ಸಿನಿಮಾ

ಚೀನಾದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸ್ಸಿದ ಭಾರತೀಯಾ ಸಿನಿಮಾ ಯಾವುದು ಗೊತ್ತಾ..?ತಿಳಿಯಲು ಈ ಲೇಖನ ಓದಿ..

150

ಬಾಲಿವುಡ್‌ನ ‘ಮಿಸ್ಟರ್ ಫರ್ಫೆಕ್ಟ್’ ಆಮಿರ್ ಖಾನ್ ಅಭಿ ನಯದ ‘ದಂಗಲ್’ ಚೀನಾದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ದಂಗಲ್ ಮೂಲಕ ಆಮಿರ್ ಖಾನ್ ದಿನಬೆಳಗಾಗುವುದರೊಳಗೆ ಚೀನಾದಲ್ಲಿ ಮನೆ ಮಾತಾಗಿದ್ದರು. ಇದೀಗ ಆಮಿರ್‌ಖಾನ್ ನಿರ್ಮಾಣದ ‘ಸೀಕ್ರೆಟ್ ಸೂಪರ್‌ಸ್ಟಾರ್’ ಕೂಡಾ ಚೀನಾದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಕಳೆದ ವಾರ ಚೀನಾದ ಪ್ರಮುಖ ನಗರಗಳಲ್ಲಿ ಬಿಡುಗಡೆಗೊಂಡಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’, ಮೂರೇ ದಿನಗಳಲ್ಲಿ 174 ಕೋಟಿ ರೂ. ಬಾಚುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಆ ಮೂಲಕ ಮೊದಲವಾರದ ಗಳಿಕೆಯಲ್ಲಿ ಅದು ದಂಗಲ್ ಚಿತ್ರದ ದಾಖಲೆಯನ್ನು ಮುರಿದಿದೆ.

ಅಂದಹಾಗೆ, ಭಾರತದಲ್ಲಿಯೂ ‘ಸೀಕ್ರೆಟ್ ಸೂಪರ್‌ಸ್ಟಾರ್’ನ ಮೊದಲ ವಾರದ ಗಳಿಕೆ ಕೇವಲ 30 ಕೋಟಿ ರೂ.ಯಾಗಿತ್ತು. ಕೇವಲ 15 ಕೋಟಿ ವೆಚ್ಚದಲ್ಲಿ ತಯಾರಾಗಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’ಗೆ ಚೀನಾ ಪ್ರೇಕ್ಷಕರು ಫಿದಾ ಆಗಿರುವುದು ಬಾಲಿವುಡ್ ಚಿತ್ರಮಂದಿಯನ್ನು ದಂಗುಬಡಿಸಿದೆ.

ಕಳೆದ ವರ್ಷ ಚೀನಾದಲ್ಲಿ ಬಿಡುಗಡೆಗೊಂಡ ದಂಗಲ್ 1,100 ಕೋಟಿ ರೂ. ಬಾಚಿತ್ತು. ಈ ಚಿತ್ರದ ಪ್ರಚಂಡ ಯಶಸ್ಸಿನ ಬಳಿಕ ಆಮಿರ್, ಆ ದೇಶದಲ್ಲೂ ಜನಪ್ರಿಯ ನಟನೆನಿಸಿಕೊಂಡಿದ್ದಾರೆ. ಇದಕ್ಕೂ ಮುಂಚೆ ಆಮಿರ್ ಅಭಿನಯದ 3 ಇಡಿಯಟ್ಸ್ ಹಾಗೂ ಪಿಕೆ ಕೂಡಾ ಭಾರೀ ಯಶಸ್ಸು ಕಂಡಿದ್ದವು.

ದಂಗಲ್ ಹುಡುಗಿ ಝೈರಾವಾಸಿಂ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’, ಮುಸ್ಲಿಂ ಬಾಲಕಿಯೊಬ್ಬಳು ಹಲವಾರು ಅಡೆತಡೆಗಳನ್ನು ಮೀರಿ, ಪ್ರಖ್ಯಾತ ಗಾಯಕಿಯಾಗುವ ರೋಚಕ ಕಥೆಯನ್ನು ಹೊಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