ಸುದ್ದಿ

ತನ್ನ ಕಣ್ಣಿನಿಂದಲೇ ಹುಲಿಯನ್ನು ದಿಟ್ಟಿಸಿ ನೋಡಿ ಓಡಿಸಿದ ಮಹಿಳಾ ಅಧಿಕಾರಿ..!

110

ಕಾಡಿನಲ್ಲಿ ಹುಲಿ ಎದುರಾದರೆ ಯಾರಾದರೂ ಜೀವಭಯದಿಂದ ಓಡಿ ದಿಕ್ಕಾಪಾಲಾಗುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಹುಲಿ ಎದುರಾದರೂ ಕದಲದೇ ನಿಂತು ಅದನ್ನು ದಿಟ್ಟಿಸಿ ಹಿಮ್ಮೆಟ್ಟಿಸಿದ್ದಾಳೆ.

ಝೂಗಳಲ್ಲಿ ಬಂಧಿಯಾಗಿರುವ ಹುಲಿಗಳನ್ನು ನೋಡಿದರೇ ಮೈ ಜುಮ್ಮೆನ್ನುತ್ತದೆ. ಅಂಥದ್ದರಲ್ಲಿ ಕಾಡಿಗೆ ಹೋದಾಗ ಕಣ್ಣೆದುರೇ ಬಂದ ಹುಲಿಯನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಒಂದೂವರೆ ಗಂಟೆಗಳ ಕಾಲ ದಿಟ್ಟಿಸಿ ನೋಡುತ್ತಾ, ಹುಲಿಯನ್ನೇ ಹೆದರಿಸಿ ಓಡಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶ ಸಾತ್ಪುರ ಹುಲಿ ರಕ್ಷಿತಾರಣ್ಯದಲ್ಲಿ ನಡೆದಿದೆ.

ಇತ್ತೀಚೆಗೆ ಹುಲಿ ಗಣತಿಗೆಂದು ಮಹಿಳಾ ಅರಣ್ಯಾಧಿಕಾರಿಯೊಬ್ಬರು, ಇಬ್ಬರು ಪುರುಷ ಗಾರ್ಡ್‌ಗಳ ಜೊತೆ ಮಧ್ಯಪ್ರದೇಶದ ಹೋಷಂಗಾಬಾದ್ ಎಂಬಲ್ಲಿನ ‘ಸತ್ಪುರ ಟೈಗರ್ ರಿಸರ್ವ್’ಗೆ ಹೋಗಿದ್ದರು.ಈ ವೇಳೆ ಹುಲಿಯೊಂದು ಏಕಾಏಕಿ ಪೊದೆಯೊಳಗಿಂದ ಪ್ರತ್ಯಕ್ಷವಾಗಿ, ಗಣತಿಗೆಂದು ಬಂದಿದ್ದವರ ಮುಂದೆ ಘರ್ಜಿಸಲು ಆರಂಭಿಸಿತು.ಹುಲಿ ಮತ್ತು ಇವರ ನಡುವೆ ಕೇವಲ 10 ಮೀಟರ್‌ ಅಂತರವಿತ್ತು.

ಹುಲಿಯ ಘರ್ಜನೆ ಕೇಳಿದ್ದೇ ತಡ ಇಬ್ಬರೂ ಪುರುಷ ಗಾರ್ಡ್‌ಗಳು ತತ್ತರಿಸಿ ಹೋಗಿದ್ದರು.ಆಗ ಈಕೆ ತನ್ನ ಸಹೋದ್ಯೋಗಿಗಳಿಬ್ಬರಿಗೆ ಒಂದಿಂಚೂ ಕದಲದೇ ನಿಲ್ಲಿ ಎಂದಿದ್ದಾಳೆ. ಜೊತೆಗೆ ತಾನೂ ಕದಲದೇ ಹುಲಿಯನ್ನೇ ದಿಟ್ಟಿಸಿದ್ದಾಳೆ.

ಹೀಗೆ ಒಂದೆರಡು ನಿಮಿಷವಲ್ಲ, ಒಂದೂವರೆ ಗಂಟೆ ಕಳೆದ ಇವರು ಕೊನೆಗೂ ಹುಲಿಯನ್ನು ಹಾಗೆ ದಿಟ್ಟಿಸಿಯೇ ಹಿಮ್ಮೆಟ್ಟಿಸಿದ್ದಾರೆ.ಈ ಘಟನೆಯಿಂದ ಬೆಚ್ಚಿದ ಹುಲಿ, ಒಂದೂವರೆ ಗಂಟೆಗಳ ಬಳಿಕ ಸುಮ್ಮನೆ, ಮತ್ತೆ ಕಾಡಿನೊಳಗೆ ಸೇರಿಕೊಂಡಿತು.

