆ ಕೈ ಕಾಲಲ್ಲಿ ರಕ್ತ ಚಲನೆ ಜಾಸ್ತಿನೇ ಇರತ್ತೆ. ಹೊಟ್ಟೆಯ ಭಾಗದಲ್ಲಿ ರಕ್ತದ ಚಲನೆ ಕಮ್ಮಿಯಾದಾಗ ಪಚನ ಕ್ರಿಯೆ ಸರ್ಯಾಗಿ ಆಗಲ್ಲ. ಸರ್ಯಾಗಿ ಆಗಿಲ್ಲ ಅಂದ್ರೆ ಹೊಟ್ಟೆ ನೋವು ಶುರು ಆಗತ್ತೆ. ಇದ್ಕೊಸ್ಕರನೇ ಸ್ನಾನ ಮಾಡ್ಬಾರ್ದು.

ಸಿಗ್ರೇಟ್ ಸೇದೋದು :-

ಸಿಗ್ರೇಟು ಸೇದೋರು ಊಟದ ನಂತರ ತಕ್ಷಣ ಲೈಟ್ರನ್ನ ಕೈಗೆತ್ತಿಕೊಳ್ತಾರೆ. ನಿಜವಾಗಿಯೂ ಇದು ಒಳ್ಳೆಯ ಅಭ್ಯಾಸ ಅಲ್ಲ. ತಮಾಷೆಯ ವಿಷ್ಯ ಎನಪ್ಪಾಂದ್ರೆ ಸೀಗ್ರೇಟು ಸೇದೋದು ಕೆಟ್ಟದ್ದು ಅಂತ ಗೊತ್ತಿದ್ರೂ ಸಹ ಅವ್ರ ಕೈಲಿ ಆ ಚಟ ಬಿಡಕ್ಕೆ ಆಗಲ್ಲ.ಸೇದೋದ್ರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಸಿನೋಜನ್ ದೇಹಕ್ಕೆ ನಿಕೋಟಿನ್ ಮೂಲಕ ಹೋಗತ್ತೆ. ಜೀರ್ಣಕ್ರಿಯೆ ಆಗೋದಕ್ಕೆ ಆಕ್ಸಿಜನ್ ಬೇಕೆ ಬೇಕು. ಅಷ್ಟಕ್ಕೂ ಊಟದ ನಂತರ ಸಿಗ್ರೇಟ್ ಸೇದ್ಬೇಕಾದ್ರೆ ನೀವು ತುಂಬಾ ಗಂಟೆಗಳ ಕಾಲ ಕಾಯ್ಬೇಕು. ಊಟದ ನಂತರ ಸೇದೋ ಒಂದು ಸಿಗ್ರೇಟು ಹತ್ತು ಸಿಗ್ರೇಟ್ಗೆ ಸಮನಾಗಿರತ್ತೆ. ಇದ್ರಿಂದಾನೇ ಲಂಗ್ಸ್ ಮತ್ತೆ ಬೊವೆಲ್ ಕ್ಯಾನ್ಸರ್ ಬರೋದು.

