ಆರೋಗ್ಯ, ಉಪಯುಕ್ತ ಮಾಹಿತಿ

ಟೊಮೆಟೊ ಕೆಚಪ್‌ನಿಂದ ಮನೆಯಲ್ಲಿ ದಿನಬಳಕೆಗೆ ಉಪಯೋಗಿಸುವ ವಸ್ತುಗಳನ್ನು ಫಳ ಫಳ ಹೊಳೆಯಿಸುವುದು ಹೇಗೆ ಗೊತ್ತಾ..?ತಿಳಿಯಲು ಇದನ್ನು ಓದಿ …

739

ನೀವು ಸೇವಿಸುವ ಆಹಾರವನ್ನೇ ಅಡುಗೆ ಮನೆಯಲ್ಲಿ ಸ್ವಚ್ಛತೆಯ ಉದ್ದೇಶಕ್ಕಾಗಿ ಬಳಸಬಹುದು ಎಂಬುದನ್ನು ನೀವು ಅರಿತಿದ್ದೀರಾ? ಅಡುಗೆ ಮನೆಯಲ್ಲಿ ಜಿಡ್ಡಿನ ಅಂಶಗಳನ್ನು ತೊಡೆದು ಹಾಕಲು, ನಲ್ಲಿಯನ್ನು ಸ್ವಚ್ಛಗೊಳಿಸಲು ನಾವು ರಾಸಾಯನಿಕ ಸ್ವಚ್ಛಕಗಳನ್ನು ಬಳಸುತ್ತೇವೆ ಆದರೆ ಅವುಗಳು ಯಾವುದೂ ನೈಸರ್ಗಿಕದಂತಿರುವ ಶುಭ್ರತೆಯನ್ನು ಒದಗಿಸುವುದಿಲ್ಲ, ಬದಲಿಗೆ ಸ್ವಲ್ಪ ದಿನ ಬೆಳ್ಳಗಾಗಿದ್ದು ಪುನಃ ಹಳೆಯ ರೂಪಕ್ಕೆ ತಿರುಗುತ್ತವೆ.

ಟೊಮೆಟೊ ನೈಸರ್ಗಿಕ ಆಸಿಡ್ ಅಂಶವನ್ನು ತನ್ನಲ್ಲಿ ಹೊಂದಿದೆ. ಕೆಚಪ್ ರೂಪದಲ್ಲಿ ಇದು ಇನ್ನಷ್ಟು ಆಸಿಡ್‌ಕಾರಿಯಾಗಿ ಪರಿಣಾಮ ಬೀರುತ್ತವೆ. ಇದು ಕ್ಲೀನಿಂಗ್ ಕೆಲಸವನ್ನು ಸರಳವಾಗಿ ಮುಗಿಸಿಬಿಡುತ್ತವೆ.


ತಾಮ್ರ :-

ಇದರಿಂದ ಮಾಡಲ್ಪಟ್ಟ ವಸ್ತುಗಳು ಬಹಳ ಅಲಂಕಾರಿಕವಾಗಿ ಕಾಣುತ್ತದೆ ಮತ್ತು ವಿಂಟೇಜ್ ನೋಟವನ್ನು ಸೇರಿಸುತ್ತದೆ. ತಾಮ್ರದ ಪಾತ್ರೆಗಳಲ್ಲಿ ಮಾಡಿದ ಆಡುಗೆಯು ಆರೋಗ್ಯಕರವಾಗಿರುತ್ತದೆ ಆದರೆ ನಿರ್ವಹಣೆ ತುಸು ತ್ರಾಸದಾಯಕವೇ.

ತಾಮ್ರದ ಪಾತ್ರೆಗೆ ಕೆಚಪ್ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಿ ನಂತರ ಹತ್ತಿಯಿಂದ ಕೆಚಪ್ ಅನ್ನು ಒರೆಸಿ ನಂತರ ಬಿಸಿನೀರಿನಿಂದ ಪಾತ್ರೆಯನ್ನು ತೊಳೆಯಿರಿ. ಕಲೆ ಹಠಿಮಾರಿಯಾಗಿದೆ ಎಂದಾದಲ್ಲಿ ಕೆಚಪ್ ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ. ತಾಮ್ರದ ಆಭರಣಗಳಿಗೂ ನೀವು ಇದೇ ವಿಧಾನವನ್ನು ಅನುಸರಿಸಬಹುದು.

ಹಿತ್ತಾಳೆ:-

ಹಿತ್ತಾಳೆ ಪೀಠೋಪಕರಣಗಳು, ಉದಾಹರಣೆಗೆ ಬಾಗಿಲು ಹಿಡಿಕೆಗಳು, ಪ್ರದರ್ಶನ ಸಾಮಗ್ರಿಗಳು ಮತ್ತು ಪಾತ್ರೆಗಳಿಗೆ ಬಳಸಲಾಗುತ್ತದೆ. ಭಾರತೀಯ ಮನೆಗಳಲ್ಲಿ, ಹಿತ್ತಾಳೆಯಿಂದ ಮಾಡಿದ ದೀಪಗಳು ಮತ್ತು ವಿಗ್ರಹಗಳನ್ನು ಕಾಣಬಹುದು.