ಮಹಿಳಾ ಅಧಿಕಾರಿಯ ಈ ಧೈರ್ಯ ಆಕೆಯ ಸಮಯಪ್ರಜ್ಞೆ ಹಾಗೂ ಸಾಮಾನ್ಯ ಜ್ಞಾನದಿಂದ ಮೂವರ ಪ್ರಾಣ ಕಾಪಾಡಿದೆ.ಮಹಿಳಾ ಅಧಿಕಾರಿಯ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಆದಿ ಪರಾಶಕ್ತಿಯನ್ನು ನೆನೆಯುತ್ತ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ಆಹಾರದ ಸ್ವಾದ…

  • ಉಪಯುಕ್ತ ಮಾಹಿತಿ

    ಬೆಳ್ಳುಳ್ಳಿ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ

    ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ. 2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ. 3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು. 4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು…

  • ರೆಸಿಪಿ

    15 ನಿಮಿಷಗಳಲ್ಲಿ ಫಟಾಫಟ್ ‘ಎಗ್ ಪಲಾವ್’ ಮಾಡೋದು ಹೇಗೆ ಗೊತ್ತಾ..?

    ಬಾಯಲ್ಲಿ ನೀರೂರಿಸುವ ಖಾದ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಫಟಾಫಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ.ಅದರಲ್ಲೂ ಎಗ್ ಪಲಾವ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಕೇವಲ 15 ನಿಮಿಷಗಳಲ್ಲಿ ಎಗ್ ಪಲಾವ್ ಮಾಡಿ…

  • ಸುದ್ದಿ

    ತಮ್ಮ ನಾಯಕ ಚುನಾವಣೆಯಲ್ಲಿ ಗೆಲ್ಲಲೆಂದು ತನ್ನ ನಾಲಿಗೆ ಸೀಳಿ ದೇವಸ್ಥಾನದ ಹುಂಡಿಗೆ ಹಾಕಿದ ಹುಚ್ಚು ಅಭಿಮಾನಿ..!

    ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದಾಗ ತಮ್ಮ ನಾಯಕರು ಗೆಲ್ಲಲೆಂದು ಅಭಿಮಾನಿಗಳು ಎನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ತೆಲಂಗಾಣ ವಿಧಾನಸಭಾ ಚುನಾವಣಾ ಕಣ ಚಿತ್ರ, ವಿಚಿತ್ರ ಸಂಗತಿಗಳಿಂದ ಗಮನ ಸೆಳೆಯುತ್ತಿದೆ. ಚುನಾವಣೆಯಲ್ಲಿ ತಮ್ಮ ನಾಯಕರು ಗೆಲಲ್ಲಿ ಎಂದು ಜನರು ಹೋಮ, ಯಜ್ಞ ಮತ್ತಿತರ ಪೂಜೆ ಮಾಡುತ್ತಿದ್ದರೆ, ಕೆಲವರು ದೇವಾಲಯಗಳಿಗೆ ಲಕ್ಷ ಗಟ್ಟಲೇ ಹಣದ ಆಮಿಷವೊಡ್ಡುತ್ತಿದ್ದಾರೆ. ಮತ್ತೆ ಕೆಲವರು ಮೂಢನಂಬಿಕೆಗಳಿಗೆ ಜೋತು ಬಿದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ…

  • govt, nation, ಉಪಯುಕ್ತ ಮಾಹಿತಿ, ಸರ್ಕಾರದ ಯೋಜನೆಗಳು, ಸರ್ಕಾರಿ ಯೋಜನೆಗಳು

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ ಎಂದರೇನು? ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 6,000 ರೂಪಾಯಿಗಳನ್ನು ಕೇಂದ್ರ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುತ್ತದೆ ನೋಂದಣಿಗೆ ಯಾವ ದಾಖಲೆ ಬೇಕು? ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ ಪಡೆಯುವ ರೈತನಿಗೆ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ನೀವು ಆಧಾರ್ ಕಾರ್ಡ್ ನೀಡದಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಕಂತು ಪಡೆಯಲು, ನೀವು ಬ್ಯಾಂಕ್ ಖಾತೆ…

  • ವಿಸ್ಮಯ ಜಗತ್ತು

    ಈ ಕಣಿವೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಲ್ಲು ತನ್ನಷ್ಟಕ್ಕೇ ಚಲಿಸುತ್ತದೆ..!ತಿಳಿಯಲು ಈ ಲೇಖನ ಓದಿ…

    ಒಂದು ಕಡೆ ಬಿದ್ದಿರುವ ಕಲ್ಲು ತನ್ನಿಂದ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿರಬೇಕಷ್ಟೆ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯ ಎನ್ನುವಂತೆ ಚಲಿಸುತ್ತವೆ.