ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.
ಏಕೆಂದರೆ ಒಂದು ಹನಿ ಜೇನು ತುಪ್ಪ ತನ್ನಲ್ಲಿ ಅದೆಷ್ಟೋ ಆರೋಗ್ಯಕರ ಗುಣಗಳನ್ನು ಬಚ್ಚಿಟ್ಟುಕೊಂಡಿದೆ. ಸಾಮಾನ್ಯವಾಗಿ ಕಾಡುವ ಕೆಮ್ಮು, ತಲೆನೋವು, ಜ್ವರ, ಚರ್ಮತೊಂದರೆ, ಬಾಯಿಹುಣ್ಣುಗಳಂತಹ ನಾನಾ ಕಾಯಿಲೆಗಳಿಗೆ ರಾಮಬಾಣವಾಗಿದೆ. ಜೇನು ನಮ್ಮ ಆರೊಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ಈ ಮುಂದಿನ ಅಂಶಗಳೇ ಸಾರಿ ಹೇಳುತ್ತವೆ.
ಜೇನುತುಪ್ಪದ ಆರೋಗ್ಯಕರ ಅಂಶಗಳು ಉಷ್ಣ ದಿಂದ ಬಾಯೊಳಗೆ ಹುಣ್ಣಾಗಿದ್ದರೆ ಜೇನುತುಪ್ಪ ಹಚ್ಚುವುದರಿಂದ, ನೀರಿನೊಡನೆ ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು
ವಾಸಿಯಾಗುತ್ತದೆ.ಬೊಜ್ಜು ಕರಗಿಸುವುದಕ್ಕೆ ಕುದಿಸಿ ಆರಿಸಿದ 1 ಲೋಟ ನೀರಿಗೆ 2 ಚಮಚ ಜೇನುತುಪ್ಪ ಬೆರೆಸಿ ಕುಡಿಯತ್ತಿದ್ದರೆ ತೂಕ ಕಡಿಮೆಯಾಗುತ್ತದೆ.
ನೆಗಡಿ ಅಥವಾ ಶೀತದಿಂದ ಗಂಟಲು ಕಟ್ಟಿ ಧ್ವನಿ ಸರಿಯಾಗಿ ಹೊರಡದಿದ್ದರೆ ದಿನಕ್ಕೆ 3-4 ಸಲ ಅರ್ಧ ಚಮಚದಿಂದ ಒಂದು ಚಮಚದವರೆಗೆ ಜೇನುತುಪ್ಪ ಸೇವಿಸುತ್ತಿರಬೇಕು. ಶುಂಠಿಯನ್ನು ಜೇನುತುಪ್ಪದೊಡನೆ ಸೇರಿಸಿ ದಂತಗಳಿಗೆ ಉಜ್ಜಬೇಕು. ಇದರಿಂದ ವಸಡುಗಳಿಂದ ರಕ್ತ ಸೋರುವುದು ವಸಡು ಊದಿ ಕೊಳ್ಳುವುದು ಕಡಿಮೆಯಾಗುತ್ತದೆ.
ರಕ್ತದೊತ್ತಡ ಹೆಚ್ಚಾಗಿರುವವರು ಬೆಳಗ್ಗೆ ಖಾಲಿ ಹೊಟ್ಟೆಗೆ 3 ಚಮಚ ಜೇನನ್ನು ನೀರಿನಲ್ಲಿ ಸೇರಿಸಿ ಕುಡಿಯಬೇಕು. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರು
ಪೊಟ್ಯಾಷಿಯಂ ಮತ್ತು ಖನಿಜಗಳು ಅಧಿಕ ಪ್ರಮಾಣದಲ್ಲಿರುವ ಜೇನುತುಪ್ಪವನ್ನು ದಿನಕ್ಕೆ 2 ಬಾರಿ 2 ಚಮಚದಷ್ಟು ಸೇವಿಸಬೇಕು. ಪ್ರತಿದಿನ ಜೇನುತುಪ್ಪ ಸೇವಿಸಿದರೆ ಮೆದುಳಿನ ದೌರ್ಬಲ್ಯ ನಿವಾರಣೆಯಾ ಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪ ಉತ್ತಮ ಆರೋಗ್ಯವರ್ಧಕ ಹಾಗೂ ಚರ್ಮಕ್ಕೆ ಪ್ರಯೋಜನವಾದ ಅಂಶಗಳನ್ನು ಒಳಗೊಂಡಿದೆ ಎಂಬ ಅಂಶ ಅನಾದಿಕಾಲದಿಂದಲೂ ತಿಳಿದು ಬಂದಿದೆ.
