ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ನಟಿ ನಿಮಗೆ ನೆನಪಿದ್ದಾರಾ..? ಕನ್ನಡ ನನ್ನ ಶತ್ರು, ಪೂರ್ಣಚಂದ್ರ, ಪ್ರೇಮಖೈದಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಅಂಬರೀಶ ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಸರು ರೇಖಾ. ಇವರ ಮೊದಲ ಹೆಸರು ಜೋಸೆಫೆನ್. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದ ರೇಖಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ.

ಈ ನಟಿ ಸಿನಿಮಾಗಳ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾವು ಬದುಕಿರುವಾಗಲೇ ತಮ್ಮ ಸಮಾಧಿ ಸ್ಥಳವನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇಂತಹ ಘಟನೆಗಳು ಬಹಳ ಅಪರೂಪ ಬಿಡಿ. ಚೆನ್ನೈನ ಕಿಲ್ಪಾಕ್ ಎಂಬಲ್ಲಿ ತನ್ನ ತಂದೆ ಸಮಾಧಿ ಪಕ್ಕದಲ್ಲೇ ರೇಖಾ ಕೂಡಾ ತಮ್ಮ ಸಮಾಧಿ ಸ್ಥಳವನ್ನು ಖರೀದಿಸಿದ್ದಾರಂತೆ. ಹೀಗಂತ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಬಲವಾದ ಕಾರಣ ಕೂಡಾ ಇದೆ.

ರೇಖಾ, ತನ್ನ ತಂದೆ ವರದರಾಜ್ ಅವರನ್ನು ಬಹಳ ಇಷ್ಟಪಡುತ್ತಿದ್ದರಂತೆ. ತಂದೆ ಎಂದರೆ ಅವರಿಗೆ ಪ್ರಾಣ. ಆದರೆ ವರದರಾಜ್ ಅವರಿಗೆ ರೇಖಾ ಸಿನಿಮಾರಂಗಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ರೇಖಾ ಅವರು ನಟಿಸಿರುವ ಯಾವ ಸಿನಿಮಾವನ್ನು ಕೂಡಾ ತಂದೆ ನೋಡಿಲ್ಲವಂತೆ. ತಂದೆ ನನ್ನ ಸಿನಿಮಾಗಳನ್ನು ನೋಡಲಿಲ್ಲ ಎಂಬ ಬೇಸರ ಒಂದು ಕಡೆ ಆದರೆ, ತಂದೆ ಇಷ್ಟಕ್ಕೆ ವಿರುದ್ಧವಾದ ಕ್ಷೇತ್ರದಲ್ಲಿ ಮುಂದುವರೆದಿದ್ದಕ್ಕೆ ಅವರಿಗೆ ಪಶ್ಚಾತಾಪ ಕೂಡಾ ಇದೆಯಂತೆ.

ಆದರೆ ತನ್ನ ತಂದೆ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ಇರಬೇಕು ಎಂಬುದು ರೇಖಾ ಅವರ ಆಸೆಯಂತೆ. ಈಗಾಗಲೇ ಸೈಟ್ ಖರೀದಿಸಿದ್ದು, ತಾನು ಸತ್ತಾಗ ಅದೇ ಸ್ಥಳದಲ್ಲಿ ನನ್ನನ್ನು ಮಣ್ಣು ಮಾಡಬೇಕು ಎಂದು ಮನೆಯವರು ಹಾಗೂ ಸಂಬಂಧಿಕರ ಬಳಿ ರೇಖಾ ಮಾತು ಪಡೆದಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ.
wwe ಫೈಟ್ ನೀವೂ ಎಲ್ಲರೂ ನೋಡೇ ಇರ್ತೀರಿ…ಆದರೆ ನಮ್ಮ ಹಳ್ಳಿ ಹುಡುಗರ wwe ಫೈಟ್ ನೋಡಿದ್ದೀರಾ… ನೋಡಿಲ್ಲಾ ಅಂದ್ರೆ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…
ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.
ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ. ಹೌದು, ಅಶ್ರಫ್ ಅವರು…
ಒಬ್ಬೊಬ್ಬರಿಗೆ ಒಂದು ರೀತಿಯ ಕಾಯಿಲೆ ಇರುತ್ತದೆ. ಹೆಚ್ಚಿನ ಮಹಿಳೆಯರಿಗೆ ಬಸ್ನಲ್ಲಿ ಪ್ರಯಾಣ ಮಾಡಿದರೆ ವಾಕರಿಕೆ ಬರುತ್ತದೆ. ಬಸ್ಸಿನ ಏರಿಳಿತ ಅಥವಾ ಸರಿಯಾಗಿ ಗಾಳಿಯಾಡದೆ ಇರುವಂತಹ ಸ್ಥಿತಿ. ಇದೆಲ್ಲದರ ಪರಿಣಾಮವಾಗಿ ವಾಕರಿಕೆ ಬಂದು ಮುಜುಗರ ತರಿಸುತ್ತದೆ.
ಮೊಬೈಲ್ ಫೋನ್ ಬಳಕೆದಾರರು ತಮ್ಮ ಮೊಬೈಲ್ಗೆ ಬರುವ ಕರೆಯನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ. ಇನ್ಮುಂದೆ ಕೇವಲ 30 ಸೆಕೆಂಡ್ ರಿಂಗಣಿಸಲಿದೆ!ಅಂತೆಯೇ ಲ್ಯಾಂಡ್ಲೈನ್ ಫೋನ್ಗಳು 60 ಸೆಕೆಂಡ್ ರಿಂಗಣಿಸಲಿವೆ! ಅರೆ, ಇದೇನಿದು ಎಂದು ಹುಬ್ಬೇರಿಸಬೇಡಿ.ಮೊಬೈಲ್ ಫೋನ್ಗಳ ರಿಂಗಣವನ್ನು30 ಸೆಕೆಂಡ್ಗಳಿಗೆ ಮತ್ತು ಲ್ಯಾಂಡ್ಲೈನ್ ಫೋನ್ಗಳ ರಿಂಗಣವನ್ನು 60 ಸೆಕೆಂಡ್ಗಳಿಗೆ ಸೀಮಿತಗೊಳಿಸಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಆದೇಶ ಹೊರಡಿಸಿದೆ. ಒಳ ಬರುವ ಕರೆಗಳ ರಿಂಗಣ ಸಮಯವನ್ನು ಸೀಮಿತಗೊಳಿಸುವ ನಿಯಮದ ತಿದ್ದುಪಡಿಯಿಂದಾಗಿ ಮೊಬೈಲ್ಫೋನ್ ಮತ್ತು ಲ್ಯಾಂಡ್ಲೈನ್ ಗ್ರಾಹಕರಿಗೆ ನೀಡಲಾಗುವ ಸೇವೆಗಳ ಗುಣಮಟ್ಟವನ್ನು…