ದೇಶ-ವಿದೇಶ

ಜಿಎಸ್ಟಿ (GST) ಜಾರಿಗೆ ಬಂದರೆ ಏನೆಲ್ಲಾ ಬೆಲೆಗಳು ಕಡಿಮೆಯಾಗುತ್ತೆ ಗೊತ್ತಾ??? ತಿಳಿಯಲು ಈ ಲೇಖನಿ ಓದಿ……….

112

ಸರಕು ಸೇವಾ ತೆರಿಗೆ (GST)  ಜಾರಿಗೆ ಬಂದಲ್ಲಿ ಬಿಂದಾಸ್‌ ಆಗಿ ಒಳ್ಳೆಯ ಊಟ, ಉಪಾಹಾರ ನೀವು ತೃಪ್ತಿಯಾಗುವಷ್ಟು ಮಾಡಬಹುದು. ಹಾಗೂ ಒಂದು ಸಿನೆಮಾ ನೋಡಿದ ಮೇಲೂ ಮತ್ತೊಂದು ನೋಡಿಯೇ ಬಿಡೋಣ ಎನ್ನುವ ಧೈರ್ಯ ಬಂದರೂ ಬರಬಹುದು.

 

 

 

 

ಜಿಎಸ್ಟಿ (GST)ಯಿಂದ ಏನೆಲ್ಲಾ ದರ ಕಡಿಮೆಯಾಗುತ್ತೆ? 

ಜಿಎಸ್‌ಟಿ ಮಂಡಳಿ ಒಟ್ಟು 66 ವಸ್ತುಗಳ ಮೇಲಿನ ತೆರಿಗೆಯನ್ನು ಬದಲಿಸಿದೆ. ಉಪ್ಪಿನಕಾಯಿ, ಸಾಸಿವೆ ಸಾಸ್‌, ಕಜ್ಜಾಯಕ್ಕೆ ಬೇಕಾಗುವ ಸಾಮಗ್ರಿಗಳು ಸೇರಿ ಅಡುಗೆ ಮನೆಗೆ ಅಗತ್ಯವಾದ ಬಹುತೇಕ ವಸ್ತುಗಳು ಹಾಗೂ ಸಿನೆಮಾ ಟಿಕೆಟ್‌ಗಳ ದರ ಕಡಿಮೆಯಾಗಲಿವೆ.

 

ಜಿಎಸ್‌ಟಿ ಮಂಡಳಿ ನಿಗದಿ ಪಡಿಸಿರುವಂತೆ ಸಿನೆಮಾ ಟಿಕೆಟ್‌ ಹಾಗೂ ಇತರೆ ತೆರಿಗೆಗಳು :-

 • 100 ರೂ. ಆಗಿದ್ದಲ್ಲಿ ಶೇ.18 ತೆರಿಗೆ,
 • 100ಕ್ಕಿಂತ ಜಾಸ್ತಿ ಬೆಲೆಯ ಟಿಕೆಟ್‌ಗಳಿಗೆ ಶೇ. 28ರಷ್ಟು ತೆರಿಗೆ.
 •  ಉಪ್ಪಿನಕಾಯಿ, ಸಾಸ್‌ ಹಾಗೂ ಸಿಹಿ ಪದಾರ್ಥಗಳ ಮೇಲಿನ ಈ ಮೊದಲ ಶೇ. 18 ತೆರಿಗೆಯನ್ನು ಶೇ. 12ಕ್ಕೆ ಇಳಿಸಿದೆ.
 • ಗೋಡಂಬಿ ಮೇಲಿನ ಶೇ. 12ರಷ್ಟು ತೆರಿಗೆಯನ್ನು ಶೇ. 5ಕ್ಕೆ ನಿಗದಿಪಡಿಸಲಾಗಿದೆ.

 

ಜಿಎಸ್ಟಿ (GST) ನಿಗದಿಪಡಿಸಿರುವ ಇತರ ತೆರಿಗೆಗಳು :-

 •  ವ್ಯಾಪಾರಿಗಳು, ತಯಾರಕರು, ಹೊಟೇಲ್‌ ಮಾಲಕರ ವಹಿವಾಟು 75 ಲಕ್ಷ ರೂ. ಮೀರದಿದ್ದಲ್ಲಿ ಅವರಿಗೆ ಕ್ರಮವಾಗಿ ಶೇ. 1, 2 ಹಾಗೂ 5 ತೆರಿಗೆ ನಿಗದಿಪಡಿಸಿದೆ.
 • ಕೃಷಿ ಸಾಮಗ್ರಿಗಳ ತೆರಿಗೆಯನ್ನು ಶೇ. 18ಕ್ಕೆ ಇಳಿಸಲಾಗಿದೆ.
 • ಮಕ್ಕಳ ಡ್ರಾಯಿಂಗ್‌ ಪುಸ್ತಕಗಳ ಮೇಲಿದ್ದ  ಶೇ. 12ರಷ್ಟಿದ್ದ  ತೆರಿಗೆಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ.
 • ಸ್ಕೂಲ್‌ ಬ್ಯಾಗ್‌ಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ನಿಗದಿಗೊಳಿಸಲಾಗಿದೆ.

 

ಜಿಎಸ್ಟಿ (GST)ಯಿಂದ  ಕಂಪ್ಯೂಟರ್‌ ಬಳಕೆದಾರರಿಗೂ ಸಿಹಿ ಸುದ್ದಿ :-

 • ಕಂಪ್ಯೂಟರ್‌ ಬಳಕೆದಾರರಿಗೂ ಸಿಹಿ ಸುದ್ದಿ ಇದ್ದು, ಪ್ರಿಂಟರ್‌ ಸಾಮಗ್ರಿಗಳು ಮೇಲೆ ಶೇ.12 ತೆರಿಗೆ ನಿಗದಿಗೊಳಿಸಲಾಗಿದೆ.
 • ಶಾಲಾ ಸಾಮಗ್ರಿಗಳಿಗೆ ಶೇ.12 ತೆರಿಗೆ ನಿಗದಿಗೊಳಿಸಲಾಗಿದೆ.

 

ಜಾಬ್‌ ವರ್ಕ್‌ ದರಕ್ಕೆ ಶ್ಲಾಘನೆ :-  

ಜವಳಿ, ಚರ್ಮ  ಮತ್ತು ಚಿನ್ನಾಭರಣ  ವಲಯಗಳಲ್ಲಿ ದುಡಿಯುವ ಕೆಲಸಗಾರರು ಮನೆಗೆ ತೆಗೆದುಕೊಂಡು ಹೋಗುವ ಕೆಲಸಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸುವ ನಿರ್ಧಾರವನ್ನು ಈ ಉದ್ಯಮ ವಲಯ ಸ್ವಾಗತಿಸಿದೆ.

About the author / 

admin

Categories

Date wise

 • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

  ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