ಇದು ಕೊಳಕು ಕಲೆಗಳನ್ನು ಪಡೆಯುತ್ತದೆ ಮತ್ತು ಗಾಢವಾಗಿರುತ್ತವೆ. ಇದನ್ನು ಶುದ್ಧೀಕರಿಸಲು ಕೆಚಪ್ ಬಳಸಿ ಇದರ ಆಮ್ಲೀಯ ಸ್ವಭಾವವು ಈ ಕಲೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ.

ಬೆಳ್ಳಿ :-

ಬೆಳ್ಳಿಯ ವಸ್ತುಗಳೂ ತಮ್ಮ ಹೊಳಪನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈ ಹೊಳಪನ್ನು ಮರಳಿ ಪಡೆಯಲು ಟೊಮೆಟೊ ಕೆಚಪ್ ಅನ್ನು ನೀವು ಬಳಸಬಹುದು.

ಆದರೆ ಬರಿಯ 5 ರಿಂದ 10 ನಿಮಿಷಗಳ ಕಾಲ ಮಾತ್ರ ಇದನ್ನು ಹಾಗೆಯೇ ಬಿಡಿ ಹೆಚ್ಚು ಸಮಯ ಕೆಚಪ್ ಅನ್ನು ಪಾತ್ರೆಯಲ್ಲಿ ಬಿಡಬೇಡಿ.
ನಿಮ್ಮ ಕಾರನ್ನು ಹೊಳೆಯಿಸಲು :-

ಕೊಳೆಯನ್ನು ತೊಳೆಯಲು ಕೆಚಪ್ ಸಹಕಾರಿಯಾಗಿಲ್ಲದಿದ್ದರೂ ನಿಮ್ಮ ಕಾರಿಗೆ ಹೊಳೆಯುವ ನೋಟವನ್ನು ಇದು ಖಂಡಿತ ನೀಡುತ್ತದೆ. ಮೊದಲಿಗೆ ಸೋಪು ನೀರಿನಿಂದ ಕಾರನ್ನು ತೊಳೆದು ನಂತರ ಕೆಚಪ್‌ನಿಂದ ಕಾರನ್ನು ಒರೆಸಿ.

ತಣ್ಣೀರನ್ನು ಬಳಸಿಕೊಂಡು ಕೆಚಪ್ ತೊಡೆಯಿರಿ.

ತುಕ್ಕು:-

ನಿಮ್ಮ ಗಾರ್ಡನ್ ಉಪಕರಣಗಳು ತುಕ್ಕು ಹಿಡಿದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಆ ವಸ್ತುಗಳ ಮೇಲೆ ಕೆಚಪ್ ಅನ್ನು ಬಳಸಬಹುದಾಗಿದೆ.

ಬರಿಯ ಗಾರ್ಡನ್ ಉಪಕರಣಗಳು ಮಾತ್ರವಲ್ಲದೆ ಇತರ ಮೆಟಲ್ ವಸ್ತುಗಳಿಗೂ ಇದು ಹೇಳಿ ಮಾಡಿಸಿದ್ದಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    10 ಸಾವಿರ ಅಡಿ ಎತ್ತರದಲ್ಲಿ ಇದ್ದ ವಿಮಾನದಿಂದ ಬಿದ್ದ ಈ ಹುಡುಗಿ ಅಮೆಜಾನ್ ಕಾಡಿನಲ್ಲಿ ಬದುಕಿದ್ದು ಹೇಗೆ ಗೊತ್ತಾ.

    ಒಬ್ಬ ಸಾಮಾನ್ಯ ಮಹಿಳೆ ಹತ್ತು ಸಾವಿರ ಅಡಿ ಎತ್ತರದಿಂದ ಕೆಳಗೆ ಬೀಳುತ್ತಾಳೆ ಮತ್ತು ಆಕೆ ಕೆಳಗೆ ಬಿದ್ದ ನಂತರ ಏನಾಯಿತು ಎಂದು ತಿಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಈ ಘಟನೆ ನಡೆದಿದ್ದು 1971 ರ ಡಿಸೆಂಬರ್ ತಿಂಗಳಲ್ಲಿ, ಸ್ನೇಹಿತರೆ ಅಷ್ಟು ಎತ್ತರಿಂದ ಬಿದ್ದ ಈ ಹುಡುಗಿಯ ಹೆಸರು ಜೂಲಿಯನ್, ಈ ಹುಡುಗಿಯ ತಂದೆ ಹೊರದೇಶದಲ್ಲಿ ಕೆಲಸವನ್ನ ಮಾಡುತ್ತಿದ್ದ ಕಾರಣ 1971 ರ ಡಿಸೆಂಬರ್ ತಿಂಗಳಲ್ಲಿ ಜೂಲಿಯನ್ ತನ್ನ ತಾಯಿಯ ಜೊತೆ ತಂದೆಯನ್ನ ಭೇಟಿಯಾಗಲು ಹೊರದೇಶಕ್ಕೆ ವಿಮಾನದ…

