ಸುದ್ದಿ

ಡಿಕೆಶಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಆಫರ್ ನೀಡಿದ ಹೈಕಮಾಂಡ್‍….!

98

ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಕೇವಲ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ಆರಂಭವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಕೆಪಿಸಿಸಿಯ ಜವಾಬ್ದಾರಿ ಹೊರಲು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಸೂಕ್ತ ಅನ್ನೋದು ಹೈ ಕಮಾಂಡ್ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನೇರವಾಗಿ ಡಿ.ಕೆ ಶಿವಕುಮಾರ್ ಬಳಿ ಮಾತನಾಡಿದೆ. ಈ ಮೂಲಕ ಪರೋಕ್ಷವಾಗಿ ವಿಷಯ ಡಿಕೆಶಿ ಕಿವಿಗೆ ತಲುಪಿಸುವ ಪ್ರಯತ್ನ ನಡೆದಿದೆ. ಆದರೆ ಇದಕ್ಕೆ ಒಪ್ಪದ ಡಿಕೆಶಿ ಸದ್ಯಕ್ಕೆ ಯಾವುದೆ ಜವಾಬ್ದಾರಿ ಬೇಡ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲ. ಆದ್ದರಿಂದ ಪಕ್ಷದ ನೇತೃತ್ವ ವಹಿಸುವಂತಹ ಮಹತ್ತರ ಜವಾಬ್ದಾರಿ ಈಗ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮದೇ ಆದ ಕೆಲವು ಸಮಸ್ಯೆಗಳಿವೆ. ಆದ್ದರಿಂದ ಬೇಡವೆಂದು ಹೇಳಿದ್ದಾರೆ ಎನ್ನಲಾಗಿದೆ.

ಐಟಿ, ಇಡಿ ಸಂಕಷ್ಟದಲ್ಲಿರುವ ಡಿಕೆಶಿಗೆ ಸದ್ಯಕ್ಕೆ ಯಾವುದೇ ಜವಾಬ್ದಾರಿ ಬೇಡ ಅನ್ನಿಸಿದ್ಯಾ ಗೊತ್ತಿಲ್ಲ. ಆದರೆ ಸದ್ಯದ ಮಟ್ಟಿಗೆ ಪಕ್ಷದ ಜವಾಬ್ದಾರಿ ಬೇಡ. ಸಚಿವನಾಗಿಯೇ ಮುಂದುವರಿಯುತ್ತೇನೆ ಎಂದಿದ್ದಾರೆ.ಒಂದು ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದ ಡಿಕೆಶಿ, ಇದೀಗ ಹೈಕಮಾಂಡ್ ಮನಸ್ಸು ಮಾಡಿದರೂ ಸ್ಥಾನ ಬೇಡವೇ ಬೇಡ ಅನ್ನುವ ಮೂಲಕ ಪಕ್ಷದ ನಾಯಕರ ಹುಬ್ಬೇರಿಸುವಂತೆ ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು

    ಈ ಬೀಜಗಳು ಅಧಿಕ ನಾರಿನಂಶವನ್ನು ಹೊಂದಿವೆ. ಈ ಬೀಜಗಳನ್ನು ನೆನೆಸಿದ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆ ಸುಲಭಗೊಳ್ಳುತ್ತದೆ. ಈ ನೀರಿನ ಸೇವನೆಯ ಇತರ ಮಹತ್ವಗಳನ್ನು ನೋಡೋಣ. ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು: ತೂಕ ಇಳಿಕೆಗೆ ಅಪಾರ ನೆರವು ನೀಡುವ ಆರೋಗ್ಯಕರ ವಿಧವೆಂದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು. ಇದಕ್ಕೆ ಉತ್ತಮ ಆಯ್ಕೆ ಚಿಯಾ ಬೀಜಗಳು. ಇವುಗಳಲ್ಲಿ ಕರಗದ ನಾರು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ…

  • ಸುದ್ದಿ

    ಚಿಲ್ಲರೆ ಅಂಗಡಿ ವ್ಯಾಪಾರಿಗಳಿಗೊಂದು ಗುಡ್‌ ನ್ಯೂಸ್: ಪ್ರತಿ ತಿಂಗಳು ಸಿಗಲಿದೆ 3 ಸಾವಿರ ರೂ….!

    ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯ ಆರಂಭದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನುಜಾರಿಗೆ ತರ್ತಿದ್ದಾರೆ. ಚಿಲ್ಲರೆ ವ್ಯಾಪಾರಿಗಳ ಪಿಂಚಣಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. 60ವರ್ಷದ ನಂತ್ರ ಆರ್ಥಿಕ ಶಕ್ತಿ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಚಿಲ್ಲರೆ ವ್ಯಾಪಾರ ಹಾಗೂ ಸ್ವಂತ ವ್ಯಾಪಾರ ಮಾಡುವವರಿಗೆ ಮಾಸಿಕ 3 ಸಾವಿರ ರೂಪಾಯಿಯವರೆಗೆ ಪಿಂಚಣಿ ಸಿಗಲಿದೆ. 3 ಕೋಟಿಗೂ ಹೆಚ್ಚು ವ್ಯಾಪಾರಿಗಳು ಇದ್ರ ಲಾಭ ಪಡೆಯಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ಜನರಿಗೆ ಇದನ್ನು ತಲುಪಿಸುವ ಉದ್ದೇಶವನ್ನು…

  • ಸಿನಿಮಾ

    ಅಣ್ಣಾವ್ರ ಬಗ್ಗೆ ರಜನಿ ಬಿಚ್ಚಿಟ್ಟರು, ನಮಗ್ಯಾರಿಗೂ ಗೊತ್ತಿಲ್ಲದ ಆ ರಹಸ್ಯ..!

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ‘ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ.

  • ಕ್ರೀಡೆ

    ಮುಂಬೈ vs ಸನ್ ರೈಸರ್ಸ್ ಪಂದ್ಯ..ಯಾರ್ಯಾರು ಎಷ್ಟು ಹೊಡೆದ್ರು?ಗೆದ್ದಿದ್ದು, ಸೋತಿದ್ದು ಯಾರು.?ಇಲ್ಲಿದೆ ಸಂಪೂರ್ಣ ಮಾಹಿತಿ..ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹೈದರಾಬಾದ್’ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿ ಇಂದಿನ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 1 ವಿಕೆಟ್ ಗಳ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್ 2018ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬಯಿ ಸತತ ಎರಡನೇ ಸೋಲಿಗೆ ಗುರಿಯಾಗಿದೆ. ಅತ್ತ ಹೈದರಾಬಾದ್ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಮುಂಬೈ ಬ್ಯಾಟಿಂಗ್ :- 20 ಓವರ್ ಗಳಲ್ಲಿ…

  • ಸುದ್ದಿ

    ಶುರುವಾಗಿದೆ ನಿಖಿಲ್ ಕುಮಾರ್‌ಸ್ವಾಮಿಗಾಗಿ ಹುಡುಗಿಯ ಹುಡುಕಾಟ,ಹೇಗಿರಬೇಕಂತೆ ಗೊತ್ತಾ,.?

    ನಿಖಿಲ್ ಕುಮಾರ ಸ್ವಾಮಿ  ಮತ್ತು ಕೃಷ್ಣ ನಿರ್ದೇಶನದ ಸಿನಿಮಾ ಜನವರಿಯಲ್ಲಿ ಸೆಟ್ಟೇರಲಿದೆ.ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬಿಜಿಯಾಗಿದೆ ಇನ್ನು ಒಂದು ವಾರದೊಳಗೆ ಸ್ಕ್ರಿಫ್ಟ್ ಕೆಲಸ ಮುಗಿಯುತ್ತದೆ, ಆಮೇಲೆ ಅಧಿಕೃತವಾಗಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತೇವೆ”ಎಂದು ಮಾಹಿತಿ ನೀಡಿದ ನಿರ್ದೇಶಕ ಕೃಷ್ಣ. “ಇದೊಂದು ನೈಜಕಥೆ ಆಧಾರಿತ ಸಿನಿಮಾ. ಈಗ ಚಿತ್ರಕಥೆ ಕೆಲಸದಲ್ಲಿ ನಿರತನಾಗಿದ್ದೇನೆ, ಹೀರೋಯಿನ್ ಹುಡುಕಾಟ ಶುರುವಾಗಿದೆ. ಸಾಂಪ್ರದಾಯಿಕ ಲುಕ್‌ ಹೊಂದಿರುವ ಅದ್ಭುತ ನಟಿಗಾಗಿ ಶೋಧ ಮಾಡುತ್ತಿದ್ದೇವೆ,  ನಿರ್ದೇಶಕ ಕೃಷ್ಣ ಇದೂವರೆಗೂ ಮಾಡಿರದ ಸಿನಿಮಾ ಇದು. ನಿಖಿಲ್ ಗೆಟಪ್…

  • ವಿಸ್ಮಯ ಜಗತ್ತು

    ಇಲ್ಲಿ ಬುಲೆಟ್ ಗೆ ದೇವಸ್ಥಾನ ಕಟ್ಟಿ ಪೂಜೆ ದಿನನಿತ್ಯ ಪೂಜೆ ಮಾಡ್ತಾರೆ..!ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…

    ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ..  ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್  ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು…