ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತ್ರಿವಳಿ ತಲಾಖ್ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್ ಅನ್ನು ರದ್ದು ಪಡಿಸಿದೆ.
ತ್ರಿವಳಿ ತಲಾಖ್ ಸಂವಿದಾನ ಬಾಹಿರ ಎಂದು ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ. ಒಂದೊಮ್ಮೆ ತ್ರಿವಳಿ ತಲಾಖ್ ಬ್ಯಾನ್ ಮಾಡಬೇಕಿದ್ದರೆ ಇದಕ್ಕೆ ಕಾನೂನು ಜಾರಿಗೆ ತನ್ನಿ ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲವಾದ್ದರಿಂದ ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇನ್ನು ತ್ರಿವಳಿ ತಲಾಖ್ ನೀಡುವುದಕ್ಕೆ 6 ತಿಂಗಳ ಕಾಲ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದಕ್ಕೂ ಮೊದಲು ಇದಕ್ಕೆ ಕಾನೂನು ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳ ಬಹುಮತದ ತೀರ್ಪಿನ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಬೇರೆ ಬೇರೆ ಧರ್ಮಕ್ಕೆ ಸೇರಿದ ನ್ಯಾ. ಖೇಹರ್, ಕುರಿಯನ್ ಜೋಸೆಫ್, ರೋಹಿಂಗ್ಟನ್ ಎಫ್ ನಾರಿಮನ್, ಉದಯ್ ಲಲಿತ್, ಎಸ್ ಅಬ್ದುಲ್ ನಜೀರ್ ನ್ಯಾಯಪೀಠ ಈ ತೀರ್ಪು ನೀಡಿದೆ.
ಈ ಹಿಂದೆ ತ್ರಿವಳಿ ತಲಾಖ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಹಿಳೆಯರ ಗುಂಪನ್ನು ಕೇಂದ್ರ ಸರ್ಕಾರವು ಬೆಂಬಲಿಸಿತ್ತು. ಈ ವಿಚಾರವನ್ನು ಲಿಂಗ ಸಮಾನತೆ, ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯ ದೃಷ್ಟಿಯಿಂದ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿತ್ತು.
ತ್ರಿವಳಿ ತಲಾಖ್ ಎಂಬುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಸಂಘರ್ಷ ಅಲ್ಲ. ಇದು ಮುಸ್ಲಿಂ ಸಮುದಾಯದೊಳಗಿನ ಗಂಡಸರು ಮತ್ತು ಹೆಂಗಸರ ನಡುವಣ ಸಂಘರ್ಷ ಎಂದು ಸರ್ಕಾರ ವಾದಿಸಿತ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀ-ಕನ್ನಡದಲ್ಲಿ ಆರಂಭವಾಗಿರುವ ‘ಸರಿಗಮಪ’ 14ನೇ ಆವೃತ್ತಿ ಈಗಾಗಲೇ ಕರುನಾಡ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಜೀ-ವಾಹಿನಿ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಮಕ್ಕಳ ಸಿಂಗಿಂಗ್ ಶೋ ಎಷ್ಟೋ ಜನರಿಗೆ ವೀಕೆಂಡ್ ನಲ್ಲಿ ಮನರಂಜನೆಯ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ.. ಅದರಲ್ಲೂ ಕೆಲವು ಸ್ಪರ್ಧಿಗಳು ನಮ್ಮ ಮನೆಯ ಸದಸ್ಯರಂತಾಗುತ್ತಾರೆ.ಜೀ ಕನ್ನಡ ಟಿವಿ ರಿಯಾಲಿಟಿ ಸಿಂಗಿಂಗ್ ಸರಿಗಮಪ ಶೋ ನ ಲಕ್ಷ್ಮೀ ಕೂಡ ಇದಕ್ಕೆ ಹೊರತಾಗಿಲ್ಲ.. ಹಳ್ಳಿಯಿಂದ ಬಂದ ಪ್ರತಿಭಾನ್ವಿತ ಕಲಾವಿದೆ ಈ ಲಕ್ಷ್ಮಿರಾಮಪ್ಪ.ಇವರ…
ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ವೈಕುಂಠ ಏಕಾದಶಿ ಪ್ರಯುಕ್ತ 1.70 ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈದರ್ಶನಕ್ಕೆ 1 ಲಕ್ಷದ 80 ಸಾವಿರ ಭಕ್ತರಿಗೆ ಮಾತ್ರ ವೈಕುಂಠ ದರ್ಶನ ಕಲ್ಪಿಸಲಾಗಿದೆ. ತಿರುಪತಿ -ತಿರುಮಲದ ದೇಗುಲದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮಪ್ಪನ ಸಾನಿಧ್ಯದಲ್ಲಿ ಜನವರಿ 6 ಮತ್ತು 7ರಂದು 2 ದಿನಗಳ ಕಾಲ ವೈಕುಂಠ ಏಕಾದಶಿ – ದ್ವಾದಶಿ ಪ್ರಯುಕ್ತ ಭಕ್ತಾಧಿಗಳಿಗೆ ವೈಕುಂಠ ದ್ವಾರ ದರ್ಶನ ಕಲ್ಪಿಸಲಾಗಿದೆ. ಜನವರಿಯಂದು 21,28 ರಂದು ದಿವ್ಯಾಂಗರಿಗೆ, ಮಾರ್ಚ್ 22 ಮತ್ತು 29 ರಂದು ಹಸುಗೂಸು ಹೊಂದಿರುವ ತಂದೆ…
ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ ಚೈನೀಸ್ ಆಹಾರ ಗ್ರಾಹಕರಿಗೆ ಸಿಗಲಿದೆ.
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಜಮ್ಮು-ಕಾಶ್ಮಿರದ ಪುಲ್ವಾಮಾದಲ್ಲಿ ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಉಗ್ರರನ್ನು ಹತ್ಯೆ ಮಾಡಿದ ಬಳಿಕ ಯೋಧರು ಅವರ ಬಳಿ ಇದ್ದ ಮೂರು ಎಕೆ ಸರಣಿ ರೈಫಲ್ಗಳನ್ನು ವಶಪಡೆಸಿಕೊಂಡಿದ್ದಾರೆ. ಸದ್ಯ ಭದ್ರತಾ ಪಡೆಗಳು ಉಳಿದ ಉಗ್ರರನ್ನು ಹುಡುಕಿ ಎನ್ಕೌಂಟರ್ ಮಾಡಲು ಮುಂದಾಗಿದ್ದಾರೆ. ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು(ಎಸ್ಪಿಒ) ಪುಲ್ವಾಮ ಪೊಲೀಸ್ ಲೈನ್ಗಳಿಂದ ತಮ್ಮ ಸೇವಾ ರೈಫಲ್ಗಳೊಂದಿಗೆ ಕಾಣೆಯಾಗಿದ್ದಾರೆ. ಇಬ್ಬರು ಅಧಿಕಾರಿಗಳ ಹುಡುಕಾಡುವ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳು ಕಾಣೆಯಾದ ಪ್ರಕರಣ ಪುಲ್ವಾಮದಲ್ಲಿನ ಎನ್ಕೌಂಟರ್ ಗೆ ಸಂಬಂಧಿಸಿದ್ದೀಯಾ ಎಂಬುದು…