ವಿಟಮಿನ್, ಪ್ರೊಟೀನ್ ಮತ್ತು ರೋಗನಿರೋಧಕ ಜೀವಸತ್ವಗಳಿಂದ ಸಂವೃದ್ದವಾಗಿರುವ ಜೇನುತುಪ್ಪ ನಿಸ್ಸಂಶಯವಾಗಿಯೂ ಪ್ರಯೋಜನಕಾರಿ.ಜೇನಿನಲ್ಲಿರುವ ವಿಟಮಿನ್ ಸಿ
ವಿಕಿರಣಗಳಿಂದ ಹಾನಿಗೀಡಾದ ಚರ್ಮದ ಪದರಗಳನ್ನು ಸರಿಪಡಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ5 ಚರ್ಮದಲ್ಲಿ ಉತ್ಪತ್ತಿಯಾಗುವ ಎಣ್ಣೆಯ ಅಂಶವನ್ನು ತಡೆಯುವುದಲ್ಲದೆ ಒಣ ಚರ್ಮವನ್ನು ಮೃದುಗೊಳಿಸುತ್ತದೆ.
ಜೇನಿನಲ್ಲೇನಿದೆ: –
ತೇವಾಂಶ : ಶೇ.17ರಿಂದ 25 ಫಲಸಕ್ಕರೆ : ಶೇ.34 ರಿಂದ 4೦ ಗ್ಲೂಕೋಸ್ : ಶೇ.32 ರಿಂದ ೩8 ಅಂಟು : ಶೇ.1 ರಿಂದ 2 ಖನಿಜಗಳು : ಕಬ್ಬಿಣ, ಮ್ಯಾಗ್ನೀ ಶಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ತಾಮ್ರ. ಪೋಷಕ ದ್ರವ್ಯಗಳು : ವಿಟಮಿನ್ ಬಿ೧ ಬಿ೨ ಬಿ೩ ಬಿ೧೨ ಸಿ ಮುಂತಾದವುಗಳಿವೆ. ಮಕ್ಕಳು ಸೇರಿದಂತೆ ಯಾವುದೇ ವಯಸ್ಸಿನವರು ಕೂಡ ಕೆಮ್ಮಿಗೆ ಜೇನುತುಪ್ಪವನ್ನು ಬಳಸಬಹುದು. ಕೆಮ್ಮು ಪ್ರಾರಂಭಿಕ ಹಂತದಲ್ಲಿರುವಾಗ ಜೇನುತುಪ್ಪ ಸೇವಿಸಿದರೆ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡಿಜಿಟಲ್ ವ್ಯಾಲೆಟ್ಗಳಿಗೆ ಕೆವೈಸಿ ಅಳವಡಿಸಲು ಆರ್ಬಿಐ ನೀಡಿದ್ದ ಗಡುವು ಮುಕ್ತಾಯಕ್ಕೆ ಇನ್ನು ಎರಡು ವಾರ ಮಾತ್ರ ಬಾಕಿ ಇದ್ದು, ಆಗಸ್ಟ್ಅಂತ್ಯಕ್ಕೆ ಈ ಗಡುವು ಮುಗಿಯಲಿದೆ. ಅದಕ್ಕಾಗಿಯೇ ಪ್ರಮುಖ ಡಿಜಿಟಲ್ ವ್ಯಾಲೆಟ್ ಕಂಪನಿ ಫೋನ್ಪೇಕೆವೈಸಿ ಸೇವೆ ಪೂರೈಸಲು ಗ್ರಾಹಕರ ಮನೆ ಬಾಗಿಲಿಗೆ ಹೋಗಲು ನಿರ್ಧರಿಸಿದೆ. ಬಳಕೆದಾರರ ದಾಖಲೆಗಳನ್ನುಭೌತಿಕವಾಗಿ ಪರಿಶೀಲಿಸುವುದು ದುಬಾರಿಯಾಗಿದೆ. ಆದರೆ ಇ-ಕೆವೈಸಿಗಾಗಿ ಆಧಾರ್ ಬಳಕೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ ನಂತರ ವ್ಯಾಲೆಟ್ ಕಂಪನಿಗಳಿಗೆ ಹೆಚ್ಚಿನ ಆಯ್ಕೆ ಉಳಿದಿಲ್ಲ. ಗ್ರಾಹಕರು ತಮ್ಮಸಂಪೂರ್ಣ ಕೆವೈಸಿ ಮಾಡಿಸುವ ಗಡುವನ್ನು ಆರ್ಬಿಐ ಆಗಸ್ಟ್ವರೆಗೆ ವಿಸ್ತರಿಸಿತ್ತು,…
