ಹೋದ ವರ್ಷ ಆರಂಭವಾಗಿದ್ದ ರಿಲಾಯನ್ಸ್ ಜಿಯೋ ಸೇವೆ, ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು.

ಜಿಯೋ ತನ್ನ ಸೇವೆ ಆರಂಭಿಸಿದ ನಂತರ, ನಡುಗಿಹೋದ ಇತರೆ ಅನೇಕ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ಅವುಗಳು ಕೂಡ ನಾ ಮುಂದು ತಾ ಮುಂದು ಎಂಬಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿದವು.

ಜಿಯೋ ಒಡೆತನದ ಮುಕೇಶ್ ಅಂಬಾನಿ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು ಹೋದ ವರ್ಷ ಪ್ರಾರಂಭಿಸಿದ್ದು, 99 ರು.ಗಳಿಗೆ ಮಾರ್ಚ್ 31ರ ವರೆಗೆ ಒಂದು ವರ್ಷ ಕಾಲ ಸೇವೆ ನೀಡಿದ್ದರು.ಈಗ ಆ ಕಾಲ ಮುಗಿದಿದೆ.
ಮಾರ್ಚ್ 31ಕ್ಕೆ ಮುಗಿಯುತ್ತಿದೆ ಮುಂದೇನು..?
ಅದಾದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಇದೀಗ ರಿಲಾಯನ್ಸ್ ಜಿಯೋ ಸೇವೆ ಬಳಕೆದಾರರಿಗೆ ಎದುರಾಗಿತ್ತು.ಆದರೆ ಜಿಯೋ ರಿಲಾಯನ್ಸ್ ತನ್ನ ಪ್ರೈಂ ಸದಸ್ಯರಿಗೆ ಖುಷಿ ಸುದ್ದಿಯನ್ನು ನೀಡಿದೆ.

ಮುಂದಿನ 12 ತಿಂಗಳು ಉಚಿತ…
ಮಾರ್ಚ್ 31ಕ್ಕೆ ಮುಕ್ತಾಯವಾಗಬೇಕಿದ್ದ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು, ಮತ್ತೆ ಮುಂದುವರೆಸಿರುವ ಜಿಯೋ, ತನ್ನ ಪ್ರೈಂ ಸದಸ್ಯರು ಇನ್ನೂ ಒಂದು ವರ್ಷಗಳ ಕಾಲ ಇದರ ಲಾಭ ಪಡೆಯುವಂತೆ ಮಾಡಿದ್ದಾರೆ.ಇದರ ಜೊತೆಗೆ ಉಳಿದ ಗ್ರಾಹಕರಿಗೂ ಪ್ರೈಂ ಸದಸ್ಯತ್ವ ಪಡೆಯುವ ಅವಕಾಶವನ್ನು ಜಿಯೋ ನೀಡ್ತಿದೆ.

ಮತ್ತೆ ಒಂದು ವರ್ಷಮುಂದುವರಿಯಲು ಹೆಚ್ಚಿನ ಶುಲ್ಕ ಏನಾದ್ರೂ ಇದಯೇ..?
ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್ ಇನ್ನೂ ಒಂದು ವರ್ಷ ಮುಂದುವರೆಯಲಿದ್ದು, ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಪ್ರಸ್ತುತ ಗ್ರಾಹಕರು ಕೊಡಬೇಕಾಗಿಲ್ಲ.ಈಗಾಗಲೇ ಇರುವ ಪ್ರೈಂ ಸದಸ್ಯರು, ತಾವು ಇದೇ ಪ್ಲಾನ್’ನಲ್ಲಿ ಮುಂದುವರಿಯಲು ಇಚ್ಛಿಸಿದಲ್ಲಿ,ತಮ್ಮ ಮೈ ಜಿಯೋ ಆ್ಯಪ್’ನಲ್ಲಿ ಪ್ರೈಂ ಸದಸ್ಯತ್ವ ಮುಂದುವರೆಸುವ ಆಯ್ಕೆಯನ್ನು ಮಾಡಬೇಕಾಗುತ್ತದೆ.

ಹೊಸ ಗ್ರಾಹಕರು ಏನು ಮಾಡಬೇಕು..?
ಹೊಸ ಗ್ರಾಹಕರು ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್ ಸೇವೆಗಾಗಿ 99 ರೂಪಾಯಿ ಪಾವತಿಸಿ ಪ್ರೈಂ ಸದಸ್ಯತ್ವ ಪಡೆಯಬಹುದಾಗಿದೆ.