ಸುದ್ದಿ

ಚಿಲ್ಲರೆ ಅಂಗಡಿ ವ್ಯಾಪಾರಿಗಳಿಗೊಂದು ಗುಡ್‌ ನ್ಯೂಸ್: ಪ್ರತಿ ತಿಂಗಳು ಸಿಗಲಿದೆ 3 ಸಾವಿರ ರೂ….!

598

ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯ ಆರಂಭದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನುಜಾರಿಗೆ ತರ್ತಿದ್ದಾರೆ.

ಚಿಲ್ಲರೆ ವ್ಯಾಪಾರಿಗಳ ಪಿಂಚಣಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. 60ವರ್ಷದ ನಂತ್ರ ಆರ್ಥಿಕ ಶಕ್ತಿ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ.

ಚಿಲ್ಲರೆ ವ್ಯಾಪಾರ ಹಾಗೂ ಸ್ವಂತ ವ್ಯಾಪಾರ ಮಾಡುವವರಿಗೆ ಮಾಸಿಕ 3 ಸಾವಿರ ರೂಪಾಯಿಯವರೆಗೆ ಪಿಂಚಣಿ ಸಿಗಲಿದೆ. 3 ಕೋಟಿಗೂ ಹೆಚ್ಚು ವ್ಯಾಪಾರಿಗಳು ಇದ್ರ ಲಾಭ ಪಡೆಯಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ಜನರಿಗೆ ಇದನ್ನು ತಲುಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಒಂದೂವರೆ ಕೋಟಿಗಿಂತಲೂ ಕಡಿಮೆ ವಾರ್ಷಿಕ ವಹಿವಾಟು ನಡೆಸುವ ಎಲ್ಲ ಅಂಗಡಿ ಮಾಲೀಕರಿಗೆ, ಸ್ವಂತ ಕೆಲಸ ಮಾಡುವವರಿಗೆ ಇದ್ರ ಲಾಭ ಸಿಗಲಿದೆ. 18ರಿಂದ 40 ವರ್ಷದೊಳಗಿನ ವ್ಯಾಪಾರಿಗಳು ಈ ಯೋಜನೆ ಲಾಭ ಪಡೆಯಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿಲ್ಲರೆ ವ್ಯಾಪಾರಿಗಳ ಜೊತೆ ಸಣ್ಣ ರೈತರಿಗೂ ಕಿಸಾನ್ ಮಾನ್ ಧನ್ ಯೋಜನೆ ಘೋಷಣೆ ಮಾಡಿದ್ದಾರೆ.

18ರಿಂದ 40 ವರ್ಷದೊಳಗಿನ ರೈತರು ಹೆಸರು ನೋಂದಾಯಿಸಬಹುದಾಗಿದೆ. ಈ ಯೋಜನೆಯಲ್ಲಿ ಅರ್ಧದಷ್ಟು ಪ್ರೀಮಿಯಂ ರೈತ ಪಾವತಿಸಿದ್ರೆ ಉಳಿದ ಅರ್ಧವನ್ನು ಸರ್ಕಾರ ಪಾವತಿಸಲಿದೆ. 60 ವರ್ಷದ ನಂತ್ರ 3 ಸಾವಿರ ರೂಪಾಯಿ ಮಾಸಿಕ ಪಿಂಚಣಿ ಸಿಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬ್ರೆಕಿಂಗ್ ಸುದ್ದಿ..ಮುದ್ದಹನುಮೇಗೌಡರು ತಮ್ಮ ನಾಮಪತ್ರ ಹಿಂಪಡೆಯುವುದು ಖಚಿತ.?ಈ ಸುದ್ದಿ ನೋಡಿ

    ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ. ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ…

  • ಸುದ್ದಿ

    ಚಳಿಗಾಲದಲ್ಲಿಯೂ ಸಹ ನೀವು ಬೆಚ್ಚಗಿನ ವಾತಾವರಣದಲ್ಲಿರಲು ಬಯಸುವಿರಾ, ಹಾಗಾದರೆ ನೀವು ಇಲ್ಲಿಗೆ ಒಮ್ಮೆ ಭೇಟಿ ನೀಡಿ…

    ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ  ಆರಂಭವಾಗಿದೆ. ಚಳಿಯಿ೦ದ ಕೂಡಿದ  ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ…

  • ರೆಸಿಪಿ

    ಒಮ್ಮೆ ಈ ರೀತಿ ಮಾಡಿ ನೋಡಿ ರುಚಿಯಾದ ಮೆಂತೆ ಸೊಪ್ಪಿನ ದೋಸೆ.

    ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು. ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ…

  • ಆರೋಗ್ಯ

    ಚಳ್ಳೆ ಹಣ್ಣನ್ನು ತಿಂದಿದೀರಾ, ಈ ಚಳ್ಳೆಹಣ್ಣಿನ ಔಷಧಿಯ ಗುಣಗಳು ಹಲವು ಜನರಿಗೆ ತಿಳಿದಿಲ್ಲ, ಈ ಮಾಹಿತಿ ನೋಡಿ.!

    ಈ ಹಣ್ಣನ್ನು ಸಾಮಾನ್ಯವಾಗಿ ಕೆಲವರು ತಿನ್ನುತ್ತಿರುತ್ತಾರೆ, ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಚಿರಪರಿಚಿತ, ಸಾಮಾನ್ಯವಾಗಿ ಈ ಹಣ್ಣು  ಇದರ ಹೆಸರು ಚಳ್ಳೆಹಣ್ಣು ಎಂಬುದಾಗಿ ಇದನ್ನು ಅಡುಗೆಗೆ ಹಾಗೂ ಮತ್ತಿತರ ಕೆಲಸಕ್ಕೆ ಹಾಗೂ ಮನೆಮದ್ದುಗಳಿಗೆ ಔಷಧಿಯಾಗಿ ಕೂಡ ಬಳಸಲಾಗುತ್ತದೆ. ಅದ್ರಲ್ಲೂ ಇದರ ಉಪ್ಪಿನ ಕಾಯಿ ಸೇವನೆ ಅತಿ ಹೆಚ್ಚು ಬಳಕೆಯಲ್ಲಿದೆ ಕೆಲವು ಕಡೆ. ಈ ಚಳ್ಳೆಹಣ್ಣು ಯಾವೆಲ್ಲ ಉಪಯೋಗಕಾರಿ ಅಂಶಗಳನ್ನು ಹೊಂದಿದೆ ಹಾಗೂ ಇದರಿಂದ ದೇಹಕ್ಕೆ ಯಾವೆಲ್ಲ ಆರೋಗ್ಯಕಾರಿ ಅಂಶಗಳನ್ನು ಪಡೆಯಬಹುದಾಗಿದೆ,ಹಾಗೂ ಇದರ ಬಳಕೆಯನ್ನು ಹೇಗೆ ಮಾಡಬಹುದು ಯಾವ…

  • ಸುದ್ದಿ

    ರಣಂ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ದುರ್ಮರಣ ಪ್ರಕರಣ- ತನಿಖೆ ನಡೆಸುವವೇಳೆ ಸ್ಫೋಟಕ ಟ್ವಿಸ್ಟ್…….!

    ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.ಶೂಟಿಂಗ್ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಪೇದೆ ಶೂಟಿಂಗ್ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ…

  • ಆಧ್ಯಾತ್ಮ, ಜ್ಯೋತಿಷ್ಯ

    ಸಾಯಂಕಾಲದ ವೇಳೆ ದೇವರಿಗೆ ದೀಪ ಹಚ್ಚುವುದರಿಂದ ಏನಾಗುತ್ತೆ ಗೊತ್ತಾ..!

    ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತು ಶುಭಂ ಕರೋತಿ ಎನ್ನುವ ಸಂಜೆಯ ಪ್ರಾರ್ಥನೆಯನ್ನ ಮಾಡ್ತಿದ್ರು, ಆದ್ರೆ ಈಗಿನ ಮಕ್ಕಳಿಗೆ ಸಂಜೆಯ ಹೊತ್ತು ಟಿ.ವಿ . ನೋಡುವುದಕ್ಕೆ ಸಮಯವಿರುವುದಿಲ್ಲ. ಎಲ್ಲೋ ಹಿಂದೂಗಳು ನಮ್ಮ ಹಿಂದೂ ಸಂಸ್ಕೃತಿ ಇಂದ ಆಚಾರ ಧರ್ಮಗಳಿಂದ ದೂರ ಸರಿಯುತ್ತಿದೇವೆ ಎನ್ನಿಸುತ್ತಿದೆ. ಆಚಾರಧರ್ಮಗಳನ್ನ ಪಾಲಿಸುವುದೇ ಆಧ್ಯತ್ಮೀಕತೆಗೆ ಅಡಿಪಾಯವಾಗಿದೆ. ಸಂಧ್ಯಾ ಕಾಲ ವೆಂದರೆ ಸೂರ್ಯೋದಯಕ್ಕೂ ಮೊದಲು, ಸೂರ್ಯಾಸ್ತದ ನಂತರ ೪೮ ನಿಮಿಷಗಳ ಸಮಯವನ್ನು ಸಂಧಿಕಾಲವೆಂದು ಅಥವಾ ಪರ್ವಕಾಲವೆಂದು  ಕರೆಯಲಾಗುತ್ತದೆ.ಸಂಧ್ಯಾ ಕಾಲ / ಸಂಜೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ಉಚಿತ…