  • ಸ್ಪೂರ್ತಿ

    ಈಕೆಯ ಅತೀ ಉದ್ದವಾದ ಕೂದಲು ಗಿನ್ನಿಸ್ ದಾಖಲೆಗೆ ಸೇರಿದೆ..!ತಿಳಿಯಲು ಈ ಲೇಖನ ಓದಿ..

    ಗಿನ್ನಿಸ್ ಬುಕ್ ಸೇರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಿ ಗಿನ್ನಿಸ್ ಬುಕ್ ಸೇರ್ತಾರೆ. ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ.

  • ಸೌಂದರ್ಯ

    ಮೆಂತೆ ಕಾಳು ಬಳಸಿ ನಿಮ್ಮ ‘ಸೌಂದರ್ಯವನ್ನು’ ಹೆಚ್ಚಿಸಿಕೊಳ್ಳಿ

    ಎಲ್ಲರಿಗೂ ತಿಳಿದಿರುವ ಹಾಗೆ ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಯಾವುದೋ ಕೆಮಿಕಲ್ ಇರುವ ಕ್ರೀಮ್ ಹಚ್ಚುವ ಬದಲು, ನಿಮ್ಮ ಮನೆಯಲ್ಲೇ ಇರುವ ಮೆಂತೆ ಕಾಳುಗಳಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. 50 ಗ್ರಾಂ ಮೆಂತೆ ಕಾಳನ್ನು ರಾತ್ರಿ ನೆನಸಿಡಿ. ಬೆಳಗ್ಗೆ ಎದ್ದು ಅದರಲ್ಲಿನ ನೀರನ್ನ ತೆಗೆಯಿರಿ. ಆದ್ರೆ ಆ ನೀರನ್ನು ಚೆಲ್ಲಬಾರದು. ಈ ಮೆಂತೆ…

  • ಕಾನೂನು

    ತ್ರಿವಳಿ ತಲಾಖ್‌ ರದ್ದು! ಸುಪ್ರಿಂ ಕೋರ್ಟ್‌ನ ಐತಿಹಾಸಿಕ ತೀರ್ಪು…

    ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್‌ ಅನ್ನು ರದ್ದು ಪಡಿಸಿದೆ.

  • ಆರೋಗ್ಯ

    ಎಚ್ಚರ! ಹುಟ್ಟುವ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಕಣ್ಣಿನ ಕ್ಯಾನ್ಸರ್, ಇದರ ಲಕ್ಷಣಗಳೇನು?

    ಹುಟ್ಟುವ ಮಕ್ಕಳಲ್ಲಿ ಕಣ್ಣಿನ ಕ್ಯಾನ್ಸರ್ ಹೆಚ್ಚುತ್ತಿದೆ. ಪೋಷಕರು ಕ್ಯಾನ್ಸರ್‌ನ್ನು ಪತ್ತೆ ಹಚ್ಚಿ ತಕ್ಷಣವೇ ಮಗುವಿಗೆ ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇರುತ್ತದೆ. ಮಕ್ಕಳ ಕಣ್ಣಿನ ಕೆಳಭಾಗದಲ್ಲಿ ಬಿಳಿ ಮಚ್ಚೆ ಇದ್ದರೆ ಅಥವಾ ಮೆಳ್ಳಗಣ್ಣಿದ್ದರೆ ಎಲ್ಲಾ ಸಂದರ್ಭದಲ್ಲೂ ಅದು ಶುಭಶಕುನವಾಗಿರುವುದಿಲ್ಲ, ಸಮಸ್ಯೆಯೂ ಆಗಿರಬಹುದು ಹಾಗಾಗಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ನಿರ್ಲಕ್ಷಿಸಿದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ ಕ್ಯಾನ್ಸರ್ ಕಣ ಮೆದುಳಿಗೆ ವ್ಯಾಪಿಸಿ ಪ್ರಾಣವನ್ನೇ ಬಲಿತೆಗೆದುಕೊಳ್ಳುವ ಸಾಧ್ಯತೆಯೂ ಕೂಡ ಇರುತ್ತದೆ.ರೆಟಿನೊ ಬ್ಲಾಸ್ಟೋಮಾ ಎಂಬುದು…