ಟೀ – ಕಾಫಿ ಕುಡಿಯೋದು :-

ಊಟದಲ್ಲಿ ಅಥ್ವಾ ಹಣ್ಣುಗಳಲ್ಲಿನ ಕಬ್ಬಿಣದಂಶ ದೇಹಕ್ಕೆ ಅತ್ಯವಶ್ಯಕ. ಈ ಕಾಫಿ-ಟೀನಲ್ಲಿರೋ ಆಸಿಡ್, ಕಬ್ಬಿಣ ಮತ್ತು ಪ್ರೋಟಿನ್ಗಳ್ನ ಒಂದುಗೂಡಿಸತ್ತೆ. ಯಾವಾಗ ಇವೆರ್ಡು ಒಂದಾಗತ್ತೋ ಆವಾಗ್ಲೇ ಊಟದಲ್ಲಿ ಮತ್ತು ಹಣ್ಣುಗಳಲ್ಲಿರೋ ಕಬ್ಬಿಣದಂಶ ನಮ್ಮ ದೇಹಕ್ಕೆ ಸಿಗಲ್ಲ . ಕಬ್ಬಿಣಾಂಶ ಕಮ್ಮಿಯಾದಾಗ ಅನಿಮೀಯಾ ತೊಂದ್ರೆ ಬರತ್ತೆ ಹಾಗೆ ಕೆಂಪು ರಕ್ತ ಕಣಗಳ ಸಂಖ್ಯೆ ಕಮ್ಮಿಯಾಗೋದ್ರಿಂದ ತೆಳು ಚರ್ಮ, ತಲೆ ಸುತ್ತುವಿಕೆ, ಎದೆ ಉರಿ, ಪದೇ ಪದೇ ಮೂರ್ಚೆ ಹೋಗೋದು, ಕೈ ಕಾಲು ತಣ್ಣಗಾಗೋದು, ಆಯಾಸ, ಸುಸ್ತು ಇನ್ನೂ ಹಲವು ತರದ ಖಾಯಿಲೆಗಳು ಬರತ್ತೆ.ಇಲ್ಲಿ ಓದಿ :- ದಿನಕ್ಕೊಂದು ಈರುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ ???

 

ತಕ್ಷಣ ನಿದ್ದೆ ಮಾಡೋದು :-

ಹೊಟ್ಟೆ ತುಂಬಾ ಊಟ ಮಾಡಿ ತಕ್ಷಣ ಮಲ್ಗಿದ್ರೆ ನಿದ್ರೆಗೆ ಸಂಬಂಧಿಸಿದ ಖಾಯಿಲೆಗಳು ಬರತ್ತೆ. ಹೊಟ್ಟೆ ಉಬ್ಬರಿಸೋದು , ಹೊಟ್ಟೆ ನೋವು, ಪದೇ ಪದೇ ಎಚ್ಚರಗೊಳ್ಳೊದು ಇಂತದ್ದೇ ಹಲವು. ರಾತ್ರಿಯೆಲ್ಲ ನಿಮ್ಮ ಹೊಟ್ಟೆ ಜೀರ್ಣಕ್ರಿಯೆಯಲ್ಲಿರೋದ್ರಿಂದ ಈ ತರದ ತೊಂದ್ರೆಗಳಿಂದ ನಿಮ್ಮ ಜೀರ್ಣಕ್ರಿಯೆ ಸರ್ಯಾಗಿ ಆಗಲ್ಲ.ಲೋನಿನಾ ಮೆಡಿಕಲ್ ಯುನಿವರ್ಸಿಟಿಯವ್ರು ಮಾಡಿರೋ ರಿಸರ್ಚ್ ಪ್ರಕಾರ, ಊಟದ ನಂತರ ಮಲ್ಗೋ ಅಭ್ಯಾಸ ಇದ್ರೆ ಸ್ಟ್ರೋಕ್ ಆಗೋ ಚಾನ್ಸ್ ಹೆಚ್ಚಂತೆ.

ಊಟದ ನಂತ್ರ ಯಾರಿಗೆಲ್ಲ ಈ ತರ ಅಭ್ಯಾಸ ಇದೆಯೋ ಅವ್ರೆಲ್ಲಾ ಆದಷ್ಟು ಬೇಗ ಬಿಟ್ಬಿಡಿ.

ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು  ಸಮಸ್ಯೆಗಳಿಗೆ
ಪರಿಹಾರ ಹುಡುಕುತ್ತಿದ್ದೀರಾ,,, ?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ
ಹಣಕಾಸಿನ ತೊಂದರೆ ಭೂಮಿ ವಿಚಾರ
ಕೋರ್ಟ್ ಕೇಸ್ ಅನಾರೋಗ್ಯ ಶತ್ರು ಕಾಟ
ದಾಂಪತ್ಯ ತೊಂದರೆ ವಿವಾಹ ವಿಳಂಬ ಸಂತಾನ ಸಮಸ್ಯೆ
ಇನ್ನೂ ನಿಮ್ಮ ಅನೇಕ ಸಮಸ್ಯೆಗಳಿಗೆ
1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