ನೋಡುವುದಕ್ಕೆ ಸಣ್ಣ ದಾರದಂತಿದೆ… ಆದರೆ, ಇದು ಮಾಡುವ ಕೆಲಸ ಅತಿ ಭಯಾನಕ. ಮನುಷ್ಯನ ಮೆದುಳನ್ನು ಸ್ವಲ್ಪ ಸ್ವಲ್ಪವೇ ತಿನ್ನುವುದು ಈ ಹುಳುವಿನ ಕೆಲಸ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು `ಟೇಪ್ ವರ್ಮ್’ ಎಂದು ಕರೆಯುತ್ತಾರೆ. ಇಂತಹ ವಿಚಿತ್ರ ಹುಳುವನ್ನು ವ್ಯಕ್ತಿಯೊಬ್ಬರ ಮೆದುಳಿನಿಂದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ ಆಗ್ನೇಯ ಚೀನಾದ 36 ವರ್ಷದ ವಾಂಗ್ ಎಂಬವರು ಬರೋಬ್ಬರಿ 15 ವರ್ಷಗಳಿಂದ ಈ ದಾರದಂತಹ ಹುಳುವಿನ ಕಾಟದಿಂದ ನಲುಗಿದ್ದರು. ಸುಮಾರು 12 ಸೆಂಟಿ ಮೀಟರ್ನಷ್ಟು ಉದ್ದವಿದ್ದ ಈ ಹುಳು…
ದೇವರ ಮೇಲೆ ವಿಶ್ವಾಸವಿತ್ತು.
ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ……….
ಬಿಟ್ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ ಬಿಟ್ಕಾಯಿನ್” ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ. ಮೂಲತಃ ನಾಣ್ಯ- ನೋಟುಗಳಾವುದೂ ಇಲ್ಲದ ಬಿಟ್ಕಾಯಿನ್ ಅಸ್ತಿತ್ವ ಕಂಪ್ಯೂಟರ್ ಪ್ರಪಂಚಕ್ಕೆ ಸೀಮಿತ
ಕನ್ನಡ ಚಿತ್ರಗಳನ್ನು ದೇಶಾದ್ಯಂತ ಎಲ್ಲಭಾಷೆಗಳ ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಭಜರಂಗಿ-2 ಸಿನಿಮಾವನ್ನು ಪಂಚಭಾಷೆಗಳಲ್ಲಿ ತಯಾರಿಸುವ ಪ್ಲಾನ್ ಮಾಡಿದ್ದೇವೆ. ಸೆಪ್ಟೆಂಬರ್ 9ರಿಂದ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕ ಎ ಹರ್ಷ.ಕೆಜಿಎಫ್ ಸಿನಿಮಾದ ಬಂದ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವ ಟ್ರೆಂಡ್ ಸ್ಯಾಂಡಲ್ವುಡ್ನಲ್ಲಿ ಹೆಚ್ಚುತ್ತಿದ್ದು, ಹಿರಿಯ ನಟ ಶಿವರಾಜ್ ಕುಮಾರ್ ಇದೀಗ ಅಂತಹ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಹರ್ಷ ನಿರ್ದೇಶನದ ‘ಭಜರಂಗಿ-2’ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಿಸಲಾಗುತ್ತಿದ್ದು, ಈ…
ಭಾರಿ ಚರ್ಚೆಗೆ ಕಾರಣವಾಗಿರುವ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಬಿಡುಗಡೆ ತಡೆ ನೀಡುವಂತೆ ಆಗ್ರಹಿಸಿ ಉದಯ್ ಪುರ ರಾಜವಂಶಸ್ಥರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.