ಸುದ್ದಿ

ಥ್ರೆಡ್ಡಿಂಗ್ ನಂತರ ಉಂಟಾಗುವ ಮೊಡವೆಗಳ ಪರಿಹಾರಕ್ಕೆ ಇಲ್ಲಿದೆ ಸುಲಭ ‘ಉಪಾಯ’…!

23

ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ.ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಮೊಡವೆಗಳು ಏಳುತ್ತವೆ.

ಒಂದು ಮಾಡಲು ಹೋಗಿ ಇನ್ನೊಂದಾಯ್ತು ಅಂತಾ ಗೊಣಗ್ತಾರೆ. ಇನ್ನು ಈ ಬಗ್ಗೆ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಈ ಮೊಡವೆಗಳಿಂದ ಸುಲಭವಾಗಿ ಮುಕ್ತಿ ಹೊಂದುವ ಉಪಾಯ ಇಲ್ಲಿದೆ.ಥ್ರೆಡ್ಡಿಂಗ್ ಮಾಡಿಸಿಕೊಳ್ಳುವ ಮೊದಲು ಚರ್ಮವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಥ್ರೆಡ್ಡಿಂಗ್ ಮಾಡುವ ವೇಳೆ ನೋವಾಗುವುದಿಲ್ಲ.

ನಂತರ ಕಾಟನ್ ಬಟ್ಟೆಯಿಂದ ಚರ್ಮವನ್ನು ಮೃದುವಾಗಿ ಉಜ್ಜಿ. ಒಣ ಚರ್ಮವನ್ನು ಉಜ್ಜಿದ್ರೆ ನೋವು ಜಾಸ್ತಿಯಾಗುತ್ತದೆ.ಹೀಗೆ ಮಾಡಿದ ನಂತರವೇ ನೀವು ಪಾರ್ಲರ್ ಗೆ ಹೋಗಿ.ಥ್ರೆಡ್ಡಿಂಗ್ ನಂತ್ರ ನೋವಾಗ್ತಾ ಇದ್ದಲ್ಲಿ ಅದ್ರ ಮೇಲೆ ಐಸ್ ಪೀಸ್ ಇಟ್ಟು ಮಸಾಜ್ ಮಾಡಿ.ಮುಖವನ್ನು ಯಾವಾಗಲೂ ಗುಲಾಬಿ ರಸದಿಂದಲೇ ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮದ ಮೇಲಾಗಿರುವ ಕೆಂಪು ಕಲೆ ಅಥವಾ ಮೊಡವೆ ಮಾಯವಾಗುತ್ತದೆ.

ಥ್ರೆಡ್ಡಿಂಗ್ ಮಾಡಿಕೊಂಡು ಬಂದ ಜಾಗವನ್ನು ಮರೆತೂ ಮುಟ್ಟಬೇಡಿ.ಥ್ರೆಡ್ಡಿಂಗ್ ನಂತ್ರ ಯಾವುದೇ ಕಾರಣಕ್ಕೂ ಸ್ಟೀಮ್ ಚಿಕಿತ್ಸೆಯನ್ನು ಪಡೆಯಬೇಡಿ.ಪ್ರತಿ ಬಾರಿ ಈ ಕ್ರಮಗಳನ್ನು ಅನುಸರಿಸುತ್ತ ಬನ್ನಿ. ಥ್ರೆಡ್ಡಿಂಗ್ ನಂತರದ ಮೊಡವೆಯಿಂದ ಮುಕ್ತಿ ಪಡೆಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