ನೀವು ಒಂದು ವೇಳೆ ಟೆನ್ಶನ್‌ನಿಂದ ತುಂಬಿದ ಜೀವನ ಸಾಗಿಸುತ್ತಿದ್ದೀರಿ ಎಂದಾದರೆ ನಿಮ್ಮ ಎಲ್ಲಾ ಆಲೋಚನೆಗಳ ಬಗ್ಗೆ ನೀವು ಮತ್ತೆ ವಿಚಾರಣೆ ನಡೆಸಬೇಕು. ಯಾಕೆಂದರೆ ನೀವು ವಿಪರೀತ ಟೆನ್ಶನ್‌ನಲ್ಲಿ ಇದ್ದರೆ , ಅದರಿಂದ ನೀವು ಹೊರ ಬರಲು ಇಷ್ಟಪಡದೆ ಇದ್ದರೆ ಮುಂದೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ. ಒಂದು ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿದೆ. ಅದೇನೆಂದರೆ ಯಾವರೀತಿ ಸ್ಟ್ರೆಸ್‌ನಿಂದ ಕೂಡಿದ ಮೆದುಳು ನಿಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರುತ್ತದೆ ಅನ್ನೋದನ್ನು ಅದು ತಿಳಿಸಿದೆ.

ಟೆನ್ಶನ್ ಇರುವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಂಡರೆ ಅದು ನಿಮಗೆ ಸಿಗಲಿರುವ ಲಾಭದ ಮೇಲೆಯೂ ಪ್ರಭಾವ ಬೀರುತ್ತದೆ. ಜರ್ನಲ್ ಸೆಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದಂತೆ ಒಂದು ಮಸ್ಥಿಷ್ಕದ ಇಂದು ವಿಶಿಷ್ಟ ಸರ್ಕಿಟ್‌ನ ಅಸಮರ್ಪಕತೆಯಿಂದ ನಿಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಒಂದು ಸಾಮಾನ್ಯ ವಿಷಯ ಕೂಡ ವಿವಾದವನ್ನು ಸೃಷ್ಟಿ ಮಾಡಬಹುದು.

ಮನುಷ್ಯರು ತಾವು ಯೋಚನೆ ಮಾಡುವ ವಿಧಾನವನ್ನು ಬದಲಾಯಿಸಿದರೆ ಅವರಿಗೆ ಮಾನಸಿಕ ಸಮಸ್ಯೆಗಳಾದ ಖಿನ್ನತೆ, ಒತ್ತಡ, ಚಿಂತೆ ದೂರವಾಗುತ್ತದೆ. ಈ ಸಮಸ್ಯೆಗಳು ಒಬ್ಬ ವ್ಯಕ್ತಿಯ ನಿರ್ಧಾರ ತೆಗೆದುಕೊಳ್ಳುವಂತಹ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ.

ಎನ್ ಗ್ರೆಬಿಯಲ್, ಕೇಂಬ್ರಿಜ್‌ನ ಮೆಸಾಚುಸೇಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೇಸರ್ ಹೇಳಿದಂತೆ ‘ನಮಗೆ ಸ್ಟ್ರೈಟಮ್‌ನಲ್ಲಿ ನ್ಯೂರಾನ್ಸ್ ಒಂದು ಮೈಕ್ರೋಸರ್ಕಿಟ್ ದೊರೆತಿದೆ. ಇದರಿಂದ ಅಪಾಯವನ್ನುಂಟು ಮಾಡುವ ನಿರ್ಣಯ ತೆಗೆದುಕೊಳ್ಳುವಾಗ ಉಂಟಾಗುವ ಪ್ರಭಾವವನ್ನು ಬದಲಾಯಿಸಲಾಗುತ್ತದೆ.

ಸಂಶೋಧಕರು ಹೇಳುವಂತೆ ಸರ್ಕಿಟ್ ಉತ್ತಮ ಹಾಗೂ ಕೆಟ್ಟ ಸಮಯದ ಮಾಹಿತಿಯನ್ನು ಒಗ್ಗೂಡಿಸಿ ಮಸ್ಥಷ್ಕಕ್ಕೆ ನಿರ್ಣಯ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